For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ನೀಡಲು ಕೊವಾಕ್ಸಿನ್ ಲಸಿಕೆಗೆ ಮಾತ್ರ ಅನುಮತಿ: ಇದರ ಪರಿಣಾಮ ಹೇಗಿದೆ?

|

15-18 ವರ್ಷದ ಮಕ್ಕಳಿಗೆ ಕೋವಿಡ್‌ ಲಸಿಕೆಯನ್ನು ಸೋಮವಾರದಿಂದ ಕೊಡಲಾರಂಭಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯ ಆದಾರದ ಮೇಲೆ ಭಾರತ್‌ ಬಯೋಟೆಕ್‌ನ ಕೊವಾಕ್ಸಿನ್‌ ಲಸಿಕೆಯನ್ನಷ್ಟೇ ಮಕ್ಕಳಿಗೆ ನೀಡಲಾಗುತ್ತಿದೆ.

ತುರ್ತು ಸಂದರ್ಭದಲ್ಲಿ ಬಳಸಲು 15 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊವಾಕ್ಸಿನ್‌ ಲಸಿಕೆಯೊಂದೇ ಲಭ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. 2021 ಡಿಸೆಂಬರ್‌ 25ಕ್ಕೆ ಪ್ರಧಾನಿ ಮೋದಿ 15 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿದ್ದರು.

Covaxin COVID-19 Vaccine for Kids

ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿವೆ ಅದರಲ್ಲಿ ಶಾಲಾ-ಕಾಲೇಜುಗಳು ಶುರುವಾಗಿದೆ ಹೀಗಾಗಿ ಮಕ್ಕಳಿಗೆ ಕೋವಿಡ್‌ 19ನಿಂದ ಸುರಕ್ಷಿತ ನೀಡಲು ಕೇಂದ್ರ ಸರ್ಕಾರ ಮೊದಲಿಗೆ 15 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಈ ಪ್ರಾಯದವರು ಭಾರತದಲ್ಲಿ 7-8 ಕೋಟಿ ಇದ್ದಾರೆ.

ಮಕ್ಕಳಿಗೆ ನೀಡಲಾಗುತ್ತಿರುವ ಔಷಧಿಗಳಲ್ಲಿ ಕೊವಾಕ್ಸಿನ್ ಮಾತ್ರ ಏಕೆ ನೀಡಲಾಗುತ್ತಿದೆ, ಈ ವ್ಯಾಕ್ಸಿನ್‌ ಮಕ್ಕಳ ಮೇಲೆ ನಡೆಸಿದ ಕ್ಲಿನಿಕಲ್ ಟ್ರಯಲ್‌ ಏನು ಹೇಳಿದೆ ಎಂಬೆಲ್ಲಾ ಮಾಹಿತಿ ತಿಳಿಯೋಣ:

 ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ: ಕ್ಲಿನಿಕಲ್ ಟ್ರಯಲ್

ಮಕ್ಕಳಿಗೆ ಕೊವಾಕ್ಸಿನ್ ಲಸಿಕೆ: ಕ್ಲಿನಿಕಲ್ ಟ್ರಯಲ್

ಕೊವಾಕ್ಸಿನ್‌ ಅನ್ನು ಮಕ್ಕಳಿಗೆ ತುರ್ತು ಪರಿಸ್ಥಿತಿಯಲ್ಲಿ ನೀಡಲು DCGI (Drugs Controller General of India) ಅನುಮತಿ ನೀಡಿದೆ. CDSCOದ (Central Drugs Standard Control Organisation) ಎಕ್ಸ್ಪರ್ಟ್ ಕಮಿಟಿ ಶಿಫಾರಸ್ಸು ಮೇಲೆ ಕೊವಾಕ್ಸಿನ್ ಬಳಸಲು ಅನುಮತಿ ನೀಡಲಾಗಿದೆ.

ಭಾರತ್ ಬಯೋಟೆಕ್ 3 ಹಂತದ ಕ್ಲಿನಿಕಲ್‌ ಟ್ರಯಲ್‌ ನಡೆಸಿ ವರದಿಯನ್ನು ನೀಡಿತ್ತು. 2-18 ವರ್ಷದ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್‌ ಅನ್ನು ಆಗಸ್ಟ್‌ನಲ್ಲಿ ನಡೆಸಲಾಯಿತು. ಎಕ್ಸ್ಪರ್ಟ್ ಕಮಿಟಿ ಅದೇ ವಯಸ್ಸಿನವರ ಮೇಲೆ ಟ್ರಯಲ್ ನಡೆಸುವಂತೆ ಹೇಳಿತ್ತು. 2/3 ಹಂತದ ಟ್ರಯಲ್ ವರದಿ ಡಿಸೆಂಬರ್ 30, 2021ಕ್ಕೆ ಬಂತು. ಆಗ ಈ ಲಸಿಕೆ ಮಕ್ಕಳಿಗೆ ನೀಡಲು ಸುರಕ್ಷಿತವಾಗಿದೆ ಎಂದು ತಿಳಿದು ಬಂತು. ಈ ಟ್ರಯಲ್‌ನಲ್ಲಿ ಸ್ವಯಂಪ್ರೇರಿತ 2-18 ವರ್ಷದ ಮಕ್ಕಳು ಭಾಗವಹಿಸಿದ್ದರು.

2/3 ಕ್ಲಿನಿಕಲ್‌ ಟ್ರಯಲ್‌ನ ಮಹತ್ವದ ಅಂಶಗಳು

2/3 ಕ್ಲಿನಿಕಲ್‌ ಟ್ರಯಲ್‌ನ ಮಹತ್ವದ ಅಂಶಗಳು

* ಇದು ಓಪನ್‌ ಲೇಬಲ್ ಮಲ್ಟಿ ಸೆಂಟರ್‌ ಅಧ್ಯಯನವಾಗಿದೆ.

* ಈ ಟ್ರಯಲ್‌ ಅನ್ನು ಜೂನ್‌ 2021ರಿಂದ ಸೆಪ್ಟೆಂಬರ್ 2021ರವರೆಗೆ ನಡೆಸಲಾಯಿತು.

* ಇದರಲ್ಲಿ 525 ಸ್ವಯಂಪ್ರೇರಿತ ಮಕ್ಕಳು ಭಾಗವಹಿಸಿದ್ದರು. ಅವರನ್ನು ವಯಸ್ಸಿನ ಅಧಾರದ ಮೇಲೆ 3 ವಿಭಾಗಗಳಾಗಿ ವಿಂಗಡಿಸಿ ಅಧ್ಯಯನ ನಡೆಸಲಾಯಿತು.

* ಟ್ರಯಲ್‌ನಲ್ಲಿ ಮಕ್ಕಳಿಗೆ 05mL ಡೋಸ್‌ ನೀಡಲಾಗಿತ್ತು (ಇಷ್ಟೇ ಡೋಸ್‌ ಡೊಡ್ಡವರಿಗೂ ನೀಡಲಾಗುವುದು)

* ಲಸಿಕೆ ಪಡೆಯುವ ಮುನ್ನ ಮಕ್ಕಳ ರೋಗ ನಿರೋಧಕ ಶಕ್ತಿ, ಲಸಿಕೆ ಪಡೆದ ಬಳಿಕ ಕೊರೊನಾ ವಿರುದ್ಧ ಮಕ್ಕಳ ರೋಗ ನಿರೋಧಕ ಶಕ್ತಿ ಪರೀಕ್ಷೆ ಮಾಡಲಾಯಿತು.

 ಅಧ್ಯಯನದಿಂದ ತಿಳಿದು ಬಂದಿದ್ದೇನು?

ಅಧ್ಯಯನದಿಂದ ತಿಳಿದು ಬಂದಿದ್ದೇನು?

* ಲಸಿಕೆ ಬಳಿಕ ಮಕ್ಕಳಲ್ಲಿ ಪ್ರತಿಕಾಯಗಳ ಉತ್ಪತ್ತಿ ಹೆಚ್ಚಾದದ್ದು ತಿಳಿದು ಬಂತು, ಮಕ್ಕಳಲ್ಲಿ ದೊಡ್ಡವರಿಗಿಂತ ಹೆಚ್ಚಿನ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುವುದು ಎಂದು ತಿಳಿದು ಬಂದಿದೆ.

* ವೈರಸ್‌ ತಡೆಗಟ್ಟುವ ಸಾಮರ್ಥ್ಯ ಲಸಿಕೆ ಪಡೆದ ಮಕ್ಕಳಲ್ಲಿ ಲಸಿಕೆ ಪಡೆದ ದೊಡ್ಡವರಿಗಿಂತ 1.7 ಪಟ್ಟು ಹೆಚ್ಚಿದೆ.

* ಯಾವುದೇ ಅಡ್ಡಪರಿಣಾಮಗಳು ಉಂಟಾಗಿಲ್ಲ (ಸಾವು, ಪರಿಸ್ಥಿತಿ ಗಂಭೀರವಾಗುವುದು)

* ರಕ್ತ ಹೆಪ್ಪುಗಟ್ಟಿಲ್ಲ

* ಲಸಿಕೆ ಪಡೆದಾಗ ಚುಚ್ಚಿದ ಭಾಗದಲ್ಲಿ ನೋವು ಸ್ವಲ್ಪ ಊತ ಸಾಧಾರಣವಾದ ಅಡ್ಡಪರಿಣಾಮವಾಗಿದೆ.

English summary

Covaxin COVID-19 Vaccine for Kids: All you need to know in Kannada

Covaxin COVID-19 Vaccine for Kids: All you need to know in Kannada, Read on ...
Story first published: Monday, January 3, 2022, 20:07 [IST]
X
Desktop Bottom Promotion