For Quick Alerts
ALLOW NOTIFICATIONS  
For Daily Alerts

ಶಾಲಾ ಮಕ್ಕಳು ದೇಹ ತೂಕದ ಶೇ.10 ಕ್ಕಿಂತ ಹೆಚ್ಚು ಬ್ಯಾಗ್ ಹಾಕಬಾರದು

|

ಶಾಲೆಗೆ ಹೋಗುವಂತಹ ಮಕ್ಕಳ ಬೆನ್ನಿನ ಮೇಲೆ ಇರುವಂತಹ ಬ್ಯಾಗ್ ನ ಭಾರವನ್ನು ನೋಡಿದರೆ ನಮಗೆ ಅಚ್ಚರಿಯಾಗುತ್ತದೆ. ಇಷ್ಟು ಸಣ್ಣ ಪ್ರಾಯದಲ್ಲಿ ಇಷ್ಟೊಂದು ಭಾರ ಹೊತ್ತೊಕೊಂಡು ಸಾಗುವ ಮಕ್ಕಳ ಬೆನ್ನು ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಯಾವುದಾದರೂ ಸಮಸ್ಯೆಗೆ ಒಳಗಾಗುವುದು ನಿಶ್ಚಿತ.

ಮಕ್ಕಳ ಬ್ಯಾಗ್ ನ ಭಾರವನ್ನು ಕಡಿಮೆ ಮಾಡಿಕೊಳ್ಳಲು ಎಚ್ಚೆತ್ತುಕೊಂಡಿರುವಂತಹ ಸರ್ಕಾರವು ಈಗ ಬ್ಯಾಗ್ ನ ಭಾರವನ್ನು ಇಳಿಸಲು ನಿರ್ಧಾರ ಮಾಡಿದೆ. ಮಕ್ಕಳ ಬ್ಯಾಗ್ ನ ಭಾರವು ಮಕ್ಕಳ ದೇಹ ತೂಕದ ಶೇ.10ಕ್ಕಿಂತ ಹೆಚ್ಚು ಇರಬಾರದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಟ್ರಾಲಿ ಬಳಸುವ ಮಕ್ಕಳು ಶೇ.20ರಷ್ಟು ಭಾರ ಸಾಗಿಸಬಹುದು ಎಂದು ಇತ್ತೀಚೆಗೆ ಜರ್ನಲ್ ಆಫ್ ಅಪ್ಲೈಡ್ ಇರ್ಗೊನೊಮಿಕ್ಸ್ ನಲ್ಲಿ ಹೇಳಿದೆ.

ಸಾಮಾನ್ಯ ಶಾಲಾ ಬ್ಯಾಗ್ ಗಳ ಮೇಲೆ ಮಾತ್ರ ಭಾರದ ಲೆಕ್ಕಾಚಾರವನ್ನು ಇಂದಿನವರೆಗೆ ಹಾಕಲಾಗುತ್ತಲಿತ್ತು. ಯಾಕೆಂದರೆ ಇದು ವಿಶ್ವದೆಲ್ಲೆಡೆಯಲ್ಲಿ ಬಳಸುವಂತಹ ವಿಧಾನವಾಗಿದೆ. ಅದಾಗ್ಯೂ, ಸ್ಪೇನ್ ನಲ್ಲಿ ಶೇ. 40ಕ್ಕಿಂತಲೂ ಹೆಚ್ಚಿನ ಮಕ್ಕಳು ಟ್ರಾಲಿ ಮೂಲಕ ಶಾಲಾ ಬ್ಯಾಗ್ ಕೊಂಡೊಯ್ಯುವರು. ಇಂತಹ ಬ್ಯಾಗ್ ಗೆ ಇದುವರೆಗೆ ಯಾವುದೇ ಸಲಹೆ ನೀಡಲಾಗಿರಲಿಲ್ಲ.

ಸುಮಾರು 49 ಪ್ರಾಥಮಿಕ ಶಾಲಾ ಮಕ್ಕಳನ್ನು ಈ ಅಧ್ಯಯನಕ್ಕಾಗಿ ಒಳಪಡಿಸಲಾಯಿತು. ಬ್ಯಾಗ್ ಹಾಕಿಕೊಂಡ ವೇಳೆ ಮಕ್ಕಳ ಚಲನಶಾಸ್ತ್ರದ ಅಧ್ಯಯನ ಮಾಡಲಾಯಿತು. ಮೊದಲಿಗೆ ಅವರು ಯಾವುದೇ ಬ್ಯಾಗ್ ಹಾಕದೆ ಹಾಗೆ ನಡೆದಾಡುವುದು ಮತ್ತು ಎರಡನೇಯದಾಗಿ ಬ್ಯಾಗ್ ಹಾಕಿಕೊಂಡು ನಡೆಯುವುದನ್ನು ವಿಶ್ಲೇಷಣೆ ಮಾಡಲಾಯಿತು. ಇದರ ಬಳಿಕ ತಮ್ಮ ದೇಹ ತೂಕದ ಶೇ.10, ಶೇ.15 ಮತ್ತು ಶೇ.20ರಷ್ಟು ಇರುವಂತಹ ಬ್ಯಾಗ್ ಟ್ರಾಲಿಯನ್ನು ಎಳೆಯುವುದನ್ನು ವಿಶ್ಲೇಷಿಸಲಾಯಿತು.

ವಿಶ್ಲೇಷಣೆಗಾಗಿ ತ್ರಿ ಡಿಮೆನಿಷನ್ ಆಪ್ಟಿಕಲ್ ಮೋಷನ್ ಕ್ಯಾಪ್ಚರ್ ಸಿಸ್ಟಮ್ ನ್ನು ಬಳಕೆ ಮಾಡಲಾಯಿತು. ಇದನ್ನು ಅನಿಮೇಷನ್ ಸಿನಿಮಾಗಳು ಮತ್ತು ವಿಡಿಯೋ ಗೇಮ್ ಗಳಲ್ಲಿ ಬಳಕೆ ಮಾಡಲಾಗುತ್ತದೆ. ಚಲನಶಾಸ್ತ್ರದ ವಕ್ರಾಕೃತಿಗಳನ್ನು ವಿಶ್ಲೇಷಿಸಲು ಸಂಖ್ಯಾಶಾಸ್ತ್ರೀಯ ತಂತ್ರಗಳನ್ನು ಬಳಸಿಕೊಂಡು ಈ ಸಂಶೋಧನೆಯನ್ನು ಮಾಡಲಾಗಿದೆ.

ಅಧ್ಯಯನಗಳು ಕಂಡುಕೊಂಡಿರುವಂತಹ ವಿಚಾರವೆಂದರೆ ಬೆನ್ನಿಗೆ ಬ್ಯಾಗ್ ಹಾಕಿಕೊಂಡ ವೇಳೆ ಕೈಕಾಲುಗಳಲ್ಲಿ ಇದು ಎಚ್ಚರಿಕೆಯನ್ನು ಉಂಟು ಮಾಡಿದೆ. ಮೊಣಕಾಲು ಮತ್ತು ಹಿಂಗಾಲಿನಲ್ಲಿ ಕೂಡಲು ಕೆಲವೊಂದು ಚಲನಾಶಾಸ್ತ್ರದಲ್ಲಿ ವ್ಯತ್ಯಾಸಗಳು ಕಂಡುಬಂದಿದೆ.

ಅದಾಗ್ಯೂ, ಟ್ರಾಲಿ ಹಿಡಿದುಕೊಂಡರೆ ಅದರಿಂದ ಕೆಲವು ಬದಲಾವಣೆಗಳು ಮಾತ್ರ ಕಂಡುಬಂದಿದೆ. ಇದು ಸಾಮಾನ್ಯವಾಗಿ ನಡೆದಾಡುವಂತಹ ಚಲನೆಗಳಂತೆ ಇದೆ. ಆದರೆ ಬೆನ್ನಿಗೆ ಬ್ಯಾಗ್ ಹಾಕಿಕೊಂಡರೆ ಆದರೆ ತುಂಬಾ ಬದಲಾವಣಿಗಳು ಕಂಡುಬಂದಿದೆ.

ಶಾಲಾ ಮಕ್ಕಳು ದೇಹ ತೂಕದ ಶೇ.10ಕ್ಕಿಂತ ಹೆಚ್ಚಿನ ಭಾರದ ಬ್ಯಾಗ್ ನ್ನು ಹೊತ್ತುಕೊಂಡು ಹೋಗಬಾರದು ಎಂದು ಸಂಶೋಧನೆಗಳು ಹೇಳಿವೆ. ಅದೇ ಟ್ರಾಲಿ ಬ್ಯಾಗ್ ಹಿಡಿದುಕೊಂಡ ವೇಳೆ ದೇಹ ತೂಕದ ಶೇ.20ಕ್ಕಿಂತ ಹೆಚ್ಚು ಭಾರ ಹಾಕಬಾರದು ಎಂದು ಹೇಳಿದೆ.

English summary

kid’s school bag shouldn’t weigh more than 10 per cent!

Worried about the weight your children carry on their shoulders? New study tells you how much they should. Everyone knows heavy school bags are a serious threat to the health and wellbeing of the children, which makes knowing how much weight shall children carry a vital aspect. Scientists have established that school children who use backpacks should avoid loads of more than 10% of their body weight and those who use trolleys, 20% of their body weight, reported a recent study published in the Journal of Applied Ergonomics.
Story first published: Saturday, July 13, 2019, 16:30 [IST]
X