ಮಕ್ಕಳ ಆರೋಗ್ಯಕ್ಕೆ ಕೆಚಪ್‌ ಒಳ್ಳೆಯದಲ್ಲ, ಇಂದೇ ನಿಲ್ಲಿಸಿ!

By: manu
Subscribe to Boldsky

ಸಮೋಸ, ಬ್ರೆಡ್, ಫ್ರೆಂಚ್ ಫ್ರೈ ಹೀಗೆ ಹಲವಾರು ರೀತಿಯ ತಿಂಡಿಗಳನ್ನು ತಿನ್ನಲು ಟೊಮೆಟೋ ಕೆಚಪ್ ಬಳಸಿಕೊಳ್ಳುತ್ತೇವೆ. ಅದರಲ್ಲೂ ಮಕ್ಕಳಿಗೆ ಟೊಮೆಟೊ ಕೆಚಪ್ ಎಂದರೆ ತುಂಬಾ ಇಷ್ಟ. ದೊಡ್ಡವರು ಕೂಡ ಫಿಜ್ಜಾ, ಬರ್ಗರ್ ಮತ್ತಿತರ ಫಾಸ್ಟ್ ಫುಡ್ ಗಳಲ್ಲಿ ಕೆಚಪ್ಹಾ ಕಿಕೊಂಡು ತಿನ್ನುತ್ತಾರೆ. ಕೆಚಪ್‍‌ನಲ್ಲಿ ತಿನ್ನಲು ತುಂಬಾ ಇಷ್ಟವಾದರೂ ಇದು ಆರೋಗ್ಯಕ್ಕೆ ಒಳ್ಳೆಯದೇ ಅಥವಾ ಕೆಟ್ಟದೇ ಎನ್ನುವ ಬಗ್ಗೆ ವಾದ ನಡೆಯುತ್ತಲೇ ಇದೆ. 

ಅಚ್ಚರಿ ಜಗತ್ತು: 'ಕೆಚಪ್' ಪ್ರಿಯರು ಓದಲೇಬೇಕಾದ ಲೇಖನವಿದು...

ಕೆಚಪ್‌ನಲ್ಲಿ ಇರುವಂತಹ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ಆದರೆ ಮಕ್ಕಳು ಅತಿಯಾಗಿ ಕೆಚಪ್ ತಿಂದರೆ ಅದರಿಂದ ಸಮಸ್ಯೆಯಾಗಬಹುದು. ದೀರ್ಘಕಾಲದ ತನಕ ಇದನ್ನು ತಿಂದರೆ ಅದರಿಂದ ಹಲವಾರು ರೀತಿಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದರ ಬಗ್ಗೆ ತಿಳಿಯಲು ಬೋಲ್ಡ್ ಸ್ಕೈ ಈ ಲೇಖನವನ್ನು ನಿಮ್ಮ ಮುಂದಿಡುತ್ತಾ ಇದೆ....  

ಸಕ್ಕರೆ ಅಂಶ

ಸಕ್ಕರೆ ಅಂಶ

ಕೆಚಪ್ ಆರೋಗ್ಯಕಾರಿಯಾ ಅಥವಾ ಅನಾರೋಗ್ಯಕಾರಿಯಾ ಎನ್ನುವ ಪ್ರಶ್ನೆಗೆ ಮೊದಲು ಕೆಚಪ್ ನಲ್ಲಿ ಶೇ.25ರಷ್ಟು ಸಕ್ಕರೆ ಅಂಶವಿದೆ. ಇದು ತುಂಬಾ ರುಚಿಕರ. ಆದರೆ ಇಷ್ಟು ಪ್ರಮಾಣದ ಸಕ್ಕರೆ ನಿಮ್ಮ ಮಗುವಿಗೆ ಬೇಕಿಲ್ಲ. ನಿಮ್ಮ ಮಗುವಿಗೆ ಇತರ ಮೂಲಗಳಿಂದಲೂ ಸಕ್ಕರೆ ಸಿಗುವುದು. ವಾಣಿಜ್ಯ ಕೆಚಪ್‌ಗಳು ಅತಿಯಾದ ಸಕ್ಕರೆಯಂಶ ಹೊಂದಿರುತ್ತದೆ.

ನಿಮ್ಮ ಮಗು

ನಿಮ್ಮ ಮಗು

ಕೆಚಪ್‌ನ ರುಚಿಯಿಂದಾಗಿ ಮಗು ಅದನ್ನು ಇಷ್ಟಪಡುವುದರಿಂದ, ಕ್ರಮೇಣ, ಊಟ ತಿಂಡಿಗಳಿಂದ ದೂರವಿರಲು ಪ್ರಯತ್ನಿಸುತ್ತದೆ, ಅಲ್ಲದೆ ಪ್ರತಿಯೊಂದು ತಿಂಡಿ ತಿನಿಸಿಗೂ ಕೆಚಪ್‌ ಬೇಕೆಂದು ಹಠ ಮಾಡಬಹುದು, ಇದರಿಂದ ಹಲವಾರು ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು.

ಸೋಡಿಯಂ

ಸೋಡಿಯಂ

ಇಂದಿನ ದಿನಗಳಲ್ಲಿ ಕೆಚಪ್‍‌ಗೆ ಅತಿಯಾದ ಸೋಡಿಯಂ ಬಳಸಿಕೊಳ್ಳುವುದು ತುಂಬಾ ಅಪಾಯಕಾರಿ. ಮಕ್ಕಳಿಗೆ ಇತರ ಮೂಲಗಳಿಂದಲೂ ಸೋಡಿಯಂ ಲಭ್ಯವಾಗುವುದು. ಇದರಿಂದ ಕೆಚಪ್ ಕಡಿಮೆ ಮಾಡಿ.

ಅತಿ ಫ್ರಕ್ಟೋಸ್

ಅತಿ ಫ್ರಕ್ಟೋಸ್

ಕೆಚಪ್ ನಲ್ಲಿ ಇರುವ ಮತ್ತೊಂದು ಆರೋಗ್ಯ ಅಪಾಯವೆಂದರೆ ಕಾರ್ನ ಸಿರಫ್. ಹೆಚ್ಚಿನ ಕೆಚಪ್ ಗಳಲ್ಲಿ ಫ್ರಕ್ಟೋಸ್ ಮಟ್ಟವು ಅತಿಯಾಗಿರುವ ಕಾರಣದಿಂಧಾಗಿ ಇದು ಮಧುಮೇಹ ಮತ್ತು ಬೊಜ್ಜಿಗೆ ಕಾರಣವಾಗುವ ಅಪಾಯ ಹೆಚ್ಚು. ಬೆಳಿಗ್ಗೆ ಉಪಾಹಾರಕ್ಕೆ ಅತಿಯಾಗಿ ಕೆಚಪ್ ಬಳಸಿದರೆ ಅದರಿಂದ ಮಗು ಇತರ ಕೆಲವೊಂದು ಸಮಸ್ಯೆಗಳಿಗೂ ಸಿಲುಕಬಹುದು.

ಕೆಚಪ್ ಆರೋಗ್ಯಕಾರಿಯೇ?

ಕೆಚಪ್ ಆರೋಗ್ಯಕಾರಿಯೇ?

ಇಲ್ಲ, ಇದು ತುಂಬಾ ಅನಾರೋಗ್ಯಕಾರಿ. ನಿಮ್ಮ ಮಗು ದೊಡ್ಡದಾದ ಬಳಿಕ ಕೆಚಪ್ ಮತ್ತು ಸಾಸ್‌ನ ರುಚಿಯನ್ನು ಸವಿಯುವಂತೆ ಮಾಡಿ. ದೊಡ್ಡವರಾದ ಬಳಿಕ ಆತ ಅಥವಾ ಆಕೆ ಕೆಚಪ್ ಸೇವನೆಯನ್ನು ಎಷ್ಟರ ಮಟ್ಟಿಗೆ ಮಾಡಬಹುದು ಎಂದು ತಿಳಿದುಕೊಳ್ಳಲು ಸಮರ್ಥರಿರುತ್ತಾರೆ.

English summary

Why Ketchup Is Bad For Your Kid!

Is ketchup healthy or unhealthy? Toasts, bread, salads, fries or even burgers are tasteless without tomato ketchup! Dip those foods in a cup of ketchup and you will feel like thanking your taste buds. Most of us think that ketchup is harmless. On the top of it, as it contains tomatoes, we think that all the nutrients of tomatoe do a lot of good. But wait! Let not your kids eat too much of ketchup. Yes, it could cause several health issues over long term use or consumption. Here are some quick facts to help you out.
Subscribe Newsletter