ಮಕ್ಕಳಿಗೆ ಬೆನ್ನೇರಿ ಕಾಡುವ ಶೀತದ ಸಮಸ್ಯೆಗೆ ಸರಳ ಮನೆಮದ್ದು

By: Arshad
Subscribe to Boldsky

ಚಳಿಗಾಲದ ಇಂದಿನ ದಿನಗಳಲ್ಲಿಯೇ ನೆರೆರಾಜ್ಯದಲ್ಲಿ ಆಗಮಿಸಿದ ಸುಂಟರಗಾಳಿಯ ಪ್ರಭಾವ ನಮ್ಮ ರಾಜ್ಯಕ್ಕೂ ಆವರಿಸಿದೆ. ಗಾಳಿ ಹೆಚ್ಚೇ ಒಣದಾಗಿದೆ, ಗಾಳಿಯಲ್ಲಿ ದೂರದೂರದ ಊರುಗಳಿಂದ ಆಗಮಿಸಿದ ವೈರಸ್ಸು ಬ್ಯಾಕ್ಟೀರಿಯಾಗಳೆಲ್ಲವೂ ತೇಲುತ್ತಿವೆ. ಈ ಗಾಳಿಯನ್ನು ಸೇವಿಸಿದ ಹಿರಿಯರಿಗೇ ಶೀತ ನೆಗಡಿ ಬೇಗನೇ ಆವರಿಸುತ್ತಿರುವಾಗ ಮಕ್ಕಳಿಗಂತೂ ಇನ್ನೂ ಬೇಗನೇ ಆವರಿಸುವುದು ಖಚಿತ. ಮಕ್ಕಳಿಗೆ ಸಡನ್ ಆಗಿ ಕಾಡುವ ಶೀತದ ಸಮಸ್ಯೆ! ಮುನ್ನೆಚ್ಚರಿಕೆ ಹೇಗೆ? 

ಆದ್ದರಿಂದ ಚಳಿಗಾಲದ ಈ ದಿನಗಳಲ್ಲಿ ಹಿರಿಯರೂ ಮಕ್ಕಳೂ ವಿಶೇಷವಾಗಿ ಪುಟ್ಟ ಮಕ್ಕಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಶೀತ ಬಂದ ಬಳಿಕ ಒಂದು ವಾರ ಅನುಭವಿಸುವ ಬದಲು ಶೀತವಾಗದಂತೆ ಮುನ್ನೆಚ್ಚರಿಕೆ ವಹಿಸುವುದೇ ಜಾಣತನದ ಕ್ರಮವಾಗಿದೆ.

ನವಜಾತ ಶಿಶುಗಳು ಮತ್ತು ಪುಟ್ಟ ಮಕ್ಕಳಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ಬೆಳೆಯದೇ ಇರುವ ಕಾರಣ ಶೀತ ನೆಗಡಿಗೆ ಸುಲಭವಾಗಿ ತುತ್ತಾಗುತ್ತಾರೆ. ಚಳಿಗಾಲದ ಈ ತೊಂದರೆಗಳು ಬಾಧಿಸದೇ ಇರಲು ನಿಸರ್ಗ ಕೆಲವಾರು ಔಷಧಿಗಳನ್ನು ನೀಡಿದ್ದು ಇವುಗಳನ್ನು ಸಮರ್ಥವಾಗಿ ಬಳಸಿದಾಗ ರೋಗ ನಿರೋಧಕ ಶಕ್ತಿ ಹೆಚ್ಚುವ ಮೂಲಕ ಶೀತ ಬಾಧಿಸದೇ ಇರಲು ಸಾಧ್ಯವಾಗುತ್ತದೆ. ಮಕ್ಕಳ ಅಸೌಖ್ಯವನ್ನು ನಿವಾರಿಸುವ ಸೂಕ್ತ ಮನೆಮದ್ದುಗಳು   

ಬನ್ನಿ, ನವಜಾತ ಶಿಶುಗಳಿಗೂ ಸೂಕ್ತವಾದ ಈ ನೈಸರ್ಗಿಕ ಔಷಧಿಯನ್ನು ಹೇಗೆ ತಯಾರಿಸಬಹುದೆಂಬುದನ್ನು ನೋಡೋಣ...

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಒಂದು ಲೋಟ ಉಗುರುಬೆಚ್ಚನೆಯ ನೀರು

*ಒಂದು ದೊಡ್ಡ ಚಮಚ ಉಪ್ಪು

*ಮೂಗಿಗೆ ದ್ರವ ಬಿಡಲು ಸೂಕ್ತವಾದ ಪಿಚಕಾರಿ (ಔಷದಿ ಅಂಗಡಿಯಲ್ಲಿ ಇದು ಸಿಗುತ್ತದೆ)

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಈ ಸುಲಭವಾದ ವಿಧಾನ ಪುಟ್ಟ ಮಕ್ಕಳಿಗೆ ಹಾಗೂ ನವಜಾತ ಶಿಶುಗಳಿಗೂ ಸೂಕ್ತವಾಗಿದ್ದು ಶೀತ ಕೆಮ್ಮು ನೆಗಡಿ ಮೊದಲಾದ ರೋಗಗಳಿಂದ ರಕ್ಷಣೆ ನೀಡಲು ಸಮರ್ಥವಾಗಿದೆ. ಈ ಸಾಮಾಗ್ರಿಗಳು ಸುರಕ್ಷಿತವಾಗಿದ್ದು ಸುಲಭವಾಗಿ ಲಭ್ಯವಾಗುವಂತಿವೆ.

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

ಈ ವಿಧಾನವನ್ನು ಅನುಸರಿಸುವ ಮುನ್ನ ಮಕ್ಕಳನ್ನು ಬೆಚ್ಚಗೆ ಇರಿಸುವುದು ಮತ್ತು ಸಾಕಷ್ಟು ದ್ರವಾಹಾರ ಸೇವಿಸಿರುವಂತೆ ನೋಡಿಕೊಳ್ಳುವುದೂ ಅಗತ್ಯ.

ಉಪ್ಪು ಬೆರೆತಿರುವ ಉಗುರುಬೆಚ್ಚನೆಯ ನೀರು....

ಉಪ್ಪು ಬೆರೆತಿರುವ ಉಗುರುಬೆಚ್ಚನೆಯ ನೀರು....

ಉಪ್ಪು ಬೆರೆತಿರುವ ಉಗುರುಬೆಚ್ಚನೆಯ ನೀರು ಮೂಗಿನ ಒಳಗೆ ಕಟ್ಟಿಕೊಂಡಿದ್ದ ಸಿಂಬಳವನ್ನು ಸಡಿಲಗೊಳಿಸಿ ಮಗುವಿನ ಶ್ವಾಸನಾಳವನ್ನು ನಿರಾಳಗೊಳಿಸಲು ನೆರವಾಗುತ್ತದೆ. ಇದರಿಂದ ಕಟ್ಟಿಕೊಂಡಿದ್ದ ಮೂಗು ತೆರೆದು ಉಸಿರಾಟ ಸರಾಗವಾಗುತ್ತದೆ.

ಉಪ್ಪು ಬೆರೆತಿರುವ ಉಗುರುಬೆಚ್ಚನೆಯ ನೀರು....

ಉಪ್ಪು ಬೆರೆತಿರುವ ಉಗುರುಬೆಚ್ಚನೆಯ ನೀರು....

infant nasal saline ಎಂದು ಕರೆಯಲ್ಪಡುವ ಈ ದ್ರವ ಮೂಗಿನ ಒಳಗೆ ಹಾಗೂ

ಗಂಟಲ ಒಳಭಾಗದ ತೇವಭಾಗದಲ್ಲಿ ಆಶ್ರಯ ಪಡೆದಿದ್ದ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳನ್ನು ಹೊರಹಾಕುವ ಮೂಲಕ ಶೀತ, ಜ್ವರ, ಕೆಮ್ಮು ಮೊದಲಾದ ತೊಂದರೆಗಳು ಎದುರಾಗದಂತೆ ನೋಡಿಕೊಳ್ಳುತ್ತದೆ. ಉಪ್ಪುನೀರಿನಲ್ಲಿ ಬ್ಯಾಕ್ಟೀರಿಯಾ ವೈರಸ್ಸುಗಳು ಜೀವಂತವಾಗಿರುವುದಿಲ್ಲ, ಇದೇ ಈ ಔಷಧಿಯ ಗುಟ್ಟು.

ಈ ಔಷಧಿಯನ್ನು ಉಪಯೋಗಿಸುವ ವಿಧಾನ.....

ಈ ಔಷಧಿಯನ್ನು ಉಪಯೋಗಿಸುವ ವಿಧಾನ.....

* ಮೊದಲು ಒಂದು ಲೋಟ ಕುಡಿಯುವ ನೀರನ್ನು ಕುದಿಯುವಷ್ಟು ಬಿಸಿಮಾಡಿ ಒಂದು ದೊಡ್ಡ ಚಮಚ ಉಪ್ಪನ್ನು ಸೇರಿಸಿ

* ಈ ನೀರನ್ನು ಕಲಕಿ ಉಪ್ಪನ್ನು ಕರಗಿಸಿ ಹಾಗೇ ಪೂರ್ಣವಾಗಿ ತಣಿಯಲು ಬಿಡಿ

ಈ ಔಷಧಿಯನ್ನು ಉಪಯೋಗಿಸುವ ವಿಧಾನ.....

ಈ ಔಷಧಿಯನ್ನು ಉಪಯೋಗಿಸುವ ವಿಧಾನ.....

* ಪಿಚಕಾರಿಯಿಂದ ಈ ನೀರನ್ನು ಹೀರಿ ಮಗುವಿನ ಮೂಗಿನ ಪ್ರತಿ ಹೊಳ್ಳೆಯಲ್ಲಿ ಎರಡು ಬಿಂದು ಬೀಳುವಂತೆ ಮಾಡಿ.

* ಈ ವಿಧಾನವನ್ನು ದಿನಕ್ಕೆ ಎರಡು ಬಾರಿ ಅನುಸರಿಸಿ. ಶೀತ ಹೆಚ್ಚು ಇಲ್ಲದಿದ್ದರೆ ದಿನಕ್ಕೆ ಒಂದೇ ಬಾರಿ ಸಾಕು.

 
English summary

Natural Remedy Can Protect Your Baby From Cold

As we know, newborn infants are still very weak, because their immune systems are not strong enough, making them susceptible to various diseases. So, it is very important to take certain measures to ensure that your newborn is kept safe and healthy during the winters in order to avoid cold and flu. There is also a simple natural remedy that can be made at home to protect your infant from getting a cold; have a look at how it is made!
Please Wait while comments are loading...
Subscribe Newsletter