For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ ಮತ್ತೆ ಹೆಚ್ಚಾಗುತ್ತಿದೆ ಕೊರೊನಾ, ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆ? ಏಮ್ಸ್ ತಜ್ಞರು ಹೇಳುವುದೇನು?

|

ಮಕ್ಕಳು ಕ್ಲಾಸ್‌ ರೂಂನಲ್ಲಿ ಕಲಿತಷ್ಟು ಪರಿಣಾಮಕಾರಿಯಾಗಿ ಆನ್‌ಲೈನ್‌ ಕ್ಲಾಸ್‌ನಲ್ಲಿ ಕಲಿಯಲು ಸಾಧ್ಯವಿಲ್ಲ ಎಂಬುವುದು ಕೊರೊನಾ ಕಾಲದಲ್ಲಿ ಪೋಷಕರಿಗೆ ಅರ್ಥವಾದ ವಿಷಯವಾಗಿದೆ. ಮಕ್ಕಳಿಗೂ ಅಷ್ಟೇ ಆನ್‌ಲೈನ್‌ ಕ್ಲಾಸ್ ಬೋರಾಗಲಾರಂಭಿಸಿತ್ತು. ಸಹಪಾಠಿಗಳ ಜೊತೆ ನಕ್ಕು-ನಲಿದು ಕಲಿಯುವ ಖುಷಿಯೇ ಬೇರೆ. ಕಳೆದ ಎರಡು ವರ್ಷಗಳಿಂದ ಮನೆಯಲ್ಲೇ ಇದ್ದ ಮಕ್ಕಳು 2021 ನವೆಂಬರ್‌ನಿಂದ ಶಾಲೆಯತ್ತ ಮುಖ ಮಾಡಿದ್ದರು.

COVID in Children

ಪರೀಕ್ಷೆಯೆಲ್ಲಾ ಮುಗಿಸಿ ಮಕ್ಕಳು ಈಗ ಖುಷಿಯಾಗಿ ಬೇಸಿಗೆಯ ರಜೆ ಕಳೆಯುತ್ತಿದ್ದಾರೆ, ಮೇ ಅರ್ಧದ ನಂತರ ಶಾಲೆಗಳು ರೀ ಓಪನ್ ಆಗುತ್ತಿವೆ. ಆದರೆ ಮತ್ತೆ ಆತಂಕ ಶುರುವಾಗಿದೆ. ಭಾರತದಲ್ಲಿ XE ರೂಪಾಂತರ ಹರಡುತ್ತಿದೆ. ಭಾರತದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಆದರೆ ಅದಕ್ಕಿಂತ ಚಿಕ್ಕ ಮಕ್ಕಳಿಗೆ ಲಸಿಕೆ ನೀಡಲು ಪ್ರಾರಂಭಿಸಿಲ್ಲ, ಆದ್ದರಿಂದ ಹೆಚ್ಚುತ್ತಿರುವ ಕೊರೊನಾ ಪೋಷಕರಲ್ಲಿ ಆತಂಕ ಉಂಟು ಮಾಡಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಬೇಕೆ, ಬೇಡ್ವೆ ಎಂದು ಪೋಷಕರು ಕೇಳುತ್ತಿದ್ದಾರೆ.

ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಪೋಷಕರ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ:

ಆತಂಕ ಪಡಬೇಡಿ:

ಆತಂಕ ಪಡಬೇಡಿ:

ಮಕ್ಕಳ ಬಗ್ಗೆ ಆತಂಕ ಪಡಬೇಡಿ. ಈ ಹಿಂದೆ ಕೂಡ ಕೊರೊನಾ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಿಲ್ಲ. ಮಕ್ಕಳಲ್ಲಿ ಕೊರೊನಾ ಸೋಂಕು ತಗುಲಿದಾಗ ಸಣ್ಣ-ಪುಟ್ಟ ಲಕ್ಷಣಗಳಷ್ಟೇ ಕಂಡು ಬಂದಿತ್ತು. ಆದ್ದರಿಂದ ತುಂಬಾ ಆತಂಕ ಪಡುವ ಅಗ್ಯತವಿಲ್ಲ ಎಂದಿದ್ದಾರೆ.

 ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸಿ

ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸಿ

12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ, ಆದ್ದರಿಂದ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸಿ.

ಈ ಲಕ್ಷಣಗಳು ಕಂಡು ಬಂದರೆ ಪರೀಕ್ಷೆ ಮಾಡಿಸಿ

ಜ್ವರ, ಮೂಗು ಸೋರುವುದು, ಗಂಟಲು ನೋವು, ಮೈಕೈ ನೋವು, ಒಣ ಕೆಮ್ಮು ಈ ರೀತಿಯ ಲಕ್ಷಣಗಳು ಕಂಡು ಬಂದರೆ ಪರೀಕ್ಷೆ ಮಾಡಿಸಿ.

 ಶಾಲೆಗೆ ಹೋಗುವ ಮಕ್ಕಳಿಗೆ ಕೊರೊನಾ ಬಗ್ಗೆ ಜಾಗ್ರತೆ ಮೂಡಿಸಿ

ಶಾಲೆಗೆ ಹೋಗುವ ಮಕ್ಕಳಿಗೆ ಕೊರೊನಾ ಬಗ್ಗೆ ಜಾಗ್ರತೆ ಮೂಡಿಸಿ

ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಇವುಗಳ ಕುರಿತು ಹೇಳಿಕೊಡಿ. ಅಲ್ಲದೆ ಮನೆಗೆ ಮಕ್ಕಳು ವೈರಸ್‌ ತರದಂತೆ ಎಚ್ಚರ ವಹಿಸಿ.

ತುರ್ತು ಪರಿಸ್ಥಿತಿಯಾಗಿಲ್ಲ

ಮಕ್ಕಳಿಗೆ ಶಾಲೆ ಶುರುವಾಗಿರುವುದರಿಂದ ಈಗ ಪೋಷಕರಿಗೆ ಮಕ್ಕಳ ಬಗ್ಗೆ ಚಿಂತೆ ಶುರುವಾಗಿದೆ. ಕೆಲ ಮಕ್ಕಳಿಗೆ ಕೊರೊನಾ ಬಂದಿದೆ ಎಂದು ವರದಿ ಬಂದ ತಕ್ಷಣ ಆತಂಕ ಪಡಬೇಕಾಗಿಲ್ಲ. ಶಾಲೆಯಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಿ.

English summary

COVID in Children: should you send kids to school with XE variant circulating ? AIIMS chief answers

COVID in Children: should you send kids to school with XE variant circulating ? AIIMS chief answers, read on...
Story first published: Thursday, April 21, 2022, 18:39 [IST]
X
Desktop Bottom Promotion