Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಕ್ಕಳ ಆರೋಗ್ಯಕ್ಕೆ 'ಪಪ್ಪಾಯಿ ಹಣ್ಣು' ಬಹಳ ಒಳ್ಳೆಯದು...
ಮಗು ಒಂದರಿಂದ ಒಂದುವರೆ ವರ್ಷ ದಾಟಿದ ಬಳಿಕ ಅದಕ್ಕೆ ಸರಿಯಾಗಿ ಹಣ್ಣಾಗಿರುವ ಪಪ್ಪಾಯಿ ತುಂಡುಗಳನ್ನು ಸೇವಿಸಲು ನೀಡಬೇಕು, ಆದರೂ ಮಗುವಿಗೆ ಪಪ್ಪಾಯಿ ನೀಡುವ ಮೊದಲು ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು. ...
ಮಕ್ಕಳಿಗೆ ತಾಯಿಯ ಹಾಲು ಅತೀ ಅಗತ್ಯವಾಗಿ ಬೇಕೇಬೇಕು. ಆರು ತಿಂಗಳ ನಂತರ ಮಕ್ಕಳಿಗೆ ತಾಯಿ ಹಾಲಿನೊಂದಿಗೆ ಸ್ವಲ್ಪ ಘನ ಆಹಾರವನ್ನು ನೀಡುತ್ತಾ ಬರಬೇಕು. ಅದರಲ್ಲೂ ಮುಖ್ಯವಾಗಿ ತರಕಾರಿ ಹಾಗೂ ಹಣ್ಣುಗಳನ್ನು ನೀಡಿದರೆ ಮಕ್ಕಳ ಬೆಳವಣಿಗೆಗೆ ಇದು ಪೂರಕ. ಮಗು ಒಂದರಿಂದ ಒಂದುವರೆ ವರ್ಷ ದಾಟಿದ ಬಳಿಕ ಅದಕ್ಕೆ ಸರಿಯಾಗಿ ಹಣ್ಣಾಗಿರುವ ಪಪ್ಪಾಯಿ ತುಂಡುಗಳನ್ನು (ಪರಂಗಿ ಹಣ್ಣು) ನೀಡಬೇಕು. ಸರ್ವಗುಣ ಸಂಪನ್ನ ಪಪ್ಪಾಯಿ ಹಣ್ಣಿನ ಮೂಲ ಅರಿಯಿರಿ
ಮಗು ಪಪ್ಪಾಯಿಯನ್ನು ಸರಿಯಾಗಿ ತಿನ್ನುತ್ತಾ ಇದೆಯಾ ಎಂದು ತಿಳಿದುಕೊಂಡು ಮುಂದೆ ಅದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಇದನ್ನು ತಿನ್ನಿಸಬೇಕು. ಮೊದಲು ಮಗು ಪಪ್ಪಾಯಿ ಹಣ್ಣನ್ನು ಸರಿಯಾಗಿ ತಿನ್ನುತ್ತಿದಿಯಾ ಎಂಬುದನ್ನು ತಿಳಿಯಿರಿ. ಮಗುವಿನಿಂದ ಭಿನ್ನ ಪ್ರತಿಕ್ರಿಯೆ ಬರುತ್ತಾ ಇದ್ದರೆ ತಕ್ಷಣ ಇದನ್ನು ನಿಲ್ಲಿಸಿ. ಮಗುವಿಗೆ ಪಪ್ಪಾಯಿ ನೀಡುವ ಮೊದಲು ವೈದ್ಯರ ಸಲಹೆ ಪಡೆದುಕೊಂಡರೆ ಒಳ್ಳೆಯದು. ಹಣ್ಣಾದ ಪಪ್ಪಾಯಿ ನೀಡುವುದರಿಂದ ಯಾವೆಲ್ಲಾ ಲಾಭಗಳು ಆಗಲಿದೆ ಎಂದು ತಿಳಿಯಿರಿ.....

ಜೀರ್ಣಕ್ರಿಯೆ
ಸಣ್ಣ ಮಟ್ಟದ ಪಪ್ಪಾಯಿಯನ್ನು ಮಕ್ಕಳಿಗೆ ನೀಡುವುದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು.

ಪ್ರತಿರೋಧಕ ಶಕ್ತಿ
ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಮಗುವಿನ ದೇಹದ ಪ್ರತಿರೋಧಕ ಶಕ್ತಿಯು ಹೆಚ್ಚಾಗುವುದು. ಇದರಿಂದ ಹಲವಾರು ರೀತಿಯ ಸೋಂಕನ್ನು ನಿವಾರಿಸಬಹುದು.

ಮೈಮೇಲೆ ಬೀಳುವ ಗುಳ್ಳೆಗಳಿಗೆ.....
ಮಗುವಿನ ಮೈಮೇಲೆ ಬೀಳುವ ಗುಳ್ಳೆ, ಕಜ್ಜಿಗಳ ನಿವಾರಣೆಗೆ ಪಪ್ಪಾಯಿಯನ್ನು ನೇರವಾಗಿ ಚರ್ಮಕ್ಕೆ ಹಚ್ಚಬಹುದು. ಚರ್ಮದಲ್ಲಿ ಆಗಿಗುವ ಕಚ್ಚಿಯಿಂದ ಮಗುವಿಗೆ ಉರಿ ಅಥವಾ ಕೆರೆತ ಕಾಣಿಸಿಕೊಳ್ಳುತ್ತಾ ಇದ್ದರೆ ಪಪ್ಪಾಯಿ ಪೇಸ್ಟ್ ಹಚ್ಚಿಕೊಳ್ಳಿ.

ಮಲಬದ್ಧತೆ
ಮಗು ಸರಿಯಾಗಿ ಮಲ ವಿಸರ್ಜನೆ ಮಾಡುತ್ತಿಲ್ಲವೆಂದಾದರೆ ಆಗ ಮಗುವಿಗೆ ದಿನದಲ್ಲಿ ಎರಡು ಸಲ ಪಪ್ಪಾಯಿ ಪೇಸ್ಟ್ ತಿನ್ನಿಸಿ. ಇದು ಮಲಬದ್ಧತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆಗೆ ಒಂದಿಷ್ಟು ಸರಳ ಪರಿಹಾರ

ಕರುಳಿನ ಹುಳಗಳು
ಒಂದು ವರ್ಷಕ್ಕಿಂತ ದೊಡ್ಡ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಕರುಳಿನ ಹುಳು ಸಮಸ್ಯೆ ನಿವಾರಣೆಗೆ ಪಪ್ಪಾಯಿಯನ್ನು ಬಳಸಬಹುದು. ಪಪ್ಪಾಯಿ ಬೀಜದ ಹುಡಿಯನ್ನು ಜೇನುತುಪ್ಪದೊಂದಿಗೆ ಕೆಲವು ದಿನಗಳ ಕಾಲ ಸೇವಿಸಿದರೆ ಇದರಿಂದ ಕರುಳಿನ ಹುಳುಗಳು ಕಡಿಮೆಯಾಗುವುದು.



Click it and Unblock the Notifications
