For Quick Alerts
ALLOW NOTIFICATIONS  
For Daily Alerts

ಮಾ. 16ರಿಂದ 12-14 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯ

|

ಕೋವಿಡ್‌ನಂಥ ಮಾರಕ ರೋಗ ತಡೆಗಟ್ಟುವ ಜೀವ ರಕ್ಷಕವಾಗಿದೆ ಕೋವಿಡ್‌ 19 ಲಸಿಕೆಗಳು. 15 ವರ್ಷದ ಮೇಲ್ಪಟ್ಟವರಿಗೆ ದೇಶದಲ್ಲಿ ಲಸಿಕೆ ನೀಡಲಾಗುತ್ತಿದೆ. ಇದೀಗ 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 2008, 2009, 2010ರಲ್ಲಿ ಜನಿಸಿದ ಮಕ್ಕಳಿಗೆ ಮರ್ಚ್‌ 16ರಿಂದ ಲಸಿಕೆ ಲಭ್ಯವಾಗಲಿದೆ.

12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ನೀಡುವುದರ ಬಗ್ಗೆ ಸೋಮವಾರ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಕ್ಕಳಿಗೆ ಯಾವ ಲಸಿಕೆ ನೀಡಲಾಗುತ್ತಿದೆ?

ಮಕ್ಕಳಿಗೆ ಯಾವ ಲಸಿಕೆ ನೀಡಲಾಗುತ್ತಿದೆ?

12 -14 ವರ್ಷದೊಳಗಿನ ಮಕ್ಕಳಿಗೆ ಕಾರ್ಬೇವ್ಯಾಕ್ಸ್ ಲಸಿಕೆ ನೀಡಲಾಗುವುದು. ಇದನ್ನು ಹೈದರಾಬಾದ್‌ ಬಯೋಲಾಜಿಕಲ್‌ ಇ. ಲಿಮಿಟೆಡ್ ಕಂಪಿ ತಯಾರಿಸಿದೆ.

ಮಕ್ಕಳಿಗೆ ಲಸಿಕೆ ನೀಡುವುದರ ಕುರಿತು ಮಿಶ್ರ ಪ್ರತಿಕ್ರಿಯೆ

ಮಕ್ಕಳಿಗೆ ಲಸಿಕೆ ನೀಡುವುದರ ಕುರಿತು ಮಿಶ್ರ ಪ್ರತಿಕ್ರಿಯೆ

ಕೊರೊನಾ ಲಸಿಕೆ ಇದುವರೆಗೆ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಿಲ್ಲ, ಅವರಲ್ಲಿ ರೋಗ ನಿರೋಧಕ ಶಕ್ತಿ ಚೆನ್ನಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಕೊರೊನಾ ಲಸಿಕೆ ಅಗ್ಯತವಿಲ್ಲ ತಜ್ಞರ ಒಂದು ಗುಂಪು ಹೇಳುತ್ತಿದ್ದಾರೆ

ತಜ್ಞರ ಮತ್ತೊಂದು ಗುಂಪು ಒಮಿಕ್ರಾನ್‌ ದೊಡ್ಡವರು ಮಾತ್ರವಲ್ಲ ಮಕ್ಕಳಲ್ಲಿಯೂ ಕಂಡು ಬಂದಿತ್ತು, ಈ ಕೊರೊನಾ ಲಸಿಕೆ ಮಕ್ಕಳಲ್ಲಿ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಲು ಮತ್ತಷ್ಟು ಸಹಕಾರಿ ಎಂದು ಹೇಳಿದೆ.

ಮುಂದೆ ಕೊರೊನಾ ಬಂದರೆ ಸಮರ್ಥವಾಗಿ ಎದುರಿಸಲು ಸಹಕಾರಿ

ಮುಂದೆ ಕೊರೊನಾ ಬಂದರೆ ಸಮರ್ಥವಾಗಿ ಎದುರಿಸಲು ಸಹಕಾರಿ

ಇದೀಗ 12 ವರ್ಷ ಮೇಲ್ಪಟ್ಟ ಎಲ್ಲರಿಗೆ ಕೊರೊನಾ ಲಸಿಕೆ ನೀಡುತ್ತಿರುವುದರಿಂದ ದೇಶದ ಬಹುಪಾಲು ಜನತೆಯಲ್ಲಿ ಕೊರೊನಾ ವಿರುದ್ಧ ಹೋರಾಡುವ ಸಾಮರ್ಥ್ಯ ಬೆಳೆಯುವುದು. ರೋಗ ನಿರೋಧಕ ಶಕ್ತಿ ದುರ್ಬಲವಾಗಿದ್ದವರು ಈ ಲಸಿಕೆ ಪಡೆಯುವುದರಿಂದ ಕೊರೊನಾ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಕೊರೊನಾ ಮತ್ತೆ ಕಾಡುವ ಆತಂಕವಿದೆ

ಕೊರೊನಾ ಮತ್ತೆ ಕಾಡುವ ಆತಂಕವಿದೆ

ಈ ಎರಡು ವರ್ಷದಲ್ಲಿ ಕೊರೊನಾ ಒಮ್ಮೆ ತುಂಬಾ ಜಾಸ್ತಿಯಾಗುವುದು, ಕಡಿಮೆಯಾಗುವುದು ನೋಡ್ತಾ ಇದ್ದೇವೆ. ಈಗ ಕೊರೊನಾ ಸ್ವಲ್ಪ ಕಡಿಮೆಯಾಗಿದೆ. ಹಾಗಂತ ಕೊರೊನಾ ಆತಂಕ ಸಂಪೂರ್ಣ ಇಲ್ಲವೆಂದು ಏನಿಲ್ಲ. ಒಮಿಕ್ರಾನ್‌ ಇತರ ತಳಿಗಳು ಕಾಣಿಸಿಕೊಳ್ಳಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ. ಆದ್ದರಿಂದ ಮಕ್ಕಳಿಗೂ ಕೊರೊನಾ ಲಸಿಕೆ ಸಿಗುತ್ತಿರುವುದರಿಂದ ಕೊರೊನಾವನ್ನು ಸಮರ್ಥವಾಗಿ ತಡೆಗಟ್ಟಲು ಸಾಧ್ಯವಾಗುವುದು.

ಲಸಿಕೆ ಪಡೆಯದೇ ಇದ್ದರೆ ಕೂಡಲೇ ಲಸಿಕೆ ಪಡೆಯಿರಿ, ಕೊರೊನಾ ನಿಯಮಗಳನ್ನು ಪಾಲಿಸಿ ಕೊರೊನಾ ತಡೆಗಟ್ಟಿ.

English summary

COVID-19 Vaccine For 12-14 Years From March 16

COVID-19 vaccine for 12-14 years from March 16, read on...
Story first published: Tuesday, March 15, 2022, 11:53 [IST]
X
Desktop Bottom Promotion