For Quick Alerts
ALLOW NOTIFICATIONS  
For Daily Alerts

ಮಗುವಿಗೆ ಆಗಾಗ ಜ್ವರ ಬರುತ್ತಿದೆಯೇ? ಕಾರಣ ಹಾಗೂ ಚಿಕಿತ್ಸೆಯೇನು?

|

ವರ್ಷಕ್ಕೆ ಒಂದೋ, ಬಾರಿ ಜ್ವರ ಬಂದ್ರೆ ಸಾಮಾನ್ಯ, ಇನ್ನು ಮಕ್ಕಳಾದರೆ 2-3 ತಿಂಗಳಿಗೊಮ್ಮೆ ಹೆಚ್ಚಿನ ಮಕ್ಕಳಿಗೆ ಜ್ವರ ಬರುವುದು. ವಾತಾವರಣದ ಬದಲಾವಣೆ, ಸೋಂಕು ಹೀಗೆ ಅನೇಕ ಕಾರಣಗಳಿಂದಾಗಿ ಮಕ್ಕಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ.

ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂದಿದಾಗ ಅವು ವೈರಾಣುಗು ವಿರುದ್ಧ ಸೆಣಸಾಡಲು ಅಸಮರ್ಥವಾದಾಗ ಜ್ವರ ಕಂಡು ಬರುತ್ತದೆ. ಮನುಷ್ಯನ ದೇಹದ ಉಷ್ಣತೆ 98.6ಡಿಗ್ರಿF ಅಥವಾ 37ಡಿಗ್ರಿ C ಅಥವಾ ಅದಕ್ಕಿಂತ ಹೆಚ್ಚಿನ ಮೈ ಉಷ್ಣತೆ ಇದ್ದರೆ ಅದು ಜ್ವರ ಎಂದು ಹೇಳಬಹುದು.

ಜ್ವರ ಬಂದರೆ ಔಷಧಿ ತೆಗೆದುಕೊಂಡ ಎರಡು-ಮೂರು ದಿನಗಳಲ್ಲಿ ಕಡಿಮೆಯಾಗುವುದು, ಹೆಚ್ಚೆಂದರೆ ಒಂದು ವಾರ ಇರುತ್ತದೆ. ಅದೇ ಕೆಲವು ಸಮಯದೊಳಗಾಗಿ ಅನೇಕ ಬಾರೀ ಜ್ವರ ಬಂದ್ರೆ ಬಿಟ್ಟು-ಬಿಟ್ಟು ಜ್ವರ ಬರುವುದು ಎಂದು ಹೇಳಬಹುದು. ಉದಾಹರಣೆಗೆ ಮಗುವಿಗೆ ಪ್ರತೀ ತಿಂಗಳು ಜ್ವರ ಬರುವುದು.

ಈ ರೀತಿ ಜ್ವರ ಮಕ್ಕಳಲ್ಲಿ ಅದರಲ್ಲೂ 5 ವರ್ಷದ ಒಳಗಿನ ಮಕ್ಕಳಲ್ಲಿ ಕಂಡು ಬರುವುದುಂಟು. ಜ್ವರ ಬಂದ್ರೆ ಕೆಲ ದಿನ ಮೈ ಉಷ್ಣತೆ ಹೆಚ್ಚಿರುತ್ತದೆ ನಂತರ ಜ್ವರ ಕಡಿಮೆಯಾಗಿ ಮಗು ಹುಷಾರಾಗುವುದು. ಮಗುವಿಗೆ ಜ್ವರ ಬಂದು ಮಗು ಸ್ವಲ್ಪ ಸುಧಾರಿಸುತ್ತೆ ಅಷ್ಟೊತ್ತಿಗೆ ಮತ್ತೊಮ್ಮೆ ಜ್ವರ ಕಂಡು ಬರುವುದು. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ periodic fever syndromes ಎಂದು ಹೇಳಬಹುದು.

ಸಾಮಾನ್ಯ ಜ್ವರಕ್ಕೂ, ಬಿಟ್ಟು- ಬಿಟ್ಟು ಜ್ವರ ಬರುವುದಕ್ಕೂ ಇರುವ ವ್ಯತ್ಯಾಸವೇನು?

ಸಾಮಾನ್ಯ ಜ್ವರಕ್ಕೂ, ಬಿಟ್ಟು- ಬಿಟ್ಟು ಜ್ವರ ಬರುವುದಕ್ಕೂ ಇರುವ ವ್ಯತ್ಯಾಸವೇನು?

ಸಾಮಾನ್ಯ ಜ್ವರ ವೈರಾಣು ಅಥವಾ ಬ್ಯಾಕ್ಟಿರಿಯಾದಿಂದ ಉಂಟಾಗುತ್ತದೆ. ಆದರೆ ಆಗಾಗ ಬಿಟ್ಟು-ಬಿಟ್ಟು ಬರುವ ಜ್ವರಕ್ಕೆ ಯಾವುದೇ ವೈರಸ್ ಅಥವಾ ಸೋಂಕಾಣು ಕಾರಣವಾಗಿರುವುದಿಲ್ಲ. ಯಾವುದೇ ಸೋಂಕು ಇಲ್ಲದೆಯೂ ಜ್ವರ ಬರುವುದು.

ಬಿಟ್ಟು-ಬಿಟ್ಟು ಜ್ವರ ಬರುವುದಕ್ಕೆ ವೈದಕೀಯ ಕಾರಣಗಳೇನು?

ಬಿಟ್ಟು-ಬಿಟ್ಟು ಜ್ವರ ಬರುವುದಕ್ಕೆ ವೈದಕೀಯ ಕಾರಣಗಳೇನು?

ಬಿಟ್ಟು- ಬಿಟ್ಟು ಜ್ವರ ಬರುತ್ತಿದ್ದರೆ ಈ ಕೆಳಗಿನ ಕಾರಣಗಳಿರಬಹುದು.

FMF (ಫ್ಯಾಮಿಲಾಲ್ ಮೆಡಿರೇರಿಯನ್ ಫೀವರ್)

TRAPS( Tumor necrosis factor receptor associated periodic syndrome )

HIDA (ಹೈಪರ್‌ಹಿಮುನೋಗ್ಲೋಬಿನ್ ಸಿಂಡ್ರೋಮ್)

NOMID (ನಿಯೋನೆಟಲ್ ಆನ್‌ಸೆಟ್ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಡಿಸೀಜ್)

PFAPA(Periodic fever, Aphthous-stomatitis, Pharyngitis, Adenitis syndrome)

ಬಿಟ್ಟು-ಬಿಟ್ಟು ಬರುವ ಜ್ವರದ ಲಕ್ಷಣಗಳೇನು?

ಬಿಟ್ಟು-ಬಿಟ್ಟು ಬರುವ ಜ್ವರದ ಲಕ್ಷಣಗಳೇನು?

100.4°Fಗಿಂತ ಅಧಿಕ ಉಷ್ಣತೆ

ಮೈ ಉಷ್ಣತೆ ಹೆಚ್ಚಾಗು ಹಾಗೂ ಚಳಿ

* ತಲೆಸುತ್ತು

* ಮಕ್ಕಳು ತುಂಬಾ ಕಿರಿಕಿರಿ ಮಾಡುವುದು

* ತಿನ್ನಲು , ಕುಡಿಯಲು ನಿರಾಕರಿಸುವುದು

*ಅಳುವುದು

* ಕಿವಿ ಎಳೆಯುವುದು

* ಸ್ವಲ್ಪ ಮಂಕಾಗುವುದು

ಮಕ್ಕಳಿಂದ ಮಕ್ಕಳಿಗೆ ಲಕ್ಷಣಗಳು ಭಿನ್ನವಾಗಿರುತ್ತದೆ, ಕೆಲ ಮಕ್ಕಳಲ್ಲಿ ಬೇರೆ ಲಕ್ಷಣಗಳು ಕಮಡು ಬರುವುದು ಅಂದ್ರೆ ಆಟ ಆಡುವಾಗ ಸುಮ್ಮನೆ ಅಳುವುದು, ಹಠ ಹೀಗೆ...

ಇದಕ್ಕೆ ಚಿಕಿತ್ಸೆ ಏನು?

ಇದಕ್ಕೆ ಚಿಕಿತ್ಸೆ ಏನು?

ಇದು ಸಾಮಾನ್ಯ ಜ್ವರದ ರೀತಿಯೇ ಆಗಿದ್ದು ಅದಕ್ಕೆ ನೀಡುವ ಔಷಧಿಯಿಂದಲೇ ಗುಣಪಡಿಸಲಾಗುವುದು. ನಿಮ್ಮ ಮಕ್ಕಳ ತಜ್ಞರ ಹತ್ತಿರ ಮಾತನಾಡಿ ಅವರ ಸಲಹೆ ಪಾಲಿಸಿ.

ಮಕ್ಕಳಿಗೆ ಕುಡಿಯಲು ಸಾಕಷ್ಟು ನೀರು, ಜ್ಯೂಸ್ ನೀಡಿ, ಮಕ್ಕಳಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ. ಅಲ್ಲದೆ ಜ್ವರ ಬಂದಾಗ ಮಕ್ಕಳನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಿ. ಮಗುವಿಗೆ ಜ್ವರ 5 ದಿನಕ್ಕಿಂತ ಹೆಚ್ಚು ಇದ್ದರೆ ಕೂಡಲೇ ವೈದ್ಯರನ್ನು ಕಾಣಿ.

ಅಲ್ಲದೆ ಮಕ್ಕಳಿಗೆ ಆಗಾಗ ಜ್ವರ ಬರುತ್ತಿದ್ದರೆ ಬೇರೆ ದೊಡ್ಡ ವೈದ್ಯಕೀಯ ಸಮಸ್ಯೆಯೂ ಇರಬಹುದು ಆದ್ದರಿಂದ ನಿರೀಕ್ಷೆ ಮಾಡಬೇಡಿ.

English summary

Recurrent Fever In Children: What It Is, Symptoms, Causes & Treatment in Kannada

Recurrent fever in children: what it is, symptoms, causes & treatment, Read on...
X
Desktop Bottom Promotion