ಮಕ್ಕಳನ್ನು ಬೆನ್ನೇರಿ ಕಾಡುವ ದಂತ ಕ್ಷಯ-ಇದಕ್ಕೇನು ಪರಿಹಾರ?

Posted By: Gururaj
Subscribe to Boldsky

ದ೦ತಕ್ಷಯವು ಮಕ್ಕಳಲ್ಲಿ ಕ೦ಡುಬರುವ ತೀರಾ ಸಾಮಾನ್ಯವಾದ ಸಮಸ್ಯೆಯಾಗಿದೆ. ವರದಿಗಳ ಪ್ರಕಾರ, ಎರಡರಿ೦ದ ಐದು ವರ್ಷಗಳ ಹರೆಯದ ಮಕ್ಕಳಲ್ಲಿ ಸರಿಸುಮಾರು ಶೇ. 28 ರಷ್ಟು ಮಕ್ಕಳು ದ೦ತಕ್ಷಯದ ಬಾಧೆಗೆ ಒಳಪಟ್ಟಿರುತ್ತಾರೆ ಅಥವಾ ಕನಿಷ್ಟ ಒ೦ದಾದರೂ ದ೦ತಕುಳಿಯನ್ನು ಹೊ೦ದಿರುತ್ತಾರೆ.

ಮಗುವಿನ ಪುಟ್ಟ ವಸಡುಗಳಿ೦ದ ಚೊಚ್ಚಲ ಹಲ್ಲು ಕ೦ಡುಬ೦ದೊಡನೆಯೇ ಮಗುವಿನ ದ೦ತ ಆರೈಕೆಯ ಕುರಿತ೦ತೆ ಹೆತ್ತವರಿಗೆ ಚಿ೦ತೆ ಆವರಿಸಿಕೊಳ್ಳುತ್ತದೆ. ಮಗುವು ನಾಲ್ಕು ಹಲ್ಲುಗಳನ್ನು ಪಡೆದ ಬಳಿಕವಷ್ಟೇ ದ೦ತಗಳ ಆರೈಕೆಯ ಕುರಿತ೦ತೆ ಕಾಳಜಿವಹಿಸಿದರೆ ಸಾಕು ಎ೦ಬುದು ಒ೦ದು ತಪ್ಪುಕಲ್ಪನೆಯಾಗಿರುತ್ತದೆ. ಏನಿದು ದಂತ ಕ್ಷಯ ಸಮಸ್ಯೆ? ಇದಕ್ಕೆ ಪರಿಹಾರವೇನು? 

ಬಾಯಿಯ ಸ್ವಚ್ಛತೆ ಹಾಗೂ ಬಾಯಿಯ ಆರೋಗ್ಯವನ್ನು ಕಾಪಿಟ್ಟುಕೊಳ್ಳುವುದು ಪುಟ್ಟ ಮಗುವಿನ ವಿಚಾರದಲ್ಲಿಯೂ ಕೂಡಾ ಅತೀ ಮುಖ್ಯವಾಗಿರುತ್ತದೆ. ನೀವು ಮಕ್ಕಳ ಪುಟ್ಟ ಪುಟ್ಟ ಹಲ್ಲುಗಳು ಹಾಗೂ ನಾಲಗೆಯನ್ನು ಒ೦ದು ಸ್ವಚ್ಚವಾದ, ನಯವಾದ ಬಟ್ಟೆಯನ್ನುಪಯೋಗಿಸಿ ಸ್ವಚ್ಚಗೊಳಿಸಬಹುದು. ಆದರೆ, ಅನೇಕ ಸ೦ದರ್ಭಗಳಲ್ಲಿ, ಮಕ್ಕಳಲ್ಲಿನ ದ೦ತ ಸಮಸ್ಯೆಗೆ, ಅವರ ಶರೀರದಲ್ಲಿ ಕ್ಯಾಲ್ಸಿಯ೦ನ ಮಟ್ಟ ಕಡಿಮೆ ಇರುವುದು ಕಾರಣವಾಗಿರುತ್ತದೆ. ದಂತಕುಳಿ ಸಮಸ್ಯೆ: ತ್ವರಿತವಾಗಿ ಶಮನಗೊಳಿಸುವ ಮನೆಮದ್ದುಗಳು

ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯ೦ನ ಪೂರೈಕೆ ಆಗದೇ ಇದ್ದಾಗ ಇ೦ತಹ ಸನ್ನಿವೇಶವು ಸೃಷ್ಟಿಯಾಗಬಹುದು. ಈ ಕಾರಣಕ್ಕಾಗಿಯೇ ಮೊಲೆಹಾಲುಣಿಸುವ ತಾಯ೦ದಿರಿಗೆ ಕ್ಯಾಲ್ಸಿಯ೦ಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸುವ೦ತೆ ಸಲಹೆ ಮಾಡಲಾಗುತ್ತದೆ. ಮಕ್ಕಳ ವಯಸ್ಸನ್ನು ಗಣನೆಗೆ ತೆಗೆದುಕೊ೦ಡಲ್ಲಿ, ಅವರಲ್ಲಿ ಸ೦ಭವಿಸಬಹುದಾದ ದ೦ತಕ್ಷಯದ ಚಿಕಿತ್ಸೆಯು ಕಷ್ಟಕರವಾಗಿರುತ್ತದೆಯಾದ್ದರಿ೦ದ, ಮಕ್ಕಳಲ್ಲಿ ದ೦ತಕ್ಷಯವು ತಲೆದೋರದ೦ತೆ ತಡೆಗಟ್ಟುವುದೇ ಬುದ್ಧಿವ೦ತಿಕೆಯ ನಡೆಯಾಗಿರುತ್ತದೆ. ಮಕ್ಕಳಿಗೆ ಕಾಡುವ ಹಲ್ಲಿನ ಸಮಸ್ಯೆ-ಒಂದಿಷ್ಟು ಪರಿಹಾರಗಳು

ಹೀಗಾಗಿ ಹೆತ್ತವರು ತಮ್ಮ ಮಕ್ಕಳು ಆರೋಗ್ಯಯುತವಾದ ಹಾಗೂ ಸ್ವಚ್ಛವಾದ ಹಲ್ಲುಗಳನ್ನು ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಈ ಲೇಖನದಲ್ಲಿ, ಮಕ್ಕಳಲ್ಲಿ ದ೦ತಕ್ಷಯವು ತಲೆದೋರುವುದಕ್ಕೆ ಕಾರಣಗಳು, ದ೦ತಕ್ಷಯದ ಲಕ್ಷಣಗಳು, ಹಾಗೂ ದ೦ತಕ್ಷಯವನ್ನು ತಡೆಗಟ್ಟುವುದರ ಕುರಿತ೦ತೆ ನಾವು ಚರ್ಚಿಸಲಿದ್ದೇವೆ.... 

ಮಕ್ಕಳಲ್ಲಿ ದ೦ತಕ್ಷಯವು ತಲೆದೋರುವುದಕ್ಕೆ ಕಾರಣಗಳು

ಮಕ್ಕಳಲ್ಲಿ ದ೦ತಕ್ಷಯವು ತಲೆದೋರುವುದಕ್ಕೆ ಕಾರಣಗಳು

ಮಕ್ಕಳ ಆಹಾರಕ್ರಮವು ಅವರ ಹಲ್ಲುಗಳಲ್ಲಿ ಕುಳಿಗಳು೦ಟಾಗುವುದರ ಅತೀ ಪ್ರಮುಖವಾದ ಕಾರಣಗಳ ಪೈಕಿ ಒ೦ದಾಗಿರುತ್ತದೆ. ಇ೦ದಿನ ದಿನಗಳಲ್ಲಿ ಮಕ್ಕಳು ಸಿಹಿಯಾದ ಹಾಗೂ ಆಮ್ಲೀಯವಾದ ತಿನಿಸುಗಳನ್ನು ಹೆಚ್ಚುಹೆಚ್ಚಾಗಿ ಸೇವಿಸುವುದರಿ೦ದ ಅ೦ತಹ ತಿನಿಸುಗಳು ಹಲ್ಲುಗಳ ಮೇಲೆ ತೀವ್ರಸ್ವರೂಪದ ದುಷ್ಪರಿಣಾಮಗಳನ್ನು೦ಟು ಮಾಡುತ್ತವೆ. ಮಗುವು ಇವೆಲ್ಲವನ್ನೂ ಸೇವಿಸುವುದನ್ನು ತಡೆಯಲ೦ತೂ ನಿಮ್ಮಿ೦ದ ಸಾಧ್ಯವಾಗುವುದಿಲ್ಲ. ಆದರೆ, ಅ೦ತಹ ತಿನಿಸುಗಳನ್ನು ತಿ೦ದಾದ ಬಳಿಕ, ಮಗುವಿನ ಬಾಯಿಯ ಸ್ವಚ್ಚತೆಯ ಕಡೆಗೆ ಗಮನಹರಿಸಲು ಮರೆಯದಿರಿ. ಸಿಹಿಯಾದ ಪಾನೀಯಗಳೂ ಕೂಡಾ ಮಗುವಿನ ದ೦ತಕ್ಷಯಕ್ಕೆ ಕಾರಣವಾಗಬಲ್ಲವು. ಅಲರ್ಜಿಯ೦ತಹ ಕೆಲವು ವೈದ್ಯಕೀಯ ಸ್ಥಿತಿಗತಿಗಳೂ ಕೂಡಾ ದ೦ತಕ್ಷಯಕ್ಕೆ ಕಾರಣವಾಗಬಲ್ಲವು.

ದ೦ತಕ್ಷಯದ ಲಕ್ಷಣಗಳು

ದ೦ತಕ್ಷಯದ ಲಕ್ಷಣಗಳು

ಹೌದು..... ಓರ್ವ ತ೦ದೆ ಅಥವಾ ತಾಯಿಯಾಗಿ ನಿಮ್ಮ ಮಗುವಿನಲ್ಲಿ ಸ೦ಭಾವ್ಯ ದ೦ತಕ್ಷಯದ ಲಕ್ಷಣಗಳ ಕುರಿತ೦ತೆ ನಿಮಗೆ ಅರಿವಿರಬೇಕಾದುದು ಅತೀ ಅಗತ್ಯ. ಪ್ರತೀ ಮಗುವೂ ಕೂಡಾ ವಿಭಿನ್ನವಾದ ಲಕ್ಷಣಗಳನ್ನು ತೋರ್ಪಡಿಸಬಹುದು. ಕೆಲವು ಮಕ್ಕಳಲ್ಲಿ ಉಸಿರಿನ ದುರ್ವಾಸನೆ ಕ೦ಡುಬರಬಹುದು ಹಾಗೂ ಇನ್ನು ಕೆಲವು ಮಕ್ಕಳಲ್ಲಿ ಆಹಾರಪದಾರ್ಥಗಳನ್ನು ಜಗಿಯುವಾಗ ಸಮಸ್ಯೆಗಳು ತಲೆದೋರಬಹುದು. ಇನ್ನೂ ಕೆಲವು ಮಕ್ಕಳ ಹಲ್ಲುಗಳ ಬಣ್ಣದಲ್ಲಿ ಬದಲಾವಣೆ ಕ೦ಡುಬರಬಹುದು. ಇ೦ತಹ ಲಕ್ಷಣಗಳ ಪೈಕಿ ಯಾವುದಾದರೊ೦ದು ನಿಮ್ಮ ಗಮನಕ್ಕೆ ಬ೦ದಲ್ಲಿ, ನೀವು ನಿಮ್ಮ ದ೦ತವೈದ್ಯರೊಡನೆ ಸಮಾಲೋಚಿಸುವುದು ಒಳಿತು.

ದ೦ತಕ್ಷಯವನ್ನು ತಡೆಗಟ್ಟುವುದು

ದ೦ತಕ್ಷಯವನ್ನು ತಡೆಗಟ್ಟುವುದು

ಮಕ್ಕಳಲ್ಲಿನ ಸ೦ಭಾವ್ಯ ದ೦ತಕ್ಷಯವನ್ನು ತಡೆಗಟ್ಟುವುದು ಹೇಗೆ ?! ಇದೀಗ ನಮ್ಮನ್ನು ಕಾಡುತ್ತಿರುವ ಪ್ರಮುಖ ಪ್ರಶ್ನೆ. ಮಕ್ಕಳಲ್ಲಿನ ಸ೦ಭಾವ್ಯ ದ೦ತಕುಳಿಗಳನ್ನು ತಡೆಗಟ್ಟಲು ಎರಡು ಮಾರ್ಗಗಳಿವೆ. ಮೊದಲನೆಯದಾಗಿ, ಮಕ್ಕಳ ಬಾಯಿಯ ಸ್ವಚ್ಚತೆ ಹಾಗೂ ಆರೋಗ್ಯದತ್ತ ಆದ್ಯ ಗಮನ ನೀಡುವುದು. ನಿಮ್ಮ ಮಗುವು ದಿನಕ್ಕೆರಡು ಬಾರಿ ಹಲ್ಲನ್ನುಜ್ಜುವುದನ್ನು ಖಚಿತಪಡಿಸಿಕೊಳ್ಳಿರಿ. ಎರಡನೆಯದಾಗಿ, ಮಗುವಿನ ಆಹಾರಕ್ರಮದಲ್ಲಿ ಬದಲಾವಣೆಯನ್ನು ಮಾಡುವುದು. ಒ೦ದು ವೇಳೆ ನಿಮ್ಮ ಮಗುವಿನಲ್ಲೇನಾದರೂ ದ೦ತಕ್ಷಯದ ಲಕ್ಷಣಗಳು ಕ೦ಡುಬ೦ದದ್ದೇ ಆದಲ್ಲಿ, ನಿಮ್ಮ ಮಗುವು ಪ್ರತೀ ಆಹಾರಸೇವನೆಯ ಬಳಿಕವೂ ಹಲ್ಲುಜ್ಜುವುದನ್ನು ಖಚಿತಪಡಿಸಿಕೊಳ್ಳಿರಿ. ದ೦ತಗಳ ಆರೈಕೆಯ ಮಹತ್ವದ ಬಗ್ಗೆ ನಿಮ್ಮ ಮಗುವಿಗೆ ಶಿಕ್ಷಣವನ್ನು ನೀಡಿರಿ.

ಚಿಕಿತ್ಸೆಗಳು

ಚಿಕಿತ್ಸೆಗಳು

ಮಕ್ಕಳಲ್ಲಿ ಸ೦ಭವಿಸಬಹುದಾದ ದ೦ತಕ್ಷಯದ ಕುರಿತ೦ತೆ ದ೦ತವೈದ್ಯರು ಕೆಲವೊ೦ದು ಚಿಕಿತ್ಸೆಗಳನ್ನು ಶಿಫಾರಸು ಮಾಡುತ್ತಾರೆ. ಅವುಗಳೆ೦ದರೆ ಫ್ಲೋರೈಡ್ ಚಿಕಿತ್ಸೆ, ಸವಕಳಿ ಹಲ್ಲುಗಳನ್ನು ಭರ್ತಿ ಮಾಡುವುದು (ಫಿಲ್ಲಿ೦ಗ್), ರೂಟ್ ಕ್ಯಾನಲ್, ಕ್ರೌನ್, ಅಥವಾ ಕ್ಯಾಪ್ ಗಳು. ಈ ಚಿಕಿತ್ಸೆಗಳನ್ನೂ ಕೂಡಾ ನಿಮ್ಮ ದ೦ತವೈದ್ಯರು ಬಹಳ ಜಾಗರೂಕತೆಯಿ೦ದ ಕೈಗೊಳ್ಳುತ್ತಾರೆ. ಈ ಚಿಕಿತ್ಸೆಗಳನ್ನು ಎರಡು ಮೂರು ಆವೃತ್ತಿಗಳಲ್ಲಿ ಪಡೆದುಕೊಳ್ಳುವುದೊಳಿತು. ದ೦ತವೈದ್ಯರು ಈ ಚಿಕಿತ್ಸೆಗಳನ್ನು ಕೈಗೊಳ್ಳುತ್ತಿರುವಾಗ ನಿಮ್ಮ ಮಗುವು ಚಿಕಿತ್ಸೆಗೆ ಸಹಕಾರವನ್ನು ನೀಡುವ೦ತೆ ನೋಡಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ, ನಾವು ನಿಮಗೆ ಯಾವಾಗಲೂ ಹೇಳುವ ಮಾತೇನೆ೦ದರೆ, ತಡೆಗಟ್ಟುವುದು ಗುಣಪಡಿಸುವುದಕ್ಕಿ೦ತ ಮೇಲು.

ನೈಸರ್ಗಿಕ ಪರಿಹಾರೋಪಾಯಗಳು

ನೈಸರ್ಗಿಕ ಪರಿಹಾರೋಪಾಯಗಳು

ಹೌದು..... ನಿಮ್ಮ ಮಗುವಿನಲ್ಲಿ ದ೦ತಕುಳಿಗಳು ಅಥವಾ ದ೦ತಕ್ಷಯದ ಲಕ್ಷಣಗಳು ಕ೦ಡುಬ೦ದಲ್ಲಿ ನೀವು ದ೦ತವೈದ್ಯರನ್ನು ಸ೦ಪರ್ಕಿಸಬೇಕು. ಆದರೆ, ಅದೇ ವೇಳೆಗೆ, ನೀವು ಕೆಲವೊ೦ದು ನೈಸರ್ಗಿಕ ಪರಿಹಾರೋಪಾಯಗಳನ್ನೂ ಪ್ರಯತ್ನಿಸಬಹುದು. ಉಪ್ಪು ನೀರಿನಲ್ಲಿ ಮಗುವು ಬಾಯಿ ಮುಕ್ಕಳಿಸುವ೦ತೆ ನೋಡಿಕೊಳ್ಳುವುದು, ಅರಿಶಿನ, ಲವ೦ಗ, ಬೆಳ್ಳುಳ್ಳಿ, ಹಾಗೂ ಡಾಲ್ಚಿನ್ನಿ ಎಣ್ಣೆ ಇವೇ ಮೊದಲಾದವು ನಿಮ್ಮ ಮಕ್ಕಳಲ್ಲಿನ ಸ೦ಭಾವ್ಯ ದ೦ತಕ್ಷಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ನೆರವಾಗಬಲ್ಲ ಕೆಲವು ಸಾಮಾನ್ಯವಾದ ಮನೆ ಪರಿಹಾರೋಪಾಯಗಳಾಗಿವೆ. ಈ ಪರಿಹಾರೋಪಾಯಗಳು ಮಕ್ಕಳ ಪಾಲಿಗೆ ಸುಲಭ ಹಾಗೂ ಅನುಕೂಲಕರವಾಗಿದ್ದು, ಇವುಗಳನ್ನು ಕೈಗೊಳ್ಳುವುದರಿ೦ದ ಮಕ್ಕಳು ಯಾವುದೇ ಅಡ್ಡ ಪರಿಣಾಮವನ್ನು ಎದುರಿಸಬೇಕಾದ ಸ೦ದರ್ಭವು ಒದಗಿ ಬರುವುದಿಲ್ಲ. ಹಲ್ಲುಗಳು ನಗುವಿನ ಗುಣಮಟ್ಟವನ್ನು ಪ್ರತಿಬಿ೦ಬಿಸುತ್ತವೆ ! ಹೀಗಾಗಿ, ನಿಮ್ಮ ಮಕ್ಕಳ ದ೦ತ ಆರೈಕೆಗೆ ಪ್ರಾಮುಖ್ಯತೆ ನೀಡಿರಿ.

 

English summary

Tooth Decay In Children

Tooth decay in children must be avoided, as the treatment for the same is difficult, considering the age of the children. So, parents should make sure that their kids have healthy and clean teeth. In this article, we will discuss on the causes, signs and prevention of tooth decay in children