For Quick Alerts
ALLOW NOTIFICATIONS  
For Daily Alerts

ಶಿಶುವಿನ ಉದರಶೂಲೆಯ ಸಮಸ್ಯೆ-ಎಚ್ಚರಿಕೆ ಹೆಜ್ಜೆ ಅತ್ಯಗತ್ಯ

By Cm Prasad
|

ಮಗು ಹುಟ್ಟಿದ ತಕ್ಷಣ ಅದರ ಆನಂದಕ್ಕೆ ಪಾರವೇ ಇರುವುದಿಲ್ಲ. ಆದರೆ ಶಿಶುವು ಜನನವಾದ ನಂತರ ಅದರ ಆರೈಕೆಯು ಅತಿ ಅಮೂಲ್ಯವಾದ ಅಂಶವಾಗಿದೆ. ಶಿಶುವಿನ ಆರೋಗ್ಯದಲ್ಲಿ ಸ್ವಲ್ಪವಾದರೂ ಸಮಸ್ಯೆ ಕಂಡು ಬಂದಲ್ಲಿ ಪೋಷಕರಲ್ಲಿ ಆತಂಕ ಉಂಟಾಗುತ್ತದೆ. ಇದು ಕೇವಲ ಒಬ್ಬರ ಮನೆಯ ಸಮಸ್ಯೆಯಲ್ಲ. ಎಲ್ಲರ ಮನೆಗಳಲ್ಲೂ ಈ ಸಮಸ್ಯೆಯು ಉಂಟಾಗಿರುತ್ತದೆ. ಶಿಶುವು ಒಂದು ಹಂತದ ಬೆಳವಣಿಗೆಯಾಗುವವರೆಗೂ ಅತ್ಯಂತ ಜೋಪಾನವಾಗಿ ಆರೈಕೆ ಮಾಡುವುದು ಎಲ್ಲಾ ಪೋಷಕರ ಜವಾಬ್ದಾರಿಯಾಗಿರುತ್ತದೆ.

ಈ ಸಮಸ್ಯೆಗಳಲ್ಲಿ ಉದರ ಶೂಲೆಯ ಬಾಧೆಯೂ ಸಹ ಒಂದು ಎನ್ನಬಹುದು. ಈ ತೊಂದರೆಯಿಂದ ಶಿಶುವು ಬಳಲುತ್ತಿದ್ದರೆ ಅದನ್ನು ಸಹಿಸಲು ಶಿಶುವಿಗೂ ಹಾಗೂ ಪೋಷಕರಿಗೂ ಸಹ ಆಗುವುದಿಲ್ಲ. ಶಿಶುವು ಹಾಲು ಅಥವಾ ಆಹಾರ ಸೇವಿಸುವಾಗ ಗಾಳಿಯನ್ನು ಒಳತೆಗೆದುಕೊಳ್ಳುವುದೇ ಈ ನೋವಿಗೆ ಮುಖ್ಯಕಾರಣವಾಗಿದ್ದು, ಅದು ಶಿಶುವಿಗೆ ಹೆಚ್ಚು ನೋವನ್ನು ಉಂಟುಮಾಡುತ್ತದೆ. ಕೆಲವು ತಜ್ಞರ ಅಭಿಪ್ರಾಯದ ಪ್ರಕಾರ ತಾಯಂದಿರ ಅವೈಜ್ಞಾನಿಕ ಆಹಾರ ಪದ್ಧತಿಯೇ ಶಿಶುವಿನ ಜೀರ್ಣ ಕ್ರಿಯೆ ಸಮಸ್ಯೆ ಮತ್ತು ಹೊಟ್ಟೆ ನೋವಿಗೆ ಕಾರಣವಾಗುತ್ತದೆ. ಈ ವಿಚಾರವು ವೈದ್ಯಕೀಯವಾಗಿ ಇನ್ನೂ ಸಾಬೀತಾಗಿಲ್ಲ. ಒಂದು ವೇಳೆ, ನೀವು ಯಾವುದೇ ಅಹಾರ ಸೇವಿಸಿ 48 ಗಂಟೆಗಳಲ್ಲಿ ಮಗುವಿಗೆ ಉದರಬಾಧೆ ಬಂದರೆ ಕೂಡಲೇ ಆಹಾರದಿಂದ ದೂರವಿರಿ ಹಾಗೂ ಮುಂದಿನ 2 ಅಥವಾ 3 ತಿಂಗಳುಗಳ ಕಾಲ ಈ ಆಹಾರವನ್ನು ಸೇವಿಸದಿರುವುದು ಒಳಿತು.

This herbal concoction can save your baby from colic pain

ಕೆಲವು ಆಹಾರ ಪದಾರ್ಥಗಳು ಜೀರ್ಣಕ್ರಿಯೆ ಸಮಸ್ಯೆಗೆ ಎಡೆಮಾಡಿಕೊಡುತ್ತವೆ. ಎದೆಹಾಲು ಉಣಿಸುವ ತಾಯಂದಿರಲ್ಲಿ ಈ ಆಹಾರಗಳ ಸೇವನೆಯಿಂದ ಉಬ್ಬುವುದು ಹಾಗೂ ಆಮ್ಲದ ಸತ್ವಗಳು ಹೆಚ್ಚಾಗಲಿದ್ದು, ಇದರಿಂದ ನವಜಾತ ಶಿಶುವಿನ ಮೇಲೆ ಪರಿಣಾಮ ಬೀರುತ್ತದೆ. ಈ ರೀತಿಯ ಕೆಲವು ಆಹಾರ ಪದಾರ್ಥಗಳನ್ನು ನಿಮಗಾಗಿ ನೀಡಲಾಗಿದೆ.

ಸಾಮಾನ್ಯವಾಗಿ ಶೇಂಗಾ ಬೀಜ, ಮೊಳಕೆಯುಕ್ತ ಆಹಾರ ಮೊಟ್ಟೆಗಳು ಮತ್ತು ಇತರೆ ಮಾಂಸಹಾರಿ ಆಹಾರ ಪದಾರ್ಥಗಳು.ಇಂತಹ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿದಲ್ಲಿ ಅಜೀರ್ಣತೆ ಉಂಟಾಗಿ, ಇದರಿಂದ ನಿಮ್ಮ ಶಿಶುವಿಗೆ ಉದರಬಾಧೆ ಉಂಟಾಗಲು ಕಾರಣವಾಗುತ್ತದೆ. ಹಾಗಾಗಿ ಎದೆಹಾಲು ಉಣಿಸುವ ತಾಯಂದಿರು ತಾವು ಸೇವಿಸುವ ಆಹಾರದ ದಿನಚರಿಯನ್ನು ನಿರ್ವಹಣೆ ಮಾಡುವುದು ಅತ್ಯಗತ್ಯ. ಇದರಿಂದ ಯಾವ ಆಹಾರವು ನಿಮ್ಮ ಶಿಶುವಿನ ಮೇಲೆ ಪ್ರಭಾವ ಬೀರುತ್ತಿದೆ ಎಂಬುದು ತಿಳಿಯುತ್ತದೆ. ಒಂದು ವೇಳೆ ನೀವು ಸೇವಿಸುವ ಆಹಾರದಿಂದ ನಿಮ್ಮ ಶಿಶುವಿಗೆ ಉದರಬಾಧೆ ಉಂಟಾದಲ್ಲಿ, ನೈಸರ್ಗಿಕ ವಿಧಾನ ಅನುಸರಿಸುವ ಮೂಲಕ ಅದನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಈ ಲೇಖನದಲ್ಲಿ ನೀಡಿದ್ದೇವೆ ಮುಂದೆ ಓದಿ... ಹಿಂಗಾಸ್ತಕ್ ಚೂರ್ಣ ಎಂಬ ನೈಸರ್ಗಿಕ ಮಿಶ್ರಣದ ಸೇವನೆಯಿಂದ ತಾಯಂದಿರಲ್ಲಿ ಆಮ್ಲದ ಅಂಶವು ಕಡಿಮೆಯಾಗಿ, ನಿಮ್ಮ ಶಿಶುವಿಗೆ ಉದರ ಶೂಲೆಯ ಬಾಧೆ ಬರದಂತೆ ತಡೆಯುತ್ತದೆ.

ಇದನ್ನು ತಯಾರಿಸುವ ವಿಧಾನ
*ಅಜ್ ವೇಯಿನ್ ಅಥವಾ ಕೇರಮ್ ಬೀಜಗಳು
*ಶೆಪಾ ಅಥವಾ ಸಬ್ಬಸಿಗೆ ಬೀಜಗಳು
*ಇಂಗು
*ಕಪ್ಪು ಉಪ್ಪು
*ಜ್ಯೇಷ್ತಮದ್ ಅಥವಾ ಲೈಕೊರೈಸ್
*ಒಣ ಶುಂಠಿ ಪುಡಿ

ಮೇಲಿನ ಪದಾರ್ಥಗಳನ್ನು ಒಂದು ಬಟ್ಟಲಲ್ಲಿ ಹಾಕಿಕೊಂಡು ನೀರನ್ನು ಬೆರೆಸಿಕೊಳ್ಳಿ. ಇದನ್ನು 5 ನಿಮಿಷಗಳ ಕಾಲ ಬೇಯಿಸಿ. ಊಟವಾದ ಅರ್ಧ ಗಂಟೆಯ ನಂತರ ಈ ಮಿಶ್ರಣವನ್ನು ಸೇವಿಸಿ. ಇದರಿಂದ ನಿಮ್ಮ ಜೀರ್ಣ ಕ್ರಿಯೆಯು ಸುಗಮವಾಗಲಿದ್ದು, ನಿಮ್ಮ ಶಿಶುವಿನ ಉದರಶೂಲೆಯ ಬಾಧೆ ಕಾಣಿಸಿಕೊಳ್ಳುವುದನ್ನು ತಡೆಯಬಹುದು.

English summary

This herbal concoction can save your baby from colic pain

Colic pain in infants is intolerable both for the baby and parents. It is believed that this unbearable pain that makes them cry incessantly is due to the air they swallow during their feeds. While this is one theory that experts believe in, some also believe that a mother’s diet can affect the child immature digestive system and lead to the abdominal pains. ‘Although this fact isn’t medically proven, however, if your child develops colic with 48 hours after you eat any particular food, it is better to restrict its intake for the initial two to three months.
Story first published: Wednesday, January 27, 2016, 14:40 [IST]
X
Desktop Bottom Promotion