For Quick Alerts
ALLOW NOTIFICATIONS  
For Daily Alerts

ಕೋವಿಡ್ 19 ಬಾಧಿತ ಮಕ್ಕಳಲ್ಲಿ ಕಂಡು ಬರುತ್ತಿದೆ ಜೀವಕ್ಕೆ ಅಪಾಯಕಾರಿಯಾದ PMIS ಸಿಂಡ್ರೋಮ್

|

ಕೋವಿಡ್ 19 ಪ್ರಕರಣ ದೇಶದಲ್ಲಿ ಹೆಚ್ಚಾಗಿದ್ದು, ಮಕ್ಕಳನ್ನು ಹಾಗೂ 60 ವರ್ಷ ಮೇಲ್ಪಟ್ಟವರನ್ನು ತುಂಬಾ ಜೋಪಾನವಾಗಿ ನೋಡಿಕೊಳ್ಳಬೇಕಾಗಿದೆ. ಇದರ ಜೊತೆಗೆ ಕೋವಿಡ್‌ 19 ಬಾಧಿತ ಮಕ್ಕಳಿಗೆ ಚಿಕಿತ್ಸೆ ನೀಡಿದ ಮುಂಬೈ ಆಸ್ಪತ್ರೆ ಮತ್ತೊಂದು ಆಘಾತಕಾರಿ ವಿಚಾರ ಹೇಳಿದೆ. ಕೋವಿಡ್ 19 ಬಾಧಿತ ಮಕ್ಕಳಲ್ಲಿ ಅಪಾಯಕಾರಿಯಾದ ಪೀಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್ (PMIS) ಕಾಯಿಲೆ ಕಂಡು ಬರುತ್ತಿದೆ ಎಂದು ಹೇಳಿದೆ.

COVID-19 & PMIS: Everything You Need To Know About The Syndrome

ಮುಂಬೈ ಆಸ್ಪತ್ರೆಯ ವರದಿ ಪ್ರಕಾರ ಕೋವಿಡ್‌ 19 ಬಾಧಿಸಿ ಚಿಕಿತ್ಸೆ ಒಳಪಡುವ 100 ಮಕ್ಕಳಲ್ಲಿ 18 ಮಕ್ಕಳಲ್ಲಿ ಪಿಎಂಐಎಸ್‌ ಸಿಂಡ್ರೋಮ್ ಕಾಣಿಸಿಕೊಂಡಿದ್ದು ದುರಂತವೆಂದರೆ ಅದರಲ್ಲಿ ಒಂದು ಮಗು ಮರಣವನ್ನಪ್ಪಿದೆ ಎಂದು ತಿಳಿಸಿದೆ.
ಪೋಷಕರೇ ಎಚ್ಚರ

ಪೋಷಕರೇ ಎಚ್ಚರ

ವಿಶ್ವದ ಇತರ ಕಡೆಯೂ ಮಕ್ಕಳಲ್ಲಿ ಪಿಎಂಐಎಸ್ ಸಿಂಡ್ರೋಮ್ ಕಾಣಿಸಿಕೊಳ್ಳುತ್ತಿದ್ದು ಪೋಷಕರು ಈ ಅಪರೂಪದ ಹಾಗೂ ಅಪಾಯಕಾರಿ ಸಿಂಡ್ರೋಮ್‌ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇದುವರೆಗೆ ಕೋವಿಡ್ 19 ಮಕ್ಕಳು ಹಾಗೂ ಹದಿಹರೆಯದ ಪ್ರಾಯದವರಲ್ಲಿ ಗಂಭೀರ ಪರಿಣಾಮ ಬೀರಲ್ಲ ಎಂದು ಹೇಳಲಾಗುತ್ತಿತ್ತು. ಕೋವಿಡ್ 19 ಬಾಧಿತರ ಸಂಖ್ಯೆ ನೋಡಿದರೆ ಅದರಲ್ಲಿ ವಯಸ್ಕರೇ ಅಧಿಕ. ಕೆಲ ಮಕ್ಕಳಲ್ಲಿ ಕೋವಿಡ್‌ 19 ಕಾಣಿಸಿಕೊಂಡಿದ್ದರೂ ಸಾವಿನ ಸಂಖ್ಯೆ ತುಂಬಾ ಕಡಿಮೆ. ಆದರೆ ಮುಂಬೈ ಆಸ್ಪತ್ರೆಯ ವರದಿ ಪೋಷಕರಿಗೆ ಎಚ್ಚರಿಕೆಯನ್ನು ನೀಡಿದೆ.

ಪೀಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್

ಪೀಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್

ಪೀಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್ ಎಂದರೇನು? ಕೋವಿಡ್‌ 19 ಹಾಗೂ ಈ ಸಿಂಡ್ರೋಮ್‌ಗೆ ಇರುವ ಲಿಂಕ್ ಏನು?

ಪೀಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್ ಎಂದರೆ ಮಕ್ಕಳ ಅಂಗಾಂಗಗಳು ಹಾಗೂ ರಕ್ತನಾಳಗಳನ್ನು ಹಾನಿ ಮಾಡುವುದು. ಈ ಕಾಯಿಲೆ ಬಂದರೆ ರಕ್ತನಾಳಗಳಲ್ಲಿ ಉರಿಯೂತ ಕಂಡು ಬರುವುದು. ಆದರೆ ಇದಕ್ಕೆ ಕಾರಣವೇನು ಎಂಬುವುದು ಮಾತ್ರ ಇನ್ನೂ ನಿಗೂಢ.

ಪಿಎಂಐಎಸ್ ಹಾಗೂ ಕೋವಿಡ್ 19

ಪಿಎಂಐಎಸ್ ಹಾಗೂ ಕೋವಿಡ್ 19

ಕೆಲವರಿಗೆ ಇದು ವಂಶವಾಹಿ ಸಮಸ್ಯೆಯಾಗಿದೆ. ಇದರ ಲಕ್ಷಣಗಳು ಕೂಡ ಕವಾಸ್ಕಿ ಕಾಯಿಲೆಯ ಲಕ್ಷಣಗಳನ್ನು ಹೋಲುತ್ತದೆ.

ಕೋವಿಡ್‌ 19 ಎನ್ನುವುದು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದೆ, ಪೀಡಿಯಾಟ್ರಿಕ್ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್ ಅಂಗಾಂಗಗಳು ಹಾಗೂ ರಕ್ತನಾಳಗಳನ್ನು ಹಾನಿ ಮಾಡುತ್ತದೆ. ಇದು ಹೃದಯಕ್ಕೆ ಹಾನಿಯುಂಟು ಮಾಡಿ, ಚಿಕಿತ್ಸೆ ಸಿಗದೇ ಇದ್ದರೆ ಸಾವು ಕೂಡ ಸಂಭವಿಸಬಹುದು.

ಕೋವಿಡ್‌ 19 ಬಾಧಿಸಿದ ಮಕ್ಕಳಲ್ಲಿ ಮೂರರಿಂದ ನಾಲ್ಕು ವಾರಗಳಲ್ಲಿ ಪಿಎಂಐಎಸ್ ಲಕ್ಷಣ ಕಂಡು ಬರುವುದು.

 ಪಿಎಂಐಎಸ್ ಸಿಂಡ್ರೋಮ್‌ ಲಕ್ಷಣಗಳೇನು?

ಪಿಎಂಐಎಸ್ ಸಿಂಡ್ರೋಮ್‌ ಲಕ್ಷಣಗಳೇನು?

ಪಿಎಂಐಎಸ್‌ ಸಿಂಡ್ರೋಮ್‌ನ ಸಾಮಾನ್ಯ ಲಕ್ಷಣಗಳೆಂದರೆ

  • ತುಂಬಾ ಕಿಬ್ಬೊಟ್ಟೆ ನೋವು, ವಾಂತಿ, ಬೇಧಿ
  • ಕಣ್ಣುಗಳು ಕೆಂಪಾಗುವುದು
  • ತ್ವಚೆಯಲ್ಲಿ ಅಲರ್ಜಿ
  • 5 ದಿನಕ್ಕಿಂತ ಹೆಚ್ಚು ದಿನ ಜ್ವರದಿಂದ ಬಳಲುವುದು
  • ತುಟಿ, ನಾಲಗೆಯಲ್ಲಿ ಕೆಂಪು ಗುಳ್ಳೆಗಳು
  • ತ್ವಚೆ ಬಣ್ಣ ಬದಲಾಗುವುದು
  • ಆಹಾರ ಸೇವನೆಗೆ ಕಷ್ಟ ಪಡುವುದು
  • ಉಸಿರಾಟಕ್ಕೆ ತೊಂದರೆ
  • ಎದೆನೋವು
  • ವೇಗವಾದೆದೆ ಬಡಿತ
  • ಗೊಂದಲ
  • ಕೈ, ಕಾಲುಗಳಲ್ಲಿ ಊತ ಮತ್ತು ಕೆಂಪು ಗುಳ್ಳೆಗಳು
  • ಪಿಎಂಐಎಸ್ ಪತ್ತೆ ಮಾಡುವುದು ಹೇಗೆ?

    ಪಿಎಂಐಎಸ್ ಪತ್ತೆ ಮಾಡುವುದು ಹೇಗೆ?

    ಅಲ್ಟ್ರಾಸೌಂಡ್ ಮಾಡಿ ಮಗುವಿಗೆ ಏನು ತೊಂದರೆಯಾಗಿದೆ ಎಂದು ಕಂಡು ಹಿಡಿಯಲಾಗುವುದು. ಪಿಎಂಐಎಸ್ ಲಕ್ಷಣಗಳು ಕಂಡು ಬಂದರೆ ಮನೆಯಲ್ಲಿಯೇ ಚಿಕಿತ್ಸೆ ಮಾಡುತ್ತಾ ಕೂರಬೇಡಿ, ಕೂಡಲೇ ಆಸ್ಪತ್ರೆಗೆ ದಾಖಲಿಸಬೇಕು. ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಾರೆ, ಈ ಕಾಯಿಲೆಯಲ್ಲಿ ತಡ ಮಾಡಿದಷ್ಟು ಅಪಾಯ ಅಧಿಕ.

    ಆದ್ದರಿಂದ ಮಕ್ಕಳಿಗೆ ಕೋವಿಡ್‌ 19 ತಗುಲಿದರೆ ಅವರು ಚೇತರಿಸಿಕೊಂಡು ಬಂದ ಬಳಿಕವೂ ಅವರ ಆರೋಗ್ಯದಲ್ಲಾಗುವ ಬದಲಾವಣೆ ಗಮನಿಸಿ. ಏನಾದರೂ ಪಿಎಂಐಎಸ್ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಿರಿ.

English summary

COVID-19 & PMIS: Everything You Need To Know About The Syndrome

A recent report from a hospital in Mumbai stated that children who have been admitted with the Covid-19 infection are developing a life-threatening syndrome called pediatric multisystem inflammatory syndrome (PMIS)
X
Desktop Bottom Promotion