For Quick Alerts
ALLOW NOTIFICATIONS  
For Daily Alerts

ನಿಮ್ಮ ದುರ್ಗುಣಗಳನ್ನು ಮಕ್ಕಳೆದುರು ತೋರ್ಪಡಿಸಬೇಡಿ!

By Manu
|

ಒಮ್ಮೆ ಪ್ರವಾದಿ ಮಹಮ್ಮದರ ಬಳಿ ಮಹಿಳೆಯೊಬ್ಬರು ಬಂದು ತನ್ನ ಮಗ ಅತಿ ಹೆಚ್ಚು ಖರ್ಜೂರ ತಿನ್ನುತ್ತಾನೆಂದೂ ಇದನ್ನು ಮಾಡಬೇಡವೆಂದು ಬುದ್ಧಿವಾದ ಹೇಳಲು ಕೇಳಿಕೊಂಡರು. ಪ್ರವಾದಿಗಳು ಒಂದು ವಾರದ ಬಳಿಕ ಬರಲು ಹೇಳಿದರು. ಮುಂದಿನ ವಾರ ಬಂದಾಗ ಮಗುವಿಗೆ ಅವರು ಬುದ್ಧಿವಾದ ಹೇಳುತ್ತಾ ಅತಿ ಹೆಚ್ಚು ತಿನ್ನುವುದು ಕೆಟ್ಟ ಅಭ್ಯಾಸ ಎಂದು ಹೇಳಿ ಕಳಿಸಿದರು.

Why Hide Your Bad Habits In Front Of Kids?

ಜೊತೆಯಲ್ಲಿದ್ದವರು ಈ ಮಾತನ್ನು ಅಂದೇ ಹೇಳಬಹುದಾಗಿತ್ತಲ್ಲಾ, ಇಂದೇಕೆ ಹೇಳಿದಿರಿ ಎಂದು ಕೇಳಿದಾಗ ಅವರು ತನಗೂ ಹೆಚ್ಚು ಖರ್ಜೂರವನ್ನು ತಿನ್ನುವ ಅಭ್ಯಾಸವಿತ್ತು. ನಾನೇ ಸರಿಪಡದೇ ಮಗುವಿಗೆ ಬೇಡ ಎಂದು ಹೇಗೆ ಹೇಳಲಿ, ಮೊದಲು ಈ ಅಭ್ಯಾಸವನ್ನು ನಾನೇ ಬಿಟ್ಟು ಬಳಿಕ ಮಗುವಿಗೆ ಹೇಳಬೇಕಾಯಿತು ಎಂದರಂತೆ. ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ಗೊರಕೆ ಅಡ್ಡಗಾಲು ಆಗಬಹುದು!!

ಈ ದೃಷ್ಟಾಂತದಿಂದ ಕಲಿಯಬೇಕಾದುದೆಂದರೆ ಮಕ್ಕಳಿಗೆ ಯಾವುದೇ ಬುದ್ಧಿವಾದ ಹೇಳಬೇಕಾದರೂ ಮೊದಲು ಪಾಲಕರಾದ ನಾವು ಅದನ್ನು ಮೊದಲು ಅನುಸರಿಸಬೇಕು. ಮಕ್ಕಳು ನಮ್ಮನ್ನು ನೋಡಿ ಬಹಳಷ್ಟನ್ನು ಕಲಿಯುತ್ತಾರೆ. ಅದರಲ್ಲೂ ಕೆಟ್ಟದ್ದನ್ನು ಬಲುಬೇಗನೇ ಕಲಿಯುತ್ತಾರೆ. ಸಹಜವಾಗಿ ನಮ್ಮಲ್ಲಿರುವ ದುರ್ಗುಣಗಳೂ ಅವರಿಗೆ ದಾಟುವ ಸಾಧ್ಯತೆಗಳೂ ಬಹಳವಾಗಿವೆ.

ಧೂಮಪಾನ, ಮದ್ಯಪಾನ, ಗಂಡಹೆಂಡಿರ ನಡುವಣ ಜಗಳ, ಕ್ಯಾತೆ ತೆಗೆಯುವುದು, ಮನೆಯಲ್ಲಿದ್ದರೂ ಇಲ್ಲ ಎಂದು ಸುಳ್ಳು ಹೇಳುವುದು, ಸಾಲ ತೀರಿಸಲು ಮುಂದೆ ಹಾಕುವ ನೆಪಗಳು, ಪುಕ್ಕಟೆ ಸಿಗುವ ವಸ್ತುಗಳಿಗೆ ಹಪಹಪಿಸುವುದು, ಅಸೂಯೆ ಪಡುವುದು ಮೊದಲಾದ ಹತ್ತು ಹಲವು ಗುಣಗಳನ್ನು ಮಕ್ಕಳು ತಮ್ಮ ತಂದೆ ತಾಯಿಯರಿಂದ ಸುಲಭವಾಗಿ ಕಲಿತು ಬಿಡುತ್ತಾರೆ.

ಆದ್ದರಿಂದ ಮಕ್ಕಳು ಅಕ್ಕಪಕ್ಕದಲ್ಲಿರುವಾಗ ಪಾಲಕರು ಅತಿ ಹೆಚ್ಚಿನ ಜಾಗರೂಕತೆ ವಹಿಸಬೇಕು. ಈ ಬಗ್ಗೆ ನಡೆದ ಹಲವು ಸಂಶೋಧನೆಗಳಲ್ಲಿ ಹದಗೆಟ್ಟಿದ್ದ ಮನೆಯ ವಾತಾವರಣದಲ್ಲಿ ಬೆಳೆದ ಮಕ್ಕಳು ದೊಡ್ಡವರಾದ ಬಳಿಕ ಅವರಂತೆಯೇ ಆಡುವುದು, ಯಾವುದಾದರೊಂದು ವ್ಯಸನಕ್ಕೆ ದಾಸರಾಗುವುದು, ಜಗಳಗಂಟರಾಗುವುದು, ಮಾನವತೆಗೆ ಕಳಂಕ ತರುವ ಕೆಲಸಗಳನ್ನು ಮಾಡುವುದು ಮೊದಲಾದ ವ್ಯಕ್ತಿತ್ವಗಳನ್ನು ಬೆಳೆಸಿಕೊಳ್ಳುತ್ತಾರೆ ಎಂದು ಕಂಡುಕೊಳ್ಳಲಾಗಿದೆ. ಕೇಳಿ ಇಲ್ಲಿ, ಮಕ್ಕಳೆದುರು ಧೂಮಪಾನ ಮಾಡಬೇಡಿ

ಮಕ್ಕಳ ಪಾಲಿಗೆ ಅವರ ತಂದೆತಾಯಿಯರೇ ಅತ್ಯುತ್ತಮ ಶಿಕ್ಷಕರಾಗಿದ್ದು ಇವರ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ಬೇಗನೇ ಕಲಿಯಲು ಸಮರ್ಥರಿರುತ್ತಾರೆ. ಆದ್ದರಿಂದ ಪಾಲಕರು ಮಕ್ಕಳ ಎದುರು ತಮ್ಮ ದುರ್ಗುಣಗಳನ್ನು ಬಲವಂತವಾಗಿಯಾದರೂ ತೋರ್ಪಡಿಸಿಕೊಳ್ಳದಿರುವುದೇ ಜಾಣತನದ ಕ್ರಮವಾಗಿದೆ.

ಅಲ್ಲದೇ ಸಾಮಾನ್ಯವಾಗಿ ಮನುಷ್ಯರೆಲ್ಲಾ ಇನ್ನೊಬ್ಬರು ಮಾಡುವುದನ್ನು ನೋಡಿ ಕಲಿಯುವ ಅಭ್ಯಾಸವುಳ್ಳವರಾದುದರಿಂದ ಮಕ್ಕಳು ಸಹಾ ಹಿರಿಯರನ್ನು ನೋಡಿ ಅನುಸರಿಸಲು ಪ್ರಾರಂಭಿಸುತ್ತಾರೆ. ಮೊದಲಿಗೆ ಕೇವಲ ಕುತೂಹಲಕ್ಕೆ ಪ್ರಾರಂಭಿಸುವ ಯಾವುದಾದರೊಂದು ಗುಣ ಬಳಿಕ ವ್ಯಸನವಾಗಿ ಪರಿಣಮಿಸುತ್ತದೆ. ಆದ್ದರಿಂದ ಹಿರಿಯರು ಸಾಧ್ಯವಾದಷ್ಟು ಉತ್ತಮ ಗುಣಗಳನ್ನೇ ಮಕ್ಕಳಿಗೆ ಮಾದರಿಯಾಗಿಸಲು ಯತ್ನಿಸಬೇಕು. ಸಾಮಾಜಿಕ ಜಾಲತಾಣ, ಎಂಬ ಪೆಡಂಭೂತದ ಜಾಲದಲ್ಲಿ...

ಮನೆಯಲ್ಲಿ ಧೂಮಪಾನ ಮದ್ಯಪಾನ ನಡೆಸುವ ಹಿರಿಯರಿಂದ ಮಕ್ಕಳು ಇದನ್ನು ಕಲಿಯಲು ಹೆಚ್ಚಿನ ಸಮಯ ಬೇಕಾಗಿಲ್ಲ. ಇದು ಮಕ್ಕಳ ಆರೋಗ್ಯವನ್ನೂ ಹಾಳುಮಾಡಲು ಪಾಲಕರೇ ನೇರವಾಗಿ ಇಂಬು ಕೊಟ್ಟಂತಾಗುತ್ತದೆ. ಜಗಳಗಂಟ ತಂದೆತಾಯಿಯರ ಮಕ್ಕಳು ದೊಡ್ಡವರಾದ ಬಳಿಕ ಜಗಳಗಂಟರು ಮಾತ್ರವಲ್ಲ, ವ್ಯಸನಿಗಳೂ ಆಗುವ ಸಾಧ್ಯತೆ ಅತಿ ಹೆಚ್ಚು.

ಬಾಲ್ಯದ ಸಂತೋಷಗಳನ್ನು ಅನುಭವಿಸುವ ಬದಲು ಇವರೂ ತಮ್ಮ ತಂದೆತಾಯಿಯರಂತೆ ಜಗಳವಾಡುತ್ತಾ ಹೀಗೇ ಬೆಳೆದುಬಿಡುತ್ತಾರೆ. ಆದ್ದರಿಂದ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾದರೂ ಹಿರಿಯರು ಇಷ್ಟವಿಲ್ಲದಿದ್ದರೂ ತಮ್ಮ ಅಹಮ್ಮಿಕೆಯನ್ನು ಅದುಮಿ ಉತ್ತಮ ನಡವಳಿಕೆಯನ್ನು ತೋರ್ಪಡಿಸುವುದೇ ಉತ್ತಮ ಕ್ರಮವಾಗಿದೆ. ತಂದೆಯ ಆದರ್ಶ ಗುಣಗಳೇ, ಮಕ್ಕಳ ಭವಿಷ್ಯಕ್ಕೆ ರಹದಾರಿ

English summary

Why Hide Your Bad Habits In Front Of Kids?

Whether it is a simple habit like smoking or drinking or fighting with your spouse, every action of yours will be observed by your kids when they are around. Therefore, it is better to act with awareness when kids are around. Many studies have proved that kids who are raised in bad conditions tend to become either addicts or abusive people when they grow up into adults.
X
Desktop Bottom Promotion