For Quick Alerts
ALLOW NOTIFICATIONS  
For Daily Alerts

ತಾಯಂದಿರಿಗೆ ಮಕ್ಕಳಲ್ಲಿ ಒಬೆಸಿಟಿ ತಡೆಯಲು ಸಾಧ್ಯ!

|

ಇತ್ತೀಚೆಗೆ ಒಬೆಸಿಟಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಪ್ರಮುಖ ಕಾರಣ ಜೀವನಶೈಲಿ. ಒಬೆಸಿಟಿ ಹೆಚ್ಚಿರುವ ಮಕ್ಕಳಲ್ಲಿ ವಿಶ್ವದಲ್ಲಿ ಭಾರತ ಎರಡನೇಯ ಸ್ಥಾನದಲ್ಲಿದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಒಬೆಸಿಟಿ ಹೆಚ್ಚಾಗುತ್ತಿರುವುದು ಆಘಾತಕಾರಿಯಾದ ವಿಷಯವೇ. ಚಿಕ್ಕ ಪ್ರಾಯದಲ್ಲಿ ಒಬೆಸಿಟಿ ಅಥವಾ ಅತ್ಯಧಿಕ ಮೈಬೊಜ್ಜು ಇದ್ದರೆ ಆ ಮಕ್ಕಳು ಬೆಳೆಯುತ್ತಿದ್ದಂತೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವುದು. ಇನ್ನು ಒಬೆಸಿಟಿ ಮಕ್ಕಳಲ್ಲಿ ಖಿನ್ನತೆಗೆ ದೂಡುವ ಅಪಾಯವಿದೆ.

Obesity In Kids

ಒಬೆಸಿಟಿ ಸಮಸ್ಯೆಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಬರಬಹುದು. ಚಿಕ್ಕ ಪ್ರಾಯದಲ್ಲಿಯೇ ಮಧುಮೇಹ ಬರುವ ಅಪಾಯ ತುಂಬಾ ಇದೆ. ಇನ್ನು ಕ್ಯಾನ್ಸರ್ ಮುಂತಾದ ಕಾಯಿಲೆ ಕೂಡ ಬರಬಹುದು.

Obesity In Kids

ಏನಿದು ಮಕ್ಕಳಲ್ಲಿ ಒಬೆಸಿಟಿ?

ಒಬೆಸಿಟಿ ಎನ್ನುವುದು ಮಕ್ಕಳ ಆರೋಗ್ಯಕ್ಕೆ ಅಪಾಯ ತರುವ ಬಹುದೊಡ್ಡ ಸಮಸ್ಯೆಯಾಗಿದೆ. ಒಂದು ವೇಳೆ ಮಗುವಿನ ಬಾಡಿ ಮಾಸ್‌ ಇಂಡೆಕ್ಸ್ ಅದೇ ವಯಸ್ಸಿನ ಇತರ ಶೇ. 95ರಷ್ಟು ಮಕ್ಕಳಿಗೆ ಹೋಲಿಸಿದಾಗ ತುಂಬಾ ಅಧಿಕವಿದ್ದರೆ ಆ ಮಗುವನ್ನು ಒಬೆಸಿಟಿ ಮಗು ಎಂದು ಪರಿಗಣಿಸಲಾಗುವುದು.

ಮಕ್ಕಳಲ್ಲಿ ಸಾಮಾನ್ಯವಾಗಿ 5-6 ವರ್ಷಗಳು ಕಳೆಯುತ್ತಿದ್ದಂತೆ ಪ್ರಾರಂಭವಾಗುತ್ತದೆ. ಮಕ್ಕಳಲ್ಲಿ ಮೈ ತೂಕ ಹೆಚ್ಚಿದಂತೆ ಆರೋಗ್ಯ ಕಡಿಮೆಯಾಗುವುದು. ಚಿಕ್ಕ ಪ್ರಾಯದಲ್ಲಿ ಒಬೆಸಿಟಿ ಸಮಸ್ಯೆ ಇರುವ ಮಕ್ಕಳಲ್ಲಿ ಬೆಳೆಯುತ್ತಿದ್ದಂತೆ ಮೈ ತೂಕ ಹೆಚ್ಚುವುದರ ಜತೆಗೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವುದು. ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ಇದ್ದರೆ ಅದು ಅವರ ಶಾರೀರಿಕ ಹಾಗೂ ಬೌದ್ಧಿಕ ಆರೋಗ್ಯದ ಮೇಲೆ ತುಂಬಾ ಹೊಡೆತ ಬೀಳುತ್ತದೆ.ಒಬೆಸಿಟಿ ಇರುವ ಮಕ್ಕಳು ಬೇಗನೆ ಖಿನ್ನತೆಗೆ ಒಳಗಾಗುತ್ತಾರೆ ಹಾಗೂ ಅವರಲ್ಲಿ ಆತ್ಮವಿಶ್ವಾಸ ಕುಂದುವುದು.

ಮಕ್ಕಳಲ್ಲಿ ಒಬೆಸಿಟಿಗೆ ಏನು ಕಾರಣ?

ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆಗೆ ಪ್ರಮುಖ ಕಾರಣ ಆಹಾರಶೈಲಿ ಹಾಗೂ ಜೀವನಶೈಲಿ. ಈಗೀನ ಮಕ್ಕಳಿಗೆ ದೈಹಿಕ ವ್ಯಾಯಾಮ ಕಡಿಮೆಯಾಗುತ್ತದೆ. ಹೆಚ್ಚಿನ ಸಮಯವನ್ನು ಟಿವಿ ಹಾಗೂ ಮೊಬೈಲ್ ಮುಂದೆ ಕಳೆಯುತ್ತಿದ್ದಾರೆ. ಇದರಿಂದಾಗಿ ಮಕ್ಕಳಲ್ಲಿ ದಯಹಿಕ ವ್ಯಾಯಾಮ ಕಡಿಮೆಯಾಗುತ್ತದೆ. ಇನ್ನು ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿರಲು ನಗರ ಪ್ರದೇಶಗಳಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಮನೆಯಿಂದ ಹೊರಗಡೆ ಬಂದು ಆಡಲು ಅವಕಾಶಗಳು ಕಡಿಮೆ, ಅವಕಾಶ ಇದ್ದರೂ ಮೊಬೈಲ್‌, ವೀಡಿಯೋಗೇಮ್‌ ಅಂತ ಕಳೆಯುವುದರಿಂದ ಅವರಲ್ಲಿ ದೈಹಿಕ ವ್ಯಾಯಾಮವಿಲ್ಲದೆ ಒಬೆಸಿಟಿ ಹೆಚ್ಚಾಗುತ್ತಿದೆ.

ಇನ್ನು ಆಹಾರಶೈಲಿ ನೋಡಿದರೆ ಆರೋಗ್ಯಕರ ಆಹಾರದ ಬದಲಿಗೆ ಪಿಜ್ಜಾ, ಬರ್ಗರ್‌ ಅಂತ ತಿನ್ನುವ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ.

ಮಕ್ಕಳ ಒಬೆಸಿಟಿ ತಡೆಯಲು ತಾಯಿಗೆ ಸಾಧ್ಯ

ಮಕ್ಕಳಲ್ಲಿ ಹೆಚ್ಚುತ್ತಿರುವ ಒಬೆಸಿಟಿ ಸಮಸ್ಯೆ ತಡೆಗಟ್ಟಲು ತಾಯಂದಿರು ಮನಸ್ಸು ಮಾಡಿದರೆ ಸಾಧ್ಯ. ಮೊದಲಿಗೆ ಮಕ್ಕಳಿಗೆ ಆರೋಗ್ಯಕರ ಆಹಾರಶೈಲಿ ರೂಢಿಸಬೇಕು. ಮನೆಯಲ್ಲಿ ಆರೋಗ್ಯಕರ ಆಹಾರಶೈಲಿ ಇದ್ದರೆ ಮಾತ್ರ ಮಕ್ಕಳು ರೂಢಿಸಿಕೊಳ್ಳಲು ಸಾಧ್ಯ.

ಒಬೆಸಿಟಿಯಿಂದ ಮಕ್ಕಳಿಗೆ ಬರುವ ಕಾಯಿಲೆಗಳು

ಮಧುಮೇಹ, ಹೃದಯ ಸಮಸ್ಯೆ, ಅಸ್ತಮಾ, ನಿದ್ರಾಹೀನತೆ, ಸಂಧಿವಾತ, ಅಧಿಕ ಕೊಬ್ಬಿನಂಶವಿರುವ ಲಿವರ್ ಸಮಸ್ಯೆ, ಅತಿಯಾದ ನಿದ್ದೆ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಆತ್ಮವಿಶ್ವಾಸದ ಕೊರತೆ, ಮುಂತಾದ ಸಮಸ್ಯೆ ಕಂಡು ಬರುವುದು.

ಮಕ್ಕಳಲ್ಲಿ ಒಬೆಸಿಟಿ ತಡೆಗಟ್ಟುವಲ್ಲಿ ತಾಯಿಗೆ ಸಾಧ್ಯ ಎಂಬುವುದು ಸಂಶೋಧನೆಯಿಂದ ಸಾಭೀತಾಗಿದೆ. ಈ ಸಂಶೋಧನೆಯಲ್ಲಿ 25,000 ತಾಯಂದಿರು ಭಾಗವಹಿಸಿದ್ದರು. ಅವರ ಆಹಾರಶೈಲಿ, ಜೀವನ ಶೈಲಿ ಗಮನಿಸಿದಾಗ ಆರೋಗ್ಯಕರ ಆಹಾರಶೈಲಿ, ಜೀವನಶೈಲಿ ಇರುವ ತಾಯಂದಿರ ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ಇಲ್ಲದಿರುವುದು ತಿಳಿದು ಬಂದಿದೆ. ಕುಟುಂಬದ ಬೆಂಬಲವಿದ್ದರೆ ಮಕ್ಕಳಲ್ಲಿ ಒಬೆಸಿಟಿ ಸಮಸ್ಯೆ ತಡೆಗಟ್ಟಬಹುದೆಂದು ಸಂಶೋಧನೆ ಹೇಳಿದೆ.

ತಾಯಿಯ ಈ 5 ಒಳ್ಳೆಯ ಹವ್ಯಾಸಗಳು ಮಕ್ಕಳಲ್ಲಿ ಒಬೆಸಿಟಿಯನ್ನು ತಡೆಯುತ್ತದೆ

1. ಆರೋಗ್ಯಕರ ಆಹಾರಶೈಲಿ

2. ದಿನಾ ವ್ಯಾಯಾಮ ಮಾಡುವುದು

3. ಆರೋಗ್ಯಕರ ಮೈ ತೂಕ ಹೊಂದಿರುವುದು

4. ಧೂಮಪಾನ ಮಾಡದಿರುವುದು

5. ಮದ್ಯಪಾನ ಮಿತಿಮೀರಿ ಮಾಡದಿರುವುದು

ಈ ಒಳ್ಳೆಯ ಹವ್ಯಾಸಗಳನ್ನು ತಾಯಂದಿರು ಬೆಳೆಸಿದರೆ, ಈ ಒಳ್ಳೆಯ ಹವ್ಯಾಸಗಳ ವಿರುದ್ಧ ಹವ್ಯಾಸ ಹೊಂದಿರುವ ತಾಯಂದಿರಿಗೆ ಹೋಲಿಸಿದರೆ ಮಕ್ಕಳಲ್ಲಿ ಒಬೆಸಿಟಿ ಸಾಧ್ಯತೆ ಶೇ.75ರಷ್ಟು ಕಡಿಮೆಯಾಗುವುದು.

ಗರ್ಭಧಾರಣೆಗೆ ಮೊದಲು ಹಾಗೂ ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಜೀವನಶೈಲಿ

ಮಕ್ಕಳಲ್ಲಿ ಒಬೆಸಿಟಿ ಕಡಿಮೆ ಮಾಡಲು ಗರ್ಭದಾರಣೆಯ ಮೊದಲು ಹಾಗೂ ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಜೀವನಸೈಲಿರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮುಂದಿನ ಪೀಳಿಗೆ ಒಬೆಸಿಟಿ ಸಮಸ್ಯೆಯಿಂದ ಮುಕ್ತರಾಗಬಹುದು.

English summary

Healthy Habit Mothers Could Reduce The Risk Of Obesity In Children

According to a recent study conducted by researchers at Harvard University, mothers can play a significant role in cutting down the risk of their children becoming obese.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more