For Quick Alerts
ALLOW NOTIFICATIONS  
For Daily Alerts

  ಮುದ್ದಿನ ಮಗುವಿಗೆ 'ಪೀನಟ್ ಬಟರ್' ತಿನ್ನಿಸುವ ಮುನ್ನ....

  By Manu
  |

  ಇಂದಿನ ದಿನಗಳಲ್ಲಿ ಬೆಳಗ್ಗಿನ ಉಪಾಹಾರ ತಯಾರಿಸಲು ಹೆಚ್ಚಿನ ಮಹಿಳೆಯರಿಗೆ ಸಮಯವೇ ಇರುವುದಿಲ್ಲ. ಅನಿವಾರ್ಯವಾಗಿ ಸಿದ್ಧ ಆಹಾರಗಳಿಗೆ ಮೊರೆಹೋಗುವವರಿಗೆ ಸಿಗುವುದು ಜ್ಯಾಮ್, ಬಟರ್, ಚೀಸ್ ಇತ್ಯಾದಿಗಳು. ಆದರೆ ಇವೆಲ್ಲಾ ಹೆಚ್ಚು ಕೊಬ್ಬಿನಿಂದ ಕೂಡಿರುವ ಕಾರಣ ಮಕ್ಕಳಲ್ಲಿ ಸ್ಥೂಲಕಾಯ ಉಂಟುಮಾಡಬಹುದು, ಇದಕ್ಕಾಗಿ ಕೊಬ್ಬು ಕಡಿಮೆ ಮಾಡಲು ಈ ಬೆಣ್ಣೆಯಲ್ಲಿ ಶೇಂಗಾಬೀಜಗಳನ್ನು ನಯವಾಗಿ ಅರೆದು ಬೆರೆಸಿ ನೀಡುವ ಪ್ರಕ್ರಿಯೆ ಪ್ರಾರಂಭವಾಯಿತು.   ಪೀನಟ್ ಬಟರ್ ನ ಆರೋಗ್ಯಕಾರಿ ಪ್ರಯೋಜನಗಳು

  ಪೀನಟ್ ಬಟರ್ ಎಂಬ ಹೆಸರು ಹೊತ್ತು ಸುಂದರ ಬಾಟಲಿಗಳಲ್ಲಿ ಬರುವ ಈ ಆಹಾರದಲ್ಲಿ ಕೊಬ್ಬು ಕಡಿಮೆಯಾದರೂ ಹೆಚ್ಚಿನ ಪ್ರೋಟೀನ್ ಮಕ್ಕಳ ಮೆದುಳಿನ ಬೆಳವಣಿಗೆಗೆ ಉತ್ತಮ ಎಂದು ಪ್ರಚಾರ ನೀಡಲಾಯಿತು.ಇದರಲ್ಲಿರುವ ಖನಿಜಗಳು, ವಿಟಮಿನ್‪ಗಳು ಮತ್ತು ಆಂಟಿಆಕ್ಸಿಡೆಂಟುಗಳು ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದೂ ಬಿಂಬಿಸಲಾಯಿತು. ಆದರೆ ವಾಸ್ತವದಲ್ಲಿ ಈ ಪೀನಟ್ ಬಟರ್ ಎಂಬ ಹಣೆಪಟ್ಟಿಯಲ್ಲಿ ಸಿಗುವ ಆಹಾರ ನಿಜಕ್ಕೂ ಮಕ್ಕಳಿಗೆ ಆರೋಗ್ಯಕರವೇ?

  Is Peanut Butter Healthy For Kids?
   

  ಈ ಪ್ರಶ್ನೆಯನ್ನು ಆಹಾರ ತಜ್ಞರಲ್ಲಿ ಕೇಳಿದರೆ ಒಂದು ವರ್ಷಕ್ಕೂ ಕೆಳಗಿನ ವಯಸ್ಸಿನ ಮಕ್ಕಳಿಗೆ ಸೂಕ್ತವಲ್ಲ ಎಂಬ ಉತ್ತರ ಸಿಗುತ್ತದೆ. ಏಕೆಂದರೆ ಈ ಮಕ್ಕಳಲ್ಲಿ ಇನ್ನೂ ರೋಗ ನಿರೋಧಕ ಶಕ್ತಿ ಬೆಳೆದಿರದ ಕಾರಣ ಶೇಂಗಾಬೀಜದ ಕೆಲವು ಪೋಷಕಾಂಶಗಳು ಅಲರ್ಜಿಕಾರಕವಾಗಬಹುದು. ಆದರೆ ಎರಡು ವರ್ಷದ ಬಳಿಕ ಕೊಂಚ ನೀಡಬಹುದು ಎನ್ನುತ್ತಾರೆ. ಈ ವಯಸ್ಸಿನಲ್ಲಿ ಮಗುವಿನ ಜೀರ್ಣಾಂಗಗಳು ಅರೆದ ಶೇಂಗಾವನ್ನು ಜೀರ್ಣಿಸಿಕೊಳ್ಳಬಲ್ಲ ಶಕ್ತಿ ಪಡೆದಿರುತ್ತವೆ. ಆದರೂ ಮಕ್ಕಳಿಗೆ ಪೀನಟ್ ಬಟರ್ ತಿನ್ನಿಸುವ ಮುನ್ನ ಕೆಳಗಿನ ಮಾಹಿತಿಗಳನ್ನು ಅರಿತಿರುವುದು ಮುಖ್ಯ.

  Is Peanut Butter Healthy For Kids?
   

  ಪ್ರಯೋಜನ #1

  ಶೇಂಗಾಬೀಜದಲ್ಲಿ resveratrol ಎಂಬ ಪೋಷಕಾಂಶವಿದ್ದು ಇದೊಂದು ಜೀವರಾಸಾಯನಿಕವಾಗಿದೆ. ಇದು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೆಲವು ರೋಗಗಳಿಂದ ರಕ್ಷಿಸುತ್ತದೆ.              ಪೀನಟ್ ಬಟರ್‌ನಿಂದ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

  ಪ್ರಯೋಜನ #2

  ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿದ್ದು ಹಲವು ಕ್ಯಾನ್ಸರ್ ಗಳಿಂದ ರಕ್ಷಿಸುತ್ತದೆ.

  Is Peanut Butter Healthy For Kids?
    

  ಪ್ರಯೋಜನ #3

  ಇದರಲ್ಲಿ ಸತು, ಸೋಡಿಯಂ, ಪೊಟ್ಯಾಶಿಯಂ, ಗಂಧಕ, ಮೆಗ್ನೀಶಿಯಂ, ಕಬ್ಬಿಣ, ಕ್ಯಾಲ್ಸಿಯಂ, ವಿಟಮಿನ್ ಇ , ಫೋಲೇಟ್, ನಿಯಾಸಿನ್, ಥಿಯಾಮಿನ್, ವಿಟಮಿನ್ ಬಿ6 ಹಾಗೂ ರೈಬೋಫ್ಲೋವಿನ್ ಮೊದಲಾದ ಪೋಷಕಾಂಶಗಳಿವೆ. ಇವೆಲ್ಲವೂ ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ನೆರವಾಗುತ್ತವೆ.

  ಪ್ರಯೋಜನ #4

  ಇದರಲ್ಲಿರುವ ಪ್ರೋಟೀನ್ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿಶೇಷವಾಗಿ ಸ್ನಾಯುಗಳ ಬೆಳವಣಿಗೆ ಮತ್ತು ದೃಢತೆಯಲ್ಲಿ ಪ್ರೋಟೀನುಗಳ ಪಾತ್ರವನ್ನು ಪರಿಗಣಿಸಿದರೆ ಪೀನಟ್ ಬಟರ್ ಉತ್ತಮ ಆಹಾರವಾಗಿದೆ.

  ಸಲಹೆ

  ಪೀನಟ್ ಬಟರ್‌ನಲ್ಲಿರುವ ಗುಣಗಳೆಲ್ಲಾ ಶೇಂಗಾಬೀಜದಿಂದ ಬಂದಿದ್ದೇ ಹೊರತು ಬೇರೆಲ್ಲೂ ಅಲ್ಲ, ಹಾಗಾಗಿ ದುಬಾರಿ ಬೆಲೆಯ ವಿದೇಶೀ ಉತ್ಪನ್ನಗಳನ್ನು ಕೊಳ್ಳುವ ಬದಲು ಮನೆಯಲ್ಲಿಯೇ ಹಸಿ ಶೇಂಗಾ ಮತ್ತು ತುಪ್ಪವನ್ನು ಬಳಸುವುದು ಹೆಚ್ಚು ಆರೋಗ್ಯಕರ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

  Is Peanut Butter Healthy For Kids?
    

  ಪೀನಟ್ ಬಟರ್ ಉತ್ತಮ ಆಹಾರವಾದರೂ ಇದರಲ್ಲಿರುವ ಸಂರಕ್ಷಕಗಳು ರಾಸಾಯನಿಕವಾಗಿದ್ದು ಇವು ಮಕ್ಕಳ ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಪ್ರೋಟೀನ್ ಉತ್ತಮವಾದರೂ ಮೊಳಕೆ ಬರಿಸಿದ ಹೆಸರುಕಾಳಿನಲ್ಲಿ ಇದಕ್ಕೆ ಹತ್ತು ಪಟ್ಟು ಹೆಚ್ಚು ಪ್ರೋಟೀನ್ ಸಿಗುತ್ತದೆ. ಆದ್ದರಿಂದ ಮಕ್ಕಳಿಗೆ ಸಿದ್ಧ ಆಹಾರಗಳನ್ನು ನೀಡಿ ಸ್ಥೂಲಕಾಯ ಎದುರಿಸುವ ಬದಲು ಕೊಂಚ ತ್ರಾಸವಾದರೂ ಮನೆಯಲ್ಲಿಯೇ ನೈಸರ್ಗಿಕ ಆಹಾರಗಳತ್ತ ಒಲವು ಮೂಡಿಸುವುದೇ ಉತ್ತಮ.

  English summary

  Is Peanut Butter Healthy For Kids?

  Peanut butter contains protein that helps in the growth and development of a child and also certain fats that contribute to the development of the brain in a child. There are also minerals, vitamins and antioxidants that support the immune system. But is it safe to give peanut butter to kids? Now, let us know about its health benefits when kids consume it at the right age.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more