For Quick Alerts
ALLOW NOTIFICATIONS  
For Daily Alerts

ನಿಮ್ಮ ಮಗುವನ್ನು ಜವಾಬ್ದಾರಿಯುತ ಮನುಷ್ಯನಾಗಿಸಲು ಹೀಗೆ ಬೆಳೆಸಿ

|

ಮುಗ್ಧ ಮನಸ್ಸಿನ ಮಗುವೆಂದರೆ ಹಾಗೇನೇ. ಆ ಮಗುವಿನ ಮನಸ್ಸು ಒಂದು ಬಿಳಿ ಹಾಳೆಯಿದ್ದಂತೆ. ಜೀವನದ ಉದ್ದೇಶವೇನು, ಜೀವನದ ಸಾರ್ಥಕತೆ ಎಲ್ಲಿ ಅಡಗಿದೆ, ಅಂತಹ ಉದ್ದೇಶ, ಸಾರ್ಥಕತೆಯನ್ನ ಸಾಧಿಸೋದು ಹೇಗೆ ಅನ್ನೋದರ ಕುರಿತ ಮಾರ್ಗದರ್ಶೀ ವಾಕ್ಯಗಳನ್ನ ಹೆತ್ತವರು ಅಂತಾ ಅನಿಸಿಕೊಂಡಿರೋ ನಾವುಗಳೇ ಆ ಮಗುವಿನ ಮನಸ್ಸೆಂಬ ಬಿಳಿ ಹಾಳೆಯ ಮೇಲೆ ಬರೆಯಬೇಕಾಗುತ್ತದೆ. ಅರ್ಥಾತ್ ನಮ್ಮ ಆಚಾರ ವಿಚಾರಗಳಿಗೆ ತಕ್ಕ ಹಾಗೆ ಬೆಳೆಯುತ್ವೆ ಮಕ್ಕಳು!!

C:\Anguraj\Boldsky Kannada\01_January_2021\09-01\02

ಹಾಗಾಗಿ ಮಕ್ಕಳನ್ನ ಯೋಗ್ಯ ವಯಸ್ಕರನ್ನಾಗಿಸೋದಕ್ಕಾಗಿ, ಅವರಿಗೆ ಸರಿಯಾದ ಮಾರ್ಗದರ್ಶನ ನೀಡೋದು ಹೆತ್ತವರ ಆದ್ಯ ಕರ್ತವ್ಯ. ಹಾಗಾದರೆ ಮಕ್ಕಳನ್ನ ಜವಾಬ್ದಾರಿಯುತ ನಾಗರೀಕರನ್ನಾಗಿ ಹೇಗೆ ಬೆಳೆಸೋದು ಅನ್ನೋದರ ಬಗ್ಗೆ, ಹಾಗೆ ಬೆಳೆಸೋದರ ಕೆಲವು ವಿಧಾನಗಳ ಬಗ್ಗೆ ಈ ಕೆಳಗೆ ಚರ್ಚಿಸಲಾಗಿದೆ:

ಬೆಳೆಯುವ ಮಕ್ಕಳ ಪಾಲಿಗೆ ಅವರ ಹೆತ್ತವರೇ ಅವರಿಗೆ ರೋಲ್ ಮಾಡೆಲ್! ಹೆತ್ತವರು ತಮ್ಮ ಜೀವನದಲ್ಲಿ ಶಿಸ್ತು, ವಿನಯಶೀಲತೆ, ಹಾಗೂ ಕಟ್ಟುಪಾಡುಗಳನ್ನ ಅಳವಡಿಸಿಕೊಂಡು, ತಮ್ಮ ದಿನದಿನದ ಜವಾಬ್ದಾರಿಗಳನ್ನ ಅಚ್ಚುಕಟ್ಟಾಗಿ ತಾವೇ ನಿರ್ವಹಿಸುತ್ತಾ ಬಂದರೆ, ಮಕ್ಕಳು ಕನ್ನಡಿಯಂತೆ ಆ ಹೆತ್ತವರ ಅಂತಹ ನಡವಳಿಕೆಗಳನ್ನೇ ಪ್ರತಿಫಲಿಸುತ್ತಾರೆ. ಒಂದೊಮ್ಮೆ ಹೆತ್ತವರು ಜವಾಬ್ದಾರಿಯಿಲ್ಲದವರಾಗಿದ್ದು, ವ್ಯರ್ಥ ಕಾಲಹರಣ ಮಾಡುವವರಾಗಿದ್ದು, ಒರಟರೂ, ಕೋಪಿಷ್ಟರೂ ಆಗಿದ್ದರೆ ಮಕ್ಕಳೂ ಕೂಡ ಅವರಂತೆಯೇ ಆಗುತ್ತಾರೆ!!

ಮಕ್ಕಳ ನಡವಳಿಕೆಯನ್ನ ರೂಪಿಸುವುದು ಹೇಗೆ ?

ಮಕ್ಕಳ ನಡವಳಿಕೆಯನ್ನ ರೂಪಿಸುವುದು ಹೇಗೆ ?

ಮಾನವ ಜೀವನದಲ್ಲಿ ಬಾಲ್ಯವೇ ಆತನನ್ನೋ ಅಥವಾ ಆಕೆಯನ್ನೋ ಭಾವೀ ವ್ಯಕ್ತಿಯನ್ನಾಗಿ ರೂಪುಗೊಳಿಸುವ ಹಂತವಾಗಿರುತ್ತದೆ. ತಮ್ಮ ಸುತ್ತಮುತ್ತಲಿನ ಪ್ರಪಂಚದ ಬಗ್ಗೆ ಪುಟ್ಟಮಕ್ಕಳಿಗೆ ಎಲ್ಲಿಲ್ಲದ ಕೌತುಕ ತುಂಬಿರುತ್ತದೆ. ಖಚಿತ ವೇಳಾಪಟ್ಟಿಗನುಗುಣವಾದ ದಿನಚರಿ ಹಾಗೂ ಶಿಸ್ತುಬದ್ಧ ಜೀವನಕ್ರಮದೊಂದಿಗೆ ಅವರ ಕೌತುಕ ಮನಸ್ಸಿಗೆ ಮಾರ್ಗದರ್ಶನ ಮಾಡಬೇಕಾದ ಅಗತ್ಯವಿರುತ್ತದೆ. ಮಕ್ಕಳಿಗೆ "ಹೀಗ್ ಮಾಡು, ಹಾಗ್ ಮಾಡು" ಅಂತೆಲ್ಲ ಆರ್ಡರ್ ಮಾಡೋವಾಗ, ಅಂತಹ ಆರ್ಡರ್ ಗಳ ಹಿಂದಿನ ಉದ್ದೇಶಗಳನ್ನ ಹೆತ್ತವರು ಮಕ್ಕಳಿಗೆ ಸ್ಪಷ್ಟವಾಗಿ ವಿವರಿಸಬೇಕು. ಹಾಗೆ ಮಾಡಿದಾಗ ಮಾತ್ರ ಮುಂಬರುವ ಜೀವನದಲ್ಲಿ ಮಕ್ಕಳಲ್ಲಿ ಶಿಸ್ತನ್ನ ಅಳವಡಿಸಿಕೊಳ್ಳೋದಕ್ಕೆ ಅದು ನೆರವಾಗಬಲ್ಲದು.

ಮಕ್ಕಳೊಂದಿಗೆ ದ್ವೇಷಪೂರಿತ ವರ್ತನೆ ಬೇಡ

ಮಕ್ಕಳೊಂದಿಗೆ ದ್ವೇಷಪೂರಿತ ವರ್ತನೆ ಬೇಡ

ಮಗ ಅಥವಾ ಮಗಳು ಶಾಲೆಯಿಂದ ಲೇಟಾಗಿ ಬಂದ ಅಥವಾ ಬಂದ್ಲು ಅಂತಾನೋ ಇಲ್ಲವೇ ಕತ್ತಲಾದ ಮೇಲೂ ಹೊರ್ಗಡೆ ಆಟ ಆಡ್ತಾ ಇದ್ದ ಅಥವಾ ಇದ್ಲು ಅನ್ನೋ ಕಾರಣಕ್ಕಾಗಿನೋ ಆತನಿಗೆ ಅಥವಾ ಆಕೆಗೆ ಸಿಕ್ಕಾಪಟ್ಟೆ ಬಯ್ಯೋ ಬದ್ಲು, ಹೊತ್ತುಮುಳುಗಿದ ಮೇಲೂ ಹೊರ್ಗಡೆ ಆಟ ಆಡ್ತಾ ಇರೋದು ಯಾಕೆ ಸುರಕ್ಷಿತ ಅಲ್ಲ ಅನ್ನೋದನ್ನ ಆತನಿಗೆ ಅಥವಾ ಆಕೆಗೆ ಶಾಂತವಾಗಿ ವಿವರಿಸೋದು ಒಳ್ಳೇದು. ಅವರನ್ನ ಹೆದರ್ಸೋದಕ್ಕಂತೂ ಖಂಡಿತಾ ಹೋಗ್ಬೇಡಿ. ಹಾಗ್ ಮಾಡಿದ್ರೆ ನಿಮ್ಮ ಮತ್ತು ನಿಮ್ಮ ಮಕ್ಕಳ ನಡುವಿನ ಸಂಬಂಧ ನಕಾರಾತ್ಮಕ ರೂಪವನ್ನ ಪಡ್ಕೊಳ್ಳತ್ತೆ. ಒಂದಿಷ್ಟು ತಪ್ಪುಗಳನ್ನ ಮಾಡಿ, ಆ ಮೇಲೆ ಆ ತಪ್ಪುಗಳಿಂದ್ಲೇ ಅನುಭವದ ಪಾಠ ಕಲಿತುಕೊಳ್ಳೋವಂತ ಅವಕಾಶಗಳನ್ನ ಮಕ್ಳಿಗೂ ಅಷ್ಟು ಇಷ್ಟು ಕೊಡ್ಬೇಕು. ಆದ್ರೆ ಅಂತಹ ಅನುಭವಗಳು ಮಕ್ಳಿಗೆ ಗಂಭೀರ ಸ್ವರೂಪದ ಹಾನಿಯನ್ನ ಮಾಡೋವಂತಹವು ಆಗಿರ್ಬಾರ್ದು ಅಷ್ಟೇ...

ಒಳ್ಳೆಯ ನಡವಳಿಕೆಗಳಿಗೆ ಪ್ರಶಂಸಿಸೋದನ್ನ ಮರೀಬೇಡಿ

ಒಳ್ಳೆಯ ನಡವಳಿಕೆಗಳಿಗೆ ಪ್ರಶಂಸಿಸೋದನ್ನ ಮರೀಬೇಡಿ

ತಾವು ಕೈಗೊಳ್ಳೋ ಚಟುವಟಿಕೆಗಳಿಗೆ ಸಮ್ಮತಿಯನ್ನ, ಪ್ರಶಂಸೆ, ಪ್ರೋತ್ಸಾಹಗಳನ್ನ ತಾವು ಆದರ್ಶವಾಗಿಟ್ಟುಕೊಂಡಿರೋ ತಂದೆ-ತಾಯಿಗಳಿಂದ ಮಕ್ಕಳು ನಿರೀಕ್ಷಿಸುತ್ತಾರೆ. ಮಗು ಒಂದು ಚಿತ್ರವನ್ನ ಬಿಡಿಸಬಹುದು, ಒಂದು ಕವನವನ್ನ ಬರೆಯಬಹುದು, ಅಥವಾ ತನ್ನ ಮನೆಗೆಲಸಾನಾ ನಿಗದಿತ ಸಮಯದೊಳಗೆ ಮುಗಿಸಿಬಿಡಬಹುದು. "ದೊಡ್ಡೋರ ಹಾಗೆ ನಾವೂ ಕೂಡ ಅಷ್ಟೋ ಇಷ್ಟೋ ನಮ್-ನಮ್ ಕೆಲ್ಸಗಳನ್ನ ನಾವೇ ಮಾಡ್ಕೋತೀವಿ" ಅನ್ನೋದನ್ನ ಸಾಬೀತು ಮಾಡಿ ರೀತಿಯಲ್ಲಿ ಕೆಲವೊಂದು ಸಲ ಅವರು ಪಾತ್ರೆಗಳನ್ನ ತೊಳೆದಾರು, ತಮ್ಮ ಹಾಸಿಗೆಗಳನ್ನ ತಾವೇ ಹಾಸಿಕೊಂಡಾರು. ಅಂತಹ ಸಂದರ್ಭಗಳಲ್ಲಿ ಹೆತ್ತವರು ಅವರ ಬೆನ್ನುತಟ್ಟೋದರ ಮೂಲಕ ಅವರ ಕೆಲಸಕಾರ್ಯಗಳನ್ನ ಪ್ರೋತ್ಸಾಹಿಸಬೇಕು.

ಜೀವನ ಮೌಲ್ಯಗಳ ಬೋಧನೆ

ಜೀವನ ಮೌಲ್ಯಗಳ ಬೋಧನೆ

ಉದಾತ್ತ ಮೌಲ್ಯಗಳನ್ನ ಅಳವಡಿಸಿಕೊಂಡಿರೋ ವ್ಯಕ್ತಿಗಳಲ್ಲಿ ಗೌರವಯುತವಾದ ಹಾಗೂ ವಿನಯಶೀಲ ಗುಣಗಳು ಮನೆಮಾಡಿಕೊಂಡಿರುತ್ತವೆ. ಹಾಗಾಗಿ ಗುರುಹಿರಿಯರಿಗೆ ಗೌರವ ಕೊಡೋದನ್ನ ಸಾಮಾನ್ಯವಾಗಿ ಎಲ್ಲ ತಂದೆತಾಯಿಗಳೂ ತಮ್ಮ ಮಕ್ಕಳಿಗೆ ಕಲಿಸಿಕೊಡಬೇಕು.

ಪ್ರಾಣಿ, ಪಕ್ಷಿಗಳ ವಿಚಾರದಲ್ಲೂ ಮಕ್ಕಳು ದಯೆ, ಕರುಣೆ, ಅನುಕಂಪ, ಸಹಾನುಭೂತಿಯಂತಹ ಭಾವನೆಗಳನ್ನ ಬೆಳೆಸಿಕೊಂಡಿರಬೇಕು. ಪಶುಪಕ್ಷಿಗಳ ಹಾಗೂ ಗಿಡಮರಗಳ ಬಗ್ಗೆ ಕಾಳಜಿಯುತ ಭಾವನೆ ಇದ್ದಲ್ಲಿ, ಅಂತಹ ಮಕ್ಕಳು ಇತರರ ವಿಚಾರದಲ್ಲಿಯೂ ಸಹಿಷ್ಣುತಾ ಗುಣವುಳ್ಳವರಾಗಿ ಬೆಳೆಯುತ್ತಾರೆ. ಇಂತಹ ಗುಣಗಳು ಮಕ್ಕಳಲ್ಲಿ ನಿರ್ಸ್ವಾರ್ಥತೆಯನ್ನ ಪ್ರೋತ್ಸಾಹಿಸುತ್ತವೆ ಹಾಗೂ ಇತರರ ಪಾಲಿಗೆ ಸುರಕ್ಷಿತ ಪ್ರಪಂಚವನ್ನ ರೂಪಿಸೋದಕ್ಕೆ ಅವರನ್ನ ಶಕ್ತರನ್ನಾಗಿ ಮಾಡುತ್ತವೆ.

English summary

Ways To Ensure Your Child Grows Up To Be A Responsible Human Being

Here is tips to ensure your child frows up to ba a responsible human being, have a look,
X
Desktop Bottom Promotion