For Quick Alerts
ALLOW NOTIFICATIONS  
For Daily Alerts

ಮುದ್ದು ಮಕ್ಕಳನ್ನು ಕಾಡುವ ನಿದ್ರಾಹೀನತೆ ಸಮಸ್ಯೆ....

By Manorama Hejmadi
|

ಮಕ್ಕಳು ಮುಗ್ಧರೇನೋ ನಿಜ. ಆದರೆ, ಆತಂಕದಿಂದ ಮುಕ್ತರಾಗಿರಬೇಕಿಲ್ಲ! ಮಕ್ಕಳೂ ಸಹ ನಿದ್ರಾಹೀನತೆಯಿಂದ ಬಳಲುತ್ತಿರಬಹುದು.ಕೆಲವರಿಗೆ ನಿದ್ರೆಗೆ ಜಾರುವ ತೊಂದರೆಯಾದರೆ, ಮತ್ತೆ ಕೆಲವರದು ನರಳಾಟದ ನಿದ್ರೆ! ನಿದ್ರಾಹೀನತೆಯಿಂದ ಬಳಲುವ ಮಕ್ಕಳು ಮರುದಿವಸ ಬಹಳ ಮಂಕಾಗಿರುತ್ತಾರೆ. ಕಲಿಕೆಯಲ್ಲಿ ಹಿಂದುಳಿಯಲು ಇದೂ ಒಂದು ಕಾರಣವಿರಬಹುದು.

ಮಕ್ಕಳು ನೆಮ್ಮದಿಯಿಂದ ನಿದ್ರಿಸದೇ ಗೊರಕೆ ಹೊಡೆಯುವುದು, ನರಳುವುದು, ಹೊರಳುವುದು ಮಾಡಿದರೆ, ಅವರಲ್ಲಿ ಯಾವುದೋ ಭಯ ಆವರಿಸಿದೆ ಎಂದರ್ಥ. ಅದು ಶಾಲೆಯ ಶಿಕ್ಷಕರ ಕೋಲಿನ ಭಯವೋ, ಅವರು ಹಗಲಿನಲ್ಲಿ ನೋಡಿರಬಹುದಾದ ಭೂತದ ಚಲನಚಿತ್ರದ ಪರಿಣಾಮವೋ ಆಗಿರಬಹುದು. ಇಲ್ಲವೇ ದುಷ್ಟ ಸಹಪಾಠಿಯ ಭಯ ಕಾಡುತ್ತಿರಲೂ ಬಹುದು. ಮಕ್ಕಳ ಮನಸ್ಸು ಹೂವಿನಂತೆ, ನೋವು ಮಾಡಬೇಡಿ...

Sleep Problems Of Kids

ಇಂತಹ ಸಂದರ್ಭಗಳಲ್ಲಿ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಿ ಅವರ ಮನಸ್ಸಿನಲ್ಲಿ ಕಾಡುತ್ತಿರುವ ಚಿಂತೆಯ ಎಳೆಯನ್ನು ಬಿಡಿಸಿಕೊಳ್ಳಬೇಕು. ಕೆಲವುಮಕ್ಕಳು ಮನಸ್ಸಿನಲ್ಲಿ ಇರುವುದನ್ನು ಸುಲಭವಾಗಿ ಹೊರಗೆಡಹುವುದಿಲ್ಲ. ಅಂತಹವರನ್ನು ತಾಳ್ಮೆಯಿಂದ ನಿಧಾನವಾಗಿ ಪುಸಲಾಯಿಸಿ, ವಿಚಾರಿಸಬೇಕಾಗುತ್ತದೆ. ಅನಂತರ ಅವರ ಸಮಸ್ಯೆಗೆ ಪರಿಹಾರ ನೀಡಿ, ಧೈರ್ಯ ತುಂಬಬೇಕಾಗುತ್ತದೆ.

ಕೆಲವು ಮಕ್ಕಳಿಗೆ ತಮ್ಮ ಸಮಸ್ಯೆ ತಮಗೇ ತಿಳಿದಿರುವುದಿಲ್ಲ. ಅಂತಹ ಮಕ್ಕಳ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಎಲ್ಲ ವಿಷಯಗಳ ಕುರಿತೂ ಎಳೆ ಎಳೆಯಾಗಿ ಪ್ರಶ್ನೆ ಮಾಡಿ "ನೋವು" ಎಲ್ಲಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಇಂದಿನ ಮಕ್ಕಳು ಪುಸ್ತಕಕ್ಕಿಂತ ಹೆಚ್ಚಾಗಿ ಗಣಕಯಂತ್ರ, ಮೊಬೈಲ್, ಐ ಪ್ಯಾಡ್, ಟ್ಯಾಬ್ ಗಳ ಸಹವಾಸದಲ್ಲಿ ಮೈ ಮರೆಯುತ್ತಾರೆ. ಅಂತಹ ಉಪಕರಣಗಳಿಂದ ಹೊರ ಹೊಮ್ಮುವ ಅಯಸ್ಕಾಂತೀಯ ಕಿರಣಗಳಿಂದ ಆಗಬಹುದಾದ ದುಷ್ಪರಿಣಾಮಗಳ ಪಟ್ಟಿ ಒತ್ತಟ್ಟಿಗಿರಲಿ; ಇದರಿಂದ ಮಕ್ಕಳ ಶರೀರಕ್ಕೆ ಯಾವುದೇ ವ್ಯಾಯಾಮ ಲಭಿಸದಿರುವುದರಿಂದಲೂ ನಿದ್ರೆ ಬಾರದಿರಬಹುದು.

ಇಂತಹ ಮಕ್ಕಳ ದೈನಂದಿನ ವೇಳಾ ಪಟ್ಟಿಯಲ್ಲಿ ಸಾಕಷ್ಟು ಆಟ, ವ್ಯಾಯಮಗಳು ಒಳಗೊಳ್ಳುವಂತೆ ನಿಗಾ ವಹಿಸಬೇಕಾಗುತ್ತದೆ. ಆಯಾಸವಾದರೆ, ನೆಮ್ಮದಿಯ ನಿದ್ರೆಯೂ ಬಂದೀತು!

English summary

Sleep Problems Of Kids

Most of us think that only adults have sleep issues and children enjoy a peaceful sleep. But that's a wrong perception as many kids do face trouble in the sleep department. Falling asleep could be one problem to some whereas getting quality sleep is another problem. And there could be many reasons behind poor sleep quality. If your kid lacks enough sleep, he or she may feel restless or dull the next day in the school and this could affect the academic performance too.
Story first published: Friday, July 29, 2016, 23:17 [IST]
X
Desktop Bottom Promotion