For Quick Alerts
ALLOW NOTIFICATIONS  
For Daily Alerts

ಮಕ್ಕಳು 3 ವರ್ಷಕ್ಕೂ ಮುನ್ನವೇ ನಡೆದರೆ, ಆರೋಗ್ಯ ವೃದ್ಧಿ...

By Manu
|

ಮಕ್ಕಳು ಸಾಮಾನ್ಯವಾಗಿ ಹತ್ತು ತಿಂಗಳಿಂದ ಒಂದೂವರೆ ವರ್ಷದ ಅವಧಿಯಲ್ಲಿ ನಡೆಯಲು ಪ್ರಾರಂಭಿಸುತ್ತವೆ. ಒಂದು ಹೊಸ ಸಂಶೋಧನೆಯಲ್ಲಿ ಎಷ್ಟು ಬೇಗನೇ ಮಕ್ಕಳು ನಡೆಯಲು ಪ್ರಾರಂಭಿಸುತ್ತಾರೋ ಅಷ್ಟೂ ಗಟ್ಟಿಯಾದ ಮೂಳೆಗಳನ್ನು ಹೊಂದಿರುತ್ತಾರೆ ಎಂದು ತಿಳಿದುಬಂದಿದೆ.

Why Kids Should Walk Before The Age Of 3

ಮೂರು ವರ್ಷಕ್ಕೂ ಮುನ್ನ ಸರಾಗವಾಗಿ ನಡೆದಾಡಲು, ನೆಗೆಯಲು ಮತ್ತು ಓಡಲು ಸಮರ್ಥರಿರುವ ಮಕ್ಕಳ ಮೂಳೆಗಳು ಸದೃಢವಾಗಿದ್ದು ಉತ್ತಮ ಬೆಳವಣಿಗೆ ಪಡೆಯುತ್ತವೆ ಹಾಗೂ ಪ್ರಾಪ್ತ ವಯಸ್ಸಿಗೆ ಬಂದಾಗ ದೃಢವಾದ ಮೂಳೆಗಳನ್ನು ಹೊಂದಿರುತ್ತಾರೆ ಎಂಬುದನ್ನು ಗಮನಿಸಲಾಗಿದೆ.

ಇದಕ್ಕೆ ತಜ್ಞರು ನೀಡುವ ಕಾರಣವೆಂದರೆ ಮಕ್ಕಳ ದೇಹ ಈ ಬೆಳವಣಿಗೆಯನ್ನು ಅಗತ್ಯಕ್ಕೆ ತಕ್ಕಂತೆ ಪೂರೈಸುವುದು. ಚಿಕ್ಕವಯಸ್ಸಿನಲ್ಲಿಯೇ ಚಟುವಟಿಕೆಯ ಮೂಲಕ ಮೂಳೆಗಳ ದೃಢತೆಯ ಅಗತ್ಯವನ್ನು ಮನನ ಮಾಡಿಸಿದಷ್ಟೂ ದೇಹದಲ್ಲಿ ಹೆಚ್ಚಿನ ಹಾರ್ಮೋನುಗಳು ಬಿಡುಗಡೆಯಾಗಿ ಮೂಳೆಗಳು ಶೀಘ್ರವಾಗಿ ಮತ್ತು ದೃಢವಾಗಿ ಬೆಳೆಯುತ್ತವೆ. ಆದರೆ ಈ ಅಗತ್ಯತೆ ಸೂಕ್ತ ಪ್ರಮಾಣದಲ್ಲಿರಬೇಕೇ ವಿನಃ ಹೆಚ್ಚಾದರೆ ಮೂಳೆಗಳು ತುಂಡಾಗುವ ಅಪಾಯವಿದೆ.

ಆದ್ದರಿಂದ ಚಟುವಟಿಕೆ ಇಲ್ಲದೇ ಸುಮ್ಮನೇ ಕುಳಿತಿರುವ ಮಕ್ಕಳ ಮೂಳೆಗಳು ಅಗತ್ಯಕ್ಕೆ ತಕ್ಕಂತೆ ಬೆಳೆಯುವುದಿಲ್ಲ. ಆದರೆ ಸದಾ ಚಟುವಟಿಕೆ ಯಿಂದಿರುವ ಮಕ್ಕಳು ಬೆಳೆದ ಬಳಿಕ ಅವರ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿರುವ ಓಸ್ಟಿಯೋಪೋರೋಸಿಸ್ (osteoporosis) ಎಂಬ ಸ್ಥಿತಿ ಉಂಟಾಗುವ ಸಾಧ್ಯತೆಯೂ ಅಪಾರವಾಗಿ ಕಡಿಮೆಯಾಗುತ್ತದೆ.

ಇದುವರೆಗೆ ಮಕ್ಕಳ ಚಟುವಟಿಕೆಗೂ ಅವರ ಬೆಳವಣಿಗೆಗೂ ಸಂಬಂಧ ಇದೆ ಎಂದು ಸಂಶೋಧಕರ ಗಮನಕ್ಕೂ ಬಂದಿರಲಿಲ್ಲ. ಆದ್ದರಿಂದ ಮಕ್ಕಳ ಬೆಳವಣಿಗೆಗೆ ಸಾಕಷ್ಟು ಶಾರೀರಿಕ ವ್ಯಾಯಾಮದ ಅಗತ್ಯತೆಯನ್ನು ಬಲವಂತವಾಗಿಯಾದರೂ ಮೂಡಿಸುವುದು ಅವರ ಬೆಳವಣಿಗೆಯ ದೃಷ್ಟಿಯಿಂದ ಅಗತ್ಯವಾಗಿದೆ.

ಆದ್ದರಿಂದ ಒಂದು ವೇಳೆ ನಿಮ್ಮ ಮಕ್ಕಳು ದಿನದ ಇಡಿಯ ಹೊತ್ತು ಸುಮ್ಮನೇ ಕುಳಿತು ಕಾಲಹರಣ ಮಾಡುತ್ತಿದ್ದರೆ ಅವರನ್ನು ಆಟ ಅಥವಾ ಯಾವುದಾದರೂ ಚಟುವಟಿಕೆಯಲ್ಲಿ ಭಾಗಿಯಾಗುವಂತೆ ಪ್ರೇರೇಪಿಸುವುದು ಪಾಲಕರ ಕರ್ತವ್ಯವಾಗಿದೆ.

English summary

Why Kids Should Walk Before The Age Of 3

A new study found that children who learn to successfully walk at a very early age, tend to develop stronger bones. Yes, kids who are able to run, jump and walk before they reach the age of 3 tend to have strong bones by the time they grow up.
Story first published: Tuesday, May 17, 2016, 10:18 [IST]
X
Desktop Bottom Promotion