For Quick Alerts
ALLOW NOTIFICATIONS  
For Daily Alerts

ಚಿಕ್ಕ ಪ್ರಾಯದಲ್ಲೇ ನಿಮ್ಮ ಮಕ್ಕಳಲ್ಲಿ ಪ್ರೌಢಾವಸ್ಥೆಯ ಲಕ್ಷಣಗಳಿವೆಯೇ?

|

ಹೆಣ್ಮಕ್ಕಳು ಮೈ ನೆರೆಯುವುದು ಅಥವಾ ವಯಸ್ಕಿಗೆ ಬರುವುದು ಪೋಷಕರಿಗೆ ಸಂತೋಷ ತರುವ ವಿಷಯವೇ. ಏಕೆಂದರೆ ತನ್ನ ಮಗಳು ಮೈನೆರೆತಾಗ ಅವಳು ಪ್ರೌಡಾವಸ್ಥೆಗೆ ಬಂದಿದ್ದಾಳೆ ಎಂದರ್ಥ. ಸಾಮಾನ್ಯಗಿ ಹೆಣ್ಮಕ್ಕಳು 10 ವರ್ಷ ಕಳೆದ ಮೈನೆರೆಯುತ್ತಾರೆ.

ಇನ್ನು ಗಂಡು ಮಕ್ಕಳು ಪ್ರೌಡಾವಸ್ಥೆಗೆ ಬಂದಿದ್ದಾರೆ ಎಂಬುವುದು ಅವರ ಧ್ವನಿ ಪೆಟ್ಟಿಗೆ ಒಡೆದಾಗ ತಿಳಿದು ಬರುತ್ತದೆ. ಆದರೆ ಮಕ್ಕಳಲ್ಲಿ ಪ್ರೌಡಾವಸ್ಥೆಯ ಲಕ್ಷಣ ತುಂಬಾ ಚಿಕ್ಕ ಪ್ರಾಯದಲ್ಲಿ ಕಂಡು ಬಂದರೆ ಆತಂಕ ಕಾಡುವುದು. 8, 9 ವರ್ಷಕ್ಕೆಲ್ಲಾ ಮೈನೆರೆತರೆ ಆ ಮಗುವಿಗೆ ಏನು ತಾನೆ ತಿಳಿಯುತ್ತೆ ಎಂಬ ಆತಂಕ ಪೋಷಕರನ್ನು ಕಾಡುವುದು ಸಹಜ. ಅಲ್ಲದೆ ಪ್ರೌಡಾವಸ್ಥೆಗೆ ಬಂದ ಮೇಲೆ ಅವರ ನಡುವಳಿಕೆಯಲ್ಲೂ ಕೆಲ ಸಮಸ್ಯೆ ಕಂಡು ಬರಬಹುದು. ಅತೀ ಚಿಕ್ಕ ಪ್ರಾಯದಲ್ಲಿಯೇ ಪ್ರೌಡಾವಸ್ಥೆ ಏಕೆ ಬರುತ್ತದೆ? ಇದರಿಂದ ಉಂಟಾಗುವ ತೊಂದರೆಯೇನು, ವೈದ್ಯರಿಗೆ ಯಾವಾಗ ತೋರಿಸಬೇಕು ಎಂಬುವುದರ ಬಗ್ಗೆ ಹೆಚ್ಚಿನ ಮಾಹಿತಿ ಈ ಲೇಖನದಲ್ಲಿದೆ ನೋಡಿ:

ಅತೀ ಬೇಗನೆ ಪ್ರೌಡಾವಸ್ಥೆ ಅಂದ್ರೆ ಯಾವ ಪ್ರಾಯದಲ್ಲಿ?

ಅತೀ ಬೇಗನೆ ಪ್ರೌಡಾವಸ್ಥೆ ಅಂದ್ರೆ ಯಾವ ಪ್ರಾಯದಲ್ಲಿ?

ಸಾಮಾನ್ಯವಾಗಿ ಹೆಣ್ಮಕ್ಕಳಲ್ಲಿ 8-13 ವರ್ಷದಲ್ಲಿ, ಗಂಡ್ಮಕ್ಕಳಲ್ಲಿ 9-14 ವರ್ಷದಲ್ಲಿ ಅವರ ಶರೀರದಲ್ಲಿ ಪ್ರೌಡಾವಸ್ಥೆಯ ಲಕ್ಷಣಗಳು ಕಂಡು ಬರುತ್ತದೆ. ಹೆಣ್ಮಕ್ಕಳಿಗೆ ಸ್ತನಗಳ ಗಾತ್ರ ದೊಡ್ಡದಾಗುವುದು, ಗಂಡ್ಮಕ್ಕಳಿಗೆ ಧ್ವನಿಯಲ್ಲಿ ವ್ಯತ್ಯಾಸ ಕಂಕುಳದಲ್ಲಿ ಕೂದಲು, ಮೀಸೆ ಮೂಡುವುದು ಮುಂತಾದ ಲಕ್ಷಣ ಕಂಡು ಬರುವುದು. ಈ ಲಕ್ಷಣಗಳು ಮಕ್ಕಳು ಪ್ರೌಡಾವಸ್ಥೆಗೆ ಬರುತ್ತಿದ್ದಾರೆ ಎಂಬುವುದರ ಸೂಚನೆಯಾಗಿದೆ. ಹೆಣ್ಮಕ್ಕಳಿಗೆ ಈ ಪ್ರಾಯದಲ್ಲಿ ಋತುಚಕ್ರ ಪ್ರಾರಂಭವಾಗುವುದು. ಈ ರೀತಿ ಮಕ್ಕಳು ಪ್ರೌಡಾವಸ್ಥೆಗೆ ಬರುವುದು ಸಾಮಾನ್ಯ.

ಪ್ರೌಢಾವಸ್ಥೆಯ ಬಗೆಗಳು

ಪ್ರೌಢಾವಸ್ಥೆಯ ಬಗೆಗಳು

ಆದರೆ ಕೆಲ ಮಕ್ಕಳು ತುಂಬಾ ಚಿಕ್ಕ ಪ್ರಾಯದಲ್ಲಿ ಪ್ರೌಡಾವಸ್ಥೆಗೆ ಬರುತ್ತವೆ. ಈ ರೀತಿ ಪ್ರೌಢಾವಸ್ಥೆಯಲ್ಲಿ ಎರಡು ರೀತಿ ಕಂಡು ಬರುತ್ತದೆ

1. Central precocious puberty

ಇದು ಸಾಮಾನ್ಯವಾಗಿ ಕಂಡು ಬರುತ್ತದೆ.

ಈ ರೀತಿ 5000ದಲ್ಲಿ 1 ಮಗುವಿಗೆ ಉಂಟಾಗುತ್ತದೆ. ಈ ರೀತಿಯಾದಾಗ ಗಂಡು ಮಗುವಿನ ಶಿಶ್ನ ಟೆಸ್ಟೋಸ್ಟಿರೋನೆ, ಹೆಣ್ಣು ಮಗುವಿನ ಗರ್ಭಾಶಯ ಈಸ್ಟ್ರೋಜನ್ ಬಿಡುಗಡೆಯಾಗುತ್ತೆ. ಈ ಸೆಕ್ಸ್‌ ಹಾರ್ಮೋನ್‌ಗಳಿಂದಾಗಿ ದೇಹದಲ್ಲಿ ಪ್ರೌಡಾವಸ್ಥೆಯ ಲಕ್ಷಣಗಳು ಕಂಡು ಬರುತ್ತವೆ.

3. Peripheral precocious puberty

3. Peripheral precocious puberty

ಇದು ಭಿನ್ನವಾದ ಸ್ಥಿತಿಯಾಗಿರುತ್ತೆ. ಇದರಲ್ಲಿ ಟೆಸ್ಟೋಸ್ಟಿರೋನ್ ಹಾಗೂ ಈಸ್ಟ್ರೋಜನ್‌ ಹೆಚ್ಚಾಗಿ ಕಂಡು ಬರುವ ಲಕ್ಷಣವಾಗಿದೆ. ಆದರೆ ಮೆದುಳು ಅಥವಾ ಪಿಟ್ಯುಟರಿ ಗ್ರಂಥಿ ಭಾಗಿಯಾಗಿರುವುದಿಲ್ಲ. ಇದರಿಂದ ಗರ್ಭಾಶಯ, ಶಿಶ್ನ, ಅಡ್ರಿನಲ್ ಗ್ರಂಥಿ, ಥೈರಾಯ್ಡ್‌ ಗ್ರಂಥಿಯಲ್ಲಿ ತೊಂದರೆ ಉಂಟಾಗುವುದು.

ಅಲ್ಲದೆ ಇನ್ನು ಕೆಲ ಮಕ್ಕಳಲ್ಲಿ ಈ ಬಗೆಯ ಲಕ್ಷಣಗಳೂ ಕಂಡು ಬರುವುದು.

ಸ್ತನಗಳ ಗ್ರಾತ್ರ ದೊಡ್ಡದಾಗುವುದು: ಸಾಮಾನ್ಯವಾಗಿ ಪ್ರೌಡಾವಸ್ಥೆಗೆ ಬರು ಮುನ್ನವೇ ಸ್ತನಗಳ ಗಾತ್ರ ದೊಡ್ಡದಾಗುತ್ತದೆ. ಈ ರೀತಿ ಉಂಟಾದಾಗ ಮಕ್ಕಳ ತಜ್ಞರ ಸಲಹೆ ಪಡೆಯಿರಿ.

ಬೇಡದ ಕೂದಲು ಬೆಳೆಯುವುದು: ಇನ್ನು ದೇಹದಲ್ಲಿ ತುಂಬಾ ಚಿಕ್ಕ ಪ್ರಾಯದಲ್ಲಿ ಬೇಡದ ಕೂದಲು ಕಂಡು ಬಂದರೆ ಅದು ಪ್ರೌಡಾವಸ್ಥೆಯ ಲಕ್ಷಣ ಮಾತ್ರವಲ್ಲ ಅಡ್ರಿನಲ್ ಹಾರ್ಮೋನ್‌ ಹೆಚ್ಚಾಗಿ ಬಿಡುಗಡೆಯಾಗುತ್ತಿದೆ ಎಂಬುವುದು ಕೂಡ ಆಗಿದೆ. ಇಂಥ ಸಂದರ್ಭದಲ್ಲಿ ನಿಮ್ಮ ಮಗುವನ್ನು ವೈದ್ಯರಿಗೆ ತೋರಿಸಬೇಕು.

ಮಕ್ಕಳಲ್ಲಿ ಬೇಗನೆ ಪ್ರೌಢಾವಸ್ಥೆ: ಲಕ್ಷಣಗಳು

ಮಕ್ಕಳಲ್ಲಿ ಬೇಗನೆ ಪ್ರೌಢಾವಸ್ಥೆ: ಲಕ್ಷಣಗಳು

ಹೆಣ್ಣು ಮಕ್ಕಳಲ್ಲಿ

* ಸ್ತನ ಗಾತ್ರ ದೊಡ್ಡದಾಗುವುದು

* ಋತುಮತಿಯಾಗುವುದು

ಗಂಡು ಮಕ್ಕಳಲ್ಲಿ

* ಶಿಶ್ನ ಗಾತ್ರದಲ್ಲಿ ಬದಲಾವಣೆ

* ಧ್ವನಿಯಲ್ಲಿ ವ್ಯತ್ಯಾಸ

ಗಂಡು-ಹೆಣ್ಣು ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಲಕ್ಷಣ

* ಬೇಗನೆ ಎತ್ತರ ಬೆಳೆಯುವುದು

* ಮೊಡವೆ

* ಪ್ರೌಡಾವಸ್ಥೆಯ ಮೈ ವಾಸನೆ

ಯಾವ ಮಕ್ಕಳಲ್ಲಿ ಬೇಗನೆ ಪ್ರೌಡಾವಸ್ಥೆ ಕಂಡು ಬರುವುದು?

ಯಾವ ಮಕ್ಕಳಲ್ಲಿ ಬೇಗನೆ ಪ್ರೌಡಾವಸ್ಥೆ ಕಂಡು ಬರುವುದು?

* ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಲ್ಲಿ ಅಧಿಕವಾಗಿ ಕಂಡು ಬರುವುದು.

* ವಂಶವಾಹಿನಿಯಾಗಿಯೂ ಬರುವುದು. ಮಕ್ಕ ಒಡ ಹುಟ್ಟಿದರಲ್ಲಿ ಈ ಲಕ್ಷಣ ಕಂಡು ಬಂದರೆ ಇವರಿಗೂ ಬರಬಹುದು.

* ಬಣ್ಣ: ಸಂಶೋಧನೆ ಪ್ರಕಾರ ಆಫ್ರಿಕನ್ ಹುಡುಗಿಯರು ಬಿಳಿ ಹುಡುಗಿಯರಿಗಿಂತ ಕೆಲ ವರ್ಷ ಮೊದಲೇ ಪ್ರೌಡಾವಸ್ಥೆಗೆ ಬರುತ್ತಾರಂತೆ.

* ಒಬೆಸಿಟಿ: ಚಿಕ್ಕ ಪ್ರಾಯದಲ್ಲಿಯೇ ಮೈ ತೂಕ ಹೆಚ್ಚಿದ್ದರೆ ಬೇಗನೆ ಪ್ರೌಢಾವಸ್ಥೆಗೆ ಬರುವುದು.

ಮಕ್ಕಳಯ ಬೇಗನೆ ಪ್ರೌಢಾವಸ್ಥೆಗೆ ಬರುವುದು ಕಂಡು ಹಿಡಿಯಬಹುದೇ?

* ಅವರ ಮೆಡಿಕಲ್ ಹಿಸ್ಟರಿ

* ರಕ್ತ ಪರೀಕ್ಷೆ ಮೂಲಕ ಹಾರ್ಮೋನ್‌ಗಳ ಪ್ರಮಾಣ ತಿಳಿಯುವುದು.

* ಎಕ್ಸ್‌ ರೇ ಮೂಲಕ ಈ ಮೂಳೆಗಳು ಬೇಗನೆ ಬೆಳೆಯುವಂತದ್ದೇ ಎಂದು ತಿಳಿಯಬಹುದು.

ಮಕ್ಕಳು ಬೇಗನೆ ಪ್ರೌಡಾವಸ್ಥೆಗೆ ಬರುವುದನ್ನು ತಡೆಗಟ್ಟಬಹುದೇ?

* GnRH analogue ಥೆರಪಿ ಮೂಲಕ ಕಂಡು ಹಿಡಿಯಬಹುದು. ಇದರಲ್ಲಿ ಪ್ರತಿ ತಿಂಗಳು ಲಸಿಕೆ ಪಡೆಯಬೇಕು.

* ಹಿಸ್ಟ್ರೆಲಿನ್ ಅಳವಡಿಸುವುದು (Histrelin implant), ಈ ಚಿಕಿತ್ಸೆಯಲ್ಲಿ ಚಿಕ್ಕ ಸರ್ಜರಿ ಮಾಡಿ ಅದನ್ನು ಕಂಕುಳದ ಮೇಲ್ಭಾಗದ ತ್ವಚೆಯಲ್ಲಿ ಇಡಲಾಗುವುದು. ಹೀಗೆ ಮಾಡಿದರೆ ಪ್ರತಿತಿಂಗಳು ಲಸಿಕೆ ಪಡೆಯಬೇಕಾಗಿಲ್ಲ.

ಬೇಗನೆ ಪ್ರೌಡಾವಸ್ಥೆಗೆ ಬರುವುದರಿಂದ ಉಂಟಾಗುವ ತೊಂದರೆಗಳು

ಬೇಗನೆ ಪ್ರೌಡಾವಸ್ಥೆಗೆ ಬರುವುದರಿಂದ ಉಂಟಾಗುವ ತೊಂದರೆಗಳು

* ಎತ್ತರ ಕಡಿಮೆಯಾಗುವುದು: ಈ ಮಕ್ಕಳು ಚಿಕ್ಕ ಪ್ರಾಯದಲ್ಲಿ ಬೇಗನೆ ಎತ್ತರ ಬೆಳೆಯುತ್ತಾರೆ. ಆದರೆ ಸಹಜವಾಗಿ ಬೆಳಣಿಗೆಯ ಸಮಯದಲ್ಲಿ ಇವರ ಬೆಳವಣಿಗೆ ನಿಂತು ಹೋಗುತ್ತದೆ, ಇದರಿಂದ ಎತ್ತರ ಬೆಳೆಯುವುದಿಲ್ಲ.

* ನಡುವಳಿಕೆಯಲ್ಲಿ ತೊಂದರೆ: ಕೆಲವು ಮಕ್ಕಳಲ್ಲಿ ನಡವಳಿಕೆಯಲ್ಲಿ ವ್ಯತ್ಯಾಸ ಕಂಡು ಬರುವುದು. ಅಂದ್ರೆ ಚಿಕ್ಕ ಪ್ರಾಯದಲ್ಲಿ ಲೈಂಗಿಕಾಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆ ಹೆಚ್ಚು.

* ಮಕ್ಕಳ ದೇಹದಲ್ಲಿ ಆಗುವ ಬದಲಾವಣೆ ಅವರಲ್ಲಿ ಮಾನಸಿಕ ಒತ್ತಡ ಉಂಟು ಮಾಡಬಹುದು.

ಪೋಷಕರಿಗೆ ಸಲಹೆ:

ನಿಮ್ಮ ಮಕ್ಕಳಲ್ಲಿ 9 ವರ್ಷದೊಳಗೆ ಪ್ರೌಢಾವಸ್ಥೆಯ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಿ.

English summary

Early Puberty Types, Causes, Symptoms, Risk Factors and Treatment in Kannada

Early Puberty Types, Causes, Symptoms, Risk Factors and Treatment , Read on...
X
Desktop Bottom Promotion