For Quick Alerts
ALLOW NOTIFICATIONS  
For Daily Alerts

ಮಕ್ಕಳ ಅಸೌಖ್ಯವನ್ನು ನಿವಾರಿಸುವ ಸೂಕ್ತ ಮನೆಮದ್ದುಗಳು

By Jaya
|

ರೋಗಗಳು ಹೇಳಿ ಕೇಳಿ ಬರುವುದಿಲ್ಲ. ಅದು ದೊಡ್ಡವರಿರಲಿ ಚಿಕ್ಕವರಿರಲಿ ಹಠಾತ್ತನೆ ಬಂದು ತನ್ನ ಇರುವಿಕೆಯನ್ನು ಸಾಧಿಸಿಬಿಡುತ್ತದೆ. ನಿನ್ನೆ ತಾನೇ ಆರೋಗ್ಯದಿಂದ ಇದ್ದವರು ಮರುದಿನ ಜ್ವರ ಇಲ್ಲವೇ ತಲೆನೋವು ಶೀತದಿಂದ ನರಳುವುದನ್ನು ಕಾಣಬಹುದಾಗಿದೆ. ಇದು ರೋಗನಿರೋಧಕ ಶಕ್ತಿ ಕಡಿಮೆಯಾಗಿ ಎಂಬುದು ಒಂದು ಕಾರಣವಾದರೆ ಇನ್ನೊಂದು ಮಲಿನ ವಾತಾವರಣದಿಂದ ಎಂಬುದೂ ಇನ್ನೊಂದು ಕಾರಣವಾಗಿದೆ. ದೊಡ್ಡವರು ಇಂತಹ ರೋಗಗಳನ್ನು ಹೇಗಾದರೂ ಸಹಿಸಿಕೊಳ್ಳುತ್ತಾರೆ ಆದರೆ ಸಣ್ಣ ಮಕ್ಕಳು ದಣಿದ ದೇಹಕ್ಕೆ ವಿಶ್ರಾಂತಿಯನ್ನು ನೀಡದೇ ಆಡಲು ಹೊರಟು ಬಿಡುತ್ತಾರೆ. ಹಾಗಾದಾಗ ತಾಯಂದಿರಿಗೆ ಇನ್ನೊಂದು ತಲೆನೋವು ಇದ್ದೇ ಇರುತ್ತದೆ.

ಮಕ್ಕಳಿಗೆ ಕಾಯಿಲೆ ಬಂದಾಗ ಮನೆಯವರು ತುಸು ಹೆಚ್ಚಿನ ಮುತುವರ್ಜಿಯನ್ನು ವಹಿಸಬೇಕಾಗುತ್ತದೆ. ಮನೆಯಲ್ಲಿರುವ ಔಷಧಗಳನ್ನು ನೀಡದೇ ವೈದ್ಯರಲ್ಲಿ ಸಮಾಲೋಚಿಸಿ ನಂತರವೇ ಅವರಿಗೆ ಅದನ್ನು ನೀಡಬೇಕು.ಇಲ್ಲದಿದ್ದರೆ ಸಣ್ಣ ಅನಾರೋಗ್ಯ ಅವರಿಗೆ ದೊಡ್ಡ ಕಾಯಿಲೆಗಳನ್ನೇ ತಂದೊಡ್ಡಬಹುದು. ಈ ಸಮಯದಲ್ಲಿ ಸಣ್ಣವರು ಹಠ ಜಾಸ್ತಿಮಾಡುತ್ತಾರೆ ಅವರಿಗೆ ಔಷಧವನ್ನು ನೀಡುವುದರ ಜೊತೆಗೆ ಅವರನ್ನು ಸಮಾಧಾನ ಮಾಡುವ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇನ್ನು ಬರಿಯ ಇಂಗ್ಲೀಷ್ ಔಷಧಗಳನ್ನು ನೀಡದೇ ಮನೆಮದ್ದುಗಳಿಂದ ಕಾಯಿಲೆಗಳನ್ನು ಗುಣಪಡಿಸಬಹುದೇ ಎಂಬುದನ್ನು ಕಂಡುಕೊಳ್ಳಿ. ಇದರಿಂದ ಯಾವುದೇ ಅಡ್ಡ ಪರಿಣಾಮಗಳೂ ಇರುವುದಿಲ್ಲ.

ಸುರಿಯುತ್ತಿರುವ ಮೂಗು, ಸೀನುವಿಕೆ, ಕೆಮ್ಮುವುದು, ಕೆಂಪು ಕಣ್ಣುಗಳು, ಮುಂತಾದವು ಎಳೆಯರಿಗೆ ಹೆಚ್ಚು ಕಿರಿಕಿರಿಯನ್ನುಂಟು ಮಾಡುತ್ತದೆ. ಎಳೆಯರ ಅನಾರೋಗ್ಯ ಅವರಿಗೆ ನಿದ್ರಿಸದಂತೆ ಮಾಡುವುದಲ್ಲದೆ ಇಡೀಯ ಕುಟುಂಬ ಸದಸ್ಯರಿಗೂ ನಿದ್ದೆ ಇಲ್ಲದಂತೆ ಮಾಡುತ್ತದೆ. ನಿಮ್ಮ ಮಗು ಇಷ್ಟೊಂದು ತೊಂದರೆಗಳನ್ನು ಅನುಭವಿಸುವುದು ನಿಜಕ್ಕೂ ನಿಮಗೆ ಕಷ್ಟವನ್ನುಂಟು ಮಾಡುತ್ತದೆ ಹಾಗಿದ್ದರೆ ತಡಮಾಡದೇ ಮನೆಮದ್ದುಗಳನ್ನು ಅನುಸರಿಸುವ ಸಮಯ ಬಂದೊದಗಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗಿದ್ದರೆ ಆ ಮದ್ದುಗಳೇನು ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ತಿಳಿದುಕೊಳ್ಳಿ...

ಸಾಕಷ್ಟು ವಿರಾಮ

ಸಾಕಷ್ಟು ವಿರಾಮ

ನಿಮ್ಮ ಮಗು ಶೀತ ಇಲ್ಲವೇ ನೆಗಡಿಯಿಂದ ಬಳಲುತ್ತಿದೆ ಎಂದಾದಲ್ಲಿ, ಮಗುವಿನ ದೇಹವು ಕಾಯಿಲೆಗಳ ವಿರುದ್ಧ ಹೋರಾಡುತ್ತಿದೆ ಎಂದರ್ಥ. ಆದ್ದರಿಂದ ಈ ಸಮಯದಲ್ಲಿ ಮಗುವಿಗೆ ಸಾಕಷ್ಟು ವಿರಾಮದ ಅಗತ್ಯವಿದೆ. ಬ್ಯಾಕ್ಟೀರಿಯಾ ದಾಳಿಯ ವಿರುದ್ಧ ಹೋರಾಡಬಲ್ಲ ಶಕ್ತಿಯನ್ನು ಮಗುವಿನ ದೇಹ ಸಂಗ್ರಹಿಸುತ್ತಿದೆ ಎಂಬುದಾಗಿದೆ.

ಮೂಗಿನ ಡ್ರಾಪ್ಸ್

ಮೂಗಿನ ಡ್ರಾಪ್ಸ್

ಇದನ್ನು ನಿಮ್ಮ ಮನೆಯಲ್ಲೇ ತಯಾರಿಸಿಕೊಳ್ಳಬಹುದು. ಪಾತ್ರೆ ಮತ್ತು ಸ್ಪೂನ್ ಅನ್ನು ಕುದಿಯುವ ನೀರಿನಲ್ಲಿ ಕುದಿಸಿಕೊಳ್ಳಿ ನಂತರ ಬೆಚ್ಚಗಿನ ಬಿಸಿ ನೀರಿಗೆ ಉಪ್ಪನ್ನು ಸೇರಿಸಿಕೊಳ್ಳಿ ಅದು ತಂಪಾದಾಗ ನಿಮ್ಮ ಮಕ್ಕಳಿಗೆ ಬಳಸಿ.ಶೀತವಾದಾಗ ಉಸಿರಾಟದ ಸಮಸ್ಯೆಯನ್ನು ಅವರು ಕಂಡುಕೊಳ್ಳಬಹುದು ಆದ್ದರಿಂದ ಇದು ಅತ್ಯುತ್ತಮವಾಗಿದೆ.

ವೇಪರ್ ರಬ್

ವೇಪರ್ ರಬ್

ನಿಮ್ಮ ತಾಯಿ ನಿಮ್ಮ ಆರೈಕೆಗಾಗಿ ಇದನ್ನು ಎಷ್ಟು ಬಳಸಿಕೊಂಡಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಿ ಸಾಕು. ಇದೀಗ ನಿಮ್ಮ ಮಗುವಿಗೆ ಇದೇ ಚಿಕಿತ್ಸೆಯನ್ನು ಪ್ರಯೋಗಿಸಿ. ನೀಲಗಿರಿ, ಪುದೀನ ಮತ್ತು ಕರ್ಪೂರವನ್ನು ಬಳಸಿ ಇದನ್ನು ತಯಾರಿಸಲಾಗಿರುತ್ತದೆ. ಇದು ತಂಪಿನ ಅನುಭವವನ್ನು ಮಗುವಿಗೆ ನೀಡುವುದರ ಮೂಲಕ ನಿಮ್ಮ ಮಗುವಿನ ಉಸಿರಾಟವನ್ನು ಸರಾಗಗೊಳಿಸುತ್ತದೆ. ನಿಮ್ಮ ಮಗುವಿನ ಶೀತ ಮತ್ತು ಕೆಮ್ಮನ್ನು ನಿವಾರಿಸಲು ಇದು ಹೆಚ್ಚು ಪರಿಣಾಮಾತ್ಮಕ ವಿಧಾನವಾಗಿದೆ.

ಬೆಳ್ಳುಳ್ಳಿ ಮತ್ತು ಕೇರಮ್ ಬೀಜಗಳ ಪೌಚ್

ಬೆಳ್ಳುಳ್ಳಿ ಮತ್ತು ಕೇರಮ್ ಬೀಜಗಳ ಪೌಚ್

ಇದು ಮಗುವಿಗೆ ಸಿದ್ಧಪಡಿಸಲಾಗುವ ಅತ್ಯುತ್ತಮ ಔಷಧಗಳಲ್ಲಿ ಒಂದಾಗಿದೆ. ಬೆಳ್ಳುಳ್ಳಿಯನ್ನು ಚೆನ್ನಾಗಿ ಹುರಿದುಕೊಳ್ಳಿ ಇದಕ್ಕೆ 1 ಚಮಚ ಕೇರಮ್ ಬೀಜವನ್ನು ಸೇರಿಸಿಕೊಳ್ಳಿ ನಂತರ ಅದನ್ನು ಬಟ್ಟೆಯಲ್ಲಿ ಗಂಟು ಕಟ್ಟಿ. ಮಗುವಿನ ಹಾಸಿಗೆಯ ಪಕ್ಕ ಈ ಚೀಲವನ್ನಿರಿಸಿ. ಇದರ ಹೊಗೆ ನಿಮ್ಮ ಮಗುವಿನ ಉಸಿರಾಟವನ್ನು ಸರಾಗೊಳಿಸುತ್ತದೆ. ಹಾಗೂ ಮುಗು ಕಟ್ಟುವಿಕೆಯನ್ನು ನಿವಾರಿಸುತ್ತದೆ.

ದ್ರವಾಹಾರಗಳು

ದ್ರವಾಹಾರಗಳು

ಮಕ್ಕಳಿಗಾಗಿ ಇರುವ ಪ್ರಮುಖ ಔಷಧ ಇದಾಗಿದೆ. ನಿತ್ಯಕ್ಕಿಂತಲೂ ಹೆಚ್ಚಿನ ನೀರನ್ನು ಮಗು ಕುಡಿಯುತ್ತಿದ್ದಾನೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನೀರಿನಿಂದ ಮಗು ಕಿರಿಕಿರಿ ಅನುಭವಿಸುತ್ತಿದೆ ಎಂದಾದಲ್ಲಿ, ಅವರಿಗಾಗಿ ಹಣ್ಣಿನ ಸ್ಮೂತಿಯನ್ನು ಮಾಡಿಕೊಡಿ. ಜ್ವರದಿಂದ ರುಚಿ ಕಳೆದುಕೊಂಡ ನಾಲಗೆಗೆ ಈ ಸ್ಮೂತಿ ಆಹ್ಲಾದವನ್ನು ನೀಡುತ್ತದೆ.

ಟೊಮೇಟೊ ಮತ್ತು ಬೆಳ್ಳುಳ್ಳಿ ಸೂಪ್

ಟೊಮೇಟೊ ಮತ್ತು ಬೆಳ್ಳುಳ್ಳಿ ಸೂಪ್

ನಿಮ್ಮ ಮಗುವಿಗೆ ಇದು ಕೂಡ ಸಿದ್ಧೌಷಧವಾಗಿದೆ. ಬೆಚ್ಚಗಿನ ಟೊಮೇಟೊ ಮತ್ತು ಬೆಳ್ಳುಳ್ಳಿ ಸೂಪ್ ಎಂಟು ತಿಂಗಳ ನಂತರದ ಮಗುವಿಗೆ ಉತ್ತಮ. ಸೂಪ್‎ಗೆ ಮೆಣಸಿನ ಹುಡಿಯನ್ನು ಸೇರಿಸದಿರಿ.

ತಲೆಯನ್ನು ಎತ್ತರದ ಸ್ಥಿತಿಯಲ್ಲಿರಿಸಿ

ತಲೆಯನ್ನು ಎತ್ತರದ ಸ್ಥಿತಿಯಲ್ಲಿರಿಸಿ

ನಿಮ್ಮ ಮಗು ವಿರಮಿಸುತ್ತಿರುವಾಗ, ಸ್ವಲ್ಪ ಎತ್ತರದ ಸ್ಥಿತಿಯಲ್ಲಿ ಮಗುವಿನ ತಲೆಯನ್ನಿರಿಸಿ. ಇದರಿಂದ ಮಗು ಸರಾಗವಾಗಿ ಉಸಿರಾಡಬಹುದು. ತಲೆಯ ಅಡಿಗೆ ಮೃದುವಾದ ಬಟ್ಟೆಯನ್ನು ಇರಿಸಿ. ಮಗುವಿಗಾಗಿ ಇರುವ ಉತ್ತಮ ಮನೆಮದ್ದು ಇದೂ ಕೂಡ ಹೌದು.

English summary

Home Remedies for Cold and Cough in Babies

Cough and cold are common ailments that visit during a season change. And if you have a little kid in your family, you have to be extra cautious. There are many parents who prefer to buy over-the-counter medicines to treat cough and cold in their babies. This is completely a wrong idea though. Those medicines are not safe for your toddlers. So, have a look at the different home remedies for babies to cure their cough and cold:
Story first published: Tuesday, March 8, 2016, 18:56 [IST]
X
Desktop Bottom Promotion