Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳನ್ನು ಕಾಡುವ 'ಟೈಪ್-1 ಮಧುಮೇಹ' ಎಂಬ ಪೆಡಂಭೂತ!
ಇತ್ತೀಚಿನ ದಿನಗಳಲ್ಲಿ ಮಧುಮೇಹವೆಂಬ ರೋಗವು ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಲೇ ಇದೆ. ವಯಸ್ಸಾದವರಿಗೆ ಮಾತ್ರವೇ ಬರುತ್ತಿದ್ದ ಈ ಕಾಯಿಲೆ ಇದೀಗ ಸಣ್ಣ ಮಕ್ಕಳನ್ನು ಬಾಧಿಸಲು ಆರಂಭಿಸಿದೆ.
ಮಕ್ಕಳಲ್ಲಿ ಮೇದೋಜೀರಕ ಗ್ರಂಥಿಯು ಇನ್ಸುಲಿನ್ ಉತ್ಪಾದನೆಯನ್ನು ಕಡಿಮೆಗೊಳಿಸಿದಲ್ಲಿ ಟೈಪ್ 1 ಮಧುಮೇಹ ಕೂಡಲೇ ಕಾಣಿಸಿಕೊತ್ತದೆ. ಈ ಸಮಯದಲ್ಲಿ ಅವರ ದೇಹದಲ್ಲಿ ನೀವು ಇನ್ಸುಲಿನ್ ಸ್ಥಾನಾಂತರವನ್ನು ಮಾಡಬೇಕಾಗುತ್ತದೆ. ಟೈಪ್ 1 ಮಧುಮೇಹವು ಇನ್ಸುಲಿನ್ ಆಧರಿತ ಮಧುಮೇಹ ಎಂಬುದಾಗಿ ಕರೆಯಲ್ಪಟ್ಟಿದೆ. ಬೊಜ್ಜುಳ್ಳ ಅವಳಿ ಮಕ್ಕಳಿಗೆ, ಮಧುಮೇಹದ ಆತಂಕ!

ನಿಮ್ಮ ಮಗು ಇಂತಹ ಮಧುಮೇಹ ಕಾಯಿಲೆಯಿಂದ ಬಳಲುತ್ತಿದೆ ಎಂದಾದಾಗ, ನೀವು ಕೂಡಲೇ ಎಚ್ಚೆತ್ತುಕೊಳ್ಳಬೇಕು. ಅವರ ರಕ್ತದ ಸಕ್ಕರೆ ಮಟ್ಟವನ್ನು ನೀವು ಮಾನಿಟರ್ ಮಾಡಬೇಕು ಅಂತೆಯೇ ಅವರುಗಳಿಗೆ ಇನ್ಸುಲಿನ್ ಇಂಜೆಕ್ಷನ್ ಅನ್ನು ನೀಡಬೇಕು ಅಂತೆಯೇ ಅವರು ಸೇವಿಸುತ್ತಿರುವ ಕಾರ್ಬೋಹೈಡ್ರೇಟ್ ಮೇಲೆ ನೀವು ಗಮನ ನೀಡಬೇಕು. ಮಕ್ಕಳಲ್ಲಿ ಮಧುಮೇಹ: ಎಚ್ಚರ ತಪ್ಪಿದರೆ ಜೀವಕ್ಕೆ ಮಾರಕ!
ಈ ಬಗೆಯ ಮಧುಮೇಹವು ಮಕ್ಕಳಲ್ಲಿ ತ್ವರಿತವಾಗಿ ತನ್ನ ಕಾರ್ಯಾಚರಣೆಯನ್ನು ಆರಂಭಿಸಿಬಿಡುತ್ತದೆ. ಹಾಗಿದ್ದರೆ ಈ ಮಧುಮೇಹದ ಲಕ್ಷಣಗಳೇನು? ಇದಕ್ಕಾಗಿ ನೀವು ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ಅರಿತುಕೊಳ್ಳಲಿದ್ದೇವೆ.
ಈ ಬಗೆಯ ಮಧುಮೇಹವು ಮಕ್ಕಳಲ್ಲಿ ಆಯಾಸವನ್ನುಂಟು ಮಾಡುತ್ತದೆ. ಅವರು ಆಲಸ್ಯವನ್ನು ತೋರ್ಪಡಿಸುತ್ತಾರೆ ಮತ್ತು ಸದಾ ಕಾಲವೂ ನಿರುತ್ಸಾಹವನ್ನು ತೋರ್ಪಡಿಸುತ್ತಾರೆ. ಈ ಮಧುಮೇಹವು ಮಕ್ಕಳಲ್ಲಿ ಯೀಸ್ಟ್ ಸೋಂಕಿನ ಅಭಿವೃದ್ಧಿಗೆ ಕಾರಣವಾಗಲಿದೆ. ಈ ಬಗೆಯ ಸೋಂಕಿಗೆ ಹೆಚ್ಚು ತುತ್ತಾಗುವುದು ಹೆಣ್ಣುಮಕ್ಕಳಾಗಿದ್ದು ಶಿಶುಗಳಲ್ಲಿ ಹೆಚ್ಚು ಅಭಿವೃದ್ಧಿಯನ್ನು ಕಾಣಲಿದೆ. ಅವರ ದೃಷ್ಟಿಯಲ್ಲಿ ಸಮಸ್ಯೆಯನ್ನು ಈ ಬಗೆಯ ಮಧುಮೇಹವು ಉಂಟುಮಾಡಲಿದ್ದು ಅವರ ದೃಷ್ಟಿಯಲ್ಲಿ ದೋಷ ಸಮಸ್ಯೆ ಉಂಟಾಗಲಿದೆ. ಇದರಿಂದ ಮಕ್ಕಳು ಖಿನ್ನತೆಗೆ ಒಳಗಾಗಲಿದ್ದು ಅವರ ಸ್ವಭಾವದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ.
ಇನ್ನು ಮಗುವಿನ ತೂಕದಲ್ಲಿ ವೈಪರೀತ್ಯವನ್ನು ನೀವು ಗಮನಿಸಿಬಹುದು. ಮಗುವು ಒಂದೇ ರೀತಿಯ ಆಹಾರ ಕ್ರಮವನ್ನು ಅನುಸರಿಸುತ್ತಿದ್ದರೂ ಮಗುವಿನ ತೂಕವು ಇಳಿಕೆಯಾಗಬಹುದು, ಅಂತೆಯೇ ಸಾಕಷ್ಟು ಆಹಾರವನ್ನೂ ಸೇವಿಸಿ ಕೂಡ ತೂಕದಲ್ಲಿ ಏರಿಕೆಯನ್ನು ನೀವು ಗಮನಿಸಲಾರಿರಿ. ಮನೆ ಔಷಧ: ಮಧುಮೇಹವನ್ನು ನಿಯಂತ್ರಿಸುವ 'ಆಹಾರ ಪಥ್ಯ'
ಈ ಬಗೆಯ ಮಧುಮೇಹ ಮಕ್ಕಳಲ್ಲಿ ಉಂಟಾದಲ್ಲಿ ಅವರುಗಳಿಗೆ ವಿಪರೀತ ಹಸಿವು ಉಂಟಾಗುತ್ತದೆ. ಸಿಕ್ಕಿದ್ದನ್ನೆಲ್ಲಾ ತಿನ್ನಬೇಕೆಂಬ ಆಹಾರದ ತುಡಿತ ಮಕ್ಕಳಲ್ಲಿ ಉಂಟಾಗುವ ಸಾಧ್ಯತೆ ಇದೆ. ಈ ಬಗೆಯ ಮಧುಮೇಹವು ಅವರಲ್ಲಿ ವಿಪರೀತ ಬಾಯಾರಿಕೆ ಮತ್ತು ಆಗಾಗ್ಗೆ ಮೂತ್ರಶಂಕೆಯನ್ನುಂಟು ಮಾಡಬಹುದು....



Click it and Unblock the Notifications



