ಎಚ್ಚರ: ಟಾಲ್ಕಂ ಪೌಡರ್ ಮಗುವಿಗೆ ಬಲು ಅಪಾಯಕಾರಿ!

By: Hemanth
Subscribe to Boldsky

ಮಗುವಿನ ಜನನದ ಬಳಿಕ ಪ್ರತಿಯೊಂದು ವಿಚಾರದ ಬಗ್ಗೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಗುವಿನ ಆರೋಗ್ಯ ಸರಿಯಾಗಿರುವುದು ಅತೀ ಅಗತ್ಯ. ಮಗುವಿನ ಆರೈಕೆಯಲ್ಲಿ ಕೆಲವೊಂದು ವಸ್ತುಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಮಗುವಿಗೆ ಹಚ್ಚುವ ಎಣ್ಣೆ, ಹಾಕುವ ಸಾಬೂನು, ಪೌಡರ್ ಇತ್ಯಾದಿ. ಇತ್ತೀಚಿನ ದಿನಗಳಲ್ಲಿ ಮಗುವಿಗಾಗಿಯೇ ಹಲವಾರು ರೀತಿಯ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಇಂತಹ ಉತ್ಪನ್ನಗಳು ಮಗುವಿಗೆ ಎಷ್ಟು ಸುರಕ್ಷಿತ ಎನ್ನುವುದನ್ನು ನಾವು ತಿಳಿದರೆ ಮುಂದೆ ಆಗುವಂತಹ ಅಪಾಯವನ್ನು ತಪ್ಪಿಸಬಹುದು.   ಟಾಲ್ಕಂ ಪೌಡರ್ ಎಂಬ ಸೈಲೆಂಟ್ ಕಿಲ್ಲರ್‌ ಬಗ್ಗೆ ಎಚ್ಚರವಿರಲಿ!

talcum powder
 

ಟಾಲ್ಕಂ ಪೌಡರ್ ಎನ್ನುವುದು ಟಾಲ್ಕನ ಒಂದು ಉತ್ಪನ್ನವಾಗಿದೆ. ಟಾಲ್ಕ್ ಎನ್ನುವುದು ಒಂದು ರೀತಿಯ ಖನಿಜಾಂಶವಾಗಿದ್ದು, ಇದರಲ್ಲಿ ಅಸ್ಪಸ್ಟ್ರೋಸ್ ಒಳಗೊಂಡಿದೆ. ಈ ಅಸ್ಪಸ್ಟ್ರೋಸ್‌ನಲ್ಲಿ ಮೆಗ್ನಿಶಿಯಂ, ಆಮ್ಲಜನಕ, ಸಿಲಿಕಾನ್ ಇತ್ಯಾದಿ ಒಳಗೊಂಡಿರುತ್ತದೆ. ಕೆಲವೊಂದು ಕಂಪನಿಗಳು ಮಗುವಿನ ಪೌಡರ್‌ನಲ್ಲಿ ಜೋಳದ ಗಂಜಿಯನ್ನು ಬಳಸುತ್ತವೆ. 

talcum powder
 

ಮಗುವಿನ ಎಳೆಯ ತ್ವಚೆಯನ್ನು ಒಣಗುವಂತೆ ಮಾಡಲು ಮಗುವಿಗೆ ಟಾಲ್ಕಂ ಪೌಡರ್ ನ್ನು ಬಳಸಲಾಗುತ್ತದೆ. ಆದರೆ ಮಗುವಿನ ಮತ್ತು ವಯಸ್ಕರ ಜನನಾಂಗದ ಬಳಿ ಪೌಡರ್ ಅನ್ನು ಬಳಸುವುದು ತುಂಬಾ ಅಪಾಯಕಾರಿ. 

talcum powder
 

ಮಗುವಿಗೆ ಟಾಲ್ಕಂ ಪೌಡರ್ ಅನ್ನು ಹಾಕದಿರುವುದೇ ಒಳ್ಳೆಯದು ಎಂದು ಕೆಲವೊಂದು ಅಧ್ಯಯನಗಳು ಹೇಳಿವೆ. ವಯಸ್ಕರು ಕೂಡ ಪೌಡರ್ ಬಳಸುವುದು ಸುರಕ್ಷಿತವೆಂದು ಯಾವ ಆರೋಗ್ಯ ತಜ್ಞರು ಇದುವರೆಗೆ ಹೇಳಿಲ್ಲ. ಟಾಲ್ಕಂ ಪೌಡರ್ ನಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿರುತ್ತದೆ. ಹಾಗಾದರೆ ಮಗುವಿಗೆ ಬಳಸುವಂತಹ ಎಲ್ಲಾ ಪೌಡರ್ ಅಸುರಕ್ಷಿತವೇ ಎಂದು ಪ್ರಶ್ನೆ ಬರಬಹುದು. ಅಸ್ಪಸ್ಟ್ರೋಸ್ ಇರುವಂತಹ ಪೌಡರ್‌ಗಳು ಮಗುವಿಗೆ ಅಪಾಯಕಾರಿ. ಆದರೆ ಆಸ್ಪಸ್ಟ್ರೋಸ್ ಇಲ್ಲದೆ ಇರುವಂತಹ ಪೌಡರ್ ಬಗ್ಗೆ ಇದುವರೆಗೆ ಹೆಚ್ಚಿನ ಅಧ್ಯಯನಗಳು ನಡೆದಿಲ್ಲ. 

talcum powder
 

ಮಗುವಿಗೆ ಪೌಡರ್ ಹಾಕದೆ ಇರಲು ಸಾಧ್ಯವೇ ಎಂದು ಕೇಳಬಹುದು. ಆದರೆ ನಿಜವಾಗಿಯೂ ಪೌಡರ್ ಹಾಕದೆ ಮಗುವಿನ ಆರೈಕೆ ಮಾಡಬಹುದು. ಮಗುವಿನ ಚರ್ಮವನ್ನು ಸ್ವಚ್ಛ ಹಾಗೂ ಒಣವಾಗಿರಿಸಿ. ಮಗುವಿಗೆ ಡೈಪರ್ ನಿಂದ ಸಮಸ್ಯೆಯಾಗಿದ್ದರೆ ಕ್ರೀಮ್ ಬಳಸಿ. ಮಗುವಿನ ಚರ್ಮಕ್ಕೆ ಸರಿಯಾಗಿ ಗಾಳಿ ಬರುತ್ತಾ ಇರಲಿ ಮತ್ತು ಯಾವಾಗಲೂ ಒಣಗಿರಲಿ. 

talcum powder for baby
 

ಕೆಲವೊಂದು ಪೌಡರ್‪‌ಗಳು ಮಗುವಿನ ಚರ್ಮದ ರಂಧ್ರಗಳನ್ನು ಮುಚ್ಚಿ ಗಾಳಿ ಒಳಹೋಗದಂತೆ ತಡೆಯುತ್ತದೆ. ಪೌಡರ್‌ನಲ್ಲಿ ಇರುವಂತಹ ಕೆಲವೊಂದು ಅಂಶಗಳು ಕೂಡ ಚರ್ಮ ಉಸಿರಾಡದಂತೆ ಮಾಡುವುದು. ಈಗಲೂ ನೀವು ಟಾಲ್ಕಂ ಪೌಡರ್ ಬಳಸಬೇಕೆಂದು ಬಯಸಿದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ

English summary

Is it safe to use talcum powder on my baby?

Most of the mothers use baby powder on the skin of the newly born babies. Is it really safe? Or does it cause any side effects? Read on to know about its side effects...
Please Wait while comments are loading...
Subscribe Newsletter