For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಧರ್ಮದ ವಿಚಾರಗಳು ತಿಳಿಸುವುದು ಏಕೆ ಮುಖ್ಯ

|

ನಮ್ಮ ಮನೆಯ ಪುಟ್ಟ ಮಕ್ಕಳ ಮನಸ್ಸು ಪಾರದರ್ಶಕ ಕನ್ನಡಿ ಇದ್ದಂತೆ, ಹೊಳೆಯಲ್ಲಿನ ತಿಳಿ ನೀರಿದ್ದಂತೆ. ಅಷ್ಟು ಸೂಕ್ಷ್ಮ ಬೆಳ್ಳನೆಯ ಕಾಗದದ ರೀತಿಯ ಮನಸ್ಸಿಗೆ ದೊಡ್ಡವರಾದ ನಾವುಗಳು ಅಥವಾ ಸುತ್ತಮುತ್ತಲಿನ ಸಂದರ್ಭಗಳು ಹೇಗೆ ಪ್ರಭಾವ ಬೀರುತ್ತವೆ ಎನ್ನುವುದರ ಮೇಲೆ ಮಕ್ಕಳ ಜೀವನ ನಿಧಾನವಾಗಿ ರೂಪುಗೊಳ್ಳುತ್ತದೆ.

Why Religion Teaching Is Important To Children

ಕೇವಲ ಕೆಟ್ಟ ವಾತಾವರಣದಲ್ಲಿ ಕಲಿತು ಬೆಳೆದ ಮಕ್ಕಳು ಭವಿಷ್ಯದಲ್ಲಿ ದೇಶಕ್ಕೆ ಸಂಚಕಾರ ತರುವ ಕ್ರೂರಿಗಳಾಗಿ ಬದಲಾಗುತ್ತಾರೆ. ಚಿಕ್ಕವಯಸ್ಸಿನಲ್ಲಿ ಒಳ್ಳೆಯ ವಾತಾವರಣದಲ್ಲಿ ಬೆಳೆದು ಒಳ್ಳೆಯ ಅಭ್ಯಾಸಗಳನ್ನು ರೂಢಿ ಮಾಡಿಕೊಂಡು ಶುದ್ಧವಾದ ಹಿತನುಡಿಗಳನ್ನು ಕೇಳಿ ಬೆಳೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ಸಮಾಜದ ನಿರ್ಮಾಣದಲ್ಲಿ ಕೈ ಜೋಡಿಸುತ್ತಾರೆ.

ಪುಟ್ಟ ಮಕ್ಕಳಲ್ಲಿ ಧಾರ್ಮಿಕ ವಿಚಾರವಾಗಿ ಸಾಕಷ್ಟು ಅಂಶಗಳು ತಿಳಿದಿರಬೇಕು ಎಂದು ಹೇಳುತ್ತಾರೆ, ಇದಕ್ಕೆ ಕಾರಣವಿದೆ. ಪ್ರಮುಖ ಧರ್ಮಗಳ ಧಾರ್ಮಿಕ ಗೌರವವನ್ನು ಎತ್ತಿ ಹಿಡಿಯುವ ಧರ್ಮಗ್ರಂಥಗಳಾದ ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ನಲ್ಲಿ ಸಾಕಷ್ಟು ಒಳ್ಳೆಯ ವಿಚಾರಗಳು ಮತ್ತು ಮನುಷ್ಯರಾಗಿ ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಹಲವಾರು ಅಂಶಗಳಿವೆ.

ದೊಡ್ಡವರಾದ ಮೇಲೆ ಕಷ್ಟಪಟ್ಟು ಅಳವಡಿಸಿಕೊಳ್ಳುವುದಕ್ಕಿಂತ ಚಿಕ್ಕವಯಸ್ಸಿನಲ್ಲಿ ಮಕ್ಕಳಾಗಿದ್ದಾಗ ಅಭ್ಯಾಸದ ಜೊತೆಗೆ ಧಾರ್ಮಿಕ ವಿಚಾರಗಳನ್ನು ಜೋಡಿಸಿಕೊಳ್ಳುವುದರಿಂದ ಒಬ್ಬ ಉತ್ತಮ ಪ್ರಜೆಯಾಗಿ ಜಗತ್ತಿಗೆ ಸಾಕಷ್ಟು ಒಳ್ಳೆಯ ಕೊಡುಗೆಗಳನ್ನು ಕೊಡಬಹುದು.

ಮಕ್ಕಳಲ್ಲಿ ಧಾರ್ಮಿಕ ಭಾವನೆಗಳನ್ನು ತುಂಬುವುದರಿಂದ ಆಗುವ ಕೆಲವೊಂದು ಉಪಯೋಗಗಳು

ಗುಣವನ್ನು ಅಳೆದು ತೂಗುತ್ತದೆ

ಗುಣವನ್ನು ಅಳೆದು ತೂಗುತ್ತದೆ

ಧಾರ್ಮಿಕ ಭಾವನೆಗಳು ಮನಸ್ಸಿನಲ್ಲಿ ಬೆಳೆಯುತ್ತಾ ಹೋದಂತೆ ಮತ್ತು ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಸಾಗಿದರೆ ಖಂಡಿತ ನಾವು ಒಬ್ಬ ಮಾನವೀಯ ಗುಣವಿರುವ ಮನುಷ್ಯರಾಗುತ್ತೇವೆ. ಏಕೆಂದರೆ ಧರ್ಮಕ್ಕೆ ಸಂಬಂಧಪಟ್ಟ ಹಲವಾರು ಬೋಧನೆಗಳು, ವಿಚಾರಧಾರೆಗಳು ಪ್ರತಿಯೊಂದು ಧರ್ಮದ ಧರ್ಮಗ್ರಂಥದಲ್ಲಿ ಅಡಕವಾಗಿವೆ. ಚಿಕ್ಕಮಕ್ಕಳಿಂದ ಇದೇ ನೀತಿ ಪಾಠಗಳನ್ನು ತಿಳಿದುಕೊಂಡು ದೊಡ್ಡವರಾದಂತೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮನುಷ್ಯನಿಗಿಂತ ಇನ್ನೊಬ್ಬ ಒಳ್ಳೆ ವ್ಯಕ್ತಿ ಸಿಗಲಾರ.

ಯಾವ ಧರ್ಮವೂ ಕೆಟ್ಟದ್ದನ್ನು ಹೇಳುವುದಿಲ್ಲ

ಯಾವ ಧರ್ಮವೂ ಕೆಟ್ಟದ್ದನ್ನು ಹೇಳುವುದಿಲ್ಲ

ಯಾವ ಧರ್ಮದಲ್ಲೂ ಸಹ ಕೆಟ್ಟದ್ದನ್ನು ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ಹಾಗಾಗಿ ಅಳವಡಿಸಿಕೊಳ್ಳುವ ಒಳ್ಳೆಯ ಅಂಶ ಅನುಷ್ಠಾನಕ್ಕೆ ಬರುವುದರಿಂದ ಇಡೀ ಪ್ರಪಂಚ ಸುಖಮಯವಾಗಿರುತ್ತದೆ. ಪುಟ್ಟ ಮಕ್ಕಳಲ್ಲಿ ರೂಢಿಯಾಗುವ ಹಲವಾರು ವಿಚಾರಗಳು ಜೀವನದುದ್ದಕ್ಕೂ ಪಾಲನೆಯಾಗುತ್ತದೆ ಎಂದು ಹೇಳುತ್ತಾರೆ. ಆದರಿಂದ ಶಾಲೆಗೆ ಬರುವ ಮಕ್ಕಳಲ್ಲಿ ಧರ್ಮದ ಭಾವನೆಗಳನ್ನು ಧಾರ್ಮಿಕ ಆಚರಣೆಗಳ ಸೊಗಡನ್ನು ತುಂಬಿದರೆ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮನಸ್ಸಿನ ಸ್ವನಿಯಂತ್ರಣ ವೃದ್ಧಿಸುತ್ತದೆ

ಮನಸ್ಸಿನ ಸ್ವನಿಯಂತ್ರಣ ವೃದ್ಧಿಸುತ್ತದೆ

ಮಕ್ಕಳ ಮನಸ್ಸು ಲಂಗುಲಗಾಮಿಲ್ಲದ ಕುದುರೆಯ ಓಟವಿದ್ದಂತೆ ಎಂದು ಹೇಳುತ್ತಾರೆ. ಪುಟ್ಟ ಮಕ್ಕಳಿಂದ ಹಿಡಿದು ಪ್ರೌಢಾವಸ್ಥೆಗೆ ಬರುವವರೆಗೂ ಮಕ್ಕಳು ತಾವು ಅಂದುಕೊಂಡದ್ದನ್ನು ಮಾತ್ರ ಮಾಡಲು ಬಯಸುತ್ತಾರೆ. ದೊಡ್ಡವರಾದ ಪೋಷಕರು ಮತ್ತು ಗುರುಗಳು ಆಗಾಗ ತಿದ್ದಿ ಬುದ್ಧಿ ಹೇಳುತ್ತಿದ್ದರೆ ಮಾತ್ರ ಆಜ್ಞೆ ಮಾಡಿದಂತೆ ನಡೆಯುತ್ತಾರೆ.

ದೊಡ್ಡವರಂತೆಯೇ ಮಕ್ಕಳ ಮನಸ್ಸಿನ ಮೇಲೆ ಸಹ ಬಹಳಷ್ಟು ಒತ್ತಡವಿರುತ್ತದೆ. ಅದರಲ್ಲೂ ಆಗಾಗ ಶಾಲೆ ಬದಲಾಯಿಸುತ್ತಿರುವ ಮಕ್ಕಳಿಗೆ ಹೊಸ ಮಕ್ಕಳ ಜೊತೆ ಹೊಂದಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಮತ್ತು ಕೆಲವು ಮಕ್ಕಳು ಸಲೀಸಾಗಿ ಹೊಂದಿಕೊಳ್ಳಲಾರದೆ ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ಇದು ಅವರನ್ನು ಕೆಲವು ಕೆಟ್ಟ ಚಟಗಳ ಕಡೆಗೆ ಎಳೆದುಕೊಂಡು ಹೋಗುತ್ತದೆ. ಇದರಿಂದ ಒಮ್ಮೆ ಹಾದಿತಪ್ಪಿದ ಮಕ್ಕಳು ಮತ್ತೊಮ್ಮೆ ಕೈಗೆ ಸಿಗಲಾರದಷ್ಟು ಪೋಷಕರಿಂದ ಮಾನಸಿಕವಾಗಿ ದೂರಾಗುತ್ತಾರೆ. ಆದರೆ ಮಕ್ಕಳ ಮನಸ್ಸಿನಲ್ಲಿ ಚಿಕ್ಕ ವಯಸ್ಸಿನಿಂದಲೇ ಧಾರ್ಮಿಕ ಗುರುಗಳ ಪ್ರವಚನಗಳನ್ನು, ದೇವರ ಬಗೆಗಿನ ಒಳ್ಳೆಯ ಅಭಿಪ್ರಾಯಗಳನ್ನು, ದೊಡ್ಡವರನ್ನು ಗೌರವಿಸುವ ನೀತಿ-ನಿಯಮಗಳನ್ನು ತುಂಬುತ್ತಾ ಹೋದರೆ ಮುಂಬರುವ ಎಂತಹ ಕ್ಲಿಷ್ಟಕರ ಸಂದರ್ಭವನ್ನು ಬೇಕಾದರೂ ಹಾದಿ ತಪ್ಪದಂತೆ ಮಾನಸಿಕ ಒತ್ತಡ ಉಂಟು ಮಾಡಿಕೊಳ್ಳದಂತೆ ಎದುರಿಸುವ ಜಾಣ್ಮೆ, ತಾಳ್ಮೆ ಮಕ್ಕಳಿಗೆ ಬರುತ್ತದೆ.

ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ

ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ

ದೊಡ್ಡವರಾದ ನಮಗೇ ಕೆಲವೊಮ್ಮೆ ಯಾವುದಾದರೂ ವಿಚಾರ ಮನಸ್ಸಿಗೆ ನಾಟಿದರೆ ಅದರಿಂದ ಹೊರಬರಲು ಸಾಕಷ್ಟು ಸಮಯ ಬೇಕಾಗುತ್ತದೆ. ಇನ್ನು ಮಕ್ಕಳ ವಿಷಯ ದೇವರಿಗೆ ಪ್ರೀತಿ. ನಮಗಾದರೆ ನಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ನಮ್ಮೊಡನೆ ಮನೆಯವರು, ಸ್ನೇಹಿತರು, ನೆಂಟರಿಷ್ಟರು, ಬಂಧು-ಬಾಂಧವರು. ಹೀಗೆ ಒಬ್ಬರಲ್ಲಾ ಒಬ್ಬರು ಇದ್ದೇ ಇರುತ್ತಾರೆ.

ಆದರೆ ಪುಟ್ಟ ಮಕ್ಕಳಿಗೆ ಅವರ ಮಾನಸಿಕ ಆತಂಕವನ್ನು ಇನ್ನೊಬ್ಬರ ಬಳಿ ಹಂಚಿಕೊಳ್ಳುವಷ್ಟು ಬುದ್ಧಿ ಬೆಳೆದಿರುವುದಿಲ್ಲ. ಹಾಗಾಗಿ ಹೇಗಾದರೂ ಮಾಡಿ ಅದನ್ನು ನಾವೇ ಬಗೆಹರಿಸಿಕೊಳ್ಳಬೇಕು ಎಂಬ ಮನಸ್ಸು ಅವರಿಗಿರುತ್ತದೆ. ಆದರೆ ಈ ಸಮಯದಲ್ಲಿ ಹಲವಾರು ಕಾರಣದಿಂದ ಅವರ ಮನಸ್ಸಿನ ಮೇಲೆ ಒತ್ತಡ ಕೂಡ ಜಾಸ್ತಿಯಾಗುತ್ತದೆ.

ಧಾರ್ಮಿಕ ಭಾವನೆಗಳು ಮಕ್ಕಳ ಮನಸ್ಸಿನಲ್ಲಿ ಅದಾಗಲೇ ಮೂಡಿದ್ದರೆ, ಜೊತೆಗೆ ನಮ್ಮ ಎಲ್ಲಾ ಕಷ್ಟಗಳಿಗೂ ದೇವರು ನೆರವಾಗುತ್ತಾನೆ ಎಂಬ ಭಾವನೆ ಅವರಿಗೆ ಬಂದಿದ್ದರೆ ತಮಗೆ ಎದುರಾದ ಮಾನಸಿಕ ಆತಂಕ ಒತ್ತಡವನ್ನು ದೇವರಿಗೆ ಮೊರೆ ಇಡುವ ಮೂಲಕ ಅತ್ಯಂತ ಶಾಂತ ರೀತಿಯಲ್ಲಿ ಸರಳವಾಗಿ ಬಗೆಹರಿಸಿಕೊಳ್ಳುತ್ತಾರೆ.

English summary

Why Religion Teaching Is Important To Children

Here we are discussing about Why Religion Teaching Is Important To Children. There are many virtues that parents can teach their children, but when they teach them religion, they teach them all the virtues at once. Read more.
X
Desktop Bottom Promotion