For Quick Alerts
ALLOW NOTIFICATIONS  
For Daily Alerts

ಮಕ್ಕಳ ಊಟ ತಿಂಡಿಯನ್ನು ಪ್ಲಾಸ್ಟಿಕ್ ಡಬ್ಬ ಅಥವಾ ಫಾಯಿಲ್‍ನಲ್ಲಿ ಕಟ್ಟುತ್ತೀರಾ?

|

ಪ್ಲಾಸ್ಟಿಕ್ ಒಂದು ಹಗುರವಾದ ಹಾಗೂ ಸುಲಭವಾಗಿ ಬಳಕೆ ಮಾಡಬಹುದಾದಂತಹ ಉತ್ಪನ್ನ. ಪ್ಲಾಸ್ಟಿಕ್ ನಿಂದ ತಯಾರಿಸಲಾದ ಬಾಟಲ್, ಡಬ್ಬ, ಪ್ಲೇಟ್, ತಟ್ಟೆ, ಹೀಗೆ ಅನೇಕ ಬಗೆಯ ದಿನಬಳಕೆಯ ಉತ್ಪನ್ನವನ್ನು ತಯಾರಿಸುತ್ತಾರೆ. ಬಹಳ ಕಡಿಮೆ ಬೆಲೆಯಲ್ಲಿ ಅಗತ್ಯವಾದ ವಸ್ತುಗಳನ್ನು ಪಡೆಯಬಹುದು. ಇವು ಕಡಿಮೆ ಬೆಲೆಯಲ್ಲಿ ದೊರೆಯುವುದರಿಂದ ಮಧ್ಯಮ ವರ್ಗದ ಜನರಿಗೆ ಇದರ ಬಳಕೆಯು ಬಹಳ ಸುಲಭ ಹಾಗೂ ಅಗತ್ಯ ವಸ್ತುಗಳ ಪೂರೈಕೆಯನ್ನು ಮಾಡುತ್ತದೆ. ಒಟ್ಟಿನಲ್ಲಿ ಬಹಳ ಕಡಿಮೆಯಲ್ಲಿ ದೊರೆಯುವ ಅನುಕೂಲಕರ ಉತ್ಪನ್ನ ಎನ್ನಬಹುದು.

ವಿವಿಧ ರೀತಿಯಲ್ಲಿ ಮರುಬಳಕೆ ಮಾಡಬಹುದಾದ ಈ ಉತ್ಪನ್ನವು ಪರಿಸರದಲ್ಲಿ ಕರಗದ ವಸ್ತು. ಇದನ್ನು ಬಳಸುವುದರಿಂದ ವಿವಿಧ ಬಗೆಯ ಆರೋಗ್ಯ ಸಮಸ್ಯೆಯು ಎದುರಾಗುವುದು ಎಂದು ಅನೇಕ ಅಧ್ಯಯನ ಹಾಗೂ ಸಂಶೋಧನೆಯು ದೃಢಪಡಿಸಿದೆ. ಕ್ಯಾನ್ಸರ್, ಟ್ಯೂಮರ್, ಕಲುಶಿತ ರಕ್ತ, ಚರ್ಮ ಅಲರ್ಜಿ ಸೇರಿದಂತೆ ವಿವಿಧ ಅಂಗಾಂಗಗಳ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಚಿಕ್ಕಮಕ್ಕಳ ಮೇಲೆ ಬಹುಬೇಗ ಪ್ರಭಾವ ಬೀರುವುದು. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಪ್ಲಾಸ್ಟಿಕ್‍ನ ದುಷ್ಪರಿಣಾಮ ಹೆಚ್ಚಾಗುತ್ತದೆ.

plastic dabba

ಮುಂಜಾನೆ ತಾಯಂದಿರು ಬಿಸಿ ಬಿಸಿಯಾದ ಊಟ-ತಿಂಡಿಯನ್ನು ಪ್ಲಾಸ್ಟಿಕ್ ಡಬ್ಬ, ಫಾಯಿಲ್‍ಗಳಲ್ಲಿ ತುಂಬಿ ಮಕ್ಕಳಿಗೆ ನೀಡುತ್ತಾರೆ. ಅದು ಶಾಲೆಗೆ ಹೋಗುವಷ್ಟರಲ್ಲಿ ತಣ್ಣಗಾಗಿ ಇರುತ್ತದೆ. ಪ್ಲಾಸ್ಟಿಕ್‍ನಲ್ಲಿ ಬಿಸಿ-ಬಿಸಿಯಾದ ವಸ್ತುಗಳನ್ನು ತುಂಬಿ ಕಳುಹಿಸುವುದರಿಂದ ಒಂದು ಬಗೆಯ ರಾಸಾಯನಿಕ ಉತ್ಪನ್ನ ಬಿಡುಗಡೆಯಾಗುತ್ತದೆ. ಅದು ಪ್ಲಾಸ್ಟಿಕ್ ಡಬ್ಬದೊಳಗೆ ಇರುವ ಉತ್ಪನ್ನದ ಮೇಲೆ ಕುಳಿತುಕೊಳ್ಳುವುದು. ಅದನ್ನು ಸೇವಿಸಿದ ಮಕ್ಕಳ ಆರೋಗ್ಯದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತಾ ಹೋಗುತ್ತದೆ.

ಅನೇಕ ಜನರು ಪ್ಲಾಸ್ಟಿಕ್‍ನ ಬಳಕೆ ಮಾಡುತ್ತಾರೆ. ವಿಷಕಾರಿಯಾದ ಪ್ಲಾಸ್ಟಿಕ್ ಪರಿಸರದ ಮೇಲೆ ಹಾನಿ ಉಂಟುಮಾಡುವುದರ ಜೊತೆಗೆ ಎಲ್ಲಾ ಪ್ರಾಣಿ-ಪಕ್ಷಿಗಳಿಗೂ ಅದು ಅಪಾಯಕಾರಿ. ಮಣ್ಣಿನಲ್ಲಿ ಹಾಗೂ ದೇಹದ ಒಳಗೂ ಕರಗದ ಈ ಉತ್ಪನ್ನದ ಬಳಕೆಯನ್ನು ನಿಷೇಧಿಸುವುದು ಅಥವಾ ಬಳಕೆ ಮಾಡುವುದನ್ನು ನಿಲ್ಲಿಸಬೇಕಾದ ಅಗತ್ಯವಿದೆ. ನಿಮಗೆ ನಿಮ್ಮ ಮಗುವಿನ ಆರೋಗ್ಯ ಅತ್ಯಮೂಲ್ಯ ಎಂದಾದರೆ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ. ಬದಲಿಗೆ ಅನುಕೂಲಕರವಾದ ಹಾಗೂ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಉಂಟುಮಾಡದ ಉತ್ಪನ್ನಗಳ ಬಳಕೆ ಮಾಡುವುದು ಸೂಕ್ತ. ಪ್ಲಾಸ್ಟಿಕ್ ಬಾಕ್ಸ್ ನಿಂದ ಉಂಟಾಗುವ ತೊಂದರೆಗಳು

Most Read: ಮಕ್ಕಳಲ್ಲಿ ಸಕ್ಕರೆ ಸೇವನೆ ನಿಯಂತ್ರಣ ಮಾಡುವುದು ಹೇಗೆ?

*ಬಿಸಿ-ಬಿಸಿ ಆಹಾರ ಪದಾರ್ಥವನ್ನು ಪ್ಲಾಸ್ಟಿಕ್ ಪಾತ್ರೆ ಅಥವಾ ಡಬ್ಬದಲ್ಲಿ ತುಂಬುವುದರಿಂದ ಆಹಾರದಲ್ಲಿರುವ ಪೋಷಕಾಂಶವು ಕಲುಷಿತಗೊಳ್ಳುವುದು. ಅವು ದೇಹದ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮ ಉಂಟುಮಾಡುವುದು.

*ಪ್ಲಾಸ್ಟಿಕ್ ಬಳಕೆಯಿಂದ ದೇಹದಲ್ಲಿ ಈಸ್ಟ್ರೋಜೆನ್ ಹಾರ್ಮೋನ್‍ಅನ್ನು ಅನುಕರಿಸುವ ಕೀನೊಸ್ಟ್ರೊಜೆನ್ಸ್ ಎಂಬ ರಾಸಾಯನಿಕಗಳ ಹಾನಿಕಾರಕ ಅಂಶವು ದೇಹವನ್ನು ಪ್ರವೇಶಿಸುವುದು. ಇದು ಮಕ್ಕಳ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದು. ಮಕ್ಕಳು ಸಾಮಾನ್ಯವಾಗಿ ಹಂತ ಹಂತವಾದ ಬೆಳವಣಿಗೆಯನ್ನು ಕಾಣುತ್ತಾರೆ. ಅಂತಹ ಒಂದು ಬೆಳವಣಿಗೆಗೆ ಪ್ಲಾಸ್ಟಿಕ್ ಬಳಕೆಯು ಅಡ್ಡಿಯನ್ನುಂಟುಮಾಡುವುದು. ಹಾರ್ಮೋನ್‍ಗಳ ಸಮತೋಲನವನ್ನು ಹಾಳುಮಾಡುತ್ತದೆ.

Most Read: ಎಚ್ಚರ: ಟಾಲ್ಕಂ ಪೌಡರ್ ಮಗುವಿಗೆ ಬಲು ಅಪಾಯಕಾರಿ!

*ಅಲ್ಯೂಮಿನಿಯಂ ಫಾಯಿಲ್‍ಗಳು ಆಹಾರದ ಜೊತೆಗೆ ಅಲ್ಯೂಮಿನಿಯಂ ಅಂಶವನ್ನು ದೇಹಕ್ಕೆ ರವಾನಿಸುತ್ತದೆ. ಇದು ಇನ್ಸುಲಿನ್ ಕಾರ್ಯನಿರ್ವಹಣೆಗೆ ಅಗತ್ಯವಾದ ಖನಿಜವನ್ನು ಝಿಂಕ್‍ಗೆ ಬದಲಿಸುತ್ತದೆ. ಇನ್ಸುಲಿನ್ ಸೇವನೆಯು ಸ್ಥೂಲಕಾಯಕ್ಕೆ ಕಾರಣವಾಗುವುದು. ಅಧಿಕ ಇನ್ಸುಲಿನ್ ಸೇವನೆಯು ಸ್ಥೂಲಕಾಯಕ್ಕೆ ಕಾರಣವಾಗುವುದು. ಕೊಬ್ಬಿನ ಯಕೃತ್, ಮಧುಮೇಹ, ಪಿಸಿಒಡಿ ಸೇರಿದಂತೆ ಅನೇಕ ರೋಗಗಳಿಗೆ ಕಾರಣವಾಗುವುದು.

*ಸಾಮಾನ್ಯವಾಗಿ ಅಗ್ಗದ ಪೆಟ್ಟಿಗೆಯಲ್ಲಿ ಪೌಷ್ಟಿಕ ಆಹಾರವನ್ನು ಪ್ಯಾಕ್ ಮಾಡಿ ಮಕ್ಕಳಿಗೆ ಶಾಲೆ, ಪ್ರವಾಸಗಳಿಗೆ ಕಳುಹಿಸುತ್ತೇವೆ. ಆದರೆ ಅದು ಮಕ್ಕಳ ಆರೋಗ್ಯವನ್ನು ಅಪಾಯಕ್ಕೆ ತಳ್ಳುವುದು ಎನ್ನುವ ವಿಷಯವನ್ನು ಅರಿಯಬೇಕು.

ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿದರೆ ಆರೋಗ್ಯದಲ್ಲಿ ಉಂಟಾಗುವ ಸುಧಾರಣೆಗಳು:

*ಆಗಾಗ ಮಲಬದ್ಧತೆ ಉಂಟಾಗುವುದನ್ನು ತಡೆಯಬಹುದು. ಜೊತೆಗೆ ಆರೋಗ್ಯದಲ್ಲಿ ಸುಧಾರಣೆ ಉಂಟಾಗುವುದು.
*ಮಾನಸಿಕವಾಗಿಯೂ ಉತ್ತಮ ವರ್ತನೆಯನ್ನು ತೋರುವರು.
*ಚರ್ಮದ ಆರೋಗ್ಯದಲ್ಲಿ ಉತ್ತಮವಾಗುವುದು. ಕೂದಲು ಮತ್ತು ಉಗುರುಗಳ ಬೆಳವಣಿಗೆಯು ಉತ್ತಮಗೊಳ್ಳುವುದು.
*ಬೆಳವಣಿಗೆಯಲ್ಲಿ ಉತ್ತಮ ಫಲಿತಾಂಶಕಾಣುವುದು ಮತ್ತು ಹಾರ್ಮೋನ್ ಸಮತೋಲನ ಕಾಣುವುದು.

Most Read: ಮಲಗುವ ಮೊದಲು ಮಕ್ಕಳ ಕೈಗೆ ಅಪ್ಪಿ ತಪ್ಪಿಯೂ ಮೊಬೈಲ್ ನೀಡಬೇಡಿ!

ಪ್ಲಾಸ್ಟಿಕ್ ಹೊರತಾಗಿ ಬಳಸಬಹುದಾದ ಪಾತ್ರೆ

ಪ್ಲಾಸ್ಟಿಕ್ ಬಳಕೆಯ ಹೊರತಾಗಿ ಸ್ಟೀಲ್ ಪಾತ್ರೆ, ಗಾಜಿನ ಪಾತ್ರೆ, ಸೆರಾಮಿಕ್ ಪಾತ್ರೆ ಮತ್ತು ಮಣ್ಣಿನ ಪಾತ್ರೆಗಳನ್ನು ಬಳಸುವುದು ಉತ್ತಮ. ಇವುಗಳಿಂದ ತಯಾರಿಸಿದ ಪಾತ್ರೆಗಳು ಪದಾರ್ಥಗಳೊಂದಿಗೆ ಯಾವುದೇ ವರ್ತನೆಯನ್ನು ತೋರದು. ಆರೋಗ್ಯದ ಮೇಲೂ ಯಾವುದೇ ಅಡ್ಡ ಪರಿಣಾಮ ಬೀರದು. ಆರೋಗ್ಯವು ಉತ್ತಮವಾಗಿರುತ್ತವೆ.

ಅಧ್ಯಯನಗಳ ಮಾಹಿತಿ

ಇತ್ತೀಚಿನ ಅಧ್ಯಯನಗಳ ಪ್ರಕಾರ ಪ್ಲಾಸ್ಟಿಕ್ ಮತ್ತು ಶಿಲೀಂಧ್ರನಾಶಕಗಳಲ್ಲಿ ಕಂಡುಬರುವ ರಾಸಾಯನಿಕಗಳು ಹಾರ್ಮೋನ್‍ಗಳ ಮೇಲೆ ಪ್ರಭಾವ ಬೀರುತ್ತವೆ. ಅವು ಮಕ್ಕಳ ಬೆಳವಣಿಗೆ, ಮೆದುಳು ಹಾಗೂ ಅಂಗಾಂಗಗಳ ರಚನೆಯಲ್ಲಿ ಉತ್ತಮ ಬದಲಾವಣೆಯನ್ನು ಉಂಟುಮಾಡುವುದು. ಪ್ಲಾಸ್ಟಿಕ್ ಬಳಕೆಯಿಂದ ಮಕ್ಕಳ ಹಲ್ಲು ಮತ್ತು ವಸಡೆಯ ಮೇಲೂ ಪ್ರಭಾವ ಬೀರುವುದು. ಜೊತೆಗೆ ಅವುಗಳ ಆರೋಗ್ಯ ಹಾಳುಮಾಡುವುದು. ಹಾಗಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿದರೆ ಆರೋಗ್ಯವು ಉತ್ತಮವಾಗುವುದು ಪರಿಸರದಲ್ಲಿಯೂ ಉಂಟಾಗುವ ಮಾಲಿನ್ಯವನ್ನು ತಡೆಯಬಹುದು.

English summary

Do you pack your kids lunch in a plastic dabba or aluminium foil?

A number of people are giving up plastic not just because it is damaging to the environment but also because it is harmful to health. There’s more awareness about the need to switch to copper, steel or glass water bottles these days too. Now, celeb nutritionist Rujuta Diwekar, the author of her newly launched book Notes for Healthy Kids, tells us why children, too, should be kept away from the menace of plastic. You can start doing so by making sure they don’t carry plastic tiffin boxes to school. Instead, she suggests switching to steel dabba and malmal cloth. For water, use a steel or a copper bottle.
Story first published: Friday, June 14, 2019, 10:38 [IST]
X
Desktop Bottom Promotion