Just In
Don't Miss
- News
ಗಣತಂತ್ರದಿನಕ್ಕಾಗಿ ಐಕ್ಯತಾ ಡೂಡ್ಲ್ ರಚಿಸಿದ ಮುಂಬೈ ಕಲಾವಿದ
- Movies
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ
- Sports
ODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತ
- Finance
ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಹೆಚ್ಚಳ: ಲೀಟರ್ಗೆ 100 ರೂಪಾಯಿ ತಲುಪುತ್ತಾ?
- Automobiles
ಕೆಟಿಎಂನಿಂದ ಅಡ್ವೆಂಚರ್ ಬೈಕ್ ಪ್ರಿಯರಿಗಾಗಿ ಹೊಸ ಅಭಿಯಾನ ಆರಂಭ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಓದುವ ಹವ್ಯಾಸದಿಂದ ಮಕ್ಕಳಿಗಾಗುವ ಲಾಭಗಳೆಷ್ಟು ಗೊತ್ತಾ?
ಜೀವನದಲ್ಲಿ ಯಶಸ್ಸನ್ನು ಪಡೆದುಕೊಳ್ಳಲು ಅಪಾರವಾದ ಜ್ಞಾನದ ಅಗತ್ಯವಿರುತ್ತದೆ. ಅಂತಹ ಜ್ಞಾನವು ಓದುವಿಕೆಯಿಂದ ಬರುವುದು. ಉತ್ತಮ ಓದುವ ಹವ್ಯಾಸವು ಮಗುವಿನ ಶೈಕ್ಷಣಿಕ ಜ್ಞಾನ ಹಾಗೂ ದೈನಂದಿನ ಜೀವನದ ಅಗತ್ಯತೆಗಳನ್ನು ತಿಳಿಸಿಕೊಡುವುದು. ಓದು ಬರದ ವ್ಯಕ್ತಿ ಬಹುತೇಕ ಸಂದರ್ಭದಲ್ಲಿ ಕೀಳರಿಮೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಓದಿನಿಂದ ಸಾಕಷ್ಟು ಜ್ಞಾನ ಸಿಗುವುದರಿಂದ ಎಂತಹ ಸ್ಥಿತಿಯಲ್ಲಾದರೂ ವ್ಯಕ್ತಿ ಯಶಸ್ಸು ಅಥವಾ ಜಯವನ್ನು ಕಂಡುಕೊಳ್ಳುವನು.
ಓದುವ ಹವ್ಯಾಸ ಅಥವಾ ಆಸಕ್ತಿಯು ವ್ಯಕ್ತಿಗೆ ಚಿಕ್ಕ ವಯಸ್ಸಿನಿಂದಲೇ ಬರಬೇಕು. ವ್ಯಕ್ತಿ ಬೆಳೆದಂತೆ ಬೇರೆ ಬೇರೆ ವಿಷಯಗಳ ಕಡೆಗೆ ಆಸಕ್ತಿಯನ್ನು ಪಡೆದುಕೊಳ್ಳುವನು. ಹಾಗಾಗಿ ಅವರು ಸಮಾಜ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತೆರೆದುಕೊಳ್ಳುವಾಗ ಓದುವ ಹವ್ಯಾಸವನ್ನು ಬೆಳೆಸಬೇಕು. ಅದು ಅವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುವುದು. ತಜ್ಞರ ಅಭಿಪ್ರಾಯದ ಪ್ರಕಾರ ಚಿಕ್ಕ ವಯಸ್ಸಿನಲ್ಲಿಯೇ ಓದುವ ಹವ್ಯಾಸ ಬೆಳೆಸಿಕೊಂಡರೆ ವ್ಯಕ್ತಿ ಅಪಾರ ಜ್ಞಾನವನ್ನು ಪಡೆದುಕೊಳ್ಳುವನು.
ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಓದುವ ಹವ್ಯಾಸಗಳನ್ನು ಬೆಳೆಸಿಕೊಂಡರೆ ಯಾವೆಲ್ಲಾ ಪ್ರಯೋಜನಗಳಿವೆ ಮುಂದೆ ಲೇಖನದಲ್ಲಿ ತಿಳಿಯೋಣ.

1. ಮಕ್ಕಳ ಶಬ್ದಭಂಡಾರ ಜ್ಞಾನ ಹೆಚ್ಚುತ್ತದೆ
ಮಕ್ಕಳು ಹೆಚ್ಚು ಹೆಚ್ಚು ಓದಿದಂತೆ ಹಾಗೆ ಸಾಕಷ್ಟು ಶಬ್ದಕೋಶಗಳ ಭಂಡಾರ ಅವರ ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಸಾಮಾನ್ಯ ದಿನ ಬಳಕೆಯಲ್ಲಿ ನಾವು ಬಳಸದೆ ಇರುವ ಶಬ್ದಗಳನ್ನು ಸಹ ಅವರು ಅರಿತಿರುತ್ತಾರೆ. ಜೊತೆಗೆ ಓದಿನ ಹವ್ಯಾಸವು ಸಾಕಷ್ಟು ಜ್ಞಾನವನ್ನು ಒದಗಿಸುತ್ತದೆ. ಆಗ ವ್ಯಕ್ತಿ ತನ್ನ ಅಭಿವೃದ್ಧಿಯನ್ನು ಬಹಳ ಸುಲಭವಾಗಿ ಕಂಡುಕೊಳ್ಳುವನು.

2. ಗಮನವನ್ನು ಕೇಂದ್ರೀಕರಿಸುವಂತೆ ಮಾಡುವುದು
ಚಿಕ್ಕ ವಯಸ್ಸಿನಿಂದಲೇ ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ವ್ಯಕ್ತಿಯು ಅತ್ಯುತ್ತಮ ಜ್ಞಾನ ಪಡೆದುಕೊಳ್ಳುವುದರ ಜೊತೆಗೆ ಗಮನ ಕೇಂದ್ರೀಕರಿಸುವ ಶಕ್ತಿಯನ್ನು ಪಡೆದುಕೊಳ್ಳುತ್ತಾರೆ. ಹೆಚ್ಚು ಓದುವ ಮಕ್ಕಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಾಗಿರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುವುದರ ಮೂಲಕ ವಾತಾವರಣಕ್ಕೂ ಹೊಂದಿಕೊಳ್ಳುತ್ತಾರೆ. ಚಿಕ್ಕ ವಯಸ್ಸಿನಲ್ಲಿಯೇ ಓದುವ ಹವ್ಯಾಸವನ್ನು ಬೆಳೆಸಿದರೆ ಅವರಿಗೆ ಓದುವುದು ಎಂದರೆ ಅತ್ಯಂತ ಪ್ರಿಯವಾದ ಸಂಗತಿಯಾಗುವುದು. ಅದು ಅವರ ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಲು ಪ್ರೋತ್ಸಾಹ ನೀಡುವುದು.

3. ಓದುವ ಹವ್ಯಾಸ ಜ್ಞಾನದ ಹಸಿವನ್ನು ಹೆಚ್ಚಿಸುವುದು
ವಿಶೇಷ ಲೇಖನ ಹಾಗೂ ಪುಸ್ತಕಗಳನ್ನು ಓದುವುದರಿಂದ ಮಕ್ಕಳು ತಮ್ಮ ಸುತ್ತಲಿನ ಪ್ರಪಂಚದ ಬಗ್ಗೆ, ಅಗುಹೋಗುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಅದು ಜೀವನದ ಸಂಸ್ಕೃತಿಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡುವುದು. ಅವರಲ್ಲಿ ಪ್ರಶ್ನೆಯನ್ನು ಕೇಳುವ ಹಾಗೂ ಉತ್ತರವನ್ನು ಹುಡುಕುವ ಕೌಶಲ್ಯವನ್ನು ಪ್ರೇರೇಪಿಸುವುದು.

4. ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವುದು
ಉತ್ತಮ ಪುಸ್ತಕಗಳು ಮಗುವಿನ ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆಯನ್ನು ಹೆಚ್ಚಿಸುವುದು. ಮಗು ತನ್ನ ಅಂತರಾತ್ಮದಲ್ಲಿ ಇರುವ ಕೌಶಲ್ಯ, ದೌರ್ಬಲ್ಯ ಹಾಗೂ ಉತ್ತಮ ಸಂಗತಿಗಳ ಬಗ್ಗೆ ತಾನೇ ಗುರುತಿಸುವುದು ಹಾಗೂ ಅವುಗಳನ್ನು ಪ್ರೋತ್ಸಾಹಿಸಿಕೊಳ್ಳುವ ಶಕ್ತಿಯನ್ನು ಪಡೆದುಕೊಳ್ಳುವುದು. ಪುಸ್ತಕದಿಂದ ಪಡೆದುಕೊಳ್ಳುವ ಜ್ಞಾನದ ಪರಿಣಾಮವಾಗಿ ಸಮಾಜದಲ್ಲಿ ವ್ಯಕ್ತಿಯನ್ನು ಗುರುತಿಸುವುದು ಹಾಗೂ ಅವರನ್ನು ಗೌರವಿಸುವ ಉತ್ತಮ ಸ್ವಾಭಾವಗಳನ್ನು ಕಲಿತುಕೊಳ್ಳುವರು. ಜೊತೆಗೆ ಎಂತಹ ಉತ್ತಮ ವರ್ತನೆಗಳು ನಮ್ಮಿಂದ ವ್ಯಕ್ತವಾಗಬೇಕು ಎನ್ನುವುದರ ಬಗ್ಗೆ ಜ್ಞಾನವನ್ನು ಪಡೆದುಕೊಳ್ಳುವುದು. ಹಾಗಾಗಿ ಓದುವ ಹವ್ಯಾಸವು ಕಲ್ಪನೆಗೂ ಮೀರಿದ ಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ಕಲ್ಪಿಸಿಕೊಡುವುದು ಎನ್ನಲಾಗುತ್ತದೆ.

5. ಹೆಚ್ಚು ತಿಳಿಯಬೇಕು ಎನ್ನುವ ಮನಸ್ಥಿತಿಗೆ ಪ್ರೋತ್ಸಾಹಿಸುವುದು
ಪುಸ್ತಕಗಳು ಜ್ಞಾನವನ್ನು ನೀಡುತ್ತವೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಉತ್ತಮ ಓದುವ ಅಭ್ಯಾಸವಿರುವ ಮಕ್ಕಳನ್ನು ಪ್ರೋತ್ಸಾಹಿಸುವುದು ಹೊರಗಿನ ಪ್ರಪಂಚಕ್ಕೆ ಅವರನ್ನು ತೆರೆದುಕೊಳ್ಳಲು ಸಹಾಯ ಮಾಡಿದಂತಾಗುತ್ತದೆ. ಓದುವುದು ಆಸಕ್ತಿಯನ್ನು ಆಹ್ವಾನಿಸುತ್ತದೆ ಮತ್ತು ಜಿಜ್ಞಾಸೆಯ ಮನಸ್ಸಿನ ಬೆಳವಣಿಗೆಗೆ ಕಾರಣವಾಗುತ್ತದೆ.

6. ಸಂವಹನ ಕೌಶಲ್ಯವನ್ನು ಸುಧಾರಿಸುವುದು
ಆಧುನಿಕ ಪ್ರಪಂಚದಲ್ಲಿ ಸಂವಹನ ಕೌಶಲ್ಯ ಅತ್ಯಗತ್ಯವಾದ ಸಂಗತಿ. ಮಾತಿನಲ್ಲಿ ತೋರುವ ಸದ್ಗುಣಗಳು ಹಾಗೂ ಜ್ಞಾನವು ವಿಶೇಷ ಸ್ಥಾನ ಹಾಗೂ ಗೌರವವನ್ನು ತಂದುಕೊಡುವುದು. ಅಧಿಕ ಪುಸ್ತಕಗಳನ್ನು ಓದುವುದರಿಂದ ಮಕ್ಕಳು ಬಹಳಷ್ಟು ಹೊಸ ಶಬ್ದಗಳ ಪರಿಚಯ ಮಾಡಿಕೊಳ್ಳುವರು. ಜೊತೆಗೆ ತನ್ನ ನಿತ್ಯದ ಮತಿನಲ್ಲಿ ಬಳಕೆ ಮಾಡುವರು. ಜೊತೆಗೆ ಯಾವ ಬಗೆಯಲ್ಲಿ ತಮ್ಮ ಸಂವಹನ ಕೌಶಲ್ಯ ಇರಬೇಕು ಎನ್ನುವುದನ್ನು ಅರಿತುಕೊಳ್ಳುವರು. ಚಿಕ್ಕ ವಯಸ್ಸಿನಲ್ಲಿಯೇ ಓದುವ ಅಭ್ಯಾಸವನ್ನು ಬೆಳೆಸುವ ಮಕ್ಕಳು ಹೆಚ್ಚು ಅಭಿವ್ಯಕ್ತಿ ಹೊಂದುತ್ತಾರೆ.

7. ಉತ್ತಮ ನಾಯಕರನ್ನಾಗಿ ಮಾಡುವುದು
ಪುಸ್ತಕದಿಂದ ಪಡೆದ ಸೌಜನ್ಯ ಹಾಗೂ ಜ್ಞಾನವು ವ್ಯಕ್ತಿಯನ್ನು ಸಮಾಜದಲ್ಲಿ ಉತ್ತಮ ನಾಯಕನನ್ನಾಗಿ ಮಾಡುವುದು. ಜೊತೆಗೆ ಸಮಾಜದಲ್ಲಿ ಇರುವ ಪರಿಸ್ಥಿತಿ ಹಾಗೂ ಸಮಸ್ಯೆಗಳ ಬಗ್ಗೆ ಬಹುಬೇಗ ಅರಿತುಕೊಳ್ಳಲು ಸಹಾಯವಾಗುವುದು. ಉತ್ತಮ ಪರಿಶೀಲನೆ ಹಾಗೂ ಕ್ರಮ ಕೈಗೊಳ್ಳುವ ಸಾಮರ್ಥ್ಯವನ್ನು ಬೆಳೆಯುವುದು. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಅವರು ಇಂದು ಉತ್ತಮ ಓದುವ ಹವ್ಯಾಸ ಹಾಗೂ ಜ್ಞಾನವನ್ನು ಪಡೆದುಕೊಂಡರೆ. ನಾಳಿನ ಅವರ ಬದುಕು ಉತ್ತಮವಾಗಿರುತ್ತದೆ.