For Quick Alerts
ALLOW NOTIFICATIONS  
For Daily Alerts

ಕೊರೊನಾ 3ನೇ ಅಲೆಯಿಂದ ಮಕ್ಕಳ ರಕ್ಷಣೆಗೆ ಪೋಷಕರು ಏನು ಮಾಡಬೇಕು?

|

ಕೊರೊನಾ ವೈರಸ್‌ 3ನೇ ಅಲೆ ಎಂದು ಕೇಳಿದ ತಕ್ಷಣ ಚಿಕ್ಕ ಮಕ್ಕಳಿರುವ ಪೋಷಕರು ಬೆಚ್ಚಿ ಬೀಳುತ್ತಿದ್ದಾರೆ. ಎರಡನೇ ಅಲೆಯಲ್ಲಿ ಸಾಕಷ್ಟು ಸಾವು-ನೋಡಿ ಜನರು ಕೊರೊನಾ ಎಂಬ ಪದ ಕೇಳಿದರೆ ಬೆಚ್ಚಿ ಬೀಳುತ್ತಿದ್ದಾರೆ. ಕೊರೊನಾ ಮೊದಲನೇ ಅಲೆ ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತಿತ್ತು. ಈ ಅಲೆಯ ಸಮಯದಲ್ಲಿ ವಯಸ್ಸಾದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಸೋಂಕು ತಗುಲಿದಾಗ ಪರಿಸ್ಥಿತಿ ಗಂಭೀರವಾದದ್ದನ್ನು ನೋಡಿದ್ದೇವೆ.

ಅದೇ 2ನೇ ಅಲೆಯಲ್ಲಿ ವಯಸ್ಸಾದವರು ಮಾತ್ರವಲ್ಲ ಯುವಕ-ಯುವತಿಯರ ಮೇಲೂ ಗಂಭೀರ ಪರಿಣಾಮ ಬೀರಿ ಸಾವನ್ನಪ್ಪಿರುವುದನ್ನು ನೋಡುತ್ತಿದ್ದೇವೆ. ಆದ್ದರಿಂದ ಕೊರೊನಾ 2ನೇ ಅಲೆ ವಯಸ್ಸಾದವರು-ಯುವಕರು ಎನ್ನದೇ ಎಲ್ಲರನ್ನೂ ಕಾಡುತ್ತಿದೆ. ಆದ್ದರಿಂದ ಈ ಸಮಯದಲ್ಲಿ ತುಂಬಾನೇ ಹುಷಾರಾಗಿರಬೇಕು. ಒಂದು ಸಮಧಾನ ಸಂಗತಿಯೆಂದರೆ ಈ ಎರಡೂ ಅಲೆ ಮಕ್ಕಳ ಮೇಲೆ ಅಷ್ಟೇನು ಕೆಟ್ಟ ಪರಿಣಾಮ ಬೀರಿಲ್ಲ. ಕೆಲ ಮಕ್ಕಳಲ್ಲಿ ಸೋಂಕು ತಗುಲಿದ್ದರೂ ಬೇಗನೆ ಚೇತರಿಸಿಕೊಳ್ಳುತ್ತಿರುವುದನ್ನು ನೋಡಿದ್ದೇವೆ.

ಆದರೆ ಈಗ ತಜ್ಞರು ಕೊರೊನಾ ಅಲೆ 3ನೇ ಅಲೆ ಇದೆ. ಇದು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಹೇಳಿರುವುದು ಪೋಷಕರಲ್ಲಿ ಭಯವನ್ನು ಹೆಚ್ಚಿಸಿದೆ. ಈ ಅಲೆಯಿಂದ ಮಕ್ಕಳನ್ನು ರಕ್ಷಣೆ ಮಾಡುವ ಕರ್ತವ್ಯ ಹಾಗೂ ಸವಾಲು ಪೋಷಕರ ಮುಂದಿದೆ.

ಪೋಷಕರ ಮುಂದಿರುವ ಪ್ರಮುಖ ಸವಾಲುಗಳು ಏನು?

ಪೋಷಕರ ಮುಂದಿರುವ ಪ್ರಮುಖ ಸವಾಲುಗಳು ಏನು?

ಇದೀಗ ಕೊರೊನಾ ಲಸಿಕೆ 18 ವರ್ಷ ಮೇಲ್ಪಟ್ಟವರಿಗೆ ಸಿಕ್ಕಿದೆ, ಆದರೆ ಮಕ್ಕಳಿಗೆ ಇನ್ನೂ ಬಂದಿಲ್ಲ, ಆದ್ದರಿಂದ ಮಕ್ಕಳನ್ನು ಕೊರೊನಾದಿಂದ ಪಾರು ಮಾಡಲು ಪೋಷಕರು ತುಂಬಾನೇ ಮುನ್ನೆಚ್ಚರಿಕೆವಹಿಸಬೇಕು.

ಏಕೆಂದರೆ ದೊಡ್ಡವರಿಗಾದರೆ ಮನೆಯಿಂದ ಹೊರಗಡೆ ಹೋಗಬೇಡಿ, ಮಾಸ್ಕ್ ಧರಿಸಿ, ಕೈಗಳನ್ನು ಸ್ಯಾನಿಟೈಸ್‌ ಮಾಡಿ ಇವೆಲ್ಲಾ ಹೇಳಿ ಅರ್ಥ ಮಾಡಿಸಬಹುದು. ಆದರೆ ಮಕ್ಕಳಿಗೆ ಇವೆಲ್ಲಾ ಸುಲಭದಲ್ಲಿ ಅರ್ಥವಾಗಲ್ಲ. ಕೈ ತೊಳೆ, ಮಾಸ್ಕ್‌ ಧರಿಸು ಎಂದರೆ ಕೇಳಬಹುದು, ಆದರೆ ಇತರ ಮಕ್ಕಳ ಜೊತೆ ಬೆರೆಯಬೇಡ ಎಂದರೆ ಅವರಿಗೆ ಅದು ಕಷ್ಟವಾಗುವುದು.

ಈಗಾಗಲೇ 2020ರಿಂದ ಮನೆಯೊಳಗೇ ಬಂದಿಯಾಗಿದ್ದು ಮಕ್ಕಳಿಗೆ ಸಾಕಾಗಿರುತ್ತದೆ. ಸ್ವಲ್ಪ ಅವಕಾಶ ಸಿಕ್ಕರೂ ಆಟಕ್ಕೆ ಹೋಗುವುದು ಅಥವಾ ಪಕ್ಮದನೆ ಮಕ್ಕಳನ್ನು ಆಟಕ್ಕೆ ಕರೆಯುವುದು ಮಾಡುತ್ತವೆ. ಇಂಥ ವಿಷಯದಲ್ಲಿ ಮಕ್ಕಳನ್ನು ನಿಯಂತ್ರಿಸುವುದು ಪೋಷಕರಿಗೆ ದೊಡ್ಡ ಸವಾಲು ಆಗಬಹುದು.

ಕೋವಿಡ್‌ 19ನಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಏನು ಆಡಬೇಕು?

ಕೋವಿಡ್‌ 19ನಿಂದ ಮಕ್ಕಳನ್ನು ರಕ್ಷಿಸಲು ಪೋಷಕರು ಏನು ಆಡಬೇಕು?

* ಈ ಸಮಯದಲ್ಲಿ ಪೋಷಕರು ತುಂಬಾ ಜಾಗ್ರತೆ ವಹಿಸಬೇಕು. ನೆಂಟರಿಷ್ಟರ ಮನೆಗೆ ಹೋಗುವುದು, ಅವರು ನಿಮ್ಮ ಮನೆಗೆ ಬರುವುದು ಇವುಗಳನ್ನು ನಿಯಂತ್ರಿಸಬೇಕು.

* ಮಕ್ಕಳ ಜೊತೆ ಹೊರಗಡೆ ತಿರುಗಾಡಲು ಹೋಗಬಾರದು.

* ಮಕ್ಕಳಿಗೆ ಮಾಸ್ಕ್ ಧರಿಸಲು ಹೇಳಿ, ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಬೇಕು. ಹೊರಗಡೆ ಹೋಗುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮನೆಗೆ ಯಾರಾದರೂ ಬಂದ್ರೆ ಅವರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

* ಮನೆಯಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಅವರು ಮಕ್ಕಳಿಂದ ಪ್ರತ್ಯೇಕವಾಗಿ ರೂಮ್‌ನಲ್ಲಿರಬೇಕು.

ಆಹಾರ ಕ್ರಮ ಹಾಗೂ ವ್ಯಾಯಾಮ

ಆಹಾರ ಕ್ರಮ ಹಾಗೂ ವ್ಯಾಯಾಮ

ಮಕ್ಕಳಿಗೆ ಆರೋಗ್ಯಕರ ಆಹಾರ ನೀಡಿ. ಅವರಿಗೆ ಬಾಯಿಗೆ ರುಚಿಯಾದ ಆಹಾರ ಅಂದರೆ ಪಿಜ್ಜಾ, ಚಾಕ್ಲೆಟ್, ಬರ್ಗರ್ ಅಂತ ನೀಡುವ ಬದಲಿಗೆ ಆರೋಗ್ಯಕರ ಆಹಾರ ನೀಡಿ. ಇದು ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ.

ಅಲ್ಲದೆ ಕೊರೊನಾ ಸಮಯದಲ್ಲಿ ಮಕ್ಕಳು ಮನೆಯೊಳಗೇ ಇರುವುದರಿಂದ ದೈಹಿಕ ವ್ಯಾಯಾಮ ಕಡಿಮೆ ಇರುತ್ತದೆ. ಅವರಿಗೆ ಮನೆಯೊಳಗೆ ವ್ಯಾಯಾಮ ಮಾಡಿಸಿ, ಅವರಿಗೆ ಖುಷಿ ನೀಡುವ ಆಟ ಆಡಿಸಿ.

ನಗರದ ಪ್ರದೇಶದಲ್ಲಿ ಮನೆಯಲ್ಲಿ ಸಾಮಾನು ತುಂಬಿ ಜಾಗವಿಲ್ಲದಿದ್ದರೆ ಅವುಗಳನ್ನು ತೆಗೆದು ಇಟ್ಟು ಮಕ್ಕಳಿಗೆ ಆಡಲು ಸ್ಥಳಾವಕಾಶ ಮಾಡಿ ಕೊಡಿ.

ಮನೆಯನ್ನು ಸ್ವಚ್ಛವಾಗಿಡಿ

ಮನೆಯನ್ನು ಸ್ವಚ್ಛವಾಗಿಡಿ

ಮನೆಯನ್ನು ಒರೆಸಿ ಸ್ವಚ್ಛವಾಗಿಡಿ. ಮಕ್ಕಳು ಆಗಾಗ ಮುಟ್ಟುವಂಥ ವಸ್ತುಗಳನ್ನು ಸ್ವಚ್ಛ ಮಾಡಿ ಇಡಿ. ಹೊರಗಡೆಯಿಂದ ತರುವ ವಸ್ತುಗಳನ್ನು ತೊಳೆದು ಅವರ ಕೈಯಲ್ಲಿ ನೀಡಿ. ಅಲ್ಲದೆ ಹುಷಾರು ಇಲ್ಲದವರ ಬಳಿ ಹೋಗಲು ಬಿಡಬೇಡಿ.

ಪೋಷಕರಿಗೆ ಕೆಮ್ಮು, ಜ್ವರ ಕಾಣಿಸಿಕೊಂಡರೆ ಮಕ್ಕಳಿಂದ ಪ್ರತ್ಯೇಕವಾಗಿರಿ.

5 ವರ್ಷಕ್ಕಿಂತ ದೊಡ್ಡ ಮಕ್ಕಳಾದರೆ ಕೋವಿಡ್ 19 ಬಗ್ಗೆ ಅರಿವು ಮೂಡಿಸಿ

5 ವರ್ಷಕ್ಕಿಂತ ದೊಡ್ಡ ಮಕ್ಕಳಾದರೆ ಕೋವಿಡ್ 19 ಬಗ್ಗೆ ಅರಿವು ಮೂಡಿಸಿ

ಮಕ್ಕಳಿಗೆ ಕೋವಿಡ್‌ 19 ರೋಗ ಹೇಗೆ ಹರಡುತ್ತದೆ, ಇದನ್ನು ತಡೆಗಟ್ಟಲು ಏನು ಮಾಡಬೇಕು ಎಂಬುವುದರ ಬಗ್ಗೆ ಅರಿವು ಮೂಡಿಸಿ. ಅವರು ಬೇಗನೆ ಅರಿತುಕೊಳ್ಳುತ್ತಾರೆ.

ಮಕ್ಕಳಲ್ಲಿ ಕೆಮ್ಮು, ಶೀತ, ಜ್ವರ ಕಾಣಿಸಿದರೆ

ಮಕ್ಕಳಲ್ಲಿ ಕೆಮ್ಮು, ಶೀತ, ಜ್ವರ ಕಾಣಿಸಿದರೆ

ಮಕ್ಕಳಲ್ಲಿ ಕೆಮ್ಮು, ಶೀತ, ಜ್ವರ ಕಾಣಿಸಿದರೆ ನಿರ್ಲಕ್ಷ್ಯ ಮಾಢಬೇಡಿ, ಕೂಡಲೇ ಮಕ್ಕಳ ತಜ್ಞರಿಗೆ ಕರೆ ಮಾಡಿ ಅವರ ಸಲಹೆ ಪಡೆಯಿರಿ. ಚಿಕಿತ್ಸೆ ಪಡೆಯಲು ತಡ ಮಾಡಬೇಡಿ.

ಕೊನೆಯದಾಗಿ

ಕೋವಿಡ್ 19 ವಿಚಾರದಲ್ಲಿ Precaution is better than cure ಅಂದ್ರೆ ಕಾಯಿಲೆ ಬರುವುದಕ್ಕೆ ಮುನ್ನವೇ ಅದನ್ನು ತಡೆಗಟ್ಟುವ ಮಾರ್ಗಗಳನ್ನು ಅನುಸರಿಸಬೇಕಾಗಿದೆ. ಮುನ್ನೆಚ್ಚರಿಕೆ ವಹಿಸಿದರೆ ಖಂಡಿತ ಕೊರೊನಾದಿಂದ ಪಾರಾಗಬಹುದು.

English summary

Covid-19 Third Wave Could Be Dangerous For Kids: Pediatrician Suggests Steps To Safeguard Them

Covid-19 Third Wave Could Be Dangerous For Kids: Pediatrician Suggests Steps To Safeguard Them.
Story first published: Tuesday, May 18, 2021, 16:40 [IST]
X
Desktop Bottom Promotion