For Quick Alerts
ALLOW NOTIFICATIONS  
For Daily Alerts

ಮಗುವಿನ ಅನಾರೋಗ್ಯದ ಸಮಯದ ಚಿತ್ರಗಳನ್ನು ಆನ್ಲೈನ್‌ನಲ್ಲಿ ಪೋಸ್ಟ್ ಮಾಡಬೇಡಿ!

|

ಈಗಂತೂ ನಮ್ಮೆಲ್ಲರ ಒಳ್ಳೆಯ ಗೆಳೆಯ ಎಂದರೆ ಅದು ಅಂತರ್ಜಾಲ. ನಾವೇನೇ ಮಾಡಲಿ ಎಲ್ಲೇ ಹೋಗಲಿ ಅದನ್ನು ಇತರರ ಜೊತೆ ಹಂಚಿಕೊಳ್ಳಬೇಕೆಂದು ಬಯಸುವ ನಾವು ಮೊದಲು ಆಯ್ಕೆ ಮಾಡಿಕೊಳ್ಳುವ ವಸ್ತುವೆಂದರೆ ಅದು ನಮ್ಮ ಮೊಬೈಲ್ ಅದೂ ಅಂತರ್ಜಾಲ ಸಹಿತವಾಗಿರುವ ಮೊಬೈಲ್.ಇನ್ನು ತಂದೆ ತಾಯಿಗಳೂ ಕೂಡ ಇದಕ್ಕೆ ಹೊರತಲ್ಲ. ತಮ್ಮ ಮಕ್ಕಳ ಮುದ್ದಾದ ತುಂಟಾಟದ ಚಿತ್ರಗಳನ್ನು ಸಾಮಾಜಿಕ ಜಾಲತಾಣವೆಂಬ ವೇದಿಕೆಯ ಮೂಲಕ ಬೇರೆಯವರ ಜೊತೆ ಹಂಚಿಕೊಳ್ಳುವ ತವಕದಲ್ಲಿರುತ್ತಾರೆ.ಏಕೆಂದರೆ ಹಂಚಿಕೊಂಡ ಮೇಲೆ ಬೇರೆಯವರು ನೋಡಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರಾದ್ದರಿಂದ ಇದು ಒಂದು ಒಳ್ಳೆಯ ಸವಿನೆನಪಾಗಿ ಉಳಿಯುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದರೆ ಪಾಲನೆಯ ತಜ್ಞ ವ್ಯದ್ಯರ ಪ್ರಕಾರ ಇತ್ತೀಚಿನ ಪೀಳಿಗೆಯ ಪ್ರವೃತ್ತಿಯಲ್ಲಿ ಇದು ಸ್ವಲ್ಪ ಬದಲಾದಂತೆ ಕಾಣುತ್ತಿದೆ. ಪೋಷಕರು ತಮ್ಮ ಮಗುವಿನ ಮುದ್ದಾದ ನಗುಮೊಗದ ಚಿತ್ರಗಳನ್ನು ಆನ್ಲೈನ್ ನಲ್ಲಿ ಪೋಸ್ಟ್ ಮಾಡುವ ಬದಲು ಮಗು ಅನಾರೋಗ್ಯದಿಂದ ಬಳಲುತ್ತಿರುವ ಸಪ್ಪೆಮೊಗದ ಚಿತ್ರಗಳನ್ನು ಪೋಸ್ಟ್ ಮಾಡಲು ಬಯಸುತ್ತಾರೆ.ಇದು ಈಗಿನ ಜನತೆ ಬೆಳೆಸಿಕೊಂಡಿರುವ ಒಂದು ರೀತಿಯ ಗೊಂದಲವನ್ನು ಸೃಷ್ಟಿ ಮಾಡುವ ಪ್ರವೃತ್ತಿಯಾಗಿ ಪರಿಣಮಿಸಿದೆ.ಈ ರೀತಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಾಗ ನಿಮ್ಮ ಮಗು ಚೆನ್ನಾಗಿರುವುದೇ ? ಆರೋಗ್ಯದಲ್ಲಿ ಏನೂ ಸಮಸ್ಯೆ ಇಲ್ಲ ತಾನೇ ? ಎಂದು ಕಾಮೆಂಟ್ಸ್ ಬರುವುದು ಸರ್ವೇಸಾಮಾನ್ಯ ಮತ್ತು ಇದೇ ಒಂದು ಚಟವಾಗಿ ಕೂಡ ಬದಲಾಗುತ್ತಿದೆ.

Dont post pictures of your sick child in online

ಪೋಷಕರಿಗೆ ತಮ್ಮ ಮಕ್ಕಳ ಪಾಲನೆ ಪೋಷಣೆಗೆ ಸಂಬಂಧಪಟ್ಟಂತೆ ಯಾರೂ ಪ್ರಶಸ್ತಿ ಪ್ರಧಾನ ಮಾಡುವುದಿಲ್ಲ. ಹಾರ ಹಾಕಿ ಸನ್ಮಾನ ಮಾಡುವುದಿಲ್ಲ.ಪೋಷಕರು ತಮ್ಮ ಮಕ್ಕಳ ಲಾಲನೆ ಪಾಲನೆ ಪೋಷಣೆ ಮಾಡುವುದು ತಮ್ಮ ಆದ್ಯ ಕರ್ತವ್ಯ ಎಂದಷ್ಟೇ ಭಾವಿಸಬೇಕು. ಆದರೆ ನಿಜವಾಗಲೂ ಪೋಷಕರು ಮಾಡುತ್ತಿರುವುದೇನು ? ತಮ್ಮ ಮಕ್ಕಳ ಚಿತ್ರಗಳನ್ನು ಆನ್ಲೈನ್ ನಲ್ಲಿ ಅಂದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಅದಕ್ಕೆ ಸಿಕ್ಕ ಕಾಮೆಂಟ್ಸ್ ಗಳನ್ನೇ ಪ್ರಶಸ್ತಿ ಸಿಕ್ಕಿತೆಂಬ ಮನೋಭಾವ ಬೆಳೆಸಿಕೊಂಡಿರುತ್ತಾರೆ.ಏಕೆಂದರೆ ಸಾಮಾಜಿಕ ಜಾಲತಾಣ ಅಷ್ಟು ತೃಪ್ತಿದಾಯಕ ಎಂದು ಅವರಿಗೆ ಅನ್ನಿಸಿಬಿಟ್ಟಿದೆ .

Dont post pictures of your sick child in online

ಈಗ ಉಂಟಾಗಿರುವ ತೊಂದರೆ ಏನು?

ಮೊದಲೇ ಹೇಳಿದಂತೆ ಪೋಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳ ಒಳ್ಳೆಯ ಮುದ್ದಾದ ಚಿತ್ರಗಳನ್ನು ಹಾಕಿ ಜಾಣಮನ್ನಣೆ ಗಳಿಸುವ ಬದಲು ತಮ್ಮ ಮಕ್ಕಳ ಆರೋಗ್ಯ ಸರಿಯಿಲ್ಲದಿರುವಾಗಿನ ಚಿತ್ರಗಳನ್ನು ಹಾಕಿ ಗೆಳೆಯರಿಂದ ಮತ್ತು ಪರಿಚಯ ಇಲ್ಲದವರಿಂದ ಸಹಾನುಭೂತಿ ಪಡೆದುಕೊಳ್ಳಲು ಬಯಸುತ್ತಿದ್ದಾರೆ. ಸಾಮಾಜಿಕ ಕಳಕಳಿಯ ತಜ್ಞರ ಪ್ರಕಾರ ಇದು ಒಳ್ಳೆಯ ಬೆಳವಣಿಗೆ ಅಲ್ಲ ಮತ್ತು ಶೋಭೆಯೂ ಅಲ್ಲ.ಹಾಗೂ ಈ ರೀತಿಯ ಪ್ರವೃತ್ತಿಯನ್ನು ಕೈ ಬಿಡುವಂತೆ ಅವರಿಂದ ವಿರೋಧವೂ ವ್ಯಕ್ತವಾಗಿದೆ.ಏಕೆಂದರೆ ಅದು ಮಕ್ಕಳ ಗೌಪ್ಯತೆಗೆ ದಕ್ಕೆ ತರುವಂಥದ್ದು ಎಂಬ ಅಭಿಪ್ರಾಯ ಅವರದು.

Most Read: ದಿನಕ್ಕೊಂದು ಎಳೆನೀರು ಕುಡಿದರೂ ಸಾಕು, ಫಲವತ್ತತೆ ಹೆಚ್ಚಾಗುತ್ತದೆಯಂತೆ!

ಈಗ ಕಾಲ ತುಂಬಾ ಬದಲಾಗಿದೆ . ಕೆಲ ತಂದೆ ತಾಯಿಯರು ತಮ್ಮ ಮಗುವಿನ ಅನಾರೋಗ್ಯದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದು ಕಡ್ಡಾಯ ಮತ್ತು ಸ್ವಾಭಾವಿಕ ಎಂದೇ ಭಾವಿಸುತ್ತಾರೆ. ಅದಕ್ಕಾಗಿ ಆಸ್ಪತ್ರೆಗಳಲ್ಲಿ ಮತ್ತು ಮಕ್ಕಳ ಕ್ಲಿನಿಕ್ ಗಳಲ್ಲಿ ಫೇಸ್ಬುಕ್ ಚೆಕ್-ಇನ್ ಗಳ ಮೊರೆ ಹೋಗುವುದೂ ಉಂಟು.ಏಕೆಂದರೆ ಎಲ್ಲರಿಗೂ ತಮ್ಮ ಸಂದೇಶ ಬಹು ಬೇಗನೆ ತಲುಪುತ್ತದೆ ಎಂಬ ಅಭಿಲಾಷೆಯಿಂದ . ನಮ್ಮ ಜನರಲ್ಲಿ ಈ ರೀತಿಯ ಬೆಳವಣಿಗೆ ಎಲ್ಲೋ ಒಂದು ಕಡೆ ಅವರ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ ಎಂಬ ಗೊಂದಲದ ವಾತಾವರಣ ನಿರ್ಮಾಣವಾಗುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮಾನಸಿಕ ತಜ್ಞರ ಪ್ರಕಾರ ಈ ಬೆಳವಣಿಗೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿ ಇದನ್ನು ಈಗಲೇ ಸರಿಪಡಿಸಬೇಕು.

Dont post pictures of your sick child in online

ಏಕೆ ಈ ರೀತಿ ಸಂಭವಿಸುತ್ತದೆ ?

ಇಲ್ಲಿ ನಾವು ಸ್ವಲ್ಪ ಯೋಚಿಸಬೇಕಾಗುತ್ತದೆ . ಏಕೆಂದರೆ ಈಗಿನ ಕಾಲದ ಅಥವಾ ಈಗಿನ ದಿನದ ಪೀಳಿಗೆಯು ಪ್ರತಿಯೊಂದಕ್ಕೂ ಸಾಮಾಜಿಕ ಜಾಲತಾಣ , ಅಂತರ್ಜಾಲವೆಂಬ ಮಾಯೆಗೆ ಬಿದ್ದು ಅದನ್ನೇ ದೇವರಂತೆ ನಂಬಿದ್ದಾರೆ. ಏಕೆ ಈ ಮಾತು ಹೇಳುತ್ತೇವೆ ಎಂದರೆ ಎಲ್ಲದಕ್ಕೂ ಅಂತರ್ಜಾಲ ಬಹುಷಃ ಉತ್ತರಿಸುತ್ತದೆ . ನಮಗೆ ಏನೇ ತೊಂದರೆ ಎದುರಾದರೂ ಏನೇ ಬಗೆಹರಿಯದ ಸಮಸ್ಯೆಗಳಿದ್ದರೂ ಅದನ್ನು ಒಬ್ಬರ ಬಳಿ ಹೇಳಿಕೊಳ್ಳುತ್ತೇವೆ ಮತ್ತು ಪಕ್ವವಾದ ಪರಿಹಾರ ಕಂಡುಕೊಳ್ಳುತ್ತೇವೆ ಎಂದರೆ ಅದು ಅಂತರ್ಜಾಲದ ಹತ್ತಿರ ಮಾತ್ರ. ಇದು ಒಳ್ಳೆಯ ದಾರಿಯೇ ಸರಿ . ಎಲ್ಲಿ ಒಳ್ಳೆಯದು ಇರುತ್ತದೋ ಅಲ್ಲಿ ಕೆಟ್ಟದ್ದೂ ಇರುತ್ತದೆ ಅಲ್ಲವೇ ? ಉತ್ತರ ಹುಡುಕ ಹೊರಟರೆ ನಮ್ಮನ್ನೇ ದಾರಿತಪ್ಪಿಸುವಂಥಹವೂ ಅಂತರ್ಜಾಲದಲ್ಲಿ ಸಿಗುತ್ತವೆ. ಇವೇ ಈಗಿನ ಪೀಳಿಗೆಯ ಮಂದಿಗೆ ಮುಳ್ಳಾಗಿರುವುದು ಎಂದರೆ ನೀವು ನಂಬಬೇಕು. ಇಂತಹ ಅರ್ಥವಿಲ್ಲದ ಉತ್ತರಗಳನ್ನು ಹುಡುಕಿ ಕೆಲ ಹೆಂಗಸರು ತಾವು ತಾಯಿಯಾಗುವುದನ್ನು ಮುಂದಕ್ಕೆ ಹಾಕುತ್ತಾ ಬಂದಿದ್ದಾರೆ. ತಂದೆ ತಾಯಿಯಾಗುವುದನ್ನು ಒಂದು ಕರ್ತವ್ಯ ಎಂದು ಇನ್ನೊಬ್ಬರು ನೆನಪಿಸಬೇಕಾಗಿ ಬಂದಿರುವುದು ವಿಪರ್ಯಾಸವೇ ಸರಿ.

Most Read: ಶಾಲೆಯಲ್ಲಿ ಯೋಗ ಕಲಿಸಿದರೆ ಆತಂಕ ಪೀಡಿತ ಮಕ್ಕಳ ಮಾನಸಿಕ ಆರೋಗ್ಯ ಹೆಚ್ಚುತ್ತದೆ

Dont post pictures of your sick child in online

ಅಂತರ್ಜಾಲಕ್ಕೆ ದಾಸರಾಗಿರುವ ಈಗಿನ ಪೀಳಿಗೆಯ ಮುಂದೆ ಎಲ್ಲಿಗೆ ಸಾಗುತ್ತಿದೆ ನಮ್ಮ ಸಂಸ್ಕೃತಿ ?

ಇದನ್ನು ತಮ್ಮ ಕರ್ತವ್ಯ ಎಂದು ಭಾವಿಸಿದರೂ ಅದಕ್ಕೇನು ಗೌರವ ಸನ್ಮಾನ ಸಿಗುವುದಿಲ್ಲ . ಬದಲಿಗೆ ನಿರಂತರವಾಗಿ ಪ್ರತಿ ಹಂತದಲ್ಲೂ ತೀರ್ಮಾನ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.ಅದಕ್ಕೆ ಪೋಷಕರು ತಮ್ಮ ಮಗುವಿನ ಸಹಾನುಭೂತಿ ಪ್ರೇರೇಪಿತ ಚಿತ್ರಗಳನ್ನು ಹಾಕಿ ಸಾಮಾಜಿಕ ಜಾಲತಾಣದಲ್ಲಿ ಜನರಿಂದ ಆಶೀರ್ವಾದಭರಿತ ಭಾವನೆಗಳನ್ನು ಅಪೇಕ್ಷಿಸುತ್ತಾರೆ. ಚಿತ್ರಗಳನ್ನು ನೋಡಿದ ಜನರೂ ಹಾಗೆ ನಡೆದುಕೊಳ್ಳುತ್ತಾರೆ. ಈ ರೀತಿಯಾದಾಗ ಪೋಷಕರಿಗೆ ಏನೋ ಒಂದು ಬಗೆಯ ಸಮಾಧಾನದ ತೃಪ್ತಿದಾಯಕವಾದ ಕೆಲಸ ತಮ್ಮಿಂದ ನಡೆದಿದೆ ಅಂತೂ ತಮಗೆ ಮಾನಸಿಕ ನೆಮ್ಮದಿ ಸಿಕ್ಕಿದೆ ಎಂಬ ಭಾವನೆ ಬರುತ್ತದೆ. ಅದಕ್ಕೆ ತಜ್ಞರು ಹೇಳುವ ಪ್ರಕಾರ ಪೋಷಕರು ತಮಗೆ ಯಾರಿಂದಲೋ ಸಿಗುವ ಮನ್ನಣೆಗಾಗಿ ತಮ್ಮ ಮಕ್ಕಳನ್ನು ತಮಗೆ ಬೇಕಾದ ಸಾಧನಗಳಾಗಿ ಉಪಯೋಗಿಸುತ್ತಿದ್ದಾರೆ. ಈ ರೀತಿ ಮಾಡುವುದು ತಮಗೆ ಯಾರೋ ಮಾಡಿದ ಚಿಕಿತ್ಸೆಯ ಪಾಠ ಮತ್ತು ಇದರಿಂದ ತಮಗೆ ಮಾನಸಿಕವಾಗಿ ಮೆಚ್ಚುಗೆ ಪಡೆದಷ್ಟೇ ಸಂತೋಷವೆಂದೇ ಪೋಷಕರು ಭಾವಿಸುತ್ತಾರೆ. ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮಗುವಿನ ಚಿತ್ರಗಳನ್ನು ಹಾಕುವುದರಿಂದ ನಿಮಗೆ ಒಳ್ಳೆಯ ಮೆಚ್ಚುಗೆಯ ಸಂದೇಶಗಳ ಜೊತೆಗೆ ಅಸಂಬದ್ಧವಾದ ಸಂದೇಶಗಳೂ ಬರುತ್ತವೆ ಎಂಬ ನೆನಪಿರಲಿ.

English summary

Dont post pictures of your sick child in online

"By posting a photo of a sick child, they instantly get likes and comments asking if everything is alright. And that can be addictive. Parenting isn’t instantly awarding, you don’t get the accolades or the phrase you get from your work. But social media gives parents that instant gratification."
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more