For Quick Alerts
ALLOW NOTIFICATIONS  
For Daily Alerts

ವಾಯು ಮಾಲಿನ್ಯ ಹೆಚ್ಚಾದರೆ ಮಕ್ಕಳ ಸ್ಮರಣಶಕ್ತಿ ನಷ್ಟವಾಗುವುದು!

|

ಒಂದೊಮ್ಮೆ ನೀವು ಭಾರತದಂತಹ ಮಾಲಿನ್ಯಭರಿತ ರಾಷ್ಟ್ರದಲ್ಲಿ ಜನಿಸಿದವರೇ ಆಗಿದ್ದಲ್ಲಿ, ಭಾರತಕ್ಕಿಂತ ಕಡಿಮೆ ಮಲಿನಗೊಂಡಿರುವಂತಹ ಬೇರೆ ರಾಷ್ಟ್ರಗಳಲ್ಲಿ ಜನಿಸಿದಂತಹ ನಿಮ್ಮದೇ ವಯೋಮಾನದ ಇತರರಿಗೆ ಹೋಲಿಸಿದಲ್ಲಿ, ಮುಂದೆ ಜೀವನದಲ್ಲಿ ಕುಂಠಿತಗೊಂಡ ಗ್ರಹಣ ಶಕ್ತಿಯ ಕಾರಣದಿಂದ ಹೆಚ್ಚು ನರಳುವವರು ನೀವೇ ಆಗಿರುತ್ತೀರಿ!!

ಸ್ಮರಣಶಕ್ತಿಯ ನಷ್ಟಕ್ಕೆ ಸಂಬಂಧಿಸಿದ (ಅಲ್ಜ಼ೈಮರ್ಸ್ ಡಿಸೀಸ್) ರೋಗದ ಕುರಿತು ಲೇಖನಗಳನ್ನು ಪ್ರಕಟಿಸುವ ಜರ್ನಲ್‌ನಲ್ಲಿ ಪ್ರಕಟಣೆ ಕಂಡಿರುವ ಅಧ್ಯಯನವೊಂದು ಎಚ್ಚರಿಸುವುದೇನೆಂದರೆ, ವಾಯುಮಾಲಿನ್ಯಕ್ಕೆ ಗುರಿಯಾಗುವ ಪುಟ್ಟಮಕ್ಕಳ ಆಲೋಚನಾ ಕೌಶಲ್ಯಗಳು ಅವರ ಮುಂದಿನ ಜೀವನದಲ್ಲಿ ಬಾಧಿತವಾಗಲಿವೆ ಎಂದು. ಜೀವನದ ಆರಂಭದ ಹಂತದಲ್ಲಿಯೇ ಅಥವಾ ಹುಟ್ಟುತ್ತಲೇ ವಾಯುಮಾಲಿನ್ಯಕ್ಕೆ ಗುರಿಯಾಗುವ ಶಿಶುಗಳ ಮೆದುಳಿನ ಮೇಲೆ ಹಲವಾರು ವರ್ಷಗಳ ನಂತರ ಆಗುವ ಪರಿಣಾಮಗಳೇನೆಂಬುದನ್ನು ಮೊದಲ ಬಾರಿಗೆ ಎಡಿನ್ ಬರ್ಗ್ ವಿಶ್ವವಿದ್ಯಾಲಯದ ಸಂಶೋಧಕರು ತೋರಿಸಿಕೊಟ್ಟಿದ್ದಾರೆ.

ಅಧ್ಯಯನದಿಂದ ಕಂಡುಕೊಳ್ಳಲಾದ ವಾಸ್ತವಾಂಶಗಳು ಮುಂದಿನ ಪೀಳಿಗೆಗಳಲ್ಲಿ ಸ್ಮರಣಶಕ್ತಿ ನಷ್ಟದ ಅಪಾಯವನ್ನು ತಗ್ಗಿಸಲು ನೆರವಾದಾವು ಎಂದು ಸದಾಶಯವನ್ನು ವ್ಯಕ್ತಪಡಿಸುತ್ತಾರೆ ಟಾಮ್ ರಸ್ಸ್ ಎಂಬ ಹೆಸರಿನ, ಅದೇ ವಿಶ್ವವಿದ್ಯಾಲಯದ ಸಹ-ಲೇಖಕರು.

ಮಕ್ಕಳ ಮುದ್ಧಿಮತ್ತೆಯ ಪರೀಕ್ಷೆ

ಮಕ್ಕಳ ಮುದ್ಧಿಮತ್ತೆಯ ಪರೀಕ್ಷೆ

ಅಧ್ಯಯನಕ್ಕಾಗಿ, ಸಂಶೋಧಕರು ತಮ್ಮದೇ ಆದ ಪರೀಕ್ಷೆಯೊಂದನ್ನು ಬಳಸಿ 500 ಜನರ ಸಾಮಾನ್ಯ ಬುದ್ಧಿಮತ್ತೆಯನ್ನು ಪರಿಶೀಲಿಸಿದ್ದರು. ಆ 500 ಮಂದಿ ಈ ಪರೀಕ್ಷೆಯನ್ನು ತಮ್ಮ 11 ರ ಹರೆಯದಲ್ಲಿ ಪೂರ್ಣಗೊಳಿಸಿದ್ದರು. ಅದೇ ಪರೀಕ್ಷೆಯನ್ನು ಅದೇ ವ್ಯಕ್ತಿಗಳಿಗೆ ಅವರ 76 ಹಾಗೂ 79 ರ ಹರೆಯಗಳಲ್ಲಿ ಮತ್ತೊಮ್ಮೆ ಪುನರಾವರ್ತಿಸಲಾಯಿತು. ಈ ವ್ಯಕ್ತಿಗಳು ತಮ್ಮ ಬಾಲ್ಯದ ದಿನಗಳಲ್ಲಿ ಅನುಭವಿಸಿದ್ದ ವಾಯುಮಾಲಿನ್ಯದ ಮಟ್ಟವನ್ನು ಅಂದಾಜಿಸುವುದಕ್ಕಾಗಿ, ಸಂಶೋಧಕರು ಆ 500 ವ್ಯಕ್ತಿಗಳ ಪೈಕಿ ಪ್ರತಿಯೊಬ್ಬರೂ ತಮ್ಮ ಜೀವಮಾನದುದ್ದಕ್ಕೂ ಯಾವ ಯಾವ ಸ್ಥಳಗಳಲ್ಲಿ ವಾಸ ಮಾಡಿಕೊಂಡಿದ್ದರು ಎಂಬುದನ್ನು ಕಂಡುಕೊಳ್ಳುವುದಕ್ಕಾಗಿ ಸಂಬಂಧಿತ ದಾಖಲೆಗಳನ್ನೂ ಪರಿಶೀಲಿಸಿದ್ದರು.

ಆ ಅಧ್ಯಯನದ ಫಲಿತಾಂಶಗಳು ತೋರಿಸಿಕೊಟ್ಟಿರುವ ಪ್ರಕಾರ, ಶೈಶವಾವಸ್ಥೆಯಲ್ಲಿಯೇ ವಾಯುಮಾಲಿನ್ಯಕ್ಕೆ ತುತ್ತಾದವರು, ತಮ್ಮ ಜೀವನದ 11 ಮತ್ತು 70 ವರ್ಷಗಳ ನಡುವಿನ ಹರಯಗಳಲ್ಲಿ, ಸಣ್ಣ ಪ್ರಮಾಣದಲ್ಲಿಯೇ ಆಗಿದ್ದರೂ, ಪತ್ತೆ ಮಾಡಬಹುದಾದಷ್ಟರ ಮಟ್ಟಿಗಿನ, ಗ್ರಹಣಶಕ್ತಿಗೆ ಸಂಬಂಧಿಸಿದ ಅನಾರೋಗ್ಯಕರ ಬದಲಾವಣೆಗಳಿಗೆ ಅವರು ಗುರಿಯಾಗಿದ್ದುದು ಕಂಡು ಬಂದಿತ್ತು.

ವಾಯುಮಾಲಿನ್ಯವು ಮಕ್ಕಳಲ್ಲಿಯೇ ಅತೀ ಹೆಚ್ಚು ದುಷ್ಪರಿಣಾಮವನ್ನುಂಟು ಮಾಡಲು ಕಾರಣಗಳೇನು ?

ವಾಯುಮಾಲಿನ್ಯವು ಮಕ್ಕಳಲ್ಲಿಯೇ ಅತೀ ಹೆಚ್ಚು ದುಷ್ಪರಿಣಾಮವನ್ನುಂಟು ಮಾಡಲು ಕಾರಣಗಳೇನು ?

ತಜ್ಞರು ಹೇಳುವ ಪ್ರಕಾರ, ಸಾಧ್ಯವಿರಬಹುದಾದ ಒಂದು ಕಾರಣವೇನೆಂದರೆ, ಮಕ್ಕಳು ವಯಸ್ಕರಿಗಿಂತಲೂ ಹೆಚ್ಚು ವೇಗವಾಗಿ ಉಸಿರಾಡುತ್ತಾರೆ. ಅರ್ಥಾತ್ ಅವರು ಉಸಿರಿನ ಮೂಲಕ ಒಳತೆಗೆದುಕೊಳ್ಳುವ ಮಾಲಿನ್ಯದ ಪ್ರಮಾಣವು ವಯಸ್ಕರಿಗಿಂತಲೂ ಹೆಚ್ಚಾಗಿರುತ್ತದೆ.

ಕೆಲವು ಮಾಲಿನ್ಯಕಾರಕಗಳು ಭೂಮಟ್ಟದಲ್ಲಿ ಅತೀ ಹೆಚ್ಚು ಸಾಂದ್ರಗೊಳ್ಳುತ್ತವೆ. ಮಕ್ಕಳು ಭೂಮಿಗೆ ಹೆಚ್ಚು ಸಮೀಪವರ್ತಿಗಳಾಗಿರುತ್ತಾರೆಯಾದ್ದರಿಂದ ಇಂತಹ ಮಾಲಿನ್ಯಕಾರಕಗಳು ಬೆಳೆಯುವ ಮಕ್ಕಳ ಮೆದುಳುಗಳು ಹಾಗೂ ದೇಹಗಳ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಅಡುಗೆಯಿಂದ, ಶಾಖದಿಂದ, ಹಾಗೂ ಬೆಳಕಿನಿಂದ ಉಂಟಾಗುವ ಮನೆಯ ಪರಿಸರದ ವಾಯು ಮಾಲಿನ್ಯಕ್ಕೂ ಕೂಡ ಹೆಚ್ಚು ಹೆಚ್ಚು ತುತ್ತಾಗುವವರು ನವಜಾತ ಶಿಶುಗಳು ಹಾಗೂ ಪುಟ್ಟ ಮಕ್ಕಳೇ ಆಗಿರುತ್ತಾರೆ.

ವಾಯುಮಾಲಿನ್ಯದೊಂದಿಗೆ ನಂಟು ಹೊಂದಿರುವ ದೀರ್ಘಕಾಲೀನ ಆರೋಗ್ಯ ಪರಿಣಾಮಗಳು

ವಾಯುಮಾಲಿನ್ಯದೊಂದಿಗೆ ನಂಟು ಹೊಂದಿರುವ ದೀರ್ಘಕಾಲೀನ ಆರೋಗ್ಯ ಪರಿಣಾಮಗಳು

ಮಾನವರಲ್ಲಿ ದುಷ್ಪರಿಣಾಮವನ್ನುಂಟು ಮಾಡುವಂತಹ ರೋಗಗಳ ವಿಚಾರದಲ್ಲಿ ಪ್ರಧಾನ ಪಾತ್ರ ವಹಿಸುವಂತಹ ಅನೇಕ ವಾಯುಮಾಲಿನ್ಯಕಾರಕಗಳಿವೆ. ಅವುಗಳಲ್ಲಿ, ಅತ್ಯಂತ ಸಣ್ಣ ಕಣಗಳ ರೂಪದಲ್ಲಿರುವ ಮಾಲಿನ್ಯಕಾರಕಗಳು ಮಾನವನ ಆರೋಗ್ಯಕ್ಕೆ ಅತ್ಯಂತ ಮಾರಕವಾದಂತಹವುಗಳು. ಅಂತಹ ಅತ್ಯಂತ ಸೂಕ್ಷ್ಮ ಮಾಲಿನ್ಯಕಾರಕ ಕಣಗಳು ಉಸಿರಾಟದ ಮೂಲಕ ಸುಲಭವಾಗಿ ಶ್ವಾಸಕೋಶಗಳನ್ನು ಪ್ರವೇಶಿಸುತ್ತವೆ ಹಾಗೂ ಶ್ವಾಸಕೋಶಗಳಿಗೆ ಸಂಬಂಧಿಸಿದ ಮತ್ತು ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ದಾರಿಮಾಡಿಕೊಡುತ್ತವೆ. ಸಂತಾನೋತ್ಪತ್ತಿಯ ಹಾಗೂ ಕೇಂದ್ರ ನರವ್ಯೂಹದ ನ್ಯೂನತೆಗಳಿಗೆ ಮತ್ತು ಕ್ಯಾನ್ಸರ್ ನಂತಹ ರೋಗಕ್ಕೂ ಕಾರಣವಾಗುತ್ತವೆ.

ಮಕ್ಕಳ ರಕ್ಷಣೆಗಾಗಿ ನಾವೆಲ್ಲಾ ಮಾಡಬೇಕಾಗಿದೆ ಪರಿಸರ ರಕ್ಷಣೆ

ಮಕ್ಕಳ ರಕ್ಷಣೆಗಾಗಿ ನಾವೆಲ್ಲಾ ಮಾಡಬೇಕಾಗಿದೆ ಪರಿಸರ ರಕ್ಷಣೆ

ಓಝೋನ್ ಪದರವು ಹಾನಿಕಾರಕ ನೇರಳಾತೀತ ವಿಕಿರಣಗಳಿಂದ ಸಂರಕ್ಷಿಸುತ್ತದೆ ಅನ್ನೋದೇನೋ ನಿಜ, ಆದರೆ ಅತೀ ಕ್ರಿಯಾಶೀಲವಾಗಿರುವ ಓಝೋನ್ ನಂತಹ ಅನಿಲವು ಭೂಮಟ್ಟದಲ್ಲಿ ಹೆಚ್ಚು ಹೆಚ್ಚು ಸಾಂದ್ರೀಕೃತಗೊಂಡಲ್ಲಿ, ಅದು ಶ್ವಾಸಕಾಂಗ ವ್ಯೂಹ ಹಾಗೂ ಹೃದಯ ಮತ್ತು ರಕ್ತನಾಳ ವ್ಯೂಹದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ.

ದೀರ್ಘಕಾಲೀನ ಉಸಿರಾಟದ ತೊಂದರೆಗಳು (ಕ್ರಾನಿಕ್ ಒಬ್ಸ್ಟ್ರಕ್ಟೀವ್ ಪಲ್ಮನರಿ ಡಿಸೀಸ್ - ಸಿ.ಒ.ಪಿ.ಡಿ), ಉಬ್ಬಸ, ಶ್ವಾಸನಾಳಗಳ ಉರಿಯೂತ, ಮತ್ತು ಶ್ವಾಸಕೋಶದ ಕ್ಯಾನ್ಸರ್ ನಂತಹ ಶ್ವಾಸಕೋಶದ ತೊಂದರೆಗಳು ವಾಯುಮಾಲಿನ್ಯ ಕಾರಕಗಳಿಗೆ ಹೆಚ್ಚು ಹೆಚ್ಚು ಒಡ್ಡಿಕೊಳ್ಳುವುದರೊಂದಿಗೆ ನೇರವಾದ ನಂಟನ್ನು ಹೊಂದಿವೆ.

English summary

Exposure To Air Pollution May Impair Your Child's Thinking Skills

Exposure to air pollution may impair your child's thinking skills, read on...
X
Desktop Bottom Promotion