ಪರೀಕ್ಷೆಯಲ್ಲಿ ಮಕ್ಕಳು ಒಳ್ಳೆಯ ಅಂಕ ಪಡೆಯಲು ನೈಸರ್ಗಿಕ ಪಾನೀಯಗಳು

Posted By: Deepu
Subscribe to Boldsky

ಇನ್ನು ಒಂದು ತಿಂಗಳಲ್ಲಿ ಪರೀಕ್ಷೆಗಳು ಆರಂಭವಾಗುವುದು. ಮಕ್ಕಳಿಗೆ ಇನ್ನು ಓದಿನ ಒತ್ತಡ ಸಹಜ. ಈ ಒತ್ತಡದಲ್ಲೇ ಮಕ್ಕಳು ಹೆಚ್ಚು ಅಂಕ ಗಳಿಸಲು ವಿಫಲರಾಗುತ್ತಾರೆ. ಇನ್ನು ಕೆಲವರು ಯಾವುದೇ ಒತ್ತಡವಿಲ್ಲದೆ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು ಒಳ್ಳೆಯ ಅಂಕಗಳನ್ನು ಪಡೆಯುವರು.

ನೆನಪಿನ ಶಕ್ತಿ ಹೆಚ್ಚಿಸುವಂತಹ ಹಲವಾರು ಪಾನೀಯಗಳ ಬಗ್ಗೆ ಜಾಹೀರಾತುಗಳು ಹರಿದಾಡುತ್ತಲೇ ಇರುತ್ತದೆ. ಆದರೆ ಇದು ಎಷ್ಟು ಸತ್ಯ ಎನ್ನುವುದು ಬಳಸಿವರಿಗೆ ತಿಳಿದಿದೆ. ಇದಕ್ಕೆ ಬದಲಿಗೆ ನೈಸರ್ಗಿಕವಾದ ಕೆಲವೊಂದು ಪಾನೀಯಗಳು ಮಕ್ಕಳ ಜ್ಞಾಪಕ ಶಕ್ತಿ ಪರಿಣಾಮಕಾರಿಯಾಗಿ ಹೆಚ್ಚಿಸುವುದು. ಇದು ಯಾವುದೆಂದು ಬೋಲ್ಡ್ ಸ್ಕೈ ನಿಮಗೆ ಈ ಲೇಖನ ಮೂಲಕ ಹೇಳಿಕೊಡಲಿದೆ...

 ಬಾದಾಮಿ ಹಾಲು

ಬಾದಾಮಿ ಹಾಲು

ಬಾದಾಮಿಯು ನೇರ ಪ್ರೋಟೀನ್ ನಿಂದ ಸಮೃದ್ಧವಾಗಿದೆ. ಪ್ರೋಟೀನ್ ಕೇವಲ ಶಕ್ತಿ ನೀಡುವುದು ಮಾತ್ರವಲ್ಲದೆ ಮೆದುಳಿನ ಕೋಶಗಳನ್ನು ಸರಿಪಡಿಸಲು ನೆರವಾಗುವುದು. ಇದರಿಂದ ನೆನಪಿನ ಶಕ್ತಿ ಸಹಿತ ಅರಿವಿನ ಕಾರ್ಯಗಳು ಸುಧಾರಣೆಯಾಗುವುದು. ಇದರೊಂದಿಗೆ ಬಾದಾಮಿಯಲ್ಲಿ ವಿಟಮಿನ್ ಬಿ6 ಎನ್ನುವ ಪೋಷಕಾಂಶವಿದ್ದು, ಇದು ಮೆದುಳಿನ ಆರೋಗ್ಯ ವೃದ್ಧಿಸುವುದು ಮತ್ತು ವಿಟಮಿನ್ ಇ ಮೆದುಳಿನ ಕೋಶಗಳಿಗೆ ಬೇಗನೆ ವಯಸ್ಸಾಗುವುದನ್ನು ತಡೆಯುವುದು.

ನೇರಳೆ ಮತ್ತು ಸ್ಟ್ರಾಬೆರಿ ಸ್ಮೂಥಿ

ನೇರಳೆ ಮತ್ತು ಸ್ಟ್ರಾಬೆರಿ ಸ್ಮೂಥಿ

ಬೆರ್ರಿಗಳಲ್ಲಿ ಇರುವಂತಹ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಕೋಶಗಳಿಗೆ ಹಾನಿಯಾಗದಂತೆ ತಡೆಯುವುದು. ಇದರಲ್ಲಿ ಇರುವಂತಹ ವಿಟಮಿನ್ ಸಿ ನೆನಪಿನ ಶಕ್ತಿ ಹೆಚ್ಚಿಸುವುದು. ಸ್ವಲ್ಪ ಸ್ಟ್ರಾಬೆರಿ ಮತ್ತು ನೇರಳೆ ತೆಗೆದುಕೊಳ್ಳಿ. ಇದಕ್ಕೆ ಅರ್ಧ ಕಪ್ ಮೊಸರು, ಸ್ವಲ್ಪ ಹಾಲು ಹಾಕಿ ಸ್ಮೂಥಿ ಮಾಡಿ.

ಕಡು ಚಾಕಲೇಟ್ ಶೇಕ್

ಕಡು ಚಾಕಲೇಟ್ ಶೇಕ್

ಕಡು ಬಣ್ಣದ ಚಾಕಲೇಟ್ ಮೆದುಳಿಗೆ ರಕ್ತ ಸಂಚಾರವನ್ನು ಸುಧಾರಿಸುವುದು. ಇದರಿಂದ ನೆನಪಿನ ಶಕ್ತಿ ಹೆಚ್ಚುವುದು. ಗಮನ ಕೇಂದ್ರೀಕರಿಸುವುದು, ಪ್ರತಿಕ್ರಿಯಿಸುವುದು ಮತ್ತು ಸಮಸ್ಯೆ ಬಗೆಹರಿಸುವಂತಹ ಸಾಮರ್ಥ್ಯ ಹೆಚ್ಚಾಗುವುದು. ಕಡುಗಪ್ಪು ಚಾಕಲೇಟಿನಲ್ಲಿ ಆ್ಯಂಟಿಆಕ್ಸಿಡೆಂಟ್ ಗಳಿವೆ ಮತ್ತು ಇದರಲ್ಲಿ ಇರುವ ಕೆಫಿನ್ ಮಕ್ಕಳು ಯಾವಾಗಲೂ ಚುರುಕು ಮತ್ತು ಜಾಗೃತವಾಗಿರುವಂತೆ ನೋಡಿಕೊಳ್ಳುವುದು. ರಕ್ತದೊತ್ತಡ ನಿಯಂತ್ರಣದಲ್ಲಿಟ್ಟು, ಮೆದುಳು ಹಾಗೂ ಹೃದಯಕ್ಕೆ ಸರಿಯಾಗಿ ರಕ್ತ ಸಂಚಾರವಾಗುವಂತೆ ಮಾಡುವುದು. ಹಾಲಿನಲ್ಲಿ ಇರುವಂತಹ ವಿಟಮಿನ್ ಡಿ ಮೆದುಳಿನ ಆರೋಗ್ಯ, ನೆನಪಿನ ಸುಧಾರಣೆ ಮತ್ತು ಆರೋಗ್ಯಕರ ಪರಿಚಲನೆಗೆ ನೆರವಾಗುವುದು.

ಬೀಟ್ ರೂಟ್ ಜ್ಯೂಸ್

ಬೀಟ್ ರೂಟ್ ಜ್ಯೂಸ್

ಬೀಟ್ ರೂಟ್ ಜ್ಯೂಸ್ ನಲ್ಲಿ ವಿಟಮಿನ್ ಸಿ, ಎ ಮತ್ತು ಕೆ, ಬೆಟಾ ಕ್ಯಾರೋಟಿನ್, ಪಾಲಿಫೆನಾಲ್ಸ್, ಆ್ಯಂಟಿಆಕ್ಸಿಡೆಂಟ್ ಮತ್ತು ಫಾಲೆಟ್ ನೊಂದಿಗೆ ಇತರ ಕೆಲವು ಪೋಷಕಾಂಶಗಳು ಇದರಲ್ಲಿವೆ. ಇದಕ್ಕಾಗಿ ಹಸಿ ಬೀಟ್ ರೂಟಿನ ಅರ್ಧ ಭಾಗವನ್ನು ತುರಿದು ಕೊಂಚ ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆದು ರಸ ಹಿಂಡಿ ತೆಗೆಯಿರಿ, ಪ್ರತಿದಿನ ಮಕ್ಕಳಿಗೆ ಅರ್ಧ ಲೋಟ ಸೇವಿಸಲು ನೀಡಿ..

ಬೆಲ್ಲದ ಚಹಾ

ಬೆಲ್ಲದ ಚಹಾ

ಬೆಲ್ಲವು ಆ್ಯಂಟಿಆಕ್ಸಿಡೆಂಟ್ ಗಳಿಂದ ಸಮೃದ್ಧವಾಗಿದ್ದು, ಇದು ದೇಹದ ಸಂಪೂರ್ಣ ಪ್ರತಿರೋಧಕ ಶಕ್ತಿ ಕಾಪಾಡುವುದು.

ಚಾಕೊಲೇಟ್ ಮಿಲ್ಕ್ ಶೇಕ್

ಚಾಕೊಲೇಟ್ ಮಿಲ್ಕ್ ಶೇಕ್

ಮಕ್ಕಳ೦ತೂ ಚಾಕೊಲೇಟ್ ಮಿಲ್ಕ್ ಶೇಕ್ ಅನ್ನು ಬಹುವಾಗಿ ಇಷ್ಟಪಡುತ್ತಾರೆ. ಮಕ್ಕಳಿಗಾಗಿ ತಯಾರಿಸಲಾಗುವ ಚಾಕೋಲೇಟ್ ಮಿಲ್ಕ್ ಶೇಕ್ ಗೆ ಹಾಲು, ವೆನಿಲಾ, ಐಸ್ ಕ್ರೀಮ್, ಚಾಕೋಲೇಟ್ ಸಿರಪ್, ಹಾಗೂ ಬಿಸ್ಕತ್ತುಗಳು ಬೇಕಾಗುತ್ತವೆ. ಬಿಸ್ಕತ್ ಅನ್ನು ಹೊರತುಪಡಿಸಿ ಮಿಕ್ಕೆಲ್ಲಾ ಸಾಮಗ್ರಿಗಳನ್ನು ಅವು ನೊರೆಯನ್ನು೦ಟು ಮಾಡುವ೦ತೆ ಚೆನ್ನಾಗಿ ಬೆರೆಸಿರಿ. ನ೦ತರ ಇದಕ್ಕೆ ಬಿಸ್ಕತ್ತುಗಳನ್ನು ಸೇರಿಸಿ ಒ೦ದು ನಿಮಿಷದವರೆಗೆ ಹಾಗೆಯೇ ಚೆನ್ನಾಗಿ ಮಿಶ್ರಮಾಡಿರಿ. ಮೇಲ್ಭಾಗದಲ್ಲಿ ಹಾಲಿನ ಕೆನೆಯನ್ನು ಅವಶ್ಯವಿದ್ದಲ್ಲಿ ಸೇರಿಸಬಹುದು.

ಮಿ೦ಟ್ ಚಿಪ್ ಮಿಲ್ಕ್ ಶೇಕ್

ಮಿ೦ಟ್ ಚಿಪ್ ಮಿಲ್ಕ್ ಶೇಕ್

ಎಲ್ಲಾ ಅತ್ಯಾವಶ್ಯಕವಾದ ವಿಟಮಿನ್‌ಗಳನ್ನು ಒಳಗೊ೦ಡಿರುವುದರಿ೦ದ, ಮಕ್ಕಳಿಗೆ ನೀಡಬಹುದಾದ ಆರೋಗ್ಯದಾಯಕ ಪೇಯಗಳ ಪೈಕಿ ಮಿ೦ಟ್ ಚಿಪ್ ಮಿಲ್ಕ್ ಶೇಕ್ ಕೂಡ ಒ೦ದಾಗಿದೆ. ಮಕ್ಕಳು ಇದರ ಸ್ವಾದವನ್ನು ಮೆಚ್ಚಿಕೊಳ್ಳುತ್ತಾರೆ. ಕತ್ತರಿಸಿರುವ ಬಾಳೆಹಣ್ಣು, ಎಳೆ ಪಾಲಕ್ ಸೊಪ್ಪು ಅಥವಾ ಪಾಲಕ್ ನ ಚಿಗುರು, ಪೆಪ್ಪರ್ ಮಿ೦ಟ್ ನ ಸಾರ, ತಾಜಾ ಪುದಿನ ಸೊಪ್ಪಿನ ಎಲೆಗಳು, ಹಾಗೂ ವೆನಿಲಾದ ಸಾರವನ್ನು ಅವು ನಯವಾಗುವವರೆಗೆ ಹಾಲನೊ೦ದಿಗೆ ಬೆರೆಸಿ ಕಲಕಿರಿ. ರುಚಿಯನ್ನು ಹೆಚ್ಚಿಸುವುದಕ್ಕಾಗಿ ಚಾಕೋಲೇಟ್ ಚಿಪ್ಸ್‌ಗಳನ್ನೂ ಕೂಡ ಇದಕ್ಕೆ ಬೆರೆಸಬಹುದು.

ಬಾಳೆಹಣ್ಣು, ಹಾಗೂ ಅವಕಾಡೋ ಮಿಲ್ಕ್ ಶೇಕ್

ಬಾಳೆಹಣ್ಣು, ಹಾಗೂ ಅವಕಾಡೋ ಮಿಲ್ಕ್ ಶೇಕ್

ಹಾಲು, ಬಾಳೆಹಣ್ಣು, ಹಾಗೂ ಅವಕಾಡೋಗಳನ್ನು ಚೆನ್ನಾಗಿ ಬೆರೆಸಿ ಇವುಗಳ ಜೊತೆಗೆ ಕೊಕೊವಾ ಪುಡಿ, ಜೇನುತುಪ್ಪ, ಹಾಗೂ ಅಗಸೆ ಬೀಜಗಳನ್ನೂ ಕೂಡ ಮಿಶ್ರಗೊಳಿಸಿ ನಯವಾದ ಪದರವು ಬರುವವರೆಗೆ ಕಲಕಲಾಗುತ್ತದೆ. ಅವಕಾಡೋ ಹಾಗೂ ಅಗಸೆ ಬೀಜಗಳು ವಿಟಮಿನ್ ಗಳಿ೦ದ ಸಮೃದ್ಧವಾಗಿದ್ದು, ಇವು ಮಕ್ಕಳ ಆರೋಗ್ಯಕ್ಕೆ ಬಹಳ ಉತ್ತಮವಾಗಿವೆ., ಅಲ್ಲದೆ ಮಕ್ಕಳ ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತದೆ

English summary

Natural drinks that will help kids perform better in exams

Exam season will start soon. Students often suffer from lack of concentration, memory problems, low immunity, stress, infections and other conditions during exam months. Here are some natural drinks by recomonded by health expert that will help students concentrate better in exams, beat stress and be healthy.