For Quick Alerts
ALLOW NOTIFICATIONS  
For Daily Alerts

ಮಗು ಮಾತನಾಡಲು ವಿಳಂಬವಾಗಲು ಕಾರಣಗಳು

By Heamanth
|

ಮಗು ಹುಟ್ಟಿದ ಸಂಭ್ರಮದ ಬಳಿಕ ಅದರ ಪ್ರತಿಯೊಂದು ಕೆಲಸವು ತಂದೆತಾಯಿಗೆ ಆನಂದವನ್ನು ನೀಡುವುದು. ಮಗು ಕುಳಿತುಕೊಳ್ಳುವುದು, ನಿಲ್ಲುವುದು, ನಡೆಯುವುದು ಹೀಗೆ ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತವೂ ತಂದೆತಾಯಿಗೆ ಸಾಕಷ್ಟು ಸಂಭ್ರಮ ಪಡುವಂತೆ ಮಾಡುವುದು. ಇದರಲ್ಲಿ ಮುಖ್ಯವಾಗಿ ಮಗುವಿನ ತೊದಲು ನುಡಿ ಕಿವಿಗೆ ಬೀಳುತ್ತಲಿದ್ದರೆ ಆಗ ತಂದೆತಾಯಿಯ ಆನಂದಕ್ಕೆ ಪಾರವೇ ಇರುವುದಿಲ್ಲ. ಆದರೆ ಕೆಲವು ಮಕ್ಕಳು ತಮ್ಮದೇ ಪ್ರಾಯದ ಮಕ್ಕಳಿಗಿಂತ ತುಂಬಾ ವಿಳಂಬವಾಗಿ ಮಾತನಾಡಲು ಆರಂಭಿಸುತ್ತವೆ. ಇದು ದೊಡ್ಡ ಸಮಸ್ಯೆಯೇನಲ್ಲ, ಯಾಕೆಂದರೆ ಮಕ್ಕಳು ಕೆಲವೇ ವರ್ಷಗಳಲ್ಲಿ ಮಾತನಾಡಲು ಕಲಿಯುತ್ತವೆ.

ಭಾರತದಲ್ಲಿ ಮಕ್ಕಳು ವಿಳಂಬವಾಗಿ ಮಾತನಾಡಲು ಆರಂಭಿಸಿದರೆ ತಂದೆತಾಯಿಗೆ ಚಿಂತೆ ಕಾಡಲು ಆರಂಭವಾಗುತ್ತದೆ. ವಾಸ್ತವದಲ್ಲಿ ಮಗು ನಿಜವಾಗಿಯೂ ವಿಳಂಬವಾಗಿ ಮಾತನ್ನು ಆರಂಭಿಸಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸಾಮರ್ಥ್ಯ ಅರಿತುಕೊಳ್ಳಲು ಒಂದು ಹಿತಿಮಿತಿಯ ಸಮಯ ಬೇಕಾಗುತ್ತದೆ. ಇಂತಹ ಸಮಯದಲ್ಲಿ ತಂದೆತಾಯಿಯಾಗಿ ಮಗುವಿಗೆ ಸಂಪೂರ್ಣ ಬೆಂಬಲ ನೀಡಬೇಕು. ಕೆಲವೊಂದು ಸಲ ವೈದ್ಯಕೀಯವಾಗಿಯೂ ಸಮಸ್ಯೆಗಳು ಇರಬಹುದಾಗಿರುವ ಕಾರಣದಿಂದ ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಇದೆಲ್ಲದಕ್ಕೂ ಮೊದಲು ಮಗು ವಿಳಂಬವಾಗಿ ಮಾತನಾಡಲು ಕಾರಣವೇನೆಂದು ತಿಳಿಯಬೇಕು. ಬೋಲ್ಡ್ ಸ್ಕೈ ಈ ಲೇಖನದಲ್ಲಿ ಕಾರಣಗಳನ್ನು ನಿಮ್ಮ ಮುಂದಿಡಲಿದೆ. ಅದನ್ನು ಅರಿತುಕೊಳ್ಳಿ.

ಸಂಪೂರ್ಣ ದೇಹದ ಬೆಳವಣಿಗೆ ವಿಳಂಬವಾಗಿರುವುದು

ಸಂಪೂರ್ಣ ದೇಹದ ಬೆಳವಣಿಗೆ ವಿಳಂಬವಾಗಿರುವುದು

ಇದು ಎಲ್ಲಾ ರೀತಿಯ ದೇಹದ ಬೆಳವಣಿಗೆ ವಿಳಂಬವಾಗಿರುವ ಕಾರಣವಾಗಿರಬಹುದು. ಇದರಿಂದಾಗಿ ತನ್ನ ಪ್ರಾಯದ ಮಕ್ಕಳಿಗಿಂತ ವಿಳಂಬವಾಗಿ ಮಾತನಾಡಿರಬಹುದು. ಆದರೆ ಇದು ತಾತ್ಕಾಲಿಕವಾಗಿರುವಂತದ್ದು, ವರ್ಷಗಳು ಉರುಳಿದಂತೆ ಮಗು ಬೆಳವಣಿಗೆಯಾಗಿ ಸಾಮಾನ್ಯರಂತೆ ಜ್ಞಾನ ಹಾಗೂ ಮಾತನಾಡಬಹುದು.

ಸ್ವಲೀನತೆ(ಆಟಿಸಂ)

ಸ್ವಲೀನತೆ(ಆಟಿಸಂ)

ಮಕ್ಕಳು ಮಾತನಾಡಲು ವಿಳಂಬವಾಗುವುದು ಸ್ವಲೀನತೆಯ ಒಂದು ಲಕ್ಷಣವಾಗಿದೆ. ಮಗು ಸ್ವಲೀನತೆಯಿಂದ ಬಳಲುತ್ತಿದೆ ಎಂದು ನಿಮಗೆ ಅನಿಸಿದರೆ ಆಗ ಮಗು ವಿಳಂಬವಾಗಿ ಮಾತನಾಡುವ ನಿರೀಕ್ಷೆಯಿಟ್ಟುಕೊಳ್ಳಬಹುದು ಮತ್ತು ಇದಕ್ಕೆ ತಯಾರಾಗಿರಬಹುದು.

ಅಪ್ರಾಕ್ಸಿಯಾ

ಅಪ್ರಾಕ್ಸಿಯಾ

ಈ ಪರಿಸ್ಥಿತಿಯಲ್ಲಿ ಮಗು ಸರಿಯಾಗಿ ಶಬ್ಧ ಮಾಡಲು ವಿಫಲವಾಗುವಂತಹ ಸಮಸ್ಯೆಯಾಗಿದೆ. ಮಗು ಮಾಡುವಂತಹ ಶಬ್ದವು ನಿಮಗೆ ಯಾವುದೇ ರೀತಿಯಿಂದಲೂ ಅರ್ಥವಾಗದೆ ಇದ್ದರೆ ಆಗ ನೀವು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಮಕ್ಕಳ ತಜ್ಞರನ್ನು ಭೇಟಿಯಾಗಬೇಕು.

ಡೈಸ್ತ್ರಿಯಾ

ಡೈಸ್ತ್ರಿಯಾ

ಈ ಪರಿಸ್ಥಿತಿಯಲ್ಲಿ ಮಗು ತುಂಬಾ ಚುರುಕಾಗಿರುವುದು ಮತ್ತು ಸಂವಹನಕ್ಕೆ ಹಂಬಲಿಸುವುದು. ಆದರೆ ಮಾತನಾಡಲು ಮಗು ಸಾಧ್ಯವಿದ್ದಷ್ಟು ಹಿಂಜರಿಯುವುದು ಮತ್ತು ಕೈಸನ್ನೆ ಮೂಲಕವೇ ತನ್ನ ಮಾತಿನ ಅರ್ಥ ತಿಳಿಸುವುದು. ಇದಕ್ಕೆ ಮಕ್ಕಳಿಗೆ ಚಿಕಿತ್ಸೆ ಬೇಕಾಗುವುದು.

ಹಲವಾರು ಭಾಷೆಗಳನ್ನು ಕೇಳುವುದು

ಹಲವಾರು ಭಾಷೆಗಳನ್ನು ಕೇಳುವುದು

ಮನೆಯಲ್ಲಿ ಕೆಲವು ಭಾಷೆಗಳನ್ನು ಕೇಳುವಂತಹ ಮಗು ಯಾವಾಗಲೂ ಗೊಂದಲಕ್ಕೆ ಒಳಗಾಗುವುದು. ಯಾಕೆಂದರೆ ಈ ಮಗು ದೊಡ್ಡ ಮಟ್ಟದ ಶಬ್ಧಕೋಶಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಇಂತಹ ಮಗುವಿಗೆ ಯಾವುದೇ ರೀತಿಯ ವೈದ್ಯಕೀಯ ನೆರವು ಬೇಕಾಗಿಲ್ಲ. ಮಗು ತನ್ನ ಪ್ರಾಯದ ಮಕ್ಕಳಂತೆ ಬೇಗನೆ ಮಾತನಾಡಲು ಕಲಿಯುವುದು.

ಮಾತಿಗೆ ಮೊದಲು ಕಿವಿ ಕೇಳದೆ ಇರುವುದು

ಮಾತಿಗೆ ಮೊದಲು ಕಿವಿ ಕೇಳದೆ ಇರುವುದು

ತನ್ನ ಮೊದಲ ತೊದಲು ನುಡಿಯ ಬಳಿಕ ಮಗುವಿಗೆ ಕಿವಿ ಕೇಳದೆ ಇರುವಂತಹ ಸಮಸ್ಯೆಯಾದರೆ ಆಗ ಮಗು ತುಂಬಾ ನಿಧಾನವಾಗಿ ಮಾತನಾಡಲು ಆರಂಭಿಸಬಹುದು. ಇಂತಹ ಪರಿಸ್ಥಿತಿಯಲ್ಲಿ ತಜ್ಞರನ್ನು ಭೇಟಿಯಾಗಬೇಕು.

ಅಭಿವ್ಯಕ್ತಿ ಭಾಷೆಯ ಸಮಸ್ಯೆ

ಅಭಿವ್ಯಕ್ತಿ ಭಾಷೆಯ ಸಮಸ್ಯೆ

ಮಗು ಸರಿಯಾಗಿ ಚಿಂತಿಸುವುದು ಮತ್ತು ಎಲ್ಲವನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತದೆ ಮತ್ತು ಭಾವನಾತ್ಮಕವಾಗಿಯು ಶಕ್ತವಿದ್ದು, ತನ್ನ ಪ್ರಾಯದ ಎಲ್ಲಾ ಮಕ್ಕಳು ಮಾಡುವಂತಹ ಕೆಲಸವನ್ನು ತಾನು ಮಾಡುತ್ತಲಿದ್ದರೆ ಆ ಮಗುವಿಗೆ ಅಭಿವ್ಯಕ್ತಿ ಭಾಷೆ ಸಮಸ್ಯೆಯಾಗುತ್ತಿದೆ ಎನ್ನಬಹುದು. ಮಗುವಿಗೆ ಆರಂಭದಲ್ಲಿ ಆಗಿರುವ ಆಘಾತದಿಂದ ಹೀಗೆ ಆಗಿರಲೂಬಹುದು. ಮಗುವನ್ನು ವೈದ್ಯರಲ್ಲಿ ತೋರಿಸುವುದು ಅತೀ ಅಗತ್ಯ.

ಬೌದ್ಧಿಕ ಸಾಮರ್ಥ್ಯವು ಕಡಿಮೆಯಿರುವುದು

ಬೌದ್ಧಿಕ ಸಾಮರ್ಥ್ಯವು ಕಡಿಮೆಯಿರುವುದು

ಇತರ ಮಕ್ಕಳಂತೆ ನಿಮ್ಮ ಮಗುವು ತುಂಬಾ ಜಾಣನಾಗಿಲ್ಲವೆಂದು ನಿಮಗೆ ಅನಿಸಬಹುದು. ಇದು ನಿಮಗೆ ತುಂಬಾ ಚಿಂತೆ ಉಂಟು ಮಾಡಬಹುದು. ಆದರೆ ಮಾತನಾಡುವ ಸಾಮರ್ಥ್ಯವು ಆತನ ಜಾಣ್ಮೆಯನ್ನು ಪ್ರತಿಫಲನವಲ್ಲ. ತಂದೆತಾಯಿಯಾಗಿ ಮಗುವಿನ ಸಾಮರ್ಥ್ಯದ ಮೇಲೆ ಗಮನವಿಡಬೇಕು ಮತ್ತು ಮಗುವಿಗೆ ಮಾತನಾಡಲು ಹೆಚ್ಚಿನ ಸಮಯ ನೀಡಬೇಕು.

ಸೆರೆಬ್ರಲ್ ಪಾಲ್ಸಿ

ಸೆರೆಬ್ರಲ್ ಪಾಲ್ಸಿ

ನಾಲಗೆಯಲ್ಲಿನ ಸೆಳೆತಕ್ಕೆ ಸೆರೆಬ್ರಲ್ ಪಾಲ್ಸಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇದು ದೈಹಿಕ ಮಾತಿನ ಹೊಂದಾಣಿಕೆ ಕುಂಠಿತಗೊಳಿಸುವುದು. ಮಗು ಇಂತಹ ಸಮಸ್ಯೆ ಎದುರಿಸುತ್ತಿದೆ ಎಂದಾದರೆ ಆಗ ಖಂಡಿತವಾಗಿಯೂ ಮಗುವಿನ ತೊದಲು ನುಡಿಯು ವಿಳಂಬವಾಗಬಹುದು.

ಪ್ರೋತ್ಸಾಹದ ಕೊರತೆ

ಪ್ರೋತ್ಸಾಹದ ಕೊರತೆ

ಮಗುವಿನಲ್ಲಿ ಮಾತು ವಿಳಂಬವಾಗಲು ಪ್ರಮುಖ ಕಾರಣವೆಂದರೆ ಮಗುವಿಗೆ ಮಾತನಾಡಲು ಪ್ರೋತ್ಸಾಹದ ಕೊರತೆ. ಮಗುವಿನೊಂದಿಗೆ ಆದಷ್ಟು ಹೆಚ್ಚು ಸಮಯ ವ್ಯಯಿಸಿ, ಮಗು ಮಾತನಾಡುವಂತೆ ಪ್ರೋತ್ಸಾಹಿಸಬೇಕು. ನಿಮ್ಮ ಪ್ರೋತ್ಸಾಹವು ಮಗುವಿಗೆ ಜೀವನದಲ್ಲಿ ಖಂಡಿತವಾಗಿಯೂ ಮುಂದೆ ಬರಲು, ಅದೇ ಮಾತನಾಡಲು ನೆರವಾಗುವುದು.

English summary

What cause speech delay in toddlers?

From the moment your child is born, you become all the way more excited to hear him. His childish squeaks and squeals are music to your ears and you just cannot wait for him to utter his first words. What begins as an exciting wait often turns worrisome for the parents when they notice other children who are of their ward's age talk, when their child has not yet begun to speak. For all of that to happen, we must first try to understand the reasons for speech delay in kids. Let's take a look at the reasons below.
X
Desktop Bottom Promotion