For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕೊರೊನಾ: ನೀವು ಅರಿಯಲೇಬೇಕಾದ ಅಂಶಗಳಿವು

|

ಕೊರೊನಾ ಈ ಪದ ಕೇಳಿದರೆ ಸಾಕು ಯಾವಾಗಪ್ಪಾ ಈ ಪಿಡುಗು ಇಲ್ಲವಾಗುವುದು ಎಂದು ಪ್ರತಿಯೊಬ್ಬರಿಗೂ ಅನಿಸಲಾರಂಭಿಸುತ್ತದೆ. ಇದೀಗ ಡಿಸೆಂಬರ್‌ ಕೊಡರೊನಾ ಬಂದು ಒಂದು ವರ್ಷ ಆಗುತ್ತಾ ಬಂತು, ಮಕ್ಕಳು, ದೊಡ್ಡವರು ಎನ್ನದೆ ಎಲ್ಲರನ್ನೂ ವ್ಯಾಪಿಸುವ ಕೊರೊನಾದ ಲಕ್ಷಣಗಳು ಕೂಡ ಒಂದೇ ರೀತಿಯಿರದೆ ಭಿನ್ನವಾಗಿದೆ. ಕೆಲವರಲ್ಲಿ ಲಕ್ಷಣಗಳು ಕಂಡು ಬಂದರೆ ಇನ್ನು ಕೆಲವರಲ್ಲಿ ಏನೂ ಲಕ್ಷಣವಿರುವುದಿಲ್ಲ, ಆದರೂ ಕೊರೊನಾ ಇರುತ್ತದೆ.

ಮಕ್ಕಳಿಗೂ ವಯಸ್ಕರಿಗೂ ಬರುವ ಕೊರೊನಾ ಲಕ್ಷಣದಲ್ಲಿ ವ್ಯತ್ಯಾಸವಿದೆಯೇ ಎಂದು ಹೋಲಿಸಿದರೆ ಮಕ್ಕಳಲ್ಲಿ ಇದರ ರೋಗ ಲಕ್ಷಣಗಳು ಕಡಿಮೆ ಎಂದು ಹೇಳಲಾಗುತ್ತದೆ. ಅಮೆರಿಕಾದಲ್ಲಿ 19 ವರ್ಷ ಒಳಗಿನವರ ಮೇಲೆ ನಡೆದ ಅಧ್ಯಯನವು ಸಹ ಇದನ್ನೇ ಸಾರುತ್ತಿದೆ.

 ಈ ವಯಸ್ಸಿನ ಮಕ್ಕಳಲ್ಲಿ ಈ ಕೆಳಕಂಡ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:

ಈ ವಯಸ್ಸಿನ ಮಕ್ಕಳಲ್ಲಿ ಈ ಕೆಳಕಂಡ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:

  • ಜ್ವರ
  • ಮೂಗು ಸೋರುವಿಕೆ
  • ಕೆಮ್ಮು
  • ವಾಂತಿ
  • ಅತಿಸಾರ ಭೇದಿ
  • ಇದರ ಜೊತೆಗೆ ಕೆಲವು ಮಕ್ಕಳು ಮಲ್ಟಿಸಿಸ್ಟೆಂ ಇನ್‌ಫ್ಲೆಮ್ಮೆಟರಿ ಸಿಂಡ್ರೋಮ್ ಇನ್ ಚಿಲ್ಡ್ರನ್ (MIS-C) ಅಥವಾ ಪೀಡಿಯಾಟ್ರಿಕ್ ಮಲ್ಟಿಸಿಸ್ಟೆಂ ಇನ್‌ಫ್ಲೆಮ್ಮೆಟರಿ ಸಿಂಡ್ರೋಮ್ (PMIS) ಎಂಬ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವೈದ್ಯರು ಇದನ್ನು ಕೊರೋನಾ ಜೊತೆಗೆ ಲಿಂಕ್ ಮಾಡಿದ್ದಾರೆ, ಇನ್ನೂ ಕೆಲವರಿಗೆ ಇದು ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅಥವಾ ಕವಾಸಕಿ ರೋಗ ಇರಬಹುದೇ ಎಂಬ ಗೊಂದಲ ಮನೆ ಮಾಡಿದೆ. ಏಕೆಂದರೆ ಇದು ಸಹ ಮಕ್ಕಳ ರಕ್ತ ನಾಳಗಳಲ್ಲಿ ಇನ್‌ಫ್ಲೆಮ್ಮೇಶನ್ ಅನ್ನು ಉಂಟು ಮಾಡುತ್ತದೆ.

    ಎಚ್ಚರಿಕೆವಹಿಸಬೇಕಾದ ರೋಗ ಲಕ್ಷಣಗಳು

    ಎಚ್ಚರಿಕೆವಹಿಸಬೇಕಾದ ರೋಗ ಲಕ್ಷಣಗಳು

    ಗಂಭೀರವಾದ ರೋಗ ಲಕ್ಷಣಗಳು ಅಪರೂಪವಾಗಿ ಕಾಣಿಸಿಕೊಳ್ಳುತ್ತವೆ. ಆದರೂ ಈ ಕೆಳಕಂಡ ರೋಗ ಲಕ್ಷಣಗಳು ಕಾಣಿಸಿಕೊಂಡರೆ, ಮುನ್ನೆಚ್ಚರಿಕೆ ವಹಿಸಿ. ಅವು ಯಾವುವೆಂದರೆ:

    • ಉಸಿರಾಟದ ತೊಂದರೆ

    • ಮಲಮೂತ್ರ ವಿಸರ್ಜನೆಗೆ ತೊಂದರೆ

    • ತ್ವಚೆಯ ಬಣ್ಣ ಬದಲಾಗುವುದು, ಅಂದರೆ ತುಟಿ ಅಥವಾ ಮುಖ ನೀಲಿಯಾಗುವುದು

    • ಗೊಂದಲ ಅಥವಾ ನಿದ್ದೆಯಿಂದ ಏಳಲು ತೊಂದರೆ

    ಕಾಯಿಲೆ ಇರುವ ಮಕ್ಕಳಿಗೆ ಅಪಾಯ ಹೆಚ್ಚು

    ಕಾಯಿಲೆ ಇರುವ ಮಕ್ಕಳಿಗೆ ಅಪಾಯ ಹೆಚ್ಚು

    ಈಗಾಗಲೇ ಕಾಯಿಲೆ ಇರುವ ಮಕ್ಕಳಲ್ಲಿ ಕೊರೋನಾ ವೈರಸ್ ಅಪಾಯ ತುಂಬಾ ಹೆಚ್ಚಾಗಿರಬಹುದು. ಅವುಗಳು ಯಾವುವೆಂದರೆ:

    • ಅಸ್ತಮಾ

    • ಡಯಾಬಿಟಿಸ್

    • ಬ್ಲಡ್ ಡಿಸಾರ್ಡರ್‌ಗಳು

    • ಹೃದಯ ಅಥವಾ ಲಿವರ್ ಕಾಯಿಲೆ

    • ಡಯಾಲಿಸಿಸ್ ಅಗತ್ಯವಿರುವ ಮೂತ್ರಪಿಂಡದ ಕಾಯಿಲೆ

    • ರೋಗ ನಿರೋಧಕ ಶಕ್ತಿಯ ಕೊರತೆ

    ಈ ಕೊರೋನಾದಿಂದ ಮಕ್ಕಳನ್ನು ಕಾಪಾಡುವುದು ಹೇಗೆ

    ಈ ಕೊರೋನಾದಿಂದ ಮಕ್ಕಳನ್ನು ಕಾಪಾಡುವುದು ಹೇಗೆ

    • ಮಕ್ಕಳಿಗೆ ಸ್ವಚ್ಛತೆಯ ಪಾಠ ಮಾಡಿ, ಪದೇ ಪದೇ ಕೈತೊಳೆಯುವ ಮಹತ್ವವನ್ನು ತಿಳಿಸಿಕೊಡಿ. 60% ಆಲ್ಕೋಹಾಲ್ ಇರುವ ಸ್ಯಾನಿಟೈಸರ್ ಬಳಸಿ ಕೈತೊಳೆಯಲು ತಿಳಿಸಿ.

    • ಸಾಧ್ಯವಾದಷ್ಟು ಮನೆಯಲ್ಲಿಯೇ ಮಕ್ಕಳನ್ನು ಇರಿಸಿಕೊಳ್ಳಿ.

    • ಕಾಯಿಲೆ ಇರುವವರಿಂದ ಮಕ್ಕಳನ್ನು ದೂರ ಇರಿಸಿ

    • ಸಿನಿಮಾ, ಶಾಪಿಂಗ್ ಇತ್ಯಾದಿಗಳಿಂದ ಮಕ್ಕಳನ್ನು ದೂರ ಇರಿಸಿ.

    • ಮಕ್ಕಳು ಓಡಾಡುವ ಜಾಗಗಳಲ್ಲಿ, ಮನೆಯಲ್ಲೂ ಸಹ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಸ್ಯಾನಿಟೈಸ್ ಮಾಡಿದ ವಸ್ತುಗಳನ್ನು ಅವರಿಗೆ ಬಳಸಲು ನೀಡಿ.

    • ಟಿ.ವಿ ರಿಮೋಟ್, ಮೊಬೈಲ್, ಕಮೋಡ್ ಇತ್ಯಾದಿ ಹೆಚ್ಚು ಸ್ಪರ್ಶಿಸುವ ವಸ್ತುಗಳನ್ನು ದಿನ ನಿತ್ಯ ಸ್ಯಾನಿಟೈಸ್ ಮಾಡಿ

    • ಸೀನುವವರಿಂದ ಅಥವಾ ಕೆಮ್ಮುವವರಿಂದ ಮಕ್ಕಳನ್ನು ದೂರ ಇರಲು ತಿಳಿಸಿ. ಮಕ್ಕಳಿಗೇ ಸೀನು ಅಥವಾ ಕೆಮ್ಮು ಬಂದರೆ ಕೈ ಅಡ್ಡ ಇಡುವ ಬದಲಿಗೆ ಮೊಣಕೈಯನ್ನು ಅಡ್ಡ ಇಡಲು ತಿಳಿಸಿ.

    • ಹೊರಗೆ ಹೋಗುವಾಗ ತಪ್ಪದೆ ಮಾಸ್ಕ್ ಧರಿಸಲು ತಿಳಿಸಿ.

    ಮಕ್ಕಳಿಗೆ ಕೊರೋನಾ ಬಂದರೆ ಏನು ಮಾಡಬೇಕು?

    ಮಕ್ಕಳಿಗೆ ಕೊರೋನಾ ಬಂದರೆ ಏನು ಮಾಡಬೇಕು?

    ನಿಮ್ಮ ಮಕ್ಕಳಿಗೆ ಕೊರೋನಾ ಬಂದರೆ ಅಥವಾ ಕೊರೋನಾದ ರೋಗ ಲಕ್ಷಣಗಳು ಕಾಣಿಸಿಕೊಂಡರೆ, ಅವರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗುವ ಮುನ್ನ, ವೈದ್ಯರಿಗೆ ಕರೆ ಮಾಡಿ. ಅವರು ಏನು ಹೇಳುತ್ತಾರೆ ಎಂಬುದನ್ನು ಕೇಳಿ, ಅದರಂತೆ ನಡೆದುಕೊಳ್ಳಿ.

    ಮಗುವಿನ ರೋಗ ಲಕ್ಷಣವನ್ನು ಆಧರಿಸಿ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಳ್ಳಲು ಅವರು ಸೂಚಿಸಬಹುದು. ಕೆಲವೊಮ್ಮೆ ಅಸ್ಪಿರಿನ್, ಇಬುರೊಫೆನ್ ಅಥವಾ ನ್ಯಾಪ್ರೊಕ್ಸೆನ್‌ನಂತಹ ನೋವು ನಿವಾರಕಗಳನ್ನು ವೈದ್ಯರು ಸೂಚಿಸಬಹುದು. ಆದರೆ ಯಾವ ಔಷಧಿ ನೀಡಬೇಕು ಎಂದು ವೈದ್ಯರು ನಿರ್ಧರಿಸಲಿ ನೀವು ನಿರ್ಧರಿಸುವುದು ಬೇಡ.

    ಮನೆಯಲ್ಲಿರುವವರು ಕಾಯಿಲೆ ಬೀಳದಂತೆ ಕಾಪಾಡಲು:

    ಮನೆಯಲ್ಲಿರುವವರು ಕಾಯಿಲೆ ಬೀಳದಂತೆ ಕಾಪಾಡಲು:

    * ಮನೆಯವರನ್ನು ಮಗುವಿನ ಕೊಠಡಿಯಿಂದ ದೂರ ಇರಿಸಿ. ಮಗು ಉಪಯೋಗಿಸುವ ಬಾತ್‌ರೂಮ್ ಅನ್ನು ಮನೆಯವರು ಬಳಸುವುದು ಬೇಡ. ಮಗು ಮಾಸ್ಕ್ ಧರಿಸಿ ಓಡಾಡುವುದು ಎಲ್ಲರಿಗೂ ಒಳ್ಳೆಯದು. ಮಗು ಸಣ್ಣ ವಯಸ್ಸಿನದಾಗಿದ್ದು, ಮಾಸ್ಕ್ ಧರಿಸಲು ಆಗದಿದ್ದರೆ, ಮನೆಯವರು ಸುತ್ತ ಮುತ್ತಲಿನವರು ಮಾಸ್ಕ್ ಧರಿಸುವುದು ಅಗತ್ಯ. ಮಕ್ಕಳಿಗೆ ಪ್ರತ್ಯೇಕವಾಗಿ ಊಟ ನೀಡಿ. ಲೋಟ, ಚೊಂಬು ಮತ್ತು ತಟ್ಟೆಗಳನ್ನು ಹಂಚಿಕೊಳ್ಳಬೇಡಿ.

    ಸಲಹೆ:

    ಸಲಹೆ:

    ಮಕ್ಕಳ ರೋಗ ಲಕ್ಷಣಗಳ ಮೇಲೆ ನಿಗಾ ಇರಿಸಿ. ಉಸಿರಾಟದ ತೊಂದರೆ, ಎದೆ ನೋವು ಅಥವಾ ಒತ್ತಡ ಅಥವಾ ಮಗು ಗೊಂದಲಕ್ಕೆ ಒಳಗಾದರೆ, ವೈದ್ಯರಿಗೆ ಕರೆ ಮಾಡಿ.

    ಒಮ್ಮೆ ಮಗುವಿಗೆ ಕೊರೋನಾ ರೋಗ ಲಕ್ಷಣ ಕಾಣಿಸಿಕೊಂಡ ಮೇಲೆ, ಮೂರು ದಿನಗಳ ಕಾಲ ಯಾವುದೇ ರೀತಿಯ ಜ್ವರ ಅಥವಾ ಉಷ್ಣಾಂಶ ಹೆಚ್ಚಾಗುವ ಲಕ್ಷಣ ಕಾಣಿಸಿಕೊಳ್ಳದಿದ್ದರೆ ಆಗ ನೀವು ಮಗುವಿನ ಜೊತೆಗೆ ಬೆರೆಯಬಹುದು. ಮಕ್ಕಳಲ್ಲಿ ರೋಗ ಲಕ್ಷಣಗಳು ಕಡಿಮೆಯಾಗಲೂ ಕನಿಷ್ಠ ಪಕ್ಷ 7 ದಿನ ಬೇಕಾಗಬಹುದು. ಅಲ್ಲಿಯವರೆಗೆ ಮಗುವಿಗೆ ಅಗತ್ಯವಾದ ವಿಶ್ರಾಂತಿಯನ್ನು ನೀಡಿ. ಆರೋಗ್ಯಕರ ಆಹಾರವನ್ನು ಸೇವಿಸಲು ನೀಡಿ.

English summary

Coronavirus In Children: What You Need To Know About

Coronavirus In Children, what you need to know read on,
X
Desktop Bottom Promotion