For Quick Alerts
ALLOW NOTIFICATIONS  
For Daily Alerts

ವಿಚ್ಛೇದನದಿಂದ ಮಕ್ಕಳ ಮೇಲೆ ಬೀರುವ ಋಣಾತ್ಮಕ ಪರಿಣಾಮಗಳೇನು? ಅವುಗಳಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ?

|

ಡಿವೋರ್ಸ್ ಈಗೀನ ಕಾಲದಲ್ಲಿ ಕೊಂಚ ಜಾಸ್ತಿಯಾಗಿ ಚಾಲ್ತಿಯಲ್ಲಿರುವ ಪದ . ಮದುವೆಯಾಗಿ ಎರಡು ತಿಂಗಳಲ್ಲಿ ವಿಚ್ಚೇದನ, ಮದುವೆಯಾಗಿ ಒಂದು ವರ್ಷ ಕಳೆಯೊದ್ರೊಳಗೆ ವಿಚ್ಚೇದನ ಎನ್ನುವ ಸುದ್ದಿಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಕೌಟುಂಬಿಕ ಜೀವನದಲ್ಲಿ ಈ ಪದವೊಂದು ಅತ್ಯಂತ ಸವಾಲಿನ ಹಾಗೂ ಅತ್ಯಂತ ನೋವಿನ ಪದವಾಗಿದೆ.

Negative Effects Of Divorce On Children in kannada

ನಿಮಗೊಂದು ಗೊತ್ತಾ? ನಿಮ್ಮ ಡಿವೋರ್ಸ್ ನಿಂದ ನಿಮ್ಮ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮಗಳು ಬೀರುತ್ತವೇ ಅನ್ನುವುದು? ಹೌದು. ಅನೇಕ ಅಧ್ಯಯನಗಳ ಮೂಲಕ ಇದು ಬಯಲಾಗಿದ್ದು, ವಿಚ್ಛೇದನದಿಂದ ಮಕ್ಕಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎನ್ನುವುದು ಸಾಬೀತಾಗಿದೆ. ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ವಿಚ್ಛೇದನದಿಂದ ಋಣಾತ್ಮಕ ಪರಿಣಾಮಗಳು ಬೀರುವುದು ಹೆಚ್ಚಂತೆ.

ಅಮೆರಿಕಾದಲ್ಲಿ ನಡೆದ ಅಧ್ಯಯನದ ಪ್ರಕಾರ ವಿಚ್ಛೇದನದಿಂದ ಹೆಣ್ಣು ಮಕ್ಕಳ ಮೇಲೆ ಶೇ. 60ರಷ್ಟು ಋಣಾತ್ಮಕ ಪರಿಣಾಮ ಬೀರುತ್ತಂತೆ. ಇನ್ನು ಹುಡುಗರ ಮೇಲೆ ಶೇ.30 ರಷ್ಟು ಪರಿಣಾಮ ಬೀರುತ್ತಂತೆ. ಇದಾಗ್ಯೂ ನೀವು ವಿಚ್ಚೇದನ ತೆಗೆದುಕೊಂಡರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಂಡರೆ, ಮಕ್ಕಳನ್ನು ಸರಿಯಾಗಿ ನೋಡಿಕೊಂಡರೆ ಇಂತಹ ಋಣಾತ್ಮಕ ಪರಿಣಾಮಗಳಿಂದ ಅವರನ್ನು ರಕ್ಷಣೆ ಮಾಡಬಹುದು.

ಡಿವೋರ್ಸ್ ತೆಗೆದುಕೊಳ್ಳುವ ಪೋಷಕರು ಮಕ್ಕಳ ಮೇಲಿನ ಕಾಳಜಿಯನ್ನು ಮರೆಯುತ್ತಾರೆ. ಡಿವೋರ್ಸ್ ಗೆ ನಿರ್ಧರಿಸಿದ ಮೇಲೆ ಮನೆಯಲ್ಲಿ ನಿತ್ಯವೂ ಜಗಳ, ಮನೆಯಲ್ಲಿ ಸಂತೋಷ, ಖುಷಿಯ ವಾತಾವರಣ ಇಲ್ಲದೇ ಇರುವುದು. ಮಕ್ಕಳ ಜೊತೆ ಒಂದಾ ತಾಯಿ ಅಥವಾ ತಂದೆಯ ಸಂಬಂಧ ಸರಿಯಾಗಿ ಇಲ್ಲದಿರುವುದು. ಹೀಗೆ ಡಿವೋರ್ಸ್ ನಿಂದ ಮನೆಯಲ್ಲಿ ಚಿಂತೆ ಜಾಸ್ತಿ ಇರುತ್ತದೆ. ಯಾವಾಗಲೂ ಅಸಂತೋಷ ಇವೆಲ್ಲ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.ಇದು ಅನೇಕ ಮಕ್ಕಳ ಜೀವನವನ್ನೇ ಹಾಳು ಮಾಡುತ್ತದೆ. ಹಾಗಾದರೆ ವಿಚ್ಛೇದನದಿಂದ ಉಂಟಾಗುವ ಅಲ್ಪಾವಧಿಯ ಪರಿಣಾಮಗಳು ಏನು ಬನ್ನಿ ಮುಂದೆ ಓದೋಣಾ.

ಆತಂಕ!

ಆತಂಕ!

ಪೋಷಕರ ನಡುವೆ ನಿತ್ಯವು ಜಗಳ ಸಹಜವಾಗಿ ಇದು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೌದು, ವಿಚ್ಛೇದನದ ನಂತರದ ಪರಿಣಾಮವು ಮಗುವಿಗೆ ಉದ್ವಿಗ್ನತೆ ಮತ್ತು ಆತಂಕವನ್ನು ಉಂಟುಮಾಡುತ್ತದೆ. ವಿಚ್ಛೇದನದಿಂದ ಸಣ್ಣ ಮಕ್ಕಳು ಪೋಷಕರ ಮೇಲೆ ಜಾಸ್ತಿ ಅವಲಂಬಿತರಾಗಿರುವುದರಿಂದ ಸಾಮಾನ್ಯವಾಗಿ ಭವಿಷ್ಯವನ್ನು ನೆನೆದು ಆತಂಕಕ್ಕೊಳಗಾಗುತ್ತಾರೆ. ಹೀಗೆ ಆತಂಕಕ್ಕೊಳಗಾದ ಮಗುವಿಗೆ ತನ್ನ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತದೆ ಮತ್ತು ಅವನು ಮಾಡುವ ಚಟುವಟಿಕೆಗಳಲ್ಲಿ ಆಸಕ್ತಿಯನ್ನು ಕಳೆದುಕೊಳ್ಳಬಹುದುದು ಇದು ಮಗುವಿನ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು.

ನಿರಂತರ ಒತ್ತಡ!

ನಿರಂತರ ಒತ್ತಡ!

ಅಮೇರಿಕನ್ ಅಕಾಡೆಮಿ ಆಫ್ ಚೈಲ್ಡ್ ಮತ್ತು ಅಡೋಲೆಸೆಂಟ್ ಸೈಕಿಯಾಟ್ರಿ ಪ್ರಕಾರ, ಅನೇಕ ಮಕ್ಕಳು ತಮ್ಮ ಹೆತ್ತವರ ವಿಚ್ಛೇದನದ ಹಿಂದಿನ ಕಾರಣವನ್ನು ತಪ್ಪಾಗಿ ಪರಿಗಣಿಸುತ್ತಾರೆ. ಅಂದರೆ ತಮ್ಮಿಂದ ಡಿವೋರ್ಸ್ ಆಗಿದೆ ಎಂದು ನಂಬುತ್ತಾರೆ. ಹೀಗಾಗಿ ಈ ಸಂಬಂಧವನ್ನು ಸರಿಪಡಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಸಣ್ಣ ಪ್ರಾಯದ ಮನಸ್ಸಿನ ಮೇಲೆ ಅಪಾರ ಒತ್ತಡ ಬೀಳುತ್ತದೆ, ಇದು ನಕಾರಾತ್ಮಕ ಆಲೋಚನೆಗಳು ಮತ್ತು ದುಃಸ್ವಪ್ನಗಳಂತಹ ಹಲವಾರು ಪರಿಣಾಮಗಳನ್ನು ಉಂಟುಮಾಡಬಹುದು. ಒತ್ತಡ ಜೀವನವನ್ನು ಸಣ್ಣ ವಯಸ್ಸಿನವರು ನಿಭಾಯಿಸಲು ಸಾಧ್ಯವಾಗದೆ ಆತ್ಮಹತ್ಯೆಯಂತಹ ಹಾದಿ ತುಳಿಯಬಹುದು.

ಚಿತ್ತಸ್ಥಿತಿಯ ಬದಲಾವಣೆ ಮತ್ತು ಕಿರಿಕಿರಿ!

ಚಿತ್ತಸ್ಥಿತಿಯ ಬದಲಾವಣೆ ಮತ್ತು ಕಿರಿಕಿರಿ!

ವಿಚ್ಚೇದನವು ಮಕ್ಕಳ ಮೇಲೆ ಯಾವ ರೀತಿ ಸಮಸ್ಯೆ ಉಂಟು ಮಾಡುತ್ತದೆ ಎಂದರೆ ಚಿಕ್ಕ ಮಕ್ಕಳು ಚಿತ್ತಸ್ಥಿತಿಯ ಬದಲಾವಣೆಯಿಂದ ಬಳಲು ಆರಂಭ ಮಾಡುತ್ತಾರೆ ಮತ್ತು ಅಲ್ಲದೇ ಪರಿಚಿತ ಜನರೊಂದಿಗೆ ಸಂವಹನ ನಡೆಸಲು ಅವರಿಗೆ ಕಿರಿಕಿರಿ ಅನಿಸಬಹುದು. ಕೆಲವು ಮಕ್ಕಳು ಎಲ್ಲ ಕೆಲಸಗಳಿಂದ ದೂರ ಇರಲು ಇಷ್ಟಪಡಬಹುದು. ಅಂದರೆ ಯಾರ ಜೊತೆಗೂ ಮಾತನಾಡಲು ಇಷ್ಟಪಡದೆ ಇರುವುದು, ಚಟುವಟಿಕೆಗಳಲ್ಲಿ ಉತ್ಸಾಹ ಕಳೆದುಕೊಳ್ಳುವುದು ಹೀಗೆ ಏಕಾಂಗಿಯಾಹಿರಲು ಮೊದಲ ಆದ್ಯತೆ ನೀಡುವುದು. ಇಂತಹ ಲಕ್ಷಣಗಳು ಮಕ್ಕಳಲ್ಲಿ ಕಾಣಬಹುದು.

ತೀವ್ರ ದುಃಖ!

ತೀವ್ರ ದುಃಖ!

ಪೋಷಕರು ಡಿವೋರ್ಸ್ ತೆಗೆದುಕೊಂಡಿದ್ದಾರೆ ಅಂದಾಗ ಸಾಮಾನ್ಯವಾಗಿ ತೀವ್ರ ದುಃಖ ಕಾಡುವುದು ಸಹಜ. ಆದರೆ ಸಣ್ಣ ಮಕ್ಕಳಲ್ಲಿ ಇದು ಅತ್ಯಂತ ತೀವ್ರವಾಗಿರುತ್ತದೆ. ತೀವ್ರವಾದ ದುಃಖವು ಮಗುವಿನ ಹೃದಯ ಮತ್ತು ಮನಸ್ಸಿನ ಮೂಲಕ ಪರಿಣಾಮ ಬೀರುತ್ತದೆ. ಜೀವನದಲ್ಲಿ ಯಾವುದು ಸರಿ ಇಲ್ಲ ಅನಿಸಬಹುದು. ಇದು ಖಿನ್ನತೆಗೂ ಕಾರಣವಾಗಬಹುದು. ಇದು ಈ ದುಃಖದ ದೀರ್ಘಕಾಲೀನ ಅಭಿವ್ಯಕ್ತಿಯಾಗಿದೆ.

ಭ್ರಮನಿರಸನ ಮತ್ತು ಸಂಕಟ!

ಭ್ರಮನಿರಸನ ಮತ್ತು ಸಂಕಟ!

ವಿಚ್ಛೇದನದಿಂದ ಮಕ್ಕಳು ತಮ್ಮ ಪೋಷಕರಿಂದ ಸಮಗ್ರ ಭಾವನಾತ್ಮಕ ಬೆಂಬಲವನ್ನು ಹೊಂದಿಲ್ಲದ ಕಾರಣ ಹತಾಶ ಮತ್ತು ಭ್ರಮನಿರಸನವನ್ನು ಅನುಭವಿಸಬಹುದು. ಇನ್ನು ಮಗುವನ್ನು ಪೋಷಕರ ಪೈಕಿ ಒಬ್ಬರೇ ನೋಡಿಕೊಳ್ಳುತ್ತಿದ್ದರೆ ಈ ಪರಿಸ್ಥಿತಿಯು ಇನ್ನಷ್ಟು ಹದಗೆಡಬಹುದು. ನೀವು ಗಮನಿಸಿರಬಹುದು ಡಿವೋರ್ಸ್ ಆದ ಮಕ್ಕಳ ಪೈಕಿ ಅನೇಕರ ಜೀವನ ಅಸ್ತವ್ಯಸ್ತವಾಗಿರುತ್ತದೆ.

ದೀರ್ಘಾವಧಿಯ ಪರಿಣಾಮ

ದೀರ್ಘಾವಧಿಯ ಪರಿಣಾಮ

ವಿಚ್ಛೇದನದ ಅಲ್ಪಾವಧಿಯ ಪರಿಣಾಮಗಳು ಮಗುವಿನ ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಯ ಮೇಲೆ ಗಂಭೀರ ಬಿರುತ್ತದೆ. ಇದು ದೀರ್ಘಾವಧಿಯಾಗಿ ಪರಿಣಾಮ ಬೀರುವ ಸಾಧ್ಯತೆಯು ಹೆಚ್ಚು.

ವಿಚ್ಛೇದನದ ದೀರ್ಘಾವಧಿಯ ಪರಿಣಾಮಗಳು

ವಿಚ್ಛೇದನದ ದೀರ್ಘಾವಧಿಯ ಪರಿಣಾಮಗಳು

ಅಲ್ಪಾವಧಿಯ ಪರಿಣಾಮಗಳಂತ ಮಕ್ಕಳ ಮೇಲೆ ಡಿವೋರ್ಸ್ ನಿಂದ ದೀರ್ಘಾವಧಿಯ ಪರಿಣಾಮಗಳು ಕೂಡ ಬೀರುತ್ತದೆ. ಮನೆಯಲ್ಲಿ ನಡೆಯುವ ಪೋಷಕರ ಜಗಳ, ಸಾಮಾಜಿಕವಾಗಿ ಇದರಿಂದ ಉಂಟಾಗುವ ಮಾನ ಹಾನಿ, ಓಷಕರ ಪೈಕಿ ಒಬ್ಬರೊಂದಿಗೆ ಜೀವನ ನಡೆಸುವುದು ಇವುಗಳು ಮಕ್ಕಳ ಮೇಲೆ ವಿಚ್ಛೇದನದ ದೀರ್ಘಕಾಲೀನ ಪರಿಣಾಮಗಳನ್ನು ಉಂಟು ಮಾಡುತ್ತದೆ.

ವರ್ತನೆ ಮತ್ತು ಸಾಮಾಜಿಕ ಸಮಸ್ಯೆಗಳು

ವರ್ತನೆ ಮತ್ತು ಸಾಮಾಜಿಕ ಸಮಸ್ಯೆಗಳು

ಪೋಷಕರ ವಿಚ್ಛೇದನದಿಂದ ಮಕ್ಕಳು ಹಿಂಸಾತ್ಮಕ ಮತ್ತು ಸಮಾಜವಿರೋಧಿ ನಡವಳಿಕೆಯನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೌದು ಡಿವೋರ್ಸ್ ನಿಂದ ಕೋಪ ಜಾಸ್ತಿಯಾಗೋದು, ಯಾರನ್ನಾದರ ಮೇಲೆ ಹಿಂಸಾತ್ಮಕವಾಗಿ ದಾಳಿ ನಡೆಸಲು ಇಂತಹ ಮಕ್ಕಳು ಹಿಂಜರಿಯುವುದಿಲ್ಲ. ಅದರಲ್ಲೂ ಡಿವೋರ್ಸ್ ವಿಶೇಷವಾಗಿ ಹದಿಹರೆಯದ ಮಕ್ಕಳ ಅಪರಾಧ ಮನಸ್ಥಿತಿಯ ಬೆಳವಣಿಗೆಗೆ ಕಾರಣವಾಗಬಹುದು. ಅಧ್ಯಯನದ ಪ್ರಕಾರ ಡಿವೋರ್ಸ್ ಪಡೆದ ನಂತರ ಅನೇಕ ಮಕ್ಕಳ ವರ್ತನೆಯಲ್ಲಿ ಬದಲಾಗಿ ಅವರು ಅಪರಾಧಿ ಚಟುವಟಿಕೆ ನಡೆಸಲು ಆರಂಭಿಸಬಹುದು. ಇದು ದೊಡ್ಡ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಬಹುದು ಎಂದು ತಿಳಿಸಿದೆ.

ಸಂಬಂಧದಲ್ಲಿ ಸಮಸ್ಯೆ!

ಸಂಬಂಧದಲ್ಲಿ ಸಮಸ್ಯೆ!

ಡಿವೋರ್ಸ್ ಪೋಷಕರ ಮಕ್ಕಳಲ್ಲೂ ವಿಚ್ಛೇದನ ಉಂಟಾಗುವ ಸಾಧ್ಯತೆ ಹೆಚ್ಚು. ಅವರ ಪೋಷಕರು ಇಟ್ಟ ಹೆಜ್ಜೆಯನ್ನೇ ಮಕ್ಕಳು ಇಡುವುದು ಜಾಸ್ತಿ. ಹೌದು, ಮಕ್ಕಳು ಮದುವೆ ಸಂಬಂಧ ಮುರಿದು ಬೀಳುವುದನ್ನು ನೋಡುತ್ತಲೇ ಬೆಳೆಯುತ್ತಾರೆ. ಹೀಗಾಗಿ ಇದು ಅವರ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಪ್ರೀತಿ ಮತ್ತು ಸಾಮರಸ್ಯದ ಬಗ್ಗೆ ಅನುಮಾನಗಳನ್ನು ಬೆಳೆಸಿಕೊಳ್ಳುತ್ತಾರೆ. ಅವರು ನಂಬಿಕೆಯ ಸಮಸ್ಯೆಗಳನ್ನು ಹೊಂದುತ್ತಾರೆ. ಹೀಗಾಗಿ ಅವರ ಸಂಬಂಧವನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಹರಸಾಹಸ ಪಡುತ್ತಾರೆ. ಅನೇಕರಲ್ಲಿ ಇಂತಹ ಸಮಸ್ಯೆ ಕಾಡುತ್ತದೆ.

ಮಾದಕ ವ್ಯಸನಕ್ಕೆ ಗುರಿಯಾಗುತ್ತಾರೆ

ಮಾದಕ ವ್ಯಸನಕ್ಕೆ ಗುರಿಯಾಗುತ್ತಾರೆ

ಡಿವೋರ್ಸ್ ಪಡೆದ ಪೋಷಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್ ಮತ್ತು ಆಲ್ಕೋಹಾಲ್ ಚಟಕ್ಕೆ ಗುರಿಯಾಗುವುದು ಜಾಸ್ತಿ. ಪೋಷಕರು ತನ್ನ ಜೊತೆ ಇಲ್ಲ, ಅಪ್ಪ-ಅಮ್ಮ ನಡುವೆ ಸಂಬಂಧ ಸರಿ ಇಲ್ಲ ಎಂದಾಗ ಆತಂಕ, ನೋವು ಉಂಟಾಗುತ್ತದೆ. ಇದರಿಂದ ಹೊರಬರಲು ಅವರು ಡ್ರಗ್ಸ್, ಮದ್ಯಪಾನದ ಮೊರೆ ಹೋಗುತ್ತಾರೆ. ಸಹಜವಾಗಿ, ಒಂಟಿ ಪೋಷಕರಿಂದ ಒದಗಿಸಲಾದ ಆರೈಕೆಯಂತಹ ಇತರ ಅಂಶಗಳಿವೆ, ಇದು ಹದಿಹರೆಯದವರಲ್ಲಿ ಮಾದಕ ದ್ರವ್ಯಗಳನ್ನು ಹೊಂದುವ ಪ್ರವೃತ್ತಿಯನ್ನು ನಿರ್ಧರಿಸುತ್ತದೆ. ಆದಾಗ್ಯೂ, ಹದಿಹರೆಯದವರು ಪ್ರಲೋಭನೆಗೆ ಒಳಗಾಗುವ ಸಂಭವನೀಯತೆ ಗಣನೀಯವಾಗಿ ಹೆಚ್ಚಾಗಿರುತ್ತದೆ. ದೀರ್ಘಕಾಲದ ಮಾದಕ ದ್ರವ್ಯ ಸೇವನೆಯು ಮಗುವಿನ ಯೋಗಕ್ಷೇಮದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ.

ಖಿನ್ನತೆ!

ಖಿನ್ನತೆ!

ಪೋಷಕರು ಅನೋನ್ಯವಾಗಿರುತ್ತಾರೆ. ಅವರ ನೆರಳಲ್ಲೇ ಮಕ್ಕಳು ಜೀವಿಸುತ್ತಿರುತ್ತಾರೆ. ಆದರೆ ಏಕಾಏಕಿ ಪೋಷಕರು ವಿಚ್ಛೇದನ ಪಡೆದು ದೂರವಾಗುತ್ತಾರೆ. ಇದು ಮಾನಸಿಕ ಖಿನ್ನತೆಗೆ ಒಳಗಾಗುವಂತೆ ಮಕ್ಕಳನ್ನು ಮಾಡುತ್ತದೆ. ಖಿನ್ನತೆಯು ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ ಮತ್ತು ವಿಚ್ಛೇದನಕ್ಕೆ ಸಾಕ್ಷಿಯಾಗುವ ಮಕ್ಕಳು ಖಿನ್ನತೆ ಮತ್ತು ಸಾಮಾಜಿಕ ಹಿಂತೆಗೆದುಕೊಳ್ಳುವಿಕೆಯ ಹೆಚ್ಚಿನ ಸಂಭವವನ್ನು ಹೊಂದಿರುತ್ತಾರೆ. ಮಕ್ಕಳಲ್ಲಿ ಕಂಡುಬರುವ ಬೈಪೋಲಾರ್ ಡಿಸಾರ್ಡರ್ ಪ್ರಕರಣಗಳಲ್ಲಿ ವಿಚ್ಛೇದನವು ಒಂದು ಕೊಡುಗೆ ಅಂಶವಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕಳಪೆ ಶಿಕ್ಷಣ ಮತ್ತು ಸಾಮಾಜಿಕ-ಆರ್ಥಿಕ ಸ್ಥಾನ

ಕಳಪೆ ಶಿಕ್ಷಣ ಮತ್ತು ಸಾಮಾಜಿಕ-ಆರ್ಥಿಕ ಸ್ಥಾನ

ಪೋಷಕರ ಡಿವೋರ್ಸ್ ನಿಂದ ಮಕ್ಕಳು ಖಿನ್ನತೆ, ಆತಂಕ, ಅಭದ್ರತೆಯಂತರ ಸಮಸ್ಯೆ ಅನುಭವಿಸುತ್ತಾರೆ. ಹೀಗೆ ಮಾನಸಿಕ ಆರೋಗ್ಯ ಸರಿ ಇಲ್ಲದಾಗ ಇದು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಶಿಕ್ಷಣ ಪಡೆಯಲು ಆಸಕ್ತಿ ತೋರಿಸದೆ ಇರುವುದು ಹೀಗೆ ಹಲವು ಸಮಸ್ಯೆಗಳು ಉಂಟಾಗುತ್ತದೆ. ಈ ರೀತಿ ಶಿಕ್ಷಣದಲ್ಲಿ ಕುಂಠಿತಗೊಂಡ ಪ್ರಗತಿಯು ವಯಸ್ಕನಾಗಿ ಮಗುವಿನ ವೃತ್ತಿ ಭವಿಷ್ಯವನ್ನು ಅಡ್ಡಿಪಡಿಸುತ್ತದೆ, ಇದು ಯೋಗ್ಯವಾದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಹೊಂದಲು ಕಷ್ಟವಾಗುತ್ತದೆ.

English summary

Negative Effects Of Divorce On Children in kannada

Here we are discussing about Negative Effects Of Divorce On Children in kannada . Read more.
Story first published: Wednesday, August 17, 2022, 12:01 [IST]
X
Desktop Bottom Promotion