For Quick Alerts
ALLOW NOTIFICATIONS  
For Daily Alerts

ಆಹಾರದ ಅಲರ್ಜಿ ಮಕ್ಕಳಿಗೆ ಮಾರಕ! ಏಕೆ?

By Arshad
|

ಇತ್ತೀಚೆಗೆ ಹದಿಹರೆಯದ ಬಾಲಕನೊಬ್ಬ ಸಾವಿಗೀಡಾದ. ಕಾರಣ: ಚೀಸ್‌ಗೆ ಈತನ ದೇಹದಲ್ಲಿ ಇದ್ದ ಸರಳ ಅಲರ್ಜಿ. ಈ ಬಾಲಕನಿಗೆ ಡೈರಿ ಉತ್ಪನ್ನಗಳು ಹಾಗೂ ಗೋಧಿ ಮೊದಲಾದ ಕಾಳುಗಳಲ್ಲಿರುವ ಗ್ಲುಟೆನ್‌ಗೆ ಅಲರ್ಜಿ ಇತ್ತು. ಸಾಮಾನ್ಯವಾಗಿ ಎಲ್ಲರಿಗೂ ಒಂದಲ್ಲಾ ಒಂದು ಆಹಾರಕ್ಕೆ ಅಲರ್ಜಿ ಇದ್ದೇ ಇರುತ್ತದೆ. ಈ ಅಲರ್ಜಿಯಿಂದ ಚರ್ಮ ಕೆಂಪಗಾಗುವುದು ಬಿಟ್ಟರೆ ಬೇರೇನೋ ತೊಂದರೆ ಇಲ್ಲವೆಂದುಕೊಂಡು ಅಲಕ್ಷಿಸಿದರೆ ಇದು ಮುಂದೆ anaphylactic shock ಎಂಬ ಅಲರ್ಜಿಯ ಕಾರಣದಿಂದ ಎದುರಾಗುವ ಆಘಾತಕ್ಕೆ ಕಾರಣವಾಗಬಹುದು.

ಇದು ಹೆಚ್ಚಿನ ಸಂದರ್ಭಗಳಲ್ಲಿ ಪ್ರಾಣಕ್ಕೇ ಕುತ್ತಾಗಬಹುದು. ಈ ಬಾಲಕನಿಗೆ ಆಗಿದ್ದೂ ಇದೇ! ವಿಶೇಷವಾಗಿ ಮಕ್ಕಳಲ್ಲಿ ಈ ಅಲರ್ಜಿ ಹೆಚ್ಚು ಮಾರಕವಾಗಿದೆ. ಈ ಅಲರ್ಜಿಗೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯೇ ಪರೋಕ್ಷ ಕಾರಣವಾಗಿದೆ. ಆಹಾರದ ಕೆಲವು ಕಣಗಳನ್ನು ಈ ವ್ಯವಸ್ಥೆ ವೈರಿ ಕಣಗಳೆಂದೇ ತಿಳಿದುಕೊಂಡು ಒಳಗಿನಿಂದ ಆಕ್ರಮಣ ಎಸಗುತ್ತದೆ. ಇದೇ ಅಲರ್ಜಿಯ ಆಘಾತ....

ಅಲರ್ಜಿಕಾರಕವಾದ ಆಹಾರಗಳು

ಅಲರ್ಜಿಕಾರಕವಾದ ಆಹಾರಗಳು

ಸಾಮಾನ್ಯವಾಗಿ ಈ ಅಲರ್ಜಿಗಳು ಚರ್ಮ ಕೆಂಪಗಾಗುವುದು, ತುರಿಸುವುದು ಮೊದಲಾದ ತೊಂದರೆಗಳನ್ನು ಉಂಟುಮಾಡುತ್ತವೆಯೇ ವಿನಃ ಪ್ರಾಣಾಂತಿಕ ಅಪಾಯವಲ್ಲ. ಆದರೆ ಈ ಅಲರ್ಜಿಯನ್ನು ನಿರ್ಲಕ್ಷಿಸಿದರೆ ದಿನೇ ದಿನೇ ರೋಗ ನಿರೋಧಕ ಶಕ್ತಿ ಈ ಕಣಗಳನ್ನು ಹೆಚ್ಚು ಹೆಚ್ಚಾಗಿ ವೈರಿಯಂತೆ ಪರಿಗಣಿಸುತ್ತಾ ಹೆಚ್ಚು ಪ್ರಬಲ ಪ್ರತಿರೋಧ ಉಂಟುಮಾಡುವ ಮೂಲಕ ಅಪಾಯ ಉಂಟುಮಾಡಬಹುದು. ಹೀಗೆ ಮಕ್ಕಳಿಗೆ ಅಲರ್ಜಿಕಾರಕವಾದ ಸಾಮಾನ್ಯ ಆಹಾರಗಳೆಂದರೆ ಮೀನು, ಹಾಲು, ಮೊಟ್ಟೆ, ಒಣಫಲಗಳು ಹಾಗೂ ಗೋಧಿ.

ಈ ಅಲರ್ಜಿ ಬೆಳೆಯುವುದು ಹೇಗೆ?

ಈ ಅಲರ್ಜಿ ಬೆಳೆಯುವುದು ಹೇಗೆ?

ಪ್ರಾರಂಭದಲ್ಲಿ ಇದು ತುರಿಕೆ ಮತ್ತು ಚರ್ಮ ಕೆಂಪಗಾಗಿಸಿದರೆ ಕ್ರಮೇಣ ತುರಿಕೆ ಹೆಚ್ಚಾಗಿ ತುರಿಸಿದ ಭಾಗ ಬಾತುಕೊಳ್ಳಲು ತೊಡಗುತ್ತದೆ. ಬಳಿಕ ಮಕ್ಕಳಿಗೆ ಉಸಿರಾಟದ ತೊಂದರೆ, ಉಸಿರು ಕಟ್ಟುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಅಂದರೆ ಈ ಹಂತದಲ್ಲಿ ಅಲರ್ಜಿ ಹೆಚ್ಚು ಪ್ರಭಾವಶಾಲಿಯಾಗಿದೆ ಎಂದು ತಿಳಿದುಕೊಂಡು ತಕ್ಷಣವೇ ಚಿಕಿತ್ಸೆ ಪ್ರಾರಂಭಿಸಬೇಕು. ಇದನ್ನು ಮೀರಿದರೆ ವಾಂತಿ, ಅತಿಸಾರ, ಸ್ನಾಯುಗಳ ಸೆಡೆತ ಮೊದಲಾದವು ಎದುರಾಗುತ್ತವೆ. ಇದು ಇನ್ನೂ ಭೀಕರ ಹಂತಕ್ಕೂ ತಲುಪಬಹುದು.

ಅಲರ್ಜಿಯ ಚಿಹ್ನೆಗಳು

ಅಲರ್ಜಿಯ ಚಿಹ್ನೆಗಳು

ಕೆಲವು ಮಕ್ಕಳಲ್ಲಿ ಮೇಲೆ ವಿವರಿಸಿದ ಸೂಚನೆಗಳ ಹೊರತಾಗಿ ತಲೆಸುತ್ತುವುದು, ಮೂರ್ಛೆ ಹೋಗುವುದು ಸಹಾ ಕಂಡುಬರುತ್ತದೆ. ಕೆಲವು ಮಕ್ಕಳಲ್ಲಿ ಬ್ರಾಂಖೋಸ್ಪಾಸಮ್ ಅಥವಾ ಉಸಿರಿನ ನಾಳ ಹೆಚ್ಚೂ ಕಡಿಮೆ ಮುಚ್ಚಿಹೋಗಿರುವ ಸಂಭವವೂ ಎದುರಾಗುತ್ತದೆ. ಕಡೆಗೆ ಉಸಿರಾಟ ಸಾಧ್ಯವಾಗದೇ ಸಾವು ಸಂಭವಿಸುತ್ತದೆ.

ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು?

ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕು?

ಒಂದು ವೇಳೆ ಯಾವುದಾದರೂ ಮಕ್ಕಳಿಗೆ ಈಗಾಗಲೇ ಮಧುಮೇಹ ಅಥವಾ ಅಸ್ತಮಾ ರೋಗವಿದ್ದರೆ ಆಹಾರದ ಅಲರ್ಜಿ ಇನ್ನಷ್ಟು ಅಪಾಯಕಾರಿಯಾಗಬಹುದು. ಆದ್ದರಿಂದ ಮಕ್ಕಳಿಗೆ ಯಾವುದಾದರೊಂದು ಆಹಾರ ಅಲರ್ಜಿಕಾರ ಎಂದು ತಿಳಿದುಬಂದರೆ ಆ ಆಹಾರವಸ್ತುಗಳಿರುವ ಯಾವುದೇ ತಿನಿಸುಗಳನ್ನು ಮಕ್ಕಳಿಗೆ ತಿನ್ನಲು ಕೊಡಬಾರದು ಹಾಗೂ ಎಲ್ಲಿಯೂ ಯಾರಿಂದಲೂ ಸ್ವೀಕರಿಸಬಾರದು ಎಂದು ಮಕ್ಕಳಿಗೆ ಸ್ಪಷ್ಟವಾಗಿ ತಿಳಿ ಹೇಳಬೇಕು. ಪ್ರಸ್ತುತ ಈ ಅಲರ್ಜಿಗೆ ಯಾವುದೇ ಸಿದ್ಧೌಷಧಿಯಿಲ್ಲ. ಇದಕ್ಕೆ ಅಲರ್ಜಿ ಇರುವ ಆಹಾರಗಳನ್ನು ಮಕ್ಕಳು ತಿನ್ನದಿರುವಂತೆ ಮುನ್ನೆಚ್ಚರಿಕೆ ವಹಿಸುವುದೇ ಸರಿಯಾದ ಕ್ರಮವಾಗಿದೆ.

ಭವಿಷ್ಯ

ಭವಿಷ್ಯ

ಕೆಲವು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಾಲ ಕ್ರಮೇಣ ಸರಿಯಾಗುತ್ತಾ ಪ್ರೌಢಾವಸ್ಥೆ ತಲುಪಿದ ಬಳಿಕ ಅಲರ್ಜಿ ತನ್ನಿಂತಾನೇ ಮಾಯವಾಗುತ್ತದೆ. ಆದರೆ ಪ್ರೌಢಾವಸ್ಥೆ ತಲುಪುವವರೆಗೂ ಅಲರ್ಜಿಕಾರಕ ಆಹಾರಗಳಿಂದ ಇವರನ್ನು ದೂರವಿಡುವುದು ಅಗತ್ಯ. ಬಳಿಕ ಹೆಚ್ಚಿನ ತೊಂದರೆಯಿಲ್ಲ. ವಯಸ್ಸಾದ ಬಳಿಕ ಈ ಅಲರ್ಜಿ ಕಡಿಮೆಯಾಗುತ್ತಾ ಕ್ರಮೇಣ ಇಲ್ಲವಾಗುತ್ತದೆ. ಆದರೂ ಮಕ್ಕಳನ್ನು ಕಾಲಕಾಲಕ್ಕೆ ವೈದ್ಯರಿಂದ ತಪಾಸಣೆಗೊಳಿಸಿ ಸೂಕ್ತ ಔಷಧಿಗಳನ್ನು ವೈದ್ಯರ ಸಲಹೆ ಮೇರೆಗೆ ಪಡೆದುಕೊಳ್ಳುತ್ತಾ ಇರಬೇಕು.

English summary

Why Food Allergy Is Fatal For Kids?

It would surprise you but a teenager recently lost his life due to a simple food allergy towards cheese. The boy in question was actually allergic to dairy and gluten. Most of us think that a food allergy can simply give a rash and nothing else. But it can even cause anaphylactic shock! Especially in children, food allergies could create havoc. The problem is with the immune system which hyper reacts when it mistakes food items to be foreign particles.
X
Desktop Bottom Promotion