For Quick Alerts
ALLOW NOTIFICATIONS  
For Daily Alerts

ಕೋವಿಡ್‌ನಿಂದ ಚೇತರಿಸಿದ ಕುಟುಂಬದ ಮಕ್ಕಳಲ್ಲಿ ಕಂಡು ಬರುತ್ತಿದೆ MIS ಅಪಾಯಕಾರಿ ಕಾಯಿಲೆ, ಏನಿದರ ಲಕ್ಷಣಗಳು?

|

ಕೊರೊನಾದ 2ನೇ ಅಲೆ ಇನ್ನೂ ಕಡಿಮೆಯಾಗಿಲ್ಲ, ಎರಡನೇ ಅಲೆಯಲ್ಲಿ ಸಮಧಾನಕರ ಸಂಗತಿಯೆಂದರೆ ಮಕ್ಕಳಿಗೆ ಅಷ್ಟೇನು ಸೋಂಕು ತಗುಲಿಲ್ಲ, ಆದರೆ ಇದೀಗ ಮಕ್ಕಳ ವಿಷಯದಲ್ಲಿ ಒಂದು ಆತಂಕ ಎದುರಾಗಿದೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದ ಕುಟುಂಬದ ಮಕ್ಕಳಲ್ಲಿ MIS ಸಮಸ್ಯೆ ಅಂದ್ರೆ ಮಲ್ಟಿಸಿಸ್ಟಮ್ ಇನ್‌ಫ್ಲೇಮಟರಿ ಸಿಂಡ್ರೋಮ್‌ ಕಂಡು ಬರುತ್ತಿದೆ.

ಮಹಾರಾಷ್ಟ್ರದಲ್ಲಿ ಈ ಕೇಸ್‌ಗಳು ಪತ್ತೆಯಾಗಿದ್ದು ಇಂಡಿಯನ್‌ ಮೆಡಿಕಲ್‌ ಅಸೋಷಿಯೇಷನ್‌ನ ಮಕ್ಕಳ ತಜ್ಞರಾದ ಡಾ. ಸಂಜೀವ್‌ ಜೋಶಿ MIS ಸಮಸ್ಯೆ 2-12 ವರ್ಷ ಪ್ರಾಯದ 6 ಮಕ್ಕಳಲ್ಲಿ ಕಂಡು ಬಂದಿರುವುದಾಗಿ ಹೇಳಿದ್ದಾರೆ.

ಆದ್ದರಿಂದ ಕೋವಿಡ್‌ನಿಂದ ಗುಣಮುಖರಾದ ಪೋಷಕರು ಮಕ್ಕಳಲ್ಲಿ MIS ಲಕ್ಷಣಗಳು ಕಂಡು ಬರುತ್ತಿದೆಯೇ ಎಂದು ಗಮನ ಇಡುವಂತೆ ಸೂಚಿಸಲಾಗಿದೆ.

MIS ಲಕ್ಷಣಗಳೇನು?

MIS ಲಕ್ಷಣಗಳೇನು?

ಕವಾಸಕಿ ಕಾಯಿಲೆಯ ಲಕ್ಷಣಗಳೇ ಇದರಲ್ಲಿಯೂ ಕಂಡು ಬರುತ್ತಿದೆ. ಮಕ್ಕಳಲ್ಲಿ ಉರಿಯೂತದ ಸಮಸ್ಯೆ ಕಂಡು ಬರುತ್ತಿದೆ. ಜೊತೆಗೆ ಈ ಲಕಗ್ಷಣಗಳೂ ಕಂಡು ಬರುವುದು

* ಜ್ವರ

* ಉಸಿರಾಟದಲ್ಲಿ ತೊಂದರೆ

* ಹೊಟ್ಟೆ ನೋವು

* ತ್ವಚೆ ಬಣ್ಣದಲ್ಲಿ ವ್ಯತ್ಯಾಸ

* ಉಗುರಿನ ಬಣ್ಣದಲ್ಲಿ ವ್ಯತ್ಯಾಸ

* ಆದರೆ ಕೊರೊನಾ ಪರೀಕ್ಷೆ ಮಾಡಿದಾಗ ನೆಗೆಟಿವ್‌ ಬರುತ್ತದೆ.

ಇತರ ಲಕ್ಷಣಗಳು

ಇತರ ಲಕ್ಷಣಗಳು

ವಾಂತಿ, ಬೇಧಿ

ತುಂಬಾ ಸುಸ್ತು

ಜೋರಾದ ಎದೆ ಬಡಿತ

ಕಣ್ಣುಗಳು ಕಂಪಾಗುವುದು

ತುಟಿ ಮತ್ತು ನಾಲಗೆಯಲ್ಲಿ ಊತ

ಕಾಲು, ಪಾದಗಳಲ್ಲಿ ಊತ

ತಲೆನೋವು

ಈ ಲಕ್ಷಣಗಳು ಬಂದ್ರೆ ಎಚ್ಚರಿಕೆ

ಈ ಲಕ್ಷಣಗಳು ಬಂದ್ರೆ ಎಚ್ಚರಿಕೆ

* ತುಂಬಾ ಹೊಟ್ಟೆ ನೋವು

* ಉಸಿರಾಟದಲ್ಲಿ ತೊಂದರೆ

* ಬಿಳುಚಿದ ಅಥವಾ ನೀಲಿ ಬಣ್ಣದ ತುಟಿ

* ಗೊಂದಲ

* ಎದ್ದೇಳಲು ಸಾಧ್ಯವಾಗದಿರುವುದು

ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತುರ್ತು ಚಿಕಿತ್ಸೆ ನೀಡಬೇಕು.

ಕಾರಣಗಳು

ಕಾರಣಗಳು

MISಗೆ ನಿಖರ ಕಾರಣವೇನೆಂದು ವೈದ್ಯರಿಗೆ ಗೊತ್ತಿಲ್ಲ... ಅತ್ಯಧಿಕ ಪ್ರತಿರೋಧಕ ಪ್ರತಿಕ್ರಿಯೆಯಿಂದಾಗಿ ಈ ರೀತಿಯಾಗುವುದು, MIS ಇರುವ ಮಕ್ಕಳಲ್ಲಿ ಕೋವಿಡ್‌ ಆ್ಯಂಟಿಬಾಡೀಸ್‌ ಕಂಡು ಬಂದಿದೆ.

ಅಪಾಯವೇನು?

ಅಪಾಯವೇನು?

ಈ ಲಕ್ಷಣಗಳನ್ನು ಪ್ರಾರಂಭದ್ಲಿಯೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಬೇಕು, ಇಲ್ಲದಿದ್ದರೆ ಪರಿಸ್ಥಿತಿ ಗಂಭೀರವಾಗುವುದು. ಅಲ್ಲದೆ ಮಕ್ಕಳ ಹೃದಯ, ಕಿಡ್ನಿ, ಶ್ವಾಸಕೋಶಕ್ಕೆ ಶಾಶ್ವತ ಹಾನಿಯುಂಟಾಗಬಹುದು, ಇದರಿಂದ ಸಾವು ಕೂಡ ಸಂಭವಿಸಬಹುದು.

ಆದ್ದರಿಂದ ಪೋಷಕರು ಮಕ್ಕಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ತಡೆ ಮಾಡದೆ ಚಿಕಿತ್ಸೆ ಕೊಡಿಸಬೇಕು.

English summary

Children Of COVID-Recovered Families Beginning To Suffer From MIS: Experts

Children of COVID-Recovered Families Beginning to Suffer From MIS: Experts, raed on...
X
Desktop Bottom Promotion