For Quick Alerts
ALLOW NOTIFICATIONS  
For Daily Alerts

ಕಲ್ಪವೃಕ್ಷ ಎಳೆ ನೀರಿನ ಎಣಿಕೆಯಿಲ್ಲದ ಆರೋಗ್ಯ ಗುಣಗಳು

By Jaya Subramanya
|

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯಂತೆ ನೀವು ಸೇವಿಸುವ ಆಹಾರ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸಿ ನಿಮ್ಮನ್ನು ಸುದೃಢಗೊಳಿಸುತ್ತದೆ. ಆದಷ್ಟು ಕೃತಕ ಆಹಾರಗಳಿಗೆ ಮಾರುಹೋಗದೇ ನೈಸರ್ಗಿಕ ಉತ್ಪನ್ನಗಳನ್ನು ನಾವು ಬಳಸಿದಷ್ಟೂ ನಮ್ಮ ಆರೋಗ್ಯ ಸಂಪತ್ತಾಗಿರುತ್ತದೆ.

ನಾವು ಹೆಚ್ಚು ಬಾಯಾರಿಕೆ ಆದಾಗ ಕೋಕಾಕೋಲ, ಪೆಪ್ಸಿ, ಮಿರಿಂಡಾ ಮೊದಲಾದ ಕೃತಕ ಪಾನೀಯಗಳ ಮೊರೆ ಹೋಗುತ್ತೇವೆ. ಇದು ಕ್ಷಣ ಕಾಲ ನಿಮ್ಮ ಬಾಯಾರಿಕೆಯನ್ನು ನೀಗಿಸಿದರೂ ಬಾಯಾರಿಕೆಯನ್ನು ಹೋಲಾಡಿಸದು. ಇದಕ್ಕಿಂತ ನೈಸರ್ಗಿಕ ಪೇಯ ಎಳೆ ನೀರನ್ನು ನೀವು ಬಳಸಿಕೊಂಡರೆ ನಿಮ್ಮ ದಣಿವು ಬಾಯಾರಿಕೆ ನೀಗಿ ದೇಹ ಉಲ್ಲಾಸಿತವಾಗುತ್ತದೆ. ನೈಸರ್ಗಿಕ ಪಾನೀಯ ಎಳೆನೀರಿನ ಆರೋಗ್ಯಕಾರಿ ಪ್ರಯೋಜನಗಳು

ಕೃತಕ ಪಾನೀಯದಂತೆ ಅದೇ ಬೆಲೆಯಲ್ಲಿ ದೊರೆಯುವ ಎಳೆ ನೀರು ತನ್ನಲ್ಲಿ ಅಪಾರ ಆರೋಗ್ಯಕಾರಿ ಅಂಶಗಳನ್ನು ಒಳಗೊಂಡಿದೆ. ಎಲ್ಲಾ ಕಾಲದಲ್ಲಿಯೂ ಸೇವಿಸಬಹುದಾದ ಈ ಪಾನೀಯ ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಕಲ್ಪವೃಕ್ಷವೇ ಆಗಿದೆ. ಬೇಡಿದ್ದನ್ನು ನೀಡುವ ಫಲ ಎಂಬ ಮಾತಿನಂತೆ ಎಳೆ ನೀರು ಅಥವಾ ಸಿಯಾಳ ದೇಹದಲ್ಲಿ ರೋಗನಿರೋಧಕ ಅಂಶವನ್ನು ಬಲಪಡಿಸಿ ಹಲವಾರು ರೋಗಗಳಿಗೆ ಔಷಧವಾಗಿ ಪರಿಣಮಿಸಿದೆ. ಇಂದಿನ ಲೇಖನದಲ್ಲಿ ಮಕ್ಕಳಿಗೆ ಎಳೆನೀರಿನಿಂದ ಉಂಟಾಗುವ ಪ್ರಯೋಜನಗಳನ್ನು ಕುರಿತು ನೋಡೋಣ...

ಜಠರಗರುಳಿನ ಕಾಯಿಲೆಗಳಿಗೆ ಪರಿಹಾರ

ಜಠರಗರುಳಿನ ಕಾಯಿಲೆಗಳಿಗೆ ಪರಿಹಾರ

ಅಜೀರ್ಣ, ಗ್ಯಾಸ್ಟ್ರಿಕ್ ಹುಣ್ಣು, ಅತಿಸಾರ, ಭೇದಿ, ಮೂಲವ್ಯಾಧಿ, ವಾಯು, ವಾಂತಿ, ಅಗ್ನಿಮಾಂದ್ಯ ಮೊದಲಾದ ಮಕ್ಕಳಲ್ಲಿ ಉಂಟಾಗುವ ಜಠರಗರುಳಿನ ಕಾಯಿಲೆಗಳಿಗೆ ಎಳನೀರು ಅತ್ಯುತ್ತಮವಾಗಿದೆ.

ಮಲಬದ್ಧತೆ ಸಮಸ್ಯೆ ನಿವಾರಣೆ

ಮಲಬದ್ಧತೆ ಸಮಸ್ಯೆ ನಿವಾರಣೆ

ಮಕ್ಕಳಲ್ಲಿ ಉಂಟಾಗುವ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವಲ್ಲಿ ಎಳನೀರು ಹೆಚ್ಚು ಉಪಯುಕ್ತವಾದುದಾಗಿದೆ. ನಿರಂತರವಾಗಿ ಆಗಾಗ್ಗೆ ಎಳೆ ನೀರು ನೀಡುವುದು ಅವರ ಹೈಡ್ರೇಶನ್ ಮಟ್ಟವನ್ನು ಹೆಚ್ಚಿಸಿ ಮಕ್ಕಳಲ್ಲಿ ಈ ಸಮಸ್ಯೆಯಿಂದ ಮುಕ್ತಿಯನ್ನು ಒದಗಿಸುತ್ತದೆ.

ವಾಂತಿಗೆ ಮದ್ದು

ವಾಂತಿಗೆ ಮದ್ದು

ಮಕ್ಕಳು ಮತ್ತು ಕಂದಮ್ಮಗಳಲ್ಲಿ ವಾಂತಿ ಸರ್ವೇ ಸಾಮಾನ್ಯ ಸಮಸ್ಯೆಯಾಗಿದೆ. ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಎಳನೀರು ಪ್ರಮುಖವಾಗಿದ್ದು, ನಿತ್ಯವೂ ಇದರ ಸೇವನೆ ಮಕ್ಕಳಲ್ಲಿ ವಾಂತಿ ಸಮಸ್ಯೆ ನಿವಾರಿಸುತ್ತದೆ.

ಮೂತ್ರದ ಸಮಸ್ಯೆಗೆ ಮದ್ದು

ಮೂತ್ರದ ಸಮಸ್ಯೆಗೆ ಮದ್ದು

ಮಕ್ಕಳನ್ನು ಕಾಡುವ ಮೂತ್ರ ಸಮಸ್ಯೆಗೆ ಎಳನೀರು ಅತ್ಯುತ್ತಮವಾದುದಾಗಿದೆ. ಎಳೆ ನೀರು ಮೂತ್ರವರ್ಧಕ ಎಂದೆನಿಸಿದ್ದು, ಮೂತ್ರಕೋಶ ಮತ್ತು ಮೂತ್ರದ ಹಾದಿಯಲ್ಲಿರುವ ಯಾವುದೇ ಸೋಂಕನ್ನು ನಿವಾರಿಸುತ್ತದೆ. ಮೂತ್ರ ಕಲ್ಲು ಸಮಸ್ಯೆಯಿಂದ ಬಳಲುತ್ತಿರುವವರಿಗೆ ಎಳನೀರು ಸೇವನೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ತ್ವಚೆಯ ಆರೋಗ್ಯ ವರ್ಧನೆ

ತ್ವಚೆಯ ಆರೋಗ್ಯ ವರ್ಧನೆ

ಎಳೆ ನೀರು ಮಕ್ಕಳ ತ್ವಚೆಗೆ ಮಾಯಿಶ್ಚರೈಸರ್ ಮತ್ತು ಟೋನರ್‎ನಂತೆ ಕೆಲಸ ಮಾಡುತ್ತದೆ. ಹೆಚ್ಚುವರಿ ಜಿಡ್ಡನ್ನು ತ್ವಚೆಯಿಂದ ಹೋಗಲಾಡಿಸಿ ತ್ವಚೆಯನ್ನು ಮಾಯಿಶ್ಚರೈಸ್ ಮಾಡುತ್ತದೆ. ಎಳನೀರಿನಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ, ಸೂಕ್ಷ್ಮಜೀವಿ ನಿರೋಧಕ ಮತ್ತು ವೈರಸ್ ವಿರೋಧಿ ಅಂಶಗಳು ತ್ವಚೆಯ ಸೋಂಕುಗಳನ್ನು ತ್ವರಿತವಾಗಿ ನಿವಾರಿಸುತ್ತದೆ.

ತ್ವಚೆಯ ಆರೋಗ್ಯ ವರ್ಧನೆ

ತ್ವಚೆಯ ಆರೋಗ್ಯ ವರ್ಧನೆ

ಮಕ್ಕಳ ತ್ವಚೆಯ ಮೇಲಿನ ಕಲೆಗಳು ಮತ್ತು ಮೊಡವೆಗಳನ್ನು ದೂರಾಗಿಸಿ ತ್ವಚೆಯ ಸೋಂಕನ್ನು ನಿವಾರಿಸುತ್ತದೆ. ಬಯೋ ಕೆಮಿಕಲ್ ಆದ ಪೆಪ್ಟೈಡ್ಸ್ ಎಳೆ ನೀರಿನಲ್ಲಿದ್ದು ಇದು ಇತ್ತೀಚಿನ ದಿನಗಳಲ್ಲಿ ಮೈಕ್ರೊಬಯಲ್ ಸೋಂಕುಗಳಿಗೆ ಮದ್ದಾಗಿದೆ.

English summary

Importance Of Tender Coconut Water For Kids

Coconut tree that belongs to the Palm family is one of the wonder trees, wherein every part of it is useful in several ways. The leaves, bark, fruits and flowers are all useful in some or the other way. The basic needs of a human for survival are food, water, shelter, and medicines; and coconut tree can provide you with all of these. Hence, no doubt, it is rightly called the "Tree of Life".
X
Desktop Bottom Promotion