For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಹೀಗೆ ಎಬಿಸಿಡಿ ಹೇಳಿ ಕೊಟ್ಟರೆ ದೇಶದ ಬಗ್ಗೆ ಮತ್ತಷ್ಟು ತಿಳಿಯುವರು ಅಲ್ಲವೇ?

|

ಮಕ್ಕಳಿಗೆ ಎಬಿಸಿಡಿ ಕಲಿಸುವಾಗ ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್ ಎಂದೇ ಕಲಿಸುತ್ತೇವೆ, ಅದಕ್ಕಿಂತ ಸ್ವಲ್ಪ ಭಿನ್ನವಾಗಿ ಯೋಚಿಸಿದ್ದೀರಾ? ಮಕ್ಕಳಲ್ಲಿ ದೇಶ ಪ್ರೇಮ ಮೂಡಿಸಲು, ಅವರು ಯಾರು ಎಂಬ ಅರಿವು ಮೂಡಿಸಲು ಎ ಫಾರ್‌ ಆ್ಯಪಲ್ ಎನ್ನುವ ಬದಲು ಎ ಫಾರ್ ಅಬ್ಬಕ್ಕಾ ಎಂದು ಕಲಿಸಿದರೆ ಮಕ್ಕಳಿಗೆ ನಮ್ಮ ಸ್ವಾತಂತ್ರ ಹೋರಾಟಗಾರರು, ನಮ್ಮ ನಾಡು, ನಮ್ಮ ಸಂಸ್ಕೃತಿ, ಪರಂಪರೆ ಇವುಗಳ ಬಗ್ಗೆ ಚಿಕ್ಕ ವಯಸ್ಸಿನಲ್ಲಿಯೇ ಅರಿವು ಮೂಡುತ್ತದೆ ಅಲ್ಲವೇ?

ಆ್ಯಪಲ್, ಬಾಲ್‌, ಕ್ಯಾಟ್‌, ಡಾಗ್‌ ಎಂದು ಮಕ್ಕಳು ಬೇಗ ಕಲಿಯುತ್ತಾರೆ. ಅದರ ಬದಲಿಗೆ ನಾವು ನಮ್ಮ ದೇಶದ ಸ್ಥಳ ಅಥವಾ ನಮ್ಮ ಸ್ವಾತಂತ್ರ್ಯ ವೀರರು, ನಮ್ಮನ್ನು ಆಳಿದ ವೀರ ರಾಜರುಗಳು ಇವರ ಬಗ್ಗೆ ಹೇಳಿದರೆ ಮಕ್ಕಳ ಆಗ ಆ ಶಬ್ದ ಮಾತ್ರ ಕಲಿತರೆ ನಿಧಾನಕ್ಕೆ ಅವರು ಯಾರು ಎಂದು ತಿಳಿಯುವ ಕುತೂಹಲ ಮೂಡುತ್ತದೆ, ಆ ಕುತೂಹಲದಿಂದ ಅವರು ನಮ್ಮ ದೇಶದ ಇತಿಹಾಸ ಹಾಗೂ ಪರಂಪರೆಯ ಅರಿವು ಮೂಡುತ್ತದೆ.

ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ ಒಬ್ಬರು ಮಕ್ಕಳು ಓದುವ ಪಠ್ಯ ಪುಸ್ತಕದ ಬಗ್ಗೆ ವಿಮರ್ಶೆ ಮಾಡುತ್ತಾ ಅವರು ಒಂದು ಶಾಲೆಗೆ ಭೇಟಿ ನೀಡಿದಾಗ ಹಂಪಿ ಕಟ್ಟಿದವರು ಯಾರು ಎಂದು ಕೇಳಿದಾಗ ಮಕ್ಕಳಿಗೆ ಅದರ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಬರೆದುಕೊಂಡಿದ್ದರು.

ನೀವು ಕೂಡ ನಿಮ್ಮ ಮಕ್ಕಳಿಗೆ ಎ ಫಾರ್ ಆ್ಯಪಲ್‌ ಎನ್ನುವ ಬದಲಿಗೆ ಸ್ವಾತಂತ್ರ್ಯ ವೀರರ ಹೆಸರು ಕಲಿಸ ಬಯಸುವುದಾದರೆ ಹೀಗೆ ಹೇಳಿ ಕೊಡಬಹುದು ನೋಡಿ:

ಎ, ಬಿ, ಸಿ, ಡಿ ಇ, ಎಫ್‌

ಎ, ಬಿ, ಸಿ, ಡಿ ಇ, ಎಫ್‌

ಎ(A) ಫಾರ್ ಅಬ್ಬಕ್ಕ, ಎಪಿಜೆ ಬ್ದುಲ್ ಕಲಾಂ (ಅಬ್ಬಕ್ಕ ರಾಣಿ ಅಥವಾ 'ಅಬ್ಬಕ್ಕ ಮಹಾದೇವಿ' ತುಳುನಾಡಿನ ರಾಣಿಯಾಗಿದ್ದಳು, ಇವರು 12ನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದಳು. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶವನ್ನಾಳಿದ ಚೌಟ ವಂಶಕ್ಕೆ ಸೇರಿದವಳು, ಅಬ್ದುಲ್‌ ಕಲಾಂ ಮಹಾನ್ ವಿಜ್ಞಾನಿ ಹಾಗೂ ಅತ್ಯುತ್ತಮವಾದ ರಾಷ್ಟ್ರಪತಿಯಾಗಿಆಡಳಿತ ನೀಡಿದವರು)

ಬಿ(B) ಫಾರ್ ಭಗತ್‌ ಸಿಂಗ್ (ಸ್ವಾತಂತ್ರ್ಯ ಹೋರಾಟಗಾರ)

ಸಿ(C) ಫಾರ್‌ ಚಂದ್ರಶೇಖರ್ ಆಜಾದ್ (ಸ್ವಾತಂತ್ರ್ಯ ಹೋರಾಟಗಾರ)

ಡಿ(D) ಫಾರ್ ದಯಾನಂದ್‌ ಸರಸ್ವತಿ (ಧಾರ್ಮಿಕ ಮುಖಂಡ ಮತ್ತು ವೇದ ಧರ್ಮದ ಹಿಂದೂ ಸುಧಾರಣಾಗಾರ)

ಇ(E) ಫಾರ್ ಈಶ್ವರಚಂದ್ರ ವಿದ್ಯಾಸಾಗರ್‌(ಮಹಾನ್ ವಿದ್ವಾಂಸರಾರು ಹಾಗೂ ಮಹಾನ್ ದೇಶಪ್ರೇಮಿಯಾಗಿದ್ದರು)

ಎಫ್‌(F) ಫಾರ್ ಫಿರೋಜ್ ಷಾ ಮೆಹ್ತಾ( ಬರಹಗಾರರು, ಉಪನ್ಯಾಸಕರು ಇವರು ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಭಾರತದ ಪರವಾಗಿ ಹೋರಾಡಿ ತಮ್ಮ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದು ಜನರನ್ನು ಬ್ರಿಟಿಷರ ವಿರುದ್ಧ ಹೋರಾಡುವಂತೆ ಮಾಡಿದವರು)

ಜೆ, ಹೆಚ್‌, ಐ, ಜೆ, ಕೆ, ಎಲ್‌

ಜೆ, ಹೆಚ್‌, ಐ, ಜೆ, ಕೆ, ಎಲ್‌

ಜಿ(G) ಫಾರ್ ಗೋಪಾಲ್‌ ಕೃಷ್ಣ ಗೋಖಲೆ ( ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು. ಬ್ರಿಟಿಷರ ಅಡಳಿತ ಸಂದರ್ಭದಲ್ಲಿ ಭಾರತದಲ್ಲಿ ಮಹತ್ವದ ಸುಧಾರಣೆ ತಂದ ಹರಿಕಾರ)

ಹೆಚ್‌(H) ಫಾರ್ ಹೆಡ್ಗೆವಾರ್, ಹಂಪಿ (ಪೂರ್ತಿ ಹೆಸರು ಕೇಶವ ಬಲಿರಾಂ, ಭಾರತದ ರಾಷ್ಟ್ರೀಯ ಸ್ವಯಂ ಸಂಘದ ಸಂಸ್ಥಾಪಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಶ್ರೇಷ್ಠ ಸಮಾಜ ಸೇವಕರು ಮತ್ತು ಸುಧಾರಕರು, ನಮ್ಮ ಕರ್ನಾಟಕದ ಶ್ರೀಮಂತ ಪರಂಪರೆ ಬಗ್ಗೆ ಹೇಳುತ್ತದೆ)

ಐ(I) ಫಾರ್‌ ಇಂಡಿಯನ್‌ ನ್ಯಾಷನಲ್ ಆರ್ಮಿ (ನಮ್ಮೆಲ್ಲರ ರಕ್ಷಣೆ ಮಾಡುತ್ತಿರುವ ನಮ್ಮ ಹೆಮ್ಮೆಯ ಸೇನೆ)

ಜೆ(J) ಫಾರ್ ಜಾಡು ಗೋಪಾಲ್ ಮುಖರ್ಜಿ (ಸ್ವಾತಂತ್ರ್ಯ ಹೋರಾಟಗಾರ

ಕೆ(K) ಫಾರ್ ಕಿತ್ತೂರ್ ರಾಣಿ ಚೆನ್ನಮ್ಮಾ (ಬ್ರಿಟಿಷರ ವಿರುದ್ಧ ಹೋರಾಡಿದ ಕೆಚ್ಛೆದೆಯ ನಾರಿ).

ಎಲ್‌(L) ಫಾರ್‌ ಲಾಲ್‌ ಲಜಪತ್‌ ರಾಯ್‌ ( ಸ್ವಾತಂತ್ರ್ಯ ಹೋರಾಟಗರರು, ಇವರನ್ನು ಪಂಜಾಬಿನ ಕೇಸರಿ ಎಂದು ಕರೆಯುತ್ತಿದ್ದರು).

ಎಂ, ಎನ್,ಒ, ಪಿ, ಕ್ಯೂ

ಎಂ, ಎನ್,ಒ, ಪಿ, ಕ್ಯೂ

ಎಂ(M) ಫಾರ್ ಮೋಹನ್‌ದಾಸ್‌ ಕರ್ಮಚಂದ್‌ ಗಾಂಧಿ ( ಅಹಿಂಸೆ ತತ್ತ್ವದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದರು, ಭಾರತದ ಪಿತಾಮಹ)

ಎನ್‌(N) ಫಾರ್ ನೇತಾಜಿ ಸುಭಾಶ್‌ ಚಂದ್ರ ಬೋಸ್‌, ನರೇಂದ್ರ ಮೋದಿ (ನೇತಾಜಿ ಸ್ವಾತಂತ್ರ್ಯ ಹೋರಾಟಗಾರರರು, ನರೇಂದ್ರ ಮೋದಿ ದೇಶದ ಪ್ರಧಾನಿ)

ಒ(O) ಫಾರ್ ಒನಕೆ ಓಬವ್ವ ( 18ನೇಯ ಶತಮಾನದಲ್ಲಿ ಚಿತ್ರದುರ್ಗ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಮದ್ದಹನುಮಪ್ಪನ ಪತ್ನಿ, ಹೈದರಾಲಿಯ ಸೇನೆಯು ಹಠಾತ್‌ ಆಗಿ ಕೋಟೆಯ ಮೇಲೆ ದಾಳಿ ಮಾಡಿದಾಗ ಒನಕೆಯನ್ನೇ ಅಸ್ತ್ರವನ್ನು ಮಾಡಿ ಶತ್ರುಗಳನ್ನು ಸಂಹರಿಸಿದ ವೀರನಾರಿ)

ಪಿ(P) ಫಾರ್‌ ಪಂಡಿತ್ ರಮಾಬಾಯಿ (ಸಮಾಜ ಸುಧಾರಕರು, ಭಾರತದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನಿಡಿದವರು ಹಾಗೂ ಅವರಾಗುತ್ತಿದ್ದ ಶೋಷಣೆ ವಿರುದ್ಧ ಹೋರಾಡುತ್ತಿದ್ದವರು

ಕ್ಯೂ(Q) ಫಾರ್ ಕ್ವೀನ್‌ ಲಕ್ಷ್ಮೀ ಬಾಯಿ ( ಬ್ರಿಟಿಷರ ವಿರುದ್ಧ ಹೋರಾಡಿದ ಝಾನ್ಸಿ ರಾಣಿ ಲಕ್ಷ್ಮೀಬಾಯಿ)

ಆರ್, ಎಸ್, ಟಿ, ಯು,ವಿ

ಆರ್, ಎಸ್, ಟಿ, ಯು,ವಿ

ಆರ್ (R)ಫಾರ್‌ ರವೀಂದ್ರನಾಥ್ ಟ್ಯಾಗೋರ್ (ರಾಷ್ಟ್ರಗೀತೆ ಜನಗಣಮನ ಬರೆದ ಬಂಗಾಳಿ ಕವಿ)

ಎಸ್‌(S) ಫಾರ್‌ , ಸಂಗೊಳ್ಳಿ ರಾಯಣ್ಣ, ಸರ್ದಾರ್ ವಲ್ಲಭಭಾಯ್ ಪಟೇಲ್, ಸರೋಜಿನಿ ನಾಯ್ಡು, ಸೋಮನಾಥ ಪುರ, ಸರ್ವಪಲ್ಲಿ ರಾಧಾಕೃಷ್ಣನ್

ಟಿ (T)ಫಾರ್ ತಾಜ್‌ ಮಹಲ್, ತಾಂತ್ಯಾ ಟೋಫಿ ( ವಿಶ್ವ ಪ್ರಸಿದ್ಧ ತಾಜ್‌ಮಹಲ್. ಗೆರಿಲ್ಲಾ ಯುದ್ಧದ ಮೂಲಕ ಬ್ರಿಟಿಷರಿಗೆ ಭಯ ಹುಟ್ಟಿಸಿದವರು)

ಯು(U) ಫಾರ್ ಉದಮ್ ಸಿಂಗ್ (ಸ್ವಾತಂತ್ರ್ಯ ಹೋರಾಟಗಾರ)

ವಿ (V)ಫಾರ್‌ ವಿವೇಕಾನಂದ (ಹಿಂದೂ ಧರ್ಮದ ನವೋನನ್ಯತೆಯನ್ನು ಜಗದುದ್ದಗಲಕ್ಕೆ ಪಸರಿಸಿದ, ಭಾರತ ಉಪಖಂಡದ ಯುವಚೈತನ್ಯವನ್ನೂ ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿ)

ಎಕ್ಸ್ , ವೈ, ಝೆಡ್

ಎಕ್ಸ್ , ವೈ, ಝೆಡ್

ಎಕ್ಸ್ ಫಾರ್(X) ಕ್ಷೆವಿಯರ್ ವಾಸುದೇವ್ ಬಲ್ವಂತ್‌ ಫಡ್ಕೆ (ಸ್ವಾತಂತ್ರಕ್ಕಾಗಿ ಕ್ರಾಂತಿಕಾರಿ ಮಾರ್ಗ ಅನುಸರಿಸಿದ ಹೋರಾಟಗಾರ

ವೈ(Y) ಫಾರ್ ಯೂಸಫ್‌ ಮೆಹರ್ ಅಲಿ (ಸಮಾಜ ಸುಧಾರಕ ಹಾಗೂ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ)

ಝೆಡ್(Z) ಫಾರ್ ಡಾ. ಝಾಕೀರ್ ಹುಸೈನ್‌ ( ಭಾರತದ ಮೂರನೇಯ ರಾಷ್ಟ್ರಪತಿ)

English summary

How To Teach Alphabet Differently To Kids

Do you ever think to teach Alphabet differently, Here is a idea to teach , it will help patriotism in kids and help them to know more about nation.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X