For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಮೂಗು ಕಟ್ಟುವ ಸಮಸ್ಯೆ ಎದುರಿಸುತ್ತಿದ್ದರೆ, ಔಷಧಿಗಳ ಬದಲಿಗೆ ಈ ಮನೆಮದ್ದನ್ನು ಪ್ರಯತ್ನಿಸಿ

|

ಮಗುವಿನಲ್ಲಿ ಶೀತ, ಮೂಗುಕಟ್ಟುವಿಕೆಯ ಸಮಸ್ಯೆ ಸಾಮಾನ್ಯ. ಅವರ ಮೂಗಿನ ಮಾರ್ಗಗಳು ತುಂಬಾ ಚಿಕ್ಕದಾಗಿರುವುದರಿಂದ ಸ್ವಲ್ಪ ಲೋಳೆ, ಗಾಳಿಯಲ್ಲಿ ಕಿರಿಕಿರಿ, ಅಥವಾ ಎದೆಹಾಲು ಮೂಗಿಗೆ ಸೇರುವುದು ಸೇರಿದಂತೆ ಹಲವಾರು ಕಾರಣಗಳಿಂದ ಉಂಟಾಗುತ್ತದೆ. ಇದರಿಂದ ಮಗುವಿಗೆ ತಿನ್ನಲು ಅಥವಾ ಉಸಿರಾಡಲು ಕಷ್ಟವಾಗಬಹುದು. ಈ ಸ್ಥಿತಿಯನ್ನು ಮನೆಯಲ್ಲಿಯೇ ಕೆಲವು ನೈಸರ್ಗಿಕ ಚಿಕಿತ್ಸೆಗಳಿಂದ ನಿವಾರಿಸಬಹುದು. ಅಂತಹ ಮನೆಮದ್ದುಗಳ ಬಗ್ಗೆ ಇಲ್ಲಿ ನೋಡೋಣ.

Blocked Nose In Babies

ಮಗುವಿನಲ್ಲಿ ಮೂಗು ಕಟ್ಟಿದ್ದರೆ, ಅದನ್ನು ನಿವಾರಿಸಲು ಮನೆಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ:
1. ಹ್ಯೂಮಿಡಿಫೈಯರ್

1. ಹ್ಯೂಮಿಡಿಫೈಯರ್

ಮಗುವಿನ ಮೂಗುಕಟ್ಟುವಿಕೆಯ ನಿವಾರಣೆಗೆ ಹ್ಯೂಮಿಡಿಫೈಯರ್ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಏಕೆಂದರೆ ಅವು ಗಾಳಿಗೆ ತೇವಾಂಶವನ್ನು ಸೇರಿಸುತ್ತವೆ, ಇದು ಮಗುವಿನ ಮೂಗಿನೊಳಗೆ ಲೋಳೆಯು ಒಣಗುವುದನ್ನು ತಡೆಯುತ್ತದೆ. ಆದ್ದರಿಂದ ಮಗುವಿನ ಕೋಣೆಯಲ್ಲಿ ಅವರ ಹಾಸಿಗೆ ಬಳಿ ತಂಪಾದ ಕೂಲ್ ಮಿಸ್ಟ್ ಹ್ಯೂಮಿಡಿಫೈಯರ್ ಇರಿಸಬಹುದು, ಆದರೆ ಮಗು ಅದನ್ನು ಮುಟ್ಟದಂತೆ ದೂರದಲ್ಲಿಡಿ. ಬ್ಯಾಕ್ಟೀರಿಯಾ ಅಥವಾ ಪಾಚಿ ಒಳಗೆ ಬೆಳೆಯುವುದನ್ನು ತಡೆಯಲು ನಿಯಮಿತವಾಗಿ ಸ್ವಚ್ಛಗೊಳಿಸಲು ಮತ್ತು ಒಣಗಿಸಲು ಮರೆಯದಿರಿ.

2. ಸಾಸಿವೆ ಎಣ್ಣೆ ಮಸಾಜ್

2. ಸಾಸಿವೆ ಎಣ್ಣೆ ಮಸಾಜ್

ಸಾಸಿವೆ ಎಣ್ಣೆ ಮಸಾಜ್ ವಯಸ್ಕರು ಮತ್ತು ಶಿಶುಗಳಲ್ಲಿ ಶೀತ ಮತ್ತು ಮೂಗು ಕಟ್ಟುವಿಕೆಗೆ ಚಿಕಿತ್ಸೆ ನೀಡುವ ಮತ್ತೊಂದು ಪರಿಣಾಮಕಾರಿ ನೈಸರ್ಗಿಕ ವಿಧಾನವಾಗಿದೆ. ಇದನ್ನು ಮನೆಮದ್ದಾಗಿ ಬಳಸಲು, 1/4 ಕಪ್ ಸಾಸಿವೆ ಎಣ್ಣೆಯನ್ನು 3-4 ಲವಂಗ, ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಮತ್ತು ಮೆಂತ್ಯವನ್ನು ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ. ಎಣ್ಣೆ ತಣ್ಣಗಾಗುವವರೆಗೆ ಕಾಯಿರಿ, ನಂತರ ಅದನ್ನು ಬಳಸಿ ನಿಮ್ಮ ಮಗುವಿಗೆ ಮಸಾಜ್ ಮಾಡಿ. ಸಾಸಿವೆ ಎಣ್ಣೆಯನ್ನು ಮೂಗು, ಹಣೆ, ಕೆನ್ನೆ, ಎದೆ ಮತ್ತು ಬೆನ್ನಿನ ಮೇಲೆ ನಿಧಾನವಾಗಿ ಮತ್ತು ಮೃದುವಾಗಿ ಹಚ್ಚಿ.

3. ಸ್ತನ್ಯಪಾನ

3. ಸ್ತನ್ಯಪಾನ

ಮೂಗುಕಟ್ಟುವಿಕೆಯ ಸಂದರ್ಭಗಳಲ್ಲಿ, ನಿಮ್ಮ ಮಗುವಿಗೆ ಹಾಲುಣಿಸುವತ್ತ ಗಮನ ಹರಿಸುವುದು ಮುಖ್ಯ. ಎದೆ ಹಾಲು ಕೆಲವು ಅಗತ್ಯ ಪೋಷಕಾಂಶಗಳು ಮತ್ತು ಪ್ರತಿಕಾಯಗಳನ್ನು ಹೊಂದಿದ್ದು, ಅದು ನಿಮ್ಮ ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮ ಮಗುವಿಗೆ ಶೀತ ಮತ್ತು ಕೆಮ್ಮಿನಂತಹ ಕಾಯಿಲೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

4. ಹೆಚ್ಚು ದ್ರವಗಳು

4. ಹೆಚ್ಚು ದ್ರವಗಳು

ನೀರು ಮತ್ತು ಇತರ ಅನೇಕ ದ್ರವಗಳು ಲೋಳೆಯು ತೆಳುವಾಗಲು ಸಹಾಯ ಮಾಡುತ್ತದೆ, ಇದರಿಂದ ಮಗು ಸಲಭವಾಗಿ ಕೆಮ್ಮಬಹುದು. ಹೆಚ್ಚು ದ್ರವ ಆಹಾರ ನೀಡುವುದರಿಂದ ಶಿಶು ಜ್ವರದಿಂದ ಬಳಲುತ್ತಿದ್ದರೆ ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ.

5. ಸಲೈನ್ ಡ್ರಾಪ್ಸ್:

5. ಸಲೈನ್ ಡ್ರಾಪ್ಸ್:

ಸಲೈನ್ ಡ್ರಾಪ್ಸ್ ಕೂಡ ಮಕ್ಕಳಲ್ಲಿ ಮೂಗು ಕಟ್ಟಿದರೆ ಚಿಕಿತ್ಸೆ ನೀಡಲು ಸುಲಭ ಮತ್ತು ಕೈಗೆಟಕುವ ಮನೆಮದ್ದು. ನೀವು ಇದನ್ನು ಯಾವುದೇ ಅಂಗಡಿಯಿಂದ ಖರೀದಿಸಬಹುದು. ಮಗುವಿನ ಪ್ರತಿ ಮೂಗಿನ ಹೊಳ್ಳೆಗೆ 2-3 ಹನಿಗಳನ್ನು ಹಾಕಿ ಮತ್ತು ನಂತರ ಲೋಳೆಯನ್ನು ತೆಗೆದುಹಾಕಲು ಬಲ್ಬ್ ಸಿರಿಂಜ್‌ನ್ನು ಬಳಸಿ. ಇದು ಪುನರಾವರ್ತನೆಗೆ ಸುರಕ್ಷಿತ. ಆದಾಗ್ಯೂ, ನಿಮ್ಮ ಮಗುವಿಗೆ 6 ತಿಂಗಳೊಳಗೆ ಈ ಪರಿಹಾರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂಬುದನ್ನು ಗಮನಿಸಿ.

6. ಚಿಕನ್ ಸೂಪ್:

6. ಚಿಕನ್ ಸೂಪ್:

ಶಿಶುಗಳಲ್ಲಿನ ಮೂಗು ಕಟ್ಟುವಿಕೆಯನ್ನುಗುಣಪಡಿಸಲು ಚಿಕನ್ ಸೂಪ್ ಪರಿಣಾಮಕಾರಿ ಮನೆಮದ್ದು. ಇದು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕಟ್ಟಿದ ಮೂಗನ್ನು ನಿವಾರಿಸುತ್ತದೆ. ವಾಸ್ತವವಾಗಿ, ಚಿಕನ್ ಸೂಪ್ ಮಗುವಿಗೆ ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ.

6. ಸ್ಟೀಮ್ ಇನ್ಹಲೇಷನ್

6. ಸ್ಟೀಮ್ ಇನ್ಹಲೇಷನ್

ಇದರರ್ಥ ಸ್ಟೀಮರ್‌ನಿಂದ ನೇರವಾಗಿ ಹಬೆ ತೆಗೆದುಕೊಳ್ಳುವುದಲ್ಲ, ಆದರೆ ನಿಮ್ಮ ಮಗುವನ್ನು ಬೆಚ್ಚಗೆ ಇಡುವುದು, ಮಗು ಮಲಗುವ ಕೋಣೆಯಲ್ಲಿ ಸ್ಟೀಮರ್‌ನ ಹಬೆ ಇಡುವುದು ದಪ್ಪ ಲೋಳೆಯನ್ನು ತೆಳುಗೊಳಿಸಲು ಮತ್ತು ನಿಮ್ಮ ಮಗುವಿಗೆ ಮುಕ್ತವಾಗಿ ಉಸಿರಾಡಲು ಸುಲಭವಾಗುವಂತೆ ಮಾಡುತ್ತದೆ. ಮಲಗುವ ಮುನ್ನ ನಿಮ್ಮ ಮಗುವಿಗೆ ಬೆಚ್ಚಗಿನ ಸ್ನಾನವನ್ನು ಮಾಡಿಸಿ. ಇದು ಕೂಡ ಮುಕ್ತವಾಗಲು ಸಹಾಯ ಮಾಡುತ್ತದೆ.

ಮಕ್ಕಳಲ್ಲಿ ಕಟ್ಟಿದ ಮೂಗಿನ ನಿವಾರಣೆಗೆ ಪೋಷಕರು ಮೇಲೆ ಪಟ್ಟಿ ಮಾಡಲಾದ ಮನೆಮದ್ದುಗಳನ್ನು ಅನುಸರಿಸಬಹುದು. ನಿಮ್ಮ ಮಗುವಿಗೆ ಶೀತ ಇದ್ದರೆ, ಅದು ಕೆಲವೇ ದಿನಗಳಲ್ಲಿ ಸರಿಯಾಗುತ್ತದೆ, ಆದರೆ ಮೂಗು ಕಟ್ಟುತ್ತಿದ್ದರೆ, ಇದು ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಮಗುವಿನಲ್ಲಿ ರೋಗಲಕ್ಷಣಗಳು ತೀವ್ರವಾಗಿದ್ದರೆ ಅಥವಾ ಜ್ವರವಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

English summary

Home Remedies To Treat Blocked Nose In Babies in Kannada

Here we talking about Home Remedies To Treat Blocked Nose In Babies in Kannada, read on
Story first published: Friday, June 10, 2022, 10:53 [IST]
X
Desktop Bottom Promotion