ಮಕ್ಕಳಲ್ಲಿ ಸ್ವಲೀನತೆ ಕಾಯಿಲೆ-ಪೋಷಕರೇ ಈ ಸಂಗತಿಗಳು ತಿಳಿದಿರಲಿ

By: Hemanth
Subscribe to Boldsky

ಮಕ್ಕಳು ಸಮಾಜದಲ್ಲಿ ಒಂದು ಉನ್ನತ ಸ್ಥಾನ ಪಡೆದುಕೊಳ್ಳಬೇಕೆಂಬ ಆಸೆ ಪ್ರತಿಯೊಬ್ಬ ತಂದೆತಾಯಿಯರಲ್ಲೂ ಇದ್ದೇ ಇರುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಇದು ಸಾಧ್ಯವಾದರೂ ಇನ್ನು ಕೆಲವೊಮ್ಮೆ ಇದು ಕನಸಾಗಿಯೇ ಉಳಿಯುತ್ತದೆ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಆಟಿಸಂ(ಸ್ವಲೀನತೆ ಅಥವಾ ತನ್ನದೇ ಕಲ್ಪನಾ ಲೋಕದಲ್ಲಿ ಮಗ್ನರಾಗುವ ಮಕ್ಕಳು) ಎನ್ನುವ ಕಾಯಿಲೆಯು ನಿಮ್ಮ ಮಗುವಿನ ಕಲಿಯುವ ಕ್ಷಮತೆ, ಮಾತನಾಡುವ ಹಾಗೂ ಇತರರೊಂದಿಗೆ ಬೆರೆಯುವ ಗುಣಗಳ ಮೇಲೆ ಪರಿಣಾಮ ಬೀರಲಿದೆ.

Autistic Child
 

ಈ ರೋಗವು ಮೆದುಳು ಹಾಗೂ ನರ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದರಿಂದ ಸಾಮಾಜಿಕ ಹಾಗೂ ಭಾವನಾತ್ಮಕವಾಗಿಯೂ ಇದು ಪರಿಣಾಮ ಬೀರಬಹುದು. ಮಗುವಿನ ಜನನದ ವೇಳೆ ಈ ಕಾಯಿಲೆ ಬಗ್ಗೆ ತಿಳಿದುಬರುತ್ತದೆ. ಆದರೆ ಇದಕ್ಕೆ ಚಿಕಿತ್ಸೆ ನೀಡಬಹುದಾದರೂ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದು. ಗರ್ಭಾವಸ್ಥೆಯಲ್ಲಿನ ಒತ್ತಡದಿಂದ ಮಕ್ಕಳಲ್ಲಿ ನ್ಯೂನತೆ!

ಈ ಕಾಯಿಲೆ ಇರುವಂತವರಲ್ಲಿ ಆಕ್ರಮಣಶೀಲತೆ, ಅಸಹಜ ಸಾಮಾಜಿಕ ನಡವಳಿಕೆ, ಅಂತರ್ ನಿರ್ಬಂಧ ನಡವಳಿಕೆ, ಸಂವಹನ ಕೊರತೆ ಇತ್ಯಾದಿ ಸಮಸ್ಯೆಗಳು ಈ ಕಾಯಿಲೆ ಇರುವವರಲ್ಲಿರುತ್ತದೆ. ಇದರಿಂದ ಪೋಷಕರಿಗೆ ಮಕ್ಕಳನ್ನು ಆರೈಕೆ ಮಾಡುವುದು ತುಂಬಾ ಕಷ್ಟಕರವಾಗುತ್ತದೆ. ಇಂತಹ ಕಾಯಿಲೆ ಇರುವಂತಹ ಮಕ್ಕಳ ಪೋಷಕರಿಗೆ ಯಾವ ವಿಚಾರಗಳನ್ನು ನಾವು ಹೇಳಬಾರದು ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. 

Autistic Child
 

ಇದರಿಂದ ಮೇಲೆದ್ದು ಬರುತ್ತಾನೆ

ಆಟಿಸಮ್ ಎನ್ನುವುದು ಕೇವಲ ಭಾವನೆಗಳು ಬದಲಾಗುವ ಸಮಸ್ಯೆಯಲ್ಲ. ಇದೊಂದು ಗಂಭೀರವಾದ ಕಾಯಿಲೆಯಾಗಿದೆ. ಮಗು ಇದರಿಂದ ಮೇಲೆದ್ದು ಬರುತ್ತದೆ ಎಂದು ಹೇಳಿದರೆ ಪೋಷಕರಿಗೆ ತುಂಬಾ ಬೇಸರವಾಗುತ್ತದೆ.

ನೀನು ಇದನ್ನು ಮಾಡು!

ಆಟಿಸಂ ಕಾಯಿಲೆ ಇರುವಂತಹ ಮಕ್ಕಳು ಯಾವುದೇ ಮಾತನ್ನು ಕೇಳುವುದಿಲ್ಲ ಮತ್ತು ಅವರಿಗೆ ವಹಿಸಿದ ಕೆಲಸ ಮಾಡಲ್ಲ. ಪೋಷಕರು ಕೂಡ ನೀನು ಇದನ್ನು ಮಾಡು ಎಂದು ಒತ್ತಡ ಹೇರಿದರೆ ಆಗ ಮಕ್ಕಳ ಆಕ್ರಮಣಶೀಲರಾಗುವ ಸಾಧ್ಯತೆಯಿದೆ.

ಅವರಿಗೆ ಶಿಸ್ತನ್ನು ಕಲಿಸಲು ಸಾಧ್ಯವಿಲ್ಲ

ಆಟಿಸಂ ಇರುವಂತಹ ಮಕ್ಕಳ ಪೋಷಕರಿಗೆ ಹೇಳುವಂತಹ ಅತ್ಯಂತ ಕ್ರೂರ ಪದ ಇದಾಗಿದೆ. ಯಾಕೆಂದರೆ ಆಟಿಸಂ ಇರುವಂತಹ ಮಕ್ಕಳನ್ನು ಶಿಕ್ಷಿಸುವುದು ಅಥವಾ ಅವರಿಗೆ ಶಿಸ್ತನ್ನು ಕಲಿಸಲು ಸಾಧ್ಯವಿಲ್ಲ. ಯಾಕೆಂದರೆ ಅವರ ನರ ವ್ಯವಸ್ಥೆ ಸರಿಯಾಗಿರಲ್ಲ. 

kids laughing
 

ಸಾಮಾನ್ಯನಂತೆ ಕಾಣುತ್ತಾನೆ

ಆಟಿಸಂ ಇರುವಂತಹ ಮಕ್ಕಳ ಪೋಷಕರನ್ನು ಅತಿಯಾಗಿ ನೋಯಿಸುವಂತಹ ಪದ ಇದಾಗಿದೆ. ಆಟಿಸಂ ಇರುವಂತಹ ಮಕ್ಕಳು ಸಾಮಾನ್ಯರಂತೆ ಕಂಡುಬಂದರೂ ಅವರು ಸಾಮಾನ್ಯರಾಗಿ ಇರುವುದಿಲ್ಲ. ಈ ಪರಿಸ್ಥಿತಿಯನ್ನು ನೀವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ.

English summary

Things You Must Never Say To Parents With An Autistic Child!

Autism can be described as a developmental disorder that seriously hampers a child's ability to learn, interact and communicate. Autism, now termed as autism spectrum disorder affects the brain and nervous system, affecting the cognitive, social and emotional health of an individual.
Story first published: Tuesday, March 14, 2017, 23:44 [IST]
Please Wait while comments are loading...
Subscribe Newsletter