For Quick Alerts
ALLOW NOTIFICATIONS  
For Daily Alerts

ದಿನಕ್ಕೊಂದು ಮೊಟ್ಟೆ ತುಂಬುವುದು, ಮಕ್ಕಳ ಹೊಟ್ಟೆ!

By Deepak
|

"ದಿನವೂ ಮೊಟ್ಟೆ ತಿನ್ನಿ" ಎಂದು ಟಿವಿಯಲ್ಲಿ ಬರುವ ಜಾಹೀರಾತನ್ನು ನೀವು ನೋಡಿರುತ್ತೀರಿ. ಹೌದು, ಸುಲಭವಾಗಿ ಸಿಗುವ, ಎಲ್ಲಾ ಕಡೆ ಲಭ್ಯವಿರುವ, ಅಗ್ಗದ ಮತ್ತು ಪೌಷ್ಠಿಕ ಆಹಾರ ಕೋಳಿ ಮೊಟ್ಟೆಗೆ ಸಮನಾದುದು ಇನ್ನೊಂದಿಲ್ಲ. ಅದರಲ್ಲೂ ಬೆಳಗಿನ ಜಾವ ಸೇವಿಸುವ ಓಟ್ಸ್, ನೂಡಲ್ಸ್, ಇತ್ಯಾದಿ ಆಹಾರ ಪದಾರ್ಥಗಳಿಗಿಂತ ಅತ್ಯಂತ ಪೌಷ್ಟಿಕಾಂಶವಿರುವ ಆಹಾರ ಎಂದು ಇತ್ತೀಚೆಗೆ ನಡೆದ ಅಧ್ಯಯನವೊಂದರಲ್ಲಿ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Why Egg Is The Best Breakfast For Kids

ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುವ ನಾಣ್ಣುಡಿಯಂತೆ, ಮೊಟ್ಟೆ ತಿಂದ ಮಕ್ಕಳಿಗೆ ಹೊಟ್ಟೆ ತುಂಬಿದ ಅನುಭವವುಂಟಾಗುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ, ಜೊತೆಗೆ ಇದು ಮಕ್ಕಳಿಗೆ ಕೆಲವೇ ಕೆಲವು ಕ್ಯಾಲೋರಿಗಳನ್ನು ಸಹ ತಿನ್ನುವ ಅವಕಾಶವನ್ನು ಮಾಡಿಕೊಡುತ್ತದೆ ಎಂದು ಇವರು ಹೇಳುತ್ತಾರೆ.

ಅಧ್ಯಯನಕಾರರ ಪ್ರಕಾರ ಮಕ್ಕಳಿಗೆ ಆರೋಗ್ಯಕಾರಿಯಾದ ಆಹಾರ ಪದಾರ್ಥಗಳನ್ನು ಸೇವಿಸಲು ಅವಕಾಶ ಮಾಡಿಕೊಡುವುದರಿಂದ, ಅವರು ಸೇವಿಸುವ ಕ್ಯಾಲೋರಿಗಳನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ. ಇದು ಮಕ್ಕಳಲ್ಲಿ ಸ್ಥೂಲಕಾಯವನ್ನು ಕಡಿಮೆ ಮಾಡುತ್ತದೆ. ಉಪಾಹಾರದಲ್ಲಿ ಪ್ರೋಟೀನ್ ಸೇವನೆಯಿಂದ ರಾತ್ರಿ ಊಟ ಸೇವನೆಯ ಮೇಲೆ ಯಾವುದೇ ಪರಿಣಾಮ ಬೀರದಿದ್ದರು, ಮಧ್ಯಾಹ್ನದ ಊಟದ ಕುರಿತಾಗಿ ಹೆಚ್ಚಿನ ಪರಿಣಾಮವನ್ನು ಇದು ಬೀರುತ್ತದೆ. ಮೊಟ್ಟೆ ಚಿಪ್ಪು ಎಸೆಯದಿರಿ, ಅದರ ಉಪಯೋಗ ತಿಳಿಯಿರಿ!

Why Egg Is The Best Breakfast For Kids

ಈ ಅಧ್ಯಯನದ ಭಾಗವಾಗಿ ಅಧ್ಯಯನಕಾರರು, 8-10 ವರ್ಷದ 40 ಮಕ್ಕಳನ್ನು ಅಧ್ಯಯನ ನಡೆಸಿದ್ದಾರೆ. ಇದರಲ್ಲಿ ಕೆಲವರಿಗೆ ಮೊಟ್ಟೆಗಳನ್ನು ನೀಡಿದರೆ, ಇನ್ನೂ ಕೆಲವರಿಗೆ ಓಟ್‌ಮಿಲ್ ಮತ್ತು ಧಾನ್ಯಗಳನ್ನು ನೀಡಲಾಯಿತು. ಉಪಾಹಾರದ ನಂತರ ಅವರನ್ನು ಆಟವಾಡಲು ಬಿಡಲಾಯಿತು. ಮೂರು ವಾರಗಳ ಕಾಲ ಇವರನ್ನು ವೀಕ್ಷಣೆಯಲ್ಲಿ ಇಡಲಾಗಿತ್ತು. ಮೊಟ್ಟೆ ತಿಂದ ಮಕ್ಕಳು ಮಧ್ಯಾಹ್ನದ ಊಟದಲ್ಲಿ 70 ಕ್ಯಾಲೋರಿ ಕಡಿಮೆ ಸೇವಿಸಿದ್ದರು.

Why Egg Is The Best Breakfast For Kids

ಸಾಮಾನ್ಯವಾಗಿ ಮಕ್ಕಳ ಒಟ್ಟಾರೆ ಕ್ಯಾಲೋರಿ ಸೇವಿಸುವ ಪ್ರಮಾಣವು 1500-1800 ಕ್ಯಾಲೋರಿಗಳಾಗಿರುತ್ತವೆ. ಒಂದು ವೇಳೆ ಮಗುವು 70 ಅಥವಾ ಅದಕ್ಕಿಂತ ಕಡಿಮೆ ಕ್ಯಾಲೋರಿಯನ್ನು ಸೇವಿಸಿದಲ್ಲಿ, ಮಗುವಿಗೆ ಚಿಕ್ಕವಯಸ್ಸಿನಲ್ಲಿ ಬರುವ ಸ್ಥೂಲಕಾಯದ ಅಪಾಯ ತಪ್ಪುತ್ತದೆ.

ವಾಸ್ತವ ಏನೆಂದರೆ ಮಕ್ಕಳು ಸಾಮಾನ್ಯವಾಗಿ ಸೇವಿಸಬೇಕಾದ ಪ್ರಮಾಣಕ್ಕಿಂತ ಸ್ವಲ್ಪ ಅಧಿಕ ಪ್ರಮಾಣವನ್ನೆ ಸೇವಿಸುತ್ತಾರೆ. ಹೀಗೆ ಮಾಡುವುದರಿಂದ, ಮಕ್ಕಳಲ್ಲಿ ಸ್ಥೂಲಕಾಯವು ಕಾಣಿಸಿಕೊಳ್ಳಲು ಆರಂಭಿಸುತ್ತದೆ. ಹೀಗೆ ಈ ಮೇಲಿನ ಅಂಶಗಳ ಆಧಾರದ ಮೇಲೆ ಅಧ್ಯಯನಕಾರರು ಮಕ್ಕಳಿಗೆ ಉಪಾಹಾರಕ್ಕಿಂತ ಮೊಟ್ಟೆಯೇ ಉತ್ತಮ ಎಂಬ ತೀರ್ಮಾನಕ್ಕೆ ಬಂದು, ನಮ್ಮ ಮಕ್ಕಳಿಗೆ ಬೆಳಗ್ಗೆಯೇ ಪ್ರೋಟೀನ್‌ಯುಕ್ತವಾದ ಈ ಮೊಟ್ಟೆಗಳನ್ನು ನೀಡಿ ಎಂದು ಸಲಹೆ ಮಾಡಿದ್ದಾರೆ.

English summary

Why Egg Is The Best Breakfast For Kids

A recent study says that a protein-rich breakfast is healthier even for kids. Compared to oatmeal or other breakfast cereals, eggs can keep your kid feel full for a long time. And this indirectly helps your kid consume fewer calories. Researchers say that identifying healthy foods that can keep children full may surely help in minimising their intake of calories.
Story first published: Tuesday, February 9, 2016, 10:13 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more