For Quick Alerts
ALLOW NOTIFICATIONS  
For Daily Alerts

ಮಕ್ಕಳಲ್ಲಿ ಮಧುಮೇಹ: ಎಚ್ಚರ ತಪ್ಪಿದರೆ ಜೀವಕ್ಕೆ ಮಾರಕ!

ಮಧುಮೇಹ ಬರುವುದು 40 ದಾಟಿದವರಲ್ಲಿ ಮಾತ್ರ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಯುವಜನರ ತನಕ ಪ್ರತಿಯೊಬ್ಬರೂ ಮಧುಮೇಹಕ್ಕೆ ಒಂದಲ್ಲ ಒಂದು ರೀತಿಯಿಂದ ತುತ್ತಾಗುತ್ತಲೇ ಇದ್ದಾರೆ.

|

ಮಧುಮೇಹ(ಡಯಾಬಿಟಿಸ್) ಬರುವುದು 40 ದಾಟಿದವರಲ್ಲಿ ಮಾತ್ರ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ ಇಂದಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಯುವಜನರ ತನಕ ಪ್ರತಿಯೊಬ್ಬರೂ ಮಧುಮೇಹಕ್ಕೆ ಒಂದಲ್ಲ ಒಂದು ರೀತಿಯಿಂದ ತುತ್ತಾಗುತ್ತಲೇ ಇದ್ದಾರೆ. ಮಕ್ಕಳಲ್ಲಿ ಮಧುಮೇಹವು ಕಾಣಿಸಿಕೊಳ್ಳುವುದಿವೆಂದು ಹೆಚ್ಚಿನವರು ಭಾವಿಸಿದ್ದಾರೆ. ಹದಿಹರೆಯದವರೇ ಮಧುಮೇಹದ ಅಪಾಯ ತಿಳಿಯಿರಿ!

ಆದರೆ ಇಂದಿನ ದಿನಗಳಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತಿರುವ ಮಕ್ಕಳ ಸಂಖ್ಯೆಯು ಹೆಚ್ಚಾಗುತ್ತಾ ಇದೆ. ಜೀವನಶೈಲಿಯಲ್ಲಿ ಬದಲಾವಣೆ, ಆಹಾರಶೈಲಿ ಮತ್ತು ಅನಾರೋಗ್ಯಕರ ಆಹಾರಕ್ರಮ ಇದಕ್ಕೆ ಕಾರಣವಾಗಿರಬಹುದು. ಬೊಜ್ಜುಳ್ಳ ಅವಳಿ ಮಕ್ಕಳಿಗೆ, ಮಧುಮೇಹದ ಆತಂಕ!

ದೊಡ್ಡವರು ಮಧುಮೇಹದ ಬಗ್ಗೆ ಎಚ್ಚರ ವಹಿಸುತ್ತಾರೆ. ಆದರೆ ಮಕ್ಕಳು ಸಿಕ್ಕಿದೆಲ್ಲವನ್ನೂ ತಿನ್ನುವುದರಿಂದ ಅವರ ಮಧುಮೇಹವನ್ನು ನಿಯಂತ್ರಿಸುವುದು ಪೋಷಕರಿಗೆ ಒಂದು ಸವಾಲಿನ ಕೆಲಸವಾಗಿದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಧುಮೇಹದ ಲಕ್ಷಣಗಳ ಬಗ್ಗೆ ತಿಳಿದುಕೊಳ್ಳುವ.

ಕೆಲವು ಮಕ್ಕಳು ಟೈಪ್ 1 ಮಧುಮೇಹದಿಂದ ಬಳಲುತ್ತಾ ಇದ್ದಾರೆ

ಕೆಲವು ಮಕ್ಕಳು ಟೈಪ್ 1 ಮಧುಮೇಹದಿಂದ ಬಳಲುತ್ತಾ ಇದ್ದಾರೆ

ಮೇಧೋಜೀರಕ ಗ್ರಂಥಿಗಳಲ್ಲಿ ಉಂಟಾಗಿರುವ ಹಾನಿಯಿಂದಾಗಿ ಮಕ್ಕಳಲ್ಲಿ ಟೈಪ್ 1 ಮಧುಮೇಹವು ಕಾಣಿಸುವುದು. ಇದರಿಂದ ಮಕ್ಕಳ ದೇಹವು ಇನ್ಸುಲಿನ್ ಉತ್ಪತ್ತಿ ಮಾಡಲು ವಿಫಲವಾಗುತ್ತದೆ. ಇದರಿಂದ ಸೇವಿಸಲ್ಪಟ್ಟಿರುವ ಕಾರ್ಬ್ ಅನ್ನು ಜೀರ್ಣಿಸಿಕೊಳ್ಳಲು ದೇಹವು ವಿಫಲವಾಗುತ್ತದೆ. ದೇಹದಲ್ಲಿ ಸಕ್ಕರೆ ಅಂಶವನ್ನು ಕಾಪಾಡಲು ಇನ್ಸುಲಿನ್ ಪಾತ್ರ ಕೂಡ ಪ್ರಮುಖವಾಗಿರುವ ಕಾರಣದಿಂದ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ.

ಟೈಪ್ 2 ಮಧುಮೇಹ

ಟೈಪ್ 2 ಮಧುಮೇಹ

ಟೈಪ್ 2 ಮಧುಮೇಹ ಕಾಣಿಸಿಕೊಳ್ಳುವ ಮಕ್ಕಳಲ್ಲಿ ದೇಹವು ಇನ್ಸುಲಿನ್‌ನ ನಿರೋಧಕವಾಗಿರುವ ಕಾರಣದಿಂದಾಗಿ ರಕ್ತದಲ್ಲಿ ಸಕ್ಕರೆ ಮಟ್ಟವು ಅಧಿಕವಾಗುತ್ತದೆ. ಸರಿಯಾದ ಸಮಯದಲ್ಲಿ ಇದನ್ನು ಗುರುತಿಸದೇ ಇದ್ದರೆ ಕಿಡ್ನಿ, ಹೃದಯ ಮತ್ತು ಕಣ್ಣಿನ ದೃಷ್ಟಿ ಕಳೆದುಕೊಳ್ಳುವಂತಾಗಬಹುದು. ಮಧುಮೇಹವನ್ನು ನಿಯಂತ್ರಿಸುವ ಹಿತ್ತಲ ಗಿಡದ ತರಕಾರಿ ಜ್ಯೂಸ್‌

ಮಧುಮೇಹಕ್ಕೆ ಮೊದಲು ಮಕ್ಕಳ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿರುತ್ತದೆ

ಮಧುಮೇಹಕ್ಕೆ ಮೊದಲು ಮಕ್ಕಳ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿರುತ್ತದೆ

ಈ ಸಮಯದಲ್ಲಿ ಇದನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ಮಕ್ಕಳಲ್ಲಿ ಮಧುಮೇಹವು ಬರುವುದನ್ನು ಮುಂದೂಡಬಹುದಾಗಿದೆ.

ಕಾರಣಗಳು

ಕಾರಣಗಳು

ಮಕ್ಕಳಲ್ಲಿ ಮಧುಮೇಹ ಕಾಣಿಸಿಕೊಳ್ಳುವುದಕ್ಕೆ ಹಲವಾರು ಕಾರಣಗಳು ಇರಬಹುದು. ಇದರಲ್ಲಿ ಪ್ರಮುಖವಾಗಿ ವಂಶವಾಹಿನಿ, ವೈರಲ್ ಸೋಂಕಿನಿಂದ ಮೇಧೋಜೀರಕ ಗ್ರಂಥಿಗಳು ಹಾನಿಯಾಗಿರುವುದು, ಜೀವನಶೈಲಿ, ಬೊಜ್ಜು ಮತ್ತು ವಾತಾವರಣ.

ಹಸುವಿನ ಹಾಲು

ಹಸುವಿನ ಹಾಲು

ಮಕ್ಕಳು ತುಂಬಾ ಸಣ್ಣ ವಯಸ್ಸಿನಲ್ಲಿ ಹಸುವಿನ ಹಾಲನ್ನು ಸೇವಿಸಲು ಆರಂಭಿಸಿದರೆ ಅವರಲ್ಲಿ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಕೆಲವು ಅಧ್ಯಯನಗಳು ಹೇಳಿವೆ.

ಲಕ್ಷಣಗಳು

ಲಕ್ಷಣಗಳು

ಮಕ್ಕಳಲ್ಲಿ ಹೊಟ್ಟೆನೋವು, ಆಗಾಗ ಮೂತ್ರವಿಸರ್ಜನೆ, ನಿಶ್ಯಕ್ತಿ, ಮನಸ್ಥಿತಿ ಬದಲಾವಣೆ, ದೃಷ್ಟಿ ಮಂದವಾಗುವುದು, ದೇಹದ ಕೆಲವು ಭಾಗ ಮರಗಟ್ಟುವುದು, ಸಣ್ಣ ಗಾಯಗಳಾದರೂ ಒಣಗಲು ದೀರ್ಘ ಸಮಯ ತೆಗೆದುಕೊಳ್ಳುವುದು, ತೂಕ ಕಳೆದುಕೊಳ್ಳುವುದು ಮತ್ತು ರಕ್ತದೊತ್ತಡ ಕಡಿಮೆಯಾಗುವುದು.

English summary

Diabetes In Children: Causes & Symptoms

Though it is tough to believe, many children suffer from diabetes during childhood itself. Though most of us assume that only middle aged people suffer from such health conditions, it is a fact that even children can suffer diabetes. Nowadays, the number of children suffering from diabetes is increasing may be due to the changing lifestyles and other environmental and genetic factors. Now, let us discuss a few facts about the types of diabetes and their symptoms in children.
X
Desktop Bottom Promotion