For Quick Alerts
ALLOW NOTIFICATIONS  
For Daily Alerts

ಮಗುವಿನ ಜೊತೆ ಊಟ ಮಾಡಿ, ಆರೋಗ್ಯ ಕಾಪಾಡಿಕೊಳ್ಳಿ

By Deepu
|

ಊಟ ಮಾಡುವುದು ಒಂದು ಅಚ್ಚುಕಟ್ಟಾದ ಕ್ರಿಯೆ. ಅದಕ್ಕಾಗಿಯೇ ನಮ್ಮ ಮನೆಯಲ್ಲಿ ಊಟಕ್ಕೆಂದೆ ಒಂದು ಪ್ರತ್ಯೇಕವಾದ ಸ್ಥಳವನ್ನು ನಿಗದಿಪಡಿಸಿಕೊಂಡಿರುತ್ತೀವಿ. ಉಳ್ಳವರು ಊಟ ಮಾಡಲೆಂದೆ ಒಂದು ಪ್ರತ್ಯೇಕವಾದ ಕೋಣೆಯನ್ನು ಮೀಸಲಿಟ್ಟುಕೊಂಡಿರುತ್ತಾರೆ. ನಾವು ಏನೇ ಮಾಡಿದರು ಹೊಟ್ಟೆಗೆ ಮತ್ತು ಬಟ್ಟೆಗೆ ತಾನೇ ಎಂಬ ಮಾತನ್ನು ನಾವು ಹಲವರ ಬಾಯಲ್ಲಿ ಕೇಳಿರುತ್ತೇವೆ. ಊಟಕ್ಕೆ ಮತ್ತು ಊಟ ಮಾಡುವ ಪ್ರಕ್ರಿಯೆಗೆ ನಾವು ನೀಡುವ ಮರ್ಯಾದೆ ಅಂತಹದು.

Reason why a Meal With Your Kid Is Healthy

ಊಟ ಮಾಡುವ ಕುರಿತಾಗಿ ಹಲವಾರು ಅಧ್ಯಯನಗಳು ಆಗಾಗ ನಡೆಯುತ್ತಲೆ ಇರುತ್ತವೆ. ಅವುಗಳಲ್ಲಿ ಇತ್ತೀಚೆಗೆ ನಡೆದ ಒಂದು ಅಧ್ಯಯನವು ಮಕ್ಕಳ ಜೊತೆಗೆ ಪೋಷಕರು ಕುಳಿತು ಊಟ ಮಾಡುವುದರಿಂದ ದೊರೆಯುವ ಪ್ರಯೋಜನಗಳ ಕುರಿತು ಅಧ್ಯಯನ ಮಾಡಿದೆ. ಇದರ ಫಲಿತಾಂಶವನ್ನು ನೋಡಿ ಅಧ್ಯಯನಕಾರರೇ ಆಶ್ಚರ್ಯಚಕಿತರಾದರು.

ಮಕ್ಕಳನ್ನು ಎರಡು ಪ್ರತ್ಯೇಕ ಗುಂಪುಗಳನ್ನು ಮಾಡಿಕೊಂಡು ಈ ಅಧ್ಯಯನವನ್ನು ನಡೆಸಲಾಯಿತು. ಇದರಲ್ಲಿ 200 ಕುಟುಂಬಗಳು ಭಾಗಿಯಾಗಿದ್ದವು. ಇದರಲ್ಲಿ ಒಂದು ಗುಂಪು ತಮ್ಮ ಒಂದು ಊಟವನ್ನು ಇಡೀ ಕುಟುಂಬದ ಜೊತೆಗೆ ಕುಳಿತು ಸೇವಿಸಿದರೆ, ಮತ್ತೊಂದು ಗುಂಪು ತಮ್ಮ ಊಟವನ್ನು ಒಬ್ಬೊಬ್ಬರೆ ಪ್ರತ್ಯೇಕವಾಗಿ ಸೇವಿಸಲು ಅನುಮತಿಸಲಾಯಿತು.

ಕೆಲವು ತಿಂಗಳುಗಳ ನಂತರ, ಯಾರು ಒಬ್ಬರೇ ಪ್ರತ್ಯೇಕವಾಗಿ ಊಟವನ್ನು ಸೇವಿಸಿದರೋ, ಅವರು ಊಟವನ್ನು ಹೆಚ್ಚಿಗೆ ಅಥವಾ ತೀರಾ ಕಡಿಮೆಯಾಗಿ ಸೇವಿಸಿದರು. ಇದಕ್ಕೆ ಮುಖ್ಯ ಕಾರಣ ಪೋಷಕರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯ ಕೊರತೆ. ಇದರ ಜೊತೆಗೆ ಪೋಷಕ ಮತ್ತು ಮಕ್ಕಳ ಅನ್ಯೋನ್ಯತೆಯ ಮೇಲೆ ಮಾತ್ರವಲ್ಲದೆ, ಮಗುವಿನ ಆರೋಗ್ಯದ ಮೇಲೆ ಸಹ ಈ ಪ್ರಕ್ರಿಯೆಯು ಪ್ರಭಾವವನ್ನು ಬೀರುತ್ತದೆ ಎಂದು ದೃಢಪಟ್ಟಿದೆ. ಕುಟುಂಬದ ಎಲ್ಲಾ ಸದಸ್ಯರು ಒಟ್ಟಿಗೆ ಕುಳಿತು ಊಟವನ್ನು ಮಾಡುವುದರಿಂದ ಎಲ್ಲರ ನಡುವೆ ಭಾವನಾತ್ಮಕ ಅನುಬಂಧವು ಬೆಳೆಯುತ್ತದೆ, ಇದು ವ್ಯಕ್ತಿಯ ಒಟ್ಟಾರೆ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ಈ ಅಧ್ಯಯನವು ತಿಳಿಸಿದೆ.

ಜೊತೆಗೆ ಮಕ್ಕಳ ಜೊತೆಗೆ ಪೋಷಕರು ಊಟ ಮಾಡುವುದರಿಂದಾಗಿ, ಅವರ ಜೊತೆಗೆ ಉತ್ತಮ ಗುಣಮಟ್ಟದ ಸಮಯವನ್ನು ಕಳೆಯಲು ಸಹ ಅನುಕೂಲಕರವಾಗುತ್ತದೆ. ಮಕ್ಕಳ ಕಷ್ಟ ಸುಖವನ್ನು ಕೇಳಲು, ಅವರ ಆಸೆ ಮತ್ತು ಅಭಿರುಚಿಯನ್ನು ತಿಳಿದುಕೊಳ್ಳಲು ಇದರಿಂದ ಪೋಷಕರಿಗೆ ನೆರವಾಗುತ್ತದೆ.

ಜೊತೆಗೆ ಮಕ್ಕಳಿಗೆ ಇದೇ ಸಮಯದಲ್ಲಿ ಉತ್ತಮ ಊಟ ಮಾಡುವ ಅಭ್ಯಾಸಗಳನ್ನು ಸಹ ತಿಳಿಸಿಕೊಡಲು ಪೋಷಕರಿಗೆ ಇದು ಹೇಳಿ ಮಾಡಿಸಿದ ಸಮಯವಾಗಿರುತ್ತದೆ. ಮಕ್ಕಳ ಜೊತೆಗೆ ಕುಳಿತು ಊಟ ಮಾಡುವುದರಿಂದ ಇಷ್ಟು ಪ್ರಯೋಜನಗಳು ದೊರೆಯುತ್ತವೆ. ಹಾಗಾಗಿ ನೀವು ಸಹ ಈ ಅಭ್ಯಾಸವನ್ನು ಮನೆಯಲ್ಲಿ ತಪ್ಪದೆ ಪಾಲಿಸಿ.

English summary

Reason why a Meal With Your Kid Is Healthy

A recent survey claims that children who have their meals along with parents tend to be fitter than kids who eat alone. Researchers were ...
Story first published: Monday, April 25, 2016, 20:01 [IST]
X
Desktop Bottom Promotion