Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ನೈಸರ್ಗಿಕ ಪಾನೀಯ ಎಳನೀರಿನ ಆರೋಗ್ಯಕಾರಿ ಪ್ರಯೋಜನಗಳು
ಎಳನೀರು ಒಂದು ಜನಪ್ರಿಯ ನೈಸರ್ಗಿಕ ಪಾನೀಯವಾಗಿದ್ದು ಜಗತ್ತಿನಾದ್ಯಂತ ಹೆಚ್ಚಿನ ಜನರು ಇದನ್ನು ಕುಡಿಯುತ್ತಾರೆ. ಎಲ್ಲಾ ಊರುಗಳಲ್ಲಿಯೂ ಎಳನೀರು ದೊರೆಯುತ್ತದೆ. ಮತ್ತು ಇದು ಕಡಿಮೆ ವೆಚ್ಚದಲ್ಲಿ ದೊರೆಯುವ ಎಳನೀರು ದೈಹಿಕವಾಗಿ ಮತ್ತು ಮಾನಸಿಕವಾಗಿ ಅತ್ಯುತ್ತಮ ಪಾನೀಯವಾಗಿದೆ.
ಹಿಂದಿನ ಕಾಲದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಿರುವ ಎಳನೀರು ವೈದ್ಯಕೀಯ ರಂಗದಲ್ಲೂ ತನ್ನ ಕರಾಮತ್ತನ್ನು ಪ್ರದರ್ಶಿಸಿರುವಂಥದ್ದಾಗಿದೆ. ಎಳನೀರು ಕಡಿಮೆ ಪ್ರಮಾಣದ ಸಕ್ಕರೆ ಅಂಶವನ್ನು ಒಳಗೊಂಡಿರುವುದರಿಂದ ಸೋಡಾ ಮತ್ತು ಕೆಲವೊಂದು ಹಣ್ಣುಗಳ ರಸಕ್ಕಿಂತಲೂ ಇದು ಉತ್ತಮವಾಗಿದೆ. ಪಾನೀಯವನ್ನು ಎದುರು ನೋಡುತ್ತಿರುವ ಮಕ್ಕಳು ಮತ್ತು ಹಿರಿಯರಿಗೆ ಹೆಚ್ಚು ಉಪಯುಕ್ತವಾಗಿರುವ ಎಳನೀರು ನಮ್ಮ ದೇಹದಲ್ಲಿರುವ ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುತ್ತದೆ.
ಎಳನೀರಿನ ಪ್ರಾಮುಖ್ಯತೆಯನ್ನು ಒಮ್ಮೆ ನೀವು ಅರಿತುಕೊಂಡರೆ ನೀವು ಅದನ್ನು ಸೇವಿಸದೇ ಬಿಡಲಾರಿರಿ ಆದ್ದರಿಂದಲೇ ಇಂದಿನ ಲೇಖನದಲ್ಲಿ ಎಳನೀರಿನ ಆರೋಗ್ಯಕಾರಿ ಮಹತ್ವವನ್ನು ಇಲ್ಲಿ ತಿಳಿಸಿಕೊಡುತ್ತಿದ್ದೇವೆ. ನಿಮ್ಮ ಸೌಂದರ್ಯವನ್ನು ವರ್ಧಿಸುವುದರ ಜೊತೆಗೆ ನಿಮ್ಮ ಆರೋಗ್ಯವನ್ನೂ ವೃದ್ಧಿಸುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುವ ಕೊಬ್ಬು ಮತ್ತು ಅರ್ಥರೋಜನಿಕ್‌ನ್ನು ನಿಯಂತ್ರಿಸುವ ಎಲ್-ಆರ್ಗನೈನ್ ಎಳನೀರಿನಲ್ಲಿ ಯಥೇತ್ಛವಾಗಿ ಇದೆ. ಎಳನೀರು ಸೇವನೆಯಿಂದ ಚರ್ಮ ಕಾಂತಿಯುಕ್ತವಾಗುತ್ತದೆ. ದೇಹವನ್ನು ತಂಪಾಗಿಡುವುದರೊಂದಿಗೆ ದೇಹದ ಉಷ್ಣತೆ ಮತ್ತು ಬೇಸಗೆಯಲ್ಲಿ ಉಷ್ಣ ಶರೀರದವರಿಗೆ ಕಾಣಿಸಿಕೊಳ್ಳುವ ಗುಳ್ಳೆ ನಿಯಂತ್ರಿಸುದಲ್ಲದೆ, ಅಲ್ಲದೆ ಇತ್ಯಾದಿ ಚರ್ಮ ಸಂಬಂಧಿ ಕಾಯಿಲೆಗಳಲ್ಲಿ ದೇಹದ ಮೇಲೆ ಮೂಡುವ ಕೆಂಪು ಗುಳ್ಳೆಗಳನ್ನು ಎಳನೀರು ಸೇವನೆ ತಡೆಯುತ್ತದೆ. ಮಲೇರಿಯಾ ರೋಗ ನಿಯಂತ್ರಣಕ್ಕೆ ಸೂಕ್ತ ಸಲಹೆಗಳು

ನಿರ್ಜಲೀಕರಣದ ಅಂಶಗಳು
ನಿಮ್ಮ ದೇಹಕ್ಕೆ ಅಗತ್ಯವಿರುವ ನೀರನ್ನು ಪೂರೈಸುತ್ತದೆ. ದಿನವಿಡೀ ನಿರ್ಜಲೀಕರಣದ ಸಮಸ್ಯೆ ನಿಮ್ಮನ್ನು ಕಾಡದಂತೆ ನೋಡಿಕೊಳ್ಳುತ್ತದೆ. ನಮ್ಮ ದೈಹಿಕ ಚಟುವಟಿಕೆಗಳಿಂದ ದೇಹವು ಅನುಭವಿಸುವ ನಿರ್ಜಲೀಕರಣದ ಸಮಸ್ಯೆಯನ್ನು ದೂರ ಮಾಡುವ ಪರಿಣಾಮಕಾರಿ ಅಂಶವನ್ನು ಎಳನೀರು ಒಳಗೊಂಡಿದೆ.

ಚರ್ಮ ಸುಕ್ಕುಗಟ್ಟುವಿಕೆಯನ್ನು ತಡೆಯುತ್ತದೆ
ಎಳನೀರು ತನ್ನಲ್ಲಿ ಸಿಟೋಕಿನ್ಸ್ ಮತ್ತು ಲೋರಿಕ್ ಆಸಿಡ್ ಅನ್ನು ಒಳಗೊಂಡಿದೆ. ಕೋಶಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಇವೆರಡೂ ಅತ್ಯಗತ್ಯವಾಗಿದೆ. ಇದು ವಯಸ್ಸಾಗುವಿಕೆ ಚರ್ಮ ಸುಕ್ಕುಗಟ್ಟುವಿಕೆ ಮೊದಲಾದ ಸಮಸ್ಯೆಗಳನ್ನು ದೂರ ಮಾಡುವ ಅನನ್ಯ ಅಂಶವನ್ನು ಒಳಗೊಂಡಿದೆ.

ರಕ್ತದೊತ್ತಡ ಸಮಸ್ಯೆ
ಎಳನೀರು ಅಧಿಕ ಪ್ರಮಾಣದ ಮೆಗ್ನೇಶಿಯಮ್ ಮತ್ತು ಪೊಟ್ಯಾಶಿಯಮ್ ಅನ್ನು ಒಳಗೊಂಡಿರುವುದರಿಂದ ಕಡಿಮೆ ರಕ್ತದ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇದೊಂದು ಪರಿಣಾಮಕಾರಿ ಸಿದ್ಧೌಷಧವಾಗಿದೆ. ಹೃದಯಾಘಾತಗಳಂತಹ ಅಪಾಯಕಾರಿ ಸಮಸ್ಯೆಗಳನ್ನು ದೂರ ಮಾಡುವ ಗುಣವನ್ನು ಎಳನೀರು ಹೊಂದಿದೆ.

ಚಯಾಪಚಯ ಕ್ರಿಯೆಗೆ
ನಿಮ್ಮ ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸಿ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಕರಗಿಸುವ ಅಂಶವನ್ನು ಎಳನೀರು ಹೊಂದಿದೆ. ಹಾಗಾಗಿ ದಿನನಿತ್ಯದ ಎಳನೀರು ಸೇವನೆಯು ನಿಮಗೆ ಮಹತ್ವಕಾರಿ ಪ್ರಯೋಜವನ್ನು ಉಂಟುಮಾಡುತ್ತದೆ.

ಕಿಡ್ನಿ ಕಲ್ಲುಗಳ ಸಮಸ್ಯೆಯನ್ನು ನಿವಾರಿಸುತ್ತದೆ
ಎಳನೀರಿನಲ್ಲಿ ಪೊಟ್ಯಾಶಿಯಮ್ ಇರುವುದರಿಂದ ಕಿಡ್ನಿ ಕಲ್ಲುಗಳಂತಹ ಸಮಸ್ಯೆಗಳಿಗೆ ಇದು ಪರಿಣಾಮಕಾರಿ ಸಿದ್ಧೌಷಧವಾಗಿದೆ.

ಜೀರ್ಣಕ್ರಿಯೆ
ಕೆಲವು ಹಣ್ಣುಗಳಲ್ಲಿ ಇರುವಂತಹ ಕ್ಯಾಲ್ಶಿಯಮ್, ಮೆಗ್ನೇಶಿಯಮ್ ಅಂಶವನ್ನು ಎಳನೀರು ಹೊಂದಿರುವುದರಿಂದ ಇದು ನಿಮ್ಮ ಜೀರ್ಣಕ್ರಿಯೆಯನ್ನು ವರ್ಧಿಸಿ ನಿಮಗೆ ಹೆಚ್ಚುವರಿ ಪೋಷಣೆಯನ್ನು ಒದಗಿಸುತ್ತದೆ.

ಶಕ್ತಿಯನ್ನು ವರ್ಧಿಸುತ್ತದೆ
ನಿಮ್ಮ ಶಕ್ತಿಯನ್ನು ವರ್ಧಿಸುವಲ್ಲಿ ಪರಿಣಾಮಕಾರಿಯಾಗಿರುವ ಎಳನೀರು ಕಡಿಮೆ ಸಕ್ಕರೆ ಪ್ರಮಾಣ ಸೋಡಿಯಮ್ ಅಂಶವನ್ನು ಹೊಂದಿದೆ. ಆದ್ದರಿಂದ ಎಳನೀರು ನಿಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿ ವರ್ಧನೆಗೆ ಪರಿಣಾಮಕಾರಿ ಮದ್ದಾಗಿದೆ.

ಮಲಬದ್ಧತೆ
ಮಲಬದ್ಧತೆಯಂತಹ ತೊಂದರೆಗಳಿಗೂ ಪರಿಣಾಮಕಾರಿ ಪ್ರಭಾವವನ್ನು ಎಳನೀರು ಬೀರುತ್ತದೆ. ನಿಮ್ಮ ದೈನಂದಿನ ವ್ಯಾಯಾಮ ಚಟುವಟಿಕೆಯ ನಂತರ ಎಳನೀರನ್ನು ಸೇವಿಸುವುದು ದೇಹಕ್ಕೆ ಧನಾತ್ಮಕ ಶಕ್ತಿಯನ್ನು ಒದಗಿಸುತ್ತದೆ.

ಸ್ನಾಯು ಸೆಳೆತ
ಎಳನೀರು ಸ್ನಾಯು ಸೆಳೆದಂತಹ ಸಮಸ್ಯೆಗಳನ್ನು ದೂರ ಮಾಡುವುದರಿಂದಸ್ನಾಯು ಸೆಳೆತಕ್ಕೆ ಇದೊಂದು ಉತ್ತಮ ಔಷಧವಾಗಿದೆ. ಇದರಲ್ಲಿ ಪೊಟ್ಯಾಶಿಯಮ್ ಅಧಿಕವಾಗಿರುವುದರಿಂದ ಇಂತಹ ತೊಂದರೆಗಳಿಗೆ ಇದು ರಾಮಬಾಣವಿದ್ದಂತೆ.

ಬಲವಾದ ಮೂಳೆಗಳಿಗೆ
ಎಳನೀರಿನಲ್ಲಿ ಕ್ಯಾಲ್ಶಿಯಮ್ ಅಂಶ ಅಧಿಕವಾಗಿರುವುದರಿಂದ ನಿಮ್ಮ ದೃಢ ಮತ್ತು ಗಟ್ಟಿ ಮೂಳೆಗಳಿಗೆ ಇದು ಸಹಾಯಕವಾಗಿದೆ.

ಒತ್ತಡವನ್ನು ನಿವಾರಿಸುತ್ತದೆ
ಎಳನೀರಿನಲ್ಲಿ ವಿಟಮಿನ್ ಬಿ ಅಂಶವನ್ನು ಒಳಗೊಂಡಿರುವುದರಿಂದ ಇದು ಒತ್ತಡವನ್ನು ನಿವಾರಿಸಿ ನಿಮಗೆ ಸಮಾಧಾನವನ್ನು ತರಿಸುತ್ತದೆ.

ಮೂತ್ರದ ಸಮಸ್ಯೆಗಳು
ನಿಯಮಿತವಾಗಿ ಎಳನೀರನ್ನು ಸೇವಿಸುವುದು ಉರಿಮೂತ್ರದಂತಹ ಅಪಾಯಕಾರಿ ಅಂಶವನ್ನು ದೂರಮಾಡಿ ಸ್ವಾಸ್ಥ್ಯವನ್ನು ಒದಗಿಸುತ್ತದೆ.

ಕರುಳಿನ ಚಲನೆ
ಎಳನೀರು ಕರುಳಿನ ಚಲನೆಗೂ ಹಿತಕಾರಿಯಾಗಿದ್ದು ನಿಮ್ಮ ದೈಹಿಕ ಆರೋಗ್ಯವನ್ನು ಸುಧಾರಿಸುತ್ತದೆ ಜೊತೆಗೆ ಕರುಳು ಸಂಬಂಧಿ ರೋಗಗಳನ್ನು ದೂರ ಮಾಡುತ್ತದೆ.

ತೂಕ ಇಳಿಕೆ
ನಿಮ್ಮ ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ ಎಂಬ ಅಂಶ ಈಗ ಕೆಲವು ಸಂಶೋಧನೆಗಳಿಂದ ಸಾಬೀತಾಗಿದೆ. ಕೆಲವೊಂದು ಪ್ರದೇಶಗಳಲ್ಲಿ ಇದರ ಕುರಿತು ಸಂಶೋಧನೆಗಳನ್ನು ಕೂಡ ನಡೆಸಿದ್ದು ಇದು ಧನಾತ್ಮಕ ಫಲಿತಾಂಶವನ್ನು ನೀಡಿದೆ.

ಮಧುಮೇಹ ನಿಯಂತ್ರಣ
ಮಧುಮೇಹವನ್ನು ನಿಯಂತ್ರಿಸುವ ತಾಕತ್ತು ಎಳನೀರಿಗಿದೆ. ನಿಯಮಿತವಾಗಿ ಎಳನೀರನ್ನು ಸೇವಿಸುವುದು ದೇಹದಲ್ಲಿ ರಕ್ತ ಪರಿಚಲನೆಯನ್ನು ಸರಾಗಗೊಳಿಸಿ ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ.

ವಿಷಕಾರಿ ಅಂಶಗಳಿಗೆ
ಡೆಂಗ್ಯೂ, ಜ್ವರ, ಹೃದಯ ಉರಿ ಮೊದಲಾದ ವಿಷಯುಕ್ತ ರೋಗಗಳಿಗೆ ಎಳನೀರು ರಾಮಬಾಣವಾಗಿದೆ.

ಮಾಯಿಸ್ಚರೈಸರ್
ಚಳಿಗಾಲ ಮತ್ತು ಬೇಸಿಗೆಯಲ್ಲಿ ತ್ವಚೆಯ ಅತ್ಯುತ್ತಮ ಆರೈಕೆಯನ್ನು ಎಳನೀರು ಮಾಡುತ್ತದೆ. ನಿಮ್ಮ ದೇಹಕ್ಕೂ ಇದನ್ನು ಹಚ್ಚಿಕೊಂಡು ಸ್ನಾನ ಮಾಡುವುದು ದೇಹದಲ್ಲಿ ಮಾಯಿಶ್ಚರೈಸರ್ ಅನ್ನು ವೃದ್ಧಿಸುತ್ತದೆ.
ತ್ವಚೆಗೆ ನೀರಿನ ಪೂರೈಕೆಯನ್ನು ಮಾಡುವುದು ಅತೀ ಉತ್ತಮ ಕಾರ್ಯವಾಗಿದೆ. ನಿಮ್ಮ ಕಳೆಗುಂದಿದ ಮುಖವನ್ನು ಇದು ಪ್ರಕಾಶಮಾನಗೊಳಿಸಿ ಹೊಳೆಯುವ ತ್ವಚೆಯನ್ನು ನಿಮಗೆ ಒದಗಿಸುತ್ತದೆ.

ಪೊಟ್ಯಾಷಿಯಂ ಮತ್ತು ಸೋಡಿಯಂ ಮಿಶ್ರಣ
ಎಳನೀರಿನಲ್ಲಿ ಎಲೆಕ್ಟ್ರೋಲಟ್ ಪೊಟ್ಯಾಷಿಯಂನ ಉತ್ತಮ ಪ್ರಮಾಣವನ್ನು ಹೊಂದಿದೆ. ಎಳನೀರಿನ 100 ಮಿಲಿ ನೀರು 250 ಮಿಗ್ರಾಂ ಪೊಟ್ಯಾಷಿಯಂ ಮತ್ತು 105 ಮಿಗ್ರಾಂ ಸೋಡಿಯಂ ಅಂಶಗಳನ್ನು ಹೊಂದಿದೆ. ಇಂತಹ ಅಂಶಗಳು ಅತಿಸಾರದಂತಹ ಸಮಸ್ಯೆಯನ್ನು ತಡೆಯುತ್ತವೆ.



Click it and Unblock the Notifications











