For Quick Alerts
ALLOW NOTIFICATIONS  
For Daily Alerts

ಜೇನು ಮಕ್ಕಳ ಆರೋಗ್ಯವನ್ನು ಹೇಗೆಲ್ಲಾ ರಕ್ಷಣೆ ಮಾಡುತ್ತೆ ಗೊತ್ತಾ?

|

ಮಕ್ಕಳಿಗೆ ಜೇನು ಕೊಡಬಹುದಾ? ಎಂಬುವುದೇ ಬಹುತೇಕರ ಪ್ರಶ್ನೆಯಾಗಿರುತ್ತದೆ. ತುಂಬಾ ಚಿಕ್ಕ ಮಕ್ಕಳಿಗೆ ಜೇನು ಕೊಡುವುದು ಅಪಾಯಕಾರಿ ಎಂದು ತಜ್ಞರು ಎಚ್ಚರಿಸುತ್ತಾರೆ. ಜೇನಿನಲ್ಲಿರುವ ಬ್ಯಾಕ್ಟರಿಯಾ ಮಕ್ಕಳಿಗೆ ಫುಡ್ ಪಾಯಿಸನ್ ಉಂಟು ಮಾಡಬಹುದು, ಆದ್ದರಿಂದ ಚಿಕ್ಕ ಮಕ್ಕಳಿಗೆ ಜೇನು ನೀಡದಂತೆ ತಜ್ಞರು ಹೇಳುತ್ತಾರೆ.

health benefits of honey for children

ಅದೇ ಮಕ್ಕಳಿಗೆ ಎರಡು ವರ್ಷ ತುಂಬಿದ ಬಳಿಕ ಜೇನು ಕೊಡುವುದರಿಂದ ಯಾವುದೇ ಅಪಾಯವಿಲ್ಲ, ಇದರಿಂದ ಮಕ್ಕಳಿಗೆ ತುಂಬಾನೇ ಆರೋಗ್ಯಕರ ಗುಣಗಳಿವೆ. ಮಕ್ಕಳಿಗೆ ಜೇನನ್ನು ಹಾಗೇ ಕೊಡಬಹುದು ಅಥವಾ ಜ್ಯೂಸ್‌ ಮಾಡಿ ಸಕ್ಕರೆ ಬದಲಿಗೆ ಜೇನು ಹಾಕಿ ಕೊಡಬಹುದು.

ಜೇನನ್ನು ಮಕ್ಕಳಿಗೆ ನೀಡುವುದರಿಂದ ಈ ರೀತಿಯ ಪ್ರಯೋಜನಗಳು ದೊರೆಯುವುದು...

1. ಮಕ್ಕಳಿಗೆ ಶಕ್ತಿಯನ್ನು ನೀಡುವುದು

1. ಮಕ್ಕಳಿಗೆ ಶಕ್ತಿಯನ್ನು ನೀಡುವುದು

ಜೇನು 3 ಬಗೆಯ ಸಕ್ಕರೆಯಂಶವಾದ ಸುಕ್ರೋಸ್, ಗ್ಲುಕೋಸ್, ಫ್ರಕ್ಟೋಸ್‌ನಿಂದ ತಯಾರಿಸಲ್ಪಟ್ಟಿರುತ್ತದೆ. ಈ ಅಂಶಗಳನ್ನು ನಮ್ಮ ದೇಹವು ಭಿನ್ನವಾಗಿ ಉಪಯೋಗಿಸುತ್ತದೆ. ಸುಕ್ರೋಸ್ ಹಾಗೂ ಗ್ಲುಕೋಸ್ ಬೇಗನೆ ಜೀರ್ಣವಾಗುವುದು ಹಾಗೂ ರಕ್ತದಲ್ಲಿ ಸಕ್ಕರೆಯಂಶವನ್ನು ಹೆಚ್ಚಿಸುತ್ತದೆ. ಫ್ರಕ್ಟೋಸ್ ಕರುಳಿನಲ್ಲಿಯೇ ಉಳಿದು ಕಿಡ್ನಿಗೆ ಶಕ್ತಿಯನ್ನು ನೀಡುತ್ತದೆ. ಈ ರೀತಿ ದಿನಪೂರ್ತಿ ಶಕ್ತಿಯನ್ನು ನಿಡುವುದು.

2. ಜೇನಿನಲ್ಲಿ ಅಗ್ಯತವಿರುವ ವಿಟಮಿನ್‌ಗಳು ಹಾಗೂ ಖನಿಜಾಂಶಗಳಿವೆ

2. ಜೇನಿನಲ್ಲಿ ಅಗ್ಯತವಿರುವ ವಿಟಮಿನ್‌ಗಳು ಹಾಗೂ ಖನಿಜಾಂಶಗಳಿವೆ

ಜೇನಿನಲ್ಲಿ ಅನೇಕ ಬಗೆಯ ಖನಿಜಾಂಶಗಳು ಹಾಗೂ ವಿಟಮಿನ್ಸ್ ಇರುತ್ತದೆ. ಇದು ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ. ಜೇನಿನಲ್ಲಿರುವ ಅಮೈನೋ ಆಮ್ಲ ಕೂಡ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ.

 3. ಜೇನು ಲಿವರ್ ಹಾನಿ ತಪ್ಪಿಸುತ್ತದೆ

3. ಜೇನು ಲಿವರ್ ಹಾನಿ ತಪ್ಪಿಸುತ್ತದೆ

ಜೇನು ಲಿವರ್‌ನ ಆರೋಗ್ಯ ಸಂರಕ್ಷಿಸುತ್ತದೆ. ಇದು ಪ್ಯಾರಾಸಿಟಮೋಲ್ ಡೋಸ್‌ನ ಅಡ್ಡಪರಿಣಾಮಗಳಿಂದ ಲಿವರ್‌ನ ರಕ್ಷಣೆ ಮಾಡುತ್ತದೆ. ಮಕ್ಕಳಿಗೆ ಹುಷಾರಿಲ್ಲದಿದ್ದಾಗ ಔಷಧಿ ಕೊಡುವುದರ ಜೊತೆ ನೀರಿಗೆ ಸ್ವಲ್ಪ ಜೇನು ಹಾಕಿ ಕೊಡಿ, ಇದರಿಂದ ಲಿವರ್‌ನ ಆರೋಗ್ಯ ಕಾಪಾಡಬಹುದು.

4. ಗಾಯವಾಗಿದ್ದರೆ ಬೇಗನೆ ಗುಣ ಪಡಿಸುವುದು

4. ಗಾಯವಾಗಿದ್ದರೆ ಬೇಗನೆ ಗುಣ ಪಡಿಸುವುದು

ಈ ರೀತಿ ಹೇಳಿದಾಗ ವಿಚಿತ್ರ ಅನಿಸಿದರೂ ಅದು ಸತ್ಯ. ಜೇನು ಮಗುವಿಗೆ ನೀಡಿದಾಗ ಗಾಯವಾಗಿದ್ದರೆ ಅದು ಬೇಗನೆ ಗುಣಮುಖವಾಗಲು ಸಹಾಯ ಮಾಡುತ್ತದೆ.

5. ಕೆಮ್ಮು ಕಡಿಮೆಯಾಗುವುದು

5. ಕೆಮ್ಮು ಕಡಿಮೆಯಾಗುವುದು

ಮಕ್ಕಳಿಗೆ ಕೆಮ್ಮು ಇದ್ದರೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಾಗೂ ಜೇನು ಹಾಕಿ ಕೊಡಿ ಅಥವಾ 1/2 ಚಮಚ ಜೇನು, ಸ್ವಲ್ಪ ಶುಂಠಿ ರಸ, ಸ್ವಲ್ಪ ನಿಂಬೆರಸ ಹಾಕಿ ಮಿಕ್ಸ್ ಮಾಡಿ ಕೊಡಿ, ಕೆಮ್ಮು ಬೇಗನೆ ಕಡಿಮೆಯಾಗುವುದು.

ಆದ್ದರಿಂದ ಮಕ್ಕಳ ಡಯಟ್‌ನಲ್ಲಿ ಜೇನನ್ನು ಸೇರಿಸಿ, ಇದು ಅವರ ಆರೋಗ್ಯ ಹಾಗೂ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು.

English summary

Health Benefits Of Honey for Children Over 2

Here are health benefits of honey for children over 2, read on..
Story first published: Saturday, May 15, 2021, 19:40 [IST]
X
Desktop Bottom Promotion