Latest Updates
-
ಆರ್ಥಿಕ ದೃಷ್ಟಿಯಿಂದ ಈ ದಿನ ಅನುಕೂಲಕರ! ಪ್ರಣಯ ಜೀವನವು ಸುಖಮಯ -
March 11 Horoscope: ಪ್ರಯಾಣಗಳಲ್ಲಿ ನಿಮಗೆ ಶುಭವಿಲ್ಲ! ಅಪಾಯದ ಮುನ್ಸೂಚನೆ! -
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ಮಕ್ಕಳಿಗೆ ಕಾಡುವ ಹಲ್ಲಿನ ಸಮಸ್ಯೆ-ಒಂದಿಷ್ಟು ಪರಿಹಾರಗಳು
ಮಕ್ಕಳು ಹಾಗು ವಯಸ್ಕರಲ್ಲಿ ಹಲ್ಲಿನ ಸಮಸ್ಯೆ ಕಾಡುವುದು ಸಾಮಾನ್ಯ ಪ್ರಕ್ರಿಯೆ!, ಇದಕ್ಕೆ ಕಾರಣಗಳು ಬೇರೆ ಮತ್ತು ಅದರ ಸಮಸ್ಯೆಯು ಮಕ್ಕಳು ಹಾಗೂ ವಯಸ್ಕರಲ್ಲಿ ಭಿನ್ನವಾಗಿ ಇರಬಹುದು. ಆದರೆ ಎರಡು ಕೂಡ ದಂತನೋವು ಆಗಿರುವುದು. ಇದರಿಂದ ಊಟ ಮಾಡಲು, ನೀರು ಕುಡಿಯಲು ಸಮಸ್ಯೆಯಾಗುವುದು, ಹಲ್ಲಿನ ಸೋಂಕಿನ ಪರಿಣಾಮವಾಗಿ ದಂತಕುಳಿ ಉಂಟಾಗುವುದು. ಮಕ್ಕಳಲ್ಲಿ ಹೆಚ್ಚು ಸಕ್ಕರೆ ಮತ್ತು ಸಕ್ಕರೆಯುಕ್ತ ಆಹಾರ ಸೇವನೆ ಮಾಡುವ ಪರಿಣಾಮ ಹಲ್ಲಿನ ಸಮಸ್ಯೆ ಬರುವುದು. ಸಿಹಿ, ಕ್ಯಾಂಡಿಗಳು, ಚಾಕಲೇಟ್, ಬಿಸ್ಕೆಟ್ ಮತ್ತು ಸಿಹಿತಿಂಡಿಗಳು ಮಕ್ಕಳಿಗೆ ಫೇವರಿಟ್. ಇದನ್ನು ಅವರು ಯಾವಾಗಲೂ ತಿನ್ನಲು ಇಷ್ಟಪಡುವರು. ಆದರೆ ಅತಿಯಾಗಿ ಸಿಹಿ ಸೇವನೆ ಪರಿಣಾಮವಾಗಿ ಮಕ್ಕಳಲ್ಲಿ ದಂತಕುಳಿ ಉಂಟಾಗಬಹುದು. ನಾವು ನೀಡುತ್ತಿರುವ ಈ ಸಲಹೆಗಳನ್ನು ಪಾಲಿಸಿ, ನಿಮ್ಮ ಮಗುವಿನ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ಬನ್ನಿ ಆ ಸಲಹೆಗಳು ಯಾವುವು ಎಂದು ನೋಡೋಣ.... ಹಲ್ಲು ಹುಟ್ಟುವ ವೇಳೆ ಮಗು ವಿಪರೀತ ಅಳುತ್ತಿದೆಯೇ?

* ಚಮಚ ಅಥವಾ ಪೆಸಿಫೈರ್ ಮುಂತಾದ ಜೊಲ್ಲುರಸವನ್ನು ಹೊಂದಿರುವ ಪದಾರ್ಥವನ್ನು ನಿಮ್ಮ ಮಗುವಿನ ಜೊತೆಗೆ ಹಂಚಿಕೊಳ್ಳಬೇಡಿ. ಜೊಲ್ಲಿನ ಮೂಲಕ ನಿಮ್ಮ ಬಾಯಿಯಲ್ಲಿರುವ ಇನ್ಫೆಕ್ಷನ್ ನಿಮ್ಮ ಮಗುವಿನ ಬಾಯಿಗೆ ವರ್ಗಾವಣೆಯಾಗಬಹುದು.
* ಪ್ರತಿ ಬಾರಿ ಊಟ ಸೇವಿಸಿದ ನಂತರ ನಿಮ್ಮ ಮಗುವಿನ ಬಾಯಿಯನ್ನು ತೆಳುವಾದ ಬಟ್ಟೆಯಿಂದ ಒರೆಸಿ.
* 3-6 ವರ್ಷಗಳವರೆಗೆ ಒಂದು ಬಟಾಣಿ ಕಾಳಿನಷ್ಟು ಗಾತ್ರದ ಫ್ಲೋರೈಡ್ ಟೂಥ್ಪೇಸ್ಟ್ನಿಂದ ಮಗುವಿನ ಹಲ್ಲುಗಳನ್ನು ಉಜ್ಜಿ.
* ಯಾವುದೇ ಕಾರಣಕ್ಕು ಪೆಸಿಫೈರ್ಗೆ ಸಕ್ಕರೆಯನ್ನು ಲೇಪಿಸಬೇಡಿ ಅಥವಾ ಸಕ್ಕರೆ ದ್ರಾವಣದಲ್ಲಿ ಅದ್ದಬೇಡಿ.
* ಒಂದು ವರ್ಷದ ನಂತರ ನಿಮ್ಮ ಮಗುವಿಗೆ ಫೀಡಿಂಗ್ ಬಾಟಲ್ ಬದಲಿಗೆ ಬಟ್ಟಲಿನಲ್ಲಿ ಆಹಾರವನ್ನು ಸೇವಿಸಲು ಪ್ರೋತ್ಸಾಹಿಸಿ.
* ಹಲ್ಲುಗಳನ್ನಷ್ಟೇ ಅಲ್ಲ, ನಿಮ್ಮ ಮಗುವಿನ ದವಡೆಗಳನ್ನು ಸಹ ಬಟ್ಟೆಯಿಂದ ಒರೆಸಿ ಮತ್ತು ಮಸಾಜ್ ಮಾಡುವುದನ್ನು ಮರೆಯಬೇಡಿ.
* ಆರು ತಿಂಗಳಿಗೆ ಅಥವಾ ವರ್ಷಕ್ಕೊಮ್ಮೆ ದಂತ ವೈದ್ಯರ ಬಳಿಗೆ ನಿಮ್ಮ ಮಗುವನ್ನು ಕರೆದುಕೊಂಡು ಹೋಗುವುದನ್ನು ಮರೆಯಬೇಡಿ. ನಿಮ್ಮ ಮಗುವಿಗೆ ಹಲ್ಲಿನ ಸಮಸ್ಯೆ ಇದ್ದರು ಸಹ ತಪ್ಪದೆ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಿಸಿ.
* ನಿಮ್ಮ ಮಗು ಬಾಯಿಯಲ್ಲಿ ಫೀಡಿಂಗ್ ಬಾಟಲ್ ಅಥವಾ ಸಿಪ್ಪಿಂಗ್ ಕಪ್ ಇಟ್ಟುಕೊಂಡೇ ಮಲಗಲು ಬಿಡಬೇಡಿ.
* ನಿಮ್ಮ ಮಗುವಿಗೆ ಸಕ್ಕರೆ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸಲು ನೀಡಬೇಡಿ.
ಹೀಗೆ ಈ ಮೇಲಿನ ಸಲಹೆಗಳನ್ನು ಪಾಲಿಸಿ, ನಿಮ್ಮ ಮಗುವಿನ ಹಲ್ಲಿನ ಮತ್ತು ಬಾಯಿಯ ಆರೋಗ್ಯವನ್ನು ಕಾಪಾಡಿ. ಒಂದು ವೇಳೆ ನಿಮ್ಮ ಮಗುವು ಯಾವುದಾದರು ಹಲ್ಲಿನ ಸಮಸ್ಯೆಗಳ ಲಕ್ಷಣಗಳನ್ನು ತೋರಿಸಿದಾಗ, ತಪ್ಪದೆ ಚಿಕಿತ್ಸೆಯನ್ನು ಕೊಡಿಸಿ. ಈ ಚಿಕಿತ್ಸೆಯು ನಿಮ್ಮ ಮಗುವಿಗೆ ಇರುವ ಸಮಸ್ಯೆಯ ತೀವ್ರತೆಯ ಮೇಲೆ ಆಧಾರಿಸಿರುತ್ತದೆ.



Click it and Unblock the Notifications












