For Quick Alerts
ALLOW NOTIFICATIONS  
For Daily Alerts

ಗರ್ಭಪಾತದ ನಂತರದ ಸಮಸ್ಯೆಗಳು

By Poornima Hegde
|

ಮಹಿಳೆಯ ಜೀವನದಲ್ಲಿನ ಮುಖ್ಯ ಘಟನೆಗಳಲ್ಲಿ ಗರ್ಭಧಾರಣೆಯೂ ಒಂದು. ಈ ಸನ್ನಿವೇಶದಲ್ಲಿ ತಾನು ಇನ್ನೊಂದು ಜೀವಕ್ಕೆ ಜನ್ಮ ಕೊಡುತ್ತಿದ್ದೇನೆ ಎನ್ನುವ ಅನನ್ಯವಾದ ಭಾವ ಹೆಣ್ಣಲ್ಲಿರುತ್ತದೆ. ಒಂಭತ್ತು ತಿಂಗಳು ಹೊತ್ತು ಸಾಕಿದ ತನ್ನ ಮಗುವಿಗೆ ಜನ್ಮ ನೀಡುವ ಖುಷಿ ಇರುತ್ತದೆ. ಆದರೆ ಒಂದು ವೇಳೆ ದುರದೃಷ್ಟವಶಾತ್ ಗರ್ಭಪಾತವಾದರೆ. ದೈಹಿಕ ನೋವಿನ ಜೊತೆಗೆ ಮಾನಸಿಕ ಬಳಲುವಿಕೆ ಸೇರಿ ಆ ತಾಯಿಯನ್ನು ಧೃತಿಗೆಡಿಸುವುದರಲ್ಲಿ ಅನುಮಾನವಿಲ್ಲ.

ಗರ್ಭಪಾತ ಒಂದು ದುರದೃಷ್ಟಕರ ಸನ್ನಿವೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದರ ನಂತರ ಎದುರಿಸಬೇಕಾದ ಇದರ ಪರಿಣಾಮಗಳು ಕೂಡ ಅಷ್ಟೇ ದುರಾದೃಷ್ಟಕರ ಎಂದರೆ ತಪ್ಪಲ್ಲ. ಇದಕ್ಕೆ ನೀವು ಒಪ್ಪದೇ ಇರಬಹುದು ಆದರೆ ಗರ್ಭಪಾತದ ನಂತರ ಎದುರಿಸಬೇಕಾದ ಸಮಸ್ಯೆಗಳನ್ನು ನೀವು ತಿಳಿದುಕೊಳ್ಳಲೇ ಬೇಕು. ಗರ್ಭಪಾತವನ್ನು ಕಾನೂನು ಬದ್ಧ ಮಾಡಬೇಕು ಎಂದು ಹೋರಾಡುವ ಜನರು ಇರುವುದು ಎಷ್ಟು ನಿಜವೋ ಗರ್ಭಪಾತ ಎಲ್ಲಾ ಸನ್ನಿವೇಶಗಳಲ್ಲಿ ಸುರಕ್ಷಿತವಲ್ಲ ಎನ್ನುವುದೂ ಅಷ್ಟೇ ಸತ್ಯ. ಒಬ್ಬ ಮಹಿಳೆ ದೈಹಿಕ ಮತ್ತು ಮಾನಸಿಕ ಎರಡೂ ನೋವನ್ನು ಇದರಿಂದಾಗಿ ಪಡಬೇಕಾಗುತ್ತದೆ. ಮಹಿಳೆಯರಿಗೆ ಇದರಿಂದಾಗುವ ಕೆಲವು ಅನಾಹುತಗಳ ಬಗ್ಗೆ ತಿಳಿಸುವ ಹಲವು ಸಂಶೋಧನಾ ವರದಿಗಳೇ ಇವೆ.

ಕೆಲವು ಸಣ್ಣ ಸಮಸ್ಯೆಗಳೆಂದರೆ ವಾಂತಿ, ಜ್ವರ, ರಕ್ತಸ್ರಾವ, ಹೊಟ್ಟೆ ನೋವು ಇತ್ಯಾದಿ. ದೊಡ್ಡ ಸಮಸ್ಯೆಗಳೆಂದರೆ ರಕ್ತಸ್ರಾವ, ಎಂಡೋಟೋಕ್ಸಿಕ್ ಆಘಾತ, ಸೆಳವು ಮತ್ತು ಗರ್ಭಕಂಠದ ಹಾನಿ. ಅಷ್ಟೇನು ತ್ರಾಸದಾಯಕವಲ್ಲದ ಗರ್ಭಪಾತವಾದರೆ ಸಣ್ಣ ನೋವು ಸ್ವಲ್ಪ ರಕ್ತಸ್ರಾವದೊಂದಿಗೆ ಕೊನೆಗೊಳ್ಳುತ್ತದೆ. ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಮಾತ್ರ ನಿಗಾ ವಹಿಸುವುದು ಬಹಳ ಅಗತ್ಯ.

Problems which follow post miscarriage

• ದುರ್ವಾಸನೆಯೊಂದಿಗಿನ ಯೋನಿ ಸ್ರಾವ

• ಜ್ವರ

• ಹೊಟ್ಟೆಯಲ್ಲಿನ ಅಸ್ವಸ್ಥತೆ

• ತೀವ್ರವಾದ ರಕ್ತಸ್ರಾವ

• ಬಹಳ ಕಾಲದ ತನಕ ಮುಂದುವರಿಯುವ ನೋವು.

ಗರ್ಭಪಾತದ ನಂತರದ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿದ್ದಲ್ಲಿ ಇದು ಮುಂದೆ ಸಾವಿಗೂ ಕಾರಣವಾಗಬಹುದಾದ ಕಾರಣ ನಿಗಾ ವಹಿಸುವುದು ಅಗತ್ಯವಾಗಿದೆ. ಸಂಶೋಧನೆಗಳು ಗರ್ಭಪಾತವು ಸಾವಿಗೆ ಕಾರಣವಾಗುವ ಹಲವು ಉದಾಹರಣೆಗಳನ್ನು ನಮ್ಮ ಮುಂದಿಡುತ್ತದೆ. ನಿಮ್ಮ ಬಗ್ಗೆ ಸ್ವತಃ ಕಾಳಜಿ ವಹಿಸಿ ಮತ್ತು ವೈದ್ಯರ ಸಲಹೆ ಪಡೆಯಿರಿ.

ಅತ್ಯಂತ ಕಷ್ಟಕರ ಸನ್ನಿವೇಶಗಳು
• ಗರ್ಭಪಾತವನ್ನು ಎದುರಿಸುವುದೇ ಒಂದು ಕಷ್ಟಕರ ಸನ್ನಿವೇಶ. ಗರ್ಭಪಾತದ ನಂತರದ ಮಾನಸಿಕ ದುರ್ಬಲತೆ ಒಂದು ಪ್ರಮುಖವಾದ ಮತ್ತು ಸಾಮಾನ್ಯವಾದ ಸಮಸ್ಯೆ. ಗರ್ಭಿಣಿ ಆದ ಕೂಡಲೆ ಒಂದು ಹೊಸ ಜನ್ಮವನ್ನು ಮುಂದೆ ನೋಡುತ್ತಿರುವ ತಾಯಿಗೆ ಇದು ಸಹಜವೇ.
• ಮಗುವನ್ನು ಕಳೆದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಗರ್ಭಪಾತದ ನಂತರ ನೀವು ಒಬ್ಬಂಟಿ ಎಂದು ಅನ್ನಿಸಿ ಖಿನ್ನತೆ ಆವರಿಸುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದಾಗಿ ಒಬ್ಬಂಟಿಯಾಗಿ ಎಂದೂ ಕಾಲ ಕಳೆಯಬೇಡಿ. ಗೆಳೆಯರೊಂದಿಗೆ, ಸಂಬಂಧಿಕರೊಂದಿಗೆ ಬೆರೆಯಿರಿ ಹಾಗೂ ಸಂಗಾತಿಯೊಂದಿಗೆ ಕಾಲ ಕಳೆಯಿರಿ.
• ನಿಮ್ಮ ಮನಸ್ಸಿನ ಭಾವನೆಗಳನ್ನು ಹೊರಹಾಕಲು ನಿಮಗೆ ಅನ್ನಿಸುವುದನ್ನು ಬರೆಯುವ ಅಭ್ಯಾಸವನ್ನು ಮಾಡಿಕೊಂಡರೂ ಉತ್ತಮ. ಇದು ನಿಮ್ಮ ಮಾನಸಿಕ ಖಿನ್ನತೆಯನ್ನು ದೂರ ಮಾಡಲು ಬಹಳ ಸಹಕಾರಿ.

ಅಪಾಯಕಾರಿ ಕೆಂಪು
ಗರ್ಭಪಾತದ ನಂತದರ ಪ್ರಮುಖ ಸಮಸ್ಯೆ ಎಂದರೆ ರಕ್ತ ಸ್ರಾವ. ನಿಮ್ಮ ಮಾಸಿಕ ಋತು ಚಕ್ರದ ವೇಳೆ ನಿಮ್ಮ ಪ್ಯಾಡ್ ಎರಡೇ ಗಂಟೆಗಳಲ್ಲಿ ಬದಲಾಯಿಸಬೇಕಾದ ಅಗತ್ಯ ಬರುವಷ್ಟು ರಕ್ತ ಸ್ರಾವವಾಗುವ ಸಾಧ್ಯತೆಯಿರುತ್ತದೆ. ಗರ್ಭಪಾತವಾದ ಕೂಡಲೆ ಬಹಳ ರಕ್ತಸ್ರಾವ ಆಗುವ ಸಾಧ್ಯತೆಗಳೂ ಇವೆ.

ಡಿ ಮತ್ತು ಸಿ.
ಗರ್ಭಪಾತವು ಅಪೂರ್ಣವಾದ ಪಕ್ಷದಲ್ಲಿ ಗರ್ಬಕೋಶದ ಒಳಗೆ ಒಂದು ಅಂಗಾಂಶ ಉಳಿಯುವ ಸಾಧ್ಯತೆಗಳಿವೆ. ಹೀಗಾದ ಪಕ್ಷದಲ್ಲಿ ಡಿ ಮತ್ತು ಸಿ ಮುಖ್ಯವಾಗುತ್ತದೆ. ಆದರೆ ಡಿ ಮತ್ತು ಸಿ ಏಷರ್ ಮ್ಯಾನ್ಸ್ ಸಿಂಡ್ರೋಮ್ ಎಂಬುದಕ್ಕೆ ಕಾರಣವಾಗುವುದೂ ಸುಳ್ಳಲ್ಲ. ಇದು ಮುಂದೆಯೂ ಗರ್ಭಪಾತವಾಗುದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಪುನರಾವರ್ತನೆ
ಒಮ್ಮೆ ಗರ್ಭಪಾತವಾದ ಮೇಲೆ ಇನ್ನೊಮ್ಮೆಯೂ ಹಾಗೆಯೇ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಒಮ್ಮೆ ಗರ್ಭಪಾತವಾದ ಬಳಿಕ ಮತ್ತೂ ಎರಡು ಅಥವಾ ಮೂರು ಬಾರಿ ಗರ್ಭಪಾತವಾಗುವ ಸಾಧ್ಯತೆಗಳು ಇಲ್ಲದಿಲ್ಲ.

ಇದರ ಬಗ್ಗೆ ಎಚ್ಚರಿಕೆಯಿರಲಿ
ಯಾವುದೇ ರೀತಿಯ ಸೋಂಕು ಕಂಡುಬಂದಲ್ಲಿ ಕೂಡಲೇ ಜಾಗೃತರಾಗುವ ಅಗತ್ಯವಿದೆ. ಗರ್ಭಪಾತೋತ್ತರ ಸೋಂಕುಗಳು ಬಹಳ ತ್ರಾಸದಾಯಕ. ಹೀಗಾದರೆ ಕೂಡಲೆ ನಿಮ್ಮ ವೈದ್ಯರನ್ನು ಕಾಣಬೇಕು.

ಒಂದು ಅನಾರೋಗ್ಯ
ಗರ್ಭಪಾತವಾದ ಬಳಿಕ ನೀವು ಬಹಳ ಆತಂಕದಿಂದಿರುವ ಸಾಧ್ಯತೆಯಿದೆ. ನಿಮ್ಮ ಆತಂಕದ ಮಟ್ಟ ಹಿಂದೆಂದಿಗಿಂತಲೂ ಬಹಳ ಹೆಚ್ಚಾಗಿರುತ್ತದೆ. ಕೆಲವು ಮಹಿಳೆಯರಲ್ಲಿ ಆಘಾತಕಾರಿ ಸನ್ನಿವೇಶದ ನಂತರದ ಒತ್ತಡ (ಪೋಸ್ಟ್ ಟ್ರೌಮಾಟಿಕ್ ಸ್ಟ್ರೆಸ್ ಡಿಸಾರ್ಡರ್) ಪಿ.ಎಸ್.ಟಿ.ಡಿ. ಕಂಡುಬರಬಹುದು.

ಅಪಸ್ಥಾನಿಯ ಗರ್ಭಧಾರಣೆ
ಗರ್ಭಪಾತದ ನಂತರ ಅಪಸ್ಥಾನೀಯ ಗರ್ಭಧಾರಣೆಯ ಸಾಧ್ಯತೆ ಹೆಚ್ಚು. ಇದರ ಅರ್ಥ ಬೇರೆ ಅಥವಾ ತಪ್ಪಾದ ಜಾಗದಲ್ಲಿ ಅಂಡಾಣುಗಳು ಬೆಳೆಯುತ್ತವೆ. ಇದು ಮುಖ್ಯವಾಗಿ ಫ್ಯಾಲೋಪಿಯನ್ ಟ್ಯೂಬ್ ನಲ್ಲಿ ಕಾಣಿಸುತ್ತದೆ.

ಗರ್ಭಧಾರಣೆಯಾಗದ ಸಾಧ್ಯತೆಗಳು ಹೆಚ್ಚು

ಒಮ್ಮೆ ಗರ್ಭಪಾತವಾದ ಬಳಿಕ ಮತ್ತೊಮ್ಮೆ ಗರ್ಭಧಾರಣೆ ಆಗದ ಸಾಧ್ಯಗಳೂ ಹೆಚ್ಚು. ಒಮ್ಮೆ ಗರ್ಭಪಾತವಾಗಿ ಬಳಿಕ ಗರ್ಭಧಾರಣೆ ಆಗದೇ ಇರುವ ಹಲವು ಉದಾಹರಣೆಗಳಿವೆ.
ಗರ್ಭಧಾರಣೆಯೊಂದಿಗೆ ಹೊಂದಿಕೊಂಡು ಹೋಗುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಇದು ಮಹಿಳೆಯ ಮೇಲೆ ಆಕೆಯ ಪತಿಯ ಮೇಲೆ ಮತ್ತು ಒಟ್ಟು ಕುಟುಂಬದ ಮೇಲೆಯೂ ಬಹಳ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಮನೋಶಾಸ್ತ್ರಜ್ಞರ ಸಲಹೆ ಬೇಕು ಎಂದು ಅನ್ನಿಸಿದರೆ ಕೂಡಲೇ ಪಡೆದುಕೊಳ್ಳಬೇಕು. ಮುನ್ನೆಚ್ಚರಿಕೆ ಗುಣಪಡಿಸುವುದಕ್ಕಿಂತ ಉತ್ತಮ ಹೀಗಾಗಿ ಗರ್ಭಪಾತವಾದ ಕೂಡಲೇ ಇವೆಲ್ಲಾ ಅಂಶಗಳ ಬಗ್ಗೆ ಗಮನ ಕೊಡುವುದು ಅಗತ್ಯ.

English summary

Problems which follow post miscarriage

Miscarriage is a painful issue, more painful are the problems post miscarriage. You may be against or against miscarriage; however, it is imperative that you understand the problems surrounding a miscarriage.
Story first published: Monday, December 9, 2013, 9:59 [IST]
X
Desktop Bottom Promotion