For Quick Alerts
ALLOW NOTIFICATIONS  
For Daily Alerts

ಮಳೆಗಾಲ: ಮಕ್ಕಳ ದೈಹಿಕ, ಮಾನಸಿಕ ಆರೋಗ್ಯ ಹೆಚ್ಚಿಸುವ ಚಟುವಟಿಕೆಗಳು

|

ಈಗಂತೂ ಮಕ್ಕಳನ್ನು ಹೊರಗಡೆ ಆಡೋಕೆ ಕಳುಹಿಸಲು ಸಾಧ್ಯವಿಲ್ಲ, ಅದಲ್ಲದೆ ಮಳೆಗಾಲ ಬೇರೆ ಶುರುವಾಗುವುದು. ಕೊರೊನಾ ಕಾರಣದಿಂದಾಗಿ ಮಳೆಗಾಲ ಕಳೆಯುವವರೆಗೆ ಶಾಲೆ ತೆರೆಯುವುದು ಕೂಡ ಡೌಟ್. ಆದ್ದರಿಂದಾಗಿ ಮಕ್ಕಳು ಮನೆಯೊಳಗೇ ಲಾಕ್ ಆಗಿರಬೇಕಾದ ಪರಿಸ್ಥಿತಿ.

ಮಕ್ಕಳಿಗೂ ಮನೆಯೊಳಗೇ ಇರುವುದೆಂದರೆ ಬೇಸರ ಆದ್ದರಿ ಮದಲೇ ಅವರು ಮೊಬೈಲ್‌ ಕೇಳುತ್ತರೆ, ವಿಪರೀತವಾಗಿ ಟಿವಿ ನೋಡುತ್ತಾರೆ ಯಾವುದೇ ದೈಹಿಕ ಚಟುವಟಿಕೆ ಮಾಡದೆ ಕಾಲ ಕಳೆಯುತ್ತಾರೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅವರನ್ನು ಹಾಗೇ ಮಾಡದೆ ಬಿಡಬಾರದು. ಅಲ್ಲದೆ ಈ ರೀತಿ ಇರುವುದರಿಂದ ಮಕ್ಕಳ ದೈಹಿಕ ಬೆಳವಣಿಗೆ ಮಾತ್ರವಲ್ಲ, ಮಾನಸಿಕ ಬೆಳವಣಿಗೆಯನ್ನೂ ಕುಂಠಿತಗೊಳಿಸುತ್ತದೆ. ಆದ್ದರಿಂದ ಮಕ್ಕಳನ್ನು ಚಟುವಟಿಕೆ ಇರುವಂತೆ ನಾವು ಪ್ರೇರೇಪಿಸಬೇಕು.

ನಾವಿಲ್ಲ ಮಕ್ಕಳಿಗೆ ಮನೆಯೊಳಗೇ ಆಡಿಸುವಂಥ ಕೆಲವೊಂದು ಗೇಮ್‌ಗಳ ಬಗ್ಗೆ ಹೇಳಿದ್ದೇವೆ ನೋಡಿ:

ನೀವು ಒಲಿಂಪಿಕ್ ಆಡಿ

ನೀವು ಒಲಿಂಪಿಕ್ ಆಡಿ

ಮನೆಯೊಳಗೆ ಒಲಿಂಪಿಕ್‌ಗೆ ರೆಡಿಯಗಿ (ಹೀಗೆ ರೆಡಿಯಾಗುವ ಮುನ್ನ ಮನೆಯಲ್ಲಿ ಒಡೆಯುವ ವಸ್ತುಗಳು ಇದ್ದರೆ ಅವುಗಳನ್ನು ಎತ್ತಿಡಿ)

ಬೌಲಿಂಗ್: ಖಾಲಿ ಬಾಟಲಿ ಇಟ್ಟು ಅದಕ್ಕೆ ಬಾಲ್‌ ಎಸೆಯಿರಿ....

ವಾಲಿ ಬಾಲ್, ಥ್ರೋಬಲ್‌ ಆಡಿ. ಮನೆಯೊಳಗೆ ಎರಡು ಚೇರ್‌ ಆ ಕಡೆ .. ಈ ಕಡೆ ಇಟ್ಟು ಚಿಕ್ಕ ನೆಟ್‌ ಕಟ್ಟಿ ಅದರಲ್ಲಿ ಬಾಲ್‌ ಎಸೆದು ಆಡಿ.

ಹೂಲಾ ಹೂಪ್

ಹೂಲಾ ಹೂಪ್

ಇದಂತೂ ಮಕ್ಕಳಿಗೆ ತುಂಬಾ ಫನ್ನಿ ಆಗಿರುತ್ತದೆ. ಮಕ್ಕಳ ಜೊತೆ ನೀವೂ ಆಡಿದರೆ ದೈಹಿಕ ತೂಕ ಕೂಡ ಕಡಿಮೆ ಮಾಡಬಹುದು.

ಬೌನ್ಸಿಂಗ್‌ ಬಾಲ್ (ತಟ್ಟಾಟ)

ಬಾಲ್‌ನಿಂದ ತಟ್ಟಾಟ ಆಡಿ.. ಇದರಲ್ಲಿ ಯಾರು ಬೇಗ ಬಿಡುತ್ತರೆ ಅವರು ಔಟ್‌ .. ಈ ರೀತಿಯ ಆಟ ಮಕ್ಕಳಿಗೆ ತುಂಬಾ ಖುಷಿ ನೀಡುವುದು.

ಡ್ಯಾನ್ಸ್

ಡ್ಯಾನ್ಸ್

ಇನ್ನು ಮನ ರಂಜನೆಗೆ ಮತ್ತೊಂದು ವಿಧಾನವೆಂದರೆ ಡ್ಯಾನ್ಸ್. ಹಾಡಿಗೆ ನೃತ್ಯ ಮಾಡುವುದರಿಂದ ದೈಹಿಕ ಚಟುವಟಿಕೆಯೂ ಆಗುವುದು, ಮನಸ್ಸಿಗೆ ಖುಷಿಯೂ ಸಿಗುವುದು.

ಸರ್ಕಸ್

ಏನೋ ಹೊಸತು ಟ್ರೈ ಮಾಡುವುದು ಅಂದ್ರೆ ಮೂರು ಬಾಲ್‌ಗಳನ್ನು ಮೇಲೆಕ್ಕೆ ಎಸೆದು ಹಿಡಯಲು ಪ್ರಯತ್ನಿಸುವುದು, ಬಾಲ್‌ ಅನ್ನು ಬೆರಳಿನಲ್ಲಿ ತಿರುಗಿಸುವುದು ಇಂಥ ನೂರಾರು ಆಟಗಳನ್ನು ಟ್ರೈ ಮಾಡುವುದು.

ಕೂಲ್‌ ಬ್ಯಾಲೆನ್ಸಿಂಗ್ ಸ್ಟಂಟ್

ಹೆಚ್ಚು ಅಪಾಯಕಾರಿ ಅಲ್ಲದ ಸ್ಟಂಟ್‌ ಪ್ರಯತ್ನಿಸಲು ಬಿಡಿ. ಅವರು ಬಿದ್ದು ಕೈ-ಕಾಲು ಮುರಿಯದಂತೆ ಎಚ್ಚರವಹಿಸಿ.

ಇಬ್ಬರ ಮಕ್ಕಳಿದ್ದರೆ ಕೈಕೈ ಹಿಡಿದು, ಒಬ್ಬರ ಮಂಡಿ ಮತ್ತೊಬ್ಬರಿಗೆ ತಾಗುವಂತಿರಬೇಕು, ನಂತರ ಚೇರ್‌ನಲ್ಲಿ ಕೂತಂತೆ ಗಾಳಿಯಲ್ಲೇ ಕೂರುವುದು, ಯಾರು ಹೆಚ್ಚು ಹೊತ್ತು ಹಾಗೇ ಕೂರುತ್ತರೋ ಅವರು ವಿನ್ನರ್.

ಯೋಗಾಭ್ಯಾಸ

ಯೋಗಾಭ್ಯಾಸ

ಮಕ್ಕಳನ್ನು ಜೊತೆಯಲ್ಲಿ ಸೇರಿಸಿ ಕೆಲ ಯೋಗ ಭಂಗಿಗಳನ್ನು ಅಭ್ಯಾಸ ಮಾಡಿ, ಇದು ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು, ಅವರ ಮಾನಸಿಕ ಆರೋಗ್ಯ, ಏಕಾಗ್ರತೆ ಹೆಚ್ಚಿಸುವುದು.

ಸಂಗೀತ ಅಥವಾ ಇತರ ಕಲೆ ಕಲೆಸುವುದು

ನಿಮಗೆ ಸಂಗೀತ, ಡ್ಯಾನ್ಸ್, ಗಿಟಾರ್ ನುಡಿಸುವುದು ಇಂಥವು ಗೊತ್ತಿದ್ದರೆ ಅದನ್ನು ಮಕ್ಕಳಿಗೆ ಹೇಳಿ ಕೊಡಿ, ಈ ವಿಷಾಯಕ್ಕೆ ಒತ್ತಾಯ ಬೇಡ, ಏನು ಅವರು ಇಷ್ಟಪಟ್ಟು ಮಾಡುತ್ತಾರೆ, ಅದನ್ನು ಅಭ್ಯಾಸ ಮಾಡಿ.

ಅಡುಗೆ ಮಾಡುವುದು,

ಅಡುಗೆ ಮಾಡುವುದು,

ಮಕ್ಕಳಿಗೆ ಅಡುಗೆ ಮಾಡುವ ಆಟ ಅಂದ್ರೆ ಅದರಲ್ಲೂ ಹೆಣ್ಮಕ್ಕಳಿಗೆ ತುಂಬಾನೇ ಇಷ್ಟ, ಅಮ್ಮನ ಹಾಗೇ ಸೀರೆ ಎಲ್ಲಾ ಉಟ್ಟು ಸ್ವಲ್ಪ ಆಟಿಕೆ ತಂದು ಅಡುಗೆ ಮಾಡುತ್ತಾರೆ... ಈ ಆಟಕ್ಕೆ ನೀವೂ ಸೇರಿ ಅವರಿಗೆ ತುಂಬಾನೇ ಖುಷಿಯಾಗುವುದು.

ನಿಮ್ಮ ಸಹಾಯಕ್ಕೆ ಸೇರಿಸಿಕೊಳ್ಳಿ

ನಿಮ್ಮ ಸಹಾಯಕ್ಕೆ ಸೇರಿಸಿಕೊಳ್ಳಿ

ಚಿಕ್ಕ ಮಕ್ಕಳಿಗೆ ಮನೆ ಒರೆಸುವುದು, ಅಡುಗೆ ಮಾಡುವುದು ಎಲ್ಲಾ ತುಂಬಾನೇ ಇಷ್ಟ, ಅದೇ ಸ್ವಲ್ಪ ದೊಡ್ಡದಾದ ಮೇಲೆ ಹೇಳಿದರೆ ಮಾಡಲ್ಲ... ಮನೆಯಲ್ಲಿ ಚಿಕ್ಕ ಮಕ್ಕಳಿದ್ದು ನೀವು ಅಡುಗೆ ಮಾಡುವಾಗ ಅವರು ಕಿರಿಕಿರಿ ಮಾಡುತ್ತಿದ್ದರೆ ಹರಿತವಿಲ್ಲದ ಕತ್ತಿ ಕೊಟ್ಟು ಏನಾದರೂ ಕಟ್‌ ಮಾಡಲು ಹೇಳಿ, ಸ್ವಲ್ಪ ಹಿಟ್ಟು ಹಾಕಿ ಕಲೆಸಲು ಹೇಳಿ ಇವೆಲ್ಲಾ ಭಾರಿ ಖುಷಿಯಾಗಿ ಮಾಡುತ್ತವೆ.

ಸಲಹೆ: ಮಕ್ಕಳನ್ನು ಮನೆಯೊಳಗೆ ಆಡಿಸಲು ಹಲವು ರೀತಿಯ ಆಟಗಳಿವೆ.. ಅವುಗಳನ್ನು ಆಡಿಸಬಹುದು. ಮುಖ್ಯವಾಗಿ ಪೋಷಕರು ಅವರಿಗೆ ಸಮಯ ಕೊಡಬೇಕಾಗುತ್ತದೆ. ನೀವು ಟಿವಿ ನೋಡುವುದು, ಮೊಬೈಲ್ ನೋಡುವುದು ಮಡಿ ಅವರ ಬಳಿ ಆಡಿ ಅಂದ್ರೆ ಆಡಲ್ಲ, ಜೊತೆಯಲ್ಲಿ ಸೇರಿ ಆಡಿದರೆ ಮಕ್ಕಳಿಗೆ ಬೋರ್ ಆಗಲ್ಲ.

English summary

Indoor Activities For Kids On A Rainy Day In Kannada

Indoor Activities for Kids on a Rainy Day in Kannada, read on,
X
Desktop Bottom Promotion