For Quick Alerts
ALLOW NOTIFICATIONS  
For Daily Alerts

ಮಕ್ಕಳಿಗೆ ಕಾಡುವ ಚರ್ಮರೋಗಕ್ಕೆ ಗಡಸು ನೀರೇ ಕಾರಣ!

By Manu
|

ಗಡಸು ನೀರು ಕುಡಿಯಲು ಉತ್ತಮವಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಇತ್ತೀಚಿನ ಸಂಶೋಧನೆಗಳು ಗಡಸು ನೀರು ಮಕ್ಕಳಿಗೆ ಸರ್ವಥಾ ಯೋಗ್ಯವಲ್ಲ ಎಂದು ತಿಳಿಸುತ್ತಿವೆ. ವಿಶೇಷವಾಗಿ ಈ ನೀರಿನ ಬಳಕ ಚರ್ಮದಲ್ಲಿ ಸೂಕ್ಷ್ಮ ಗೆರೆಗಳನ್ನು ಮೂಡಿಸುತ್ತವೆ ಮತ್ತು ಕೆಂಪಗಾಗಿಸುತ್ತವೆ. ಪರಿಣಾಮವಾಗಿ ತುರಿಕೆ ಮತ್ತು ಉರಿಯನ್ನು ಮಕ್ಕಳು ಅನುಭವಿಸುತ್ತಾರೆ.

Does Hard Water Cause Skin Issues In Kids

ಗಡಸು ನೀರಿಗೂ ಸಾಮಾನ್ಯ ನೀರಿಗೇ ಏನು ವ್ಯತ್ಯಾಸ ಎಂದರೆ ಗಡಸು ನೀರಿನಲ್ಲಿ ಕೆಲವು ಲವಣಗಳು ಕರಗಿದ್ದು ಸಾಮಾನ್ಯ ನೀರಿನಷ್ಟು ಸಮರ್ಥವಾಗಿ ಇತರ ಅಂಶಗಳನ್ನು ಕರಗಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿರುತ್ತದೆ. ಈ ನೀರು ಮಕ್ಕಳ ಚರ್ಮದ ಮೇಲೆ ಕೆಲವು ವಿಪರೀತ ಪರಿಣಾಮಗಳನ್ನು ಉಂಟುಮಾಡಬಹುದು. ಈ ಲವಣಗಳು ಚರ್ಮದ ಆರ್ದ್ರತೆಯನ್ನು ಹೀರಿಕೊಂಡು ಚರ್ಮವನ್ನು ಒಣದಾಗಿಸಿ ಎಕ್ಸಿಮಾ ಎಂಬ ರೋಗಕ್ಕೆ ಕಾರಣವಾಗಬಹುದು.

ಇದರೊಂದಿಗೆ ಹವಾಮಾನದ ಕಾರಣ, ಉದಾಹರಣೆಗೆ ಅತೀವ ಸೆಖೆ, ಗಾಳಿಯಲ್ಲಿ ಅಲರ್ಜಿಕಾರಕ ಕಣಗಳು, ಪರಾಗಗಳು ಇರುವುದು ಮೊದಲಾದವು ಈ ಸ್ಥಿತಿಯನ್ನು ಉಲ್ಬಣಗೊಳಿಸಬಹುದು. ಗಡಸು ನೀರಿನ ಬಳಕೆಯಿಂದ ಚರ್ಮವು ಈ ಅಲರ್ಜಿಕಾರಕಗಳನ್ನು ಎದುರಿಸುವ ನೈಸರ್ಗಿಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಹಾಗೂ ಈ ಅಲರ್ಜಿಗಳಿಗೆ ಸುಲಭವಾಗಿ ಎದುರಾಗುತ್ತದೆ ಎಂಬುದನ್ನು ಈ ಸಂಶೋಧನೆಯ ಮೂಲಕ ತಜ್ಞರು ಎಚ್ಚರಿಸುತ್ತಾರೆ.

ಈ ಸಂಶೋಧನೆಯಲ್ಲಿ ಗಡಸು ನೀರನ್ನು ಅನಿವಾರ್ಯವಾಗಿ ಬಳಸುವ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳನ್ನು ಸಂದರ್ಶಿಸಿ ಆ ಮನೆಯಲ್ಲಿರುವ ಶಿಶು ಮತ್ತು ಚಿಕ್ಕ ಮಕ್ಕಳ ಆರೋಗ್ಯವನ್ನು ಪರಿಶೀಲಿಸಿ ಮಾಹಿತಿಗಳನ್ನು ಕಲೆಹಾಕಿ ವಿಶ್ಲೇಷಿಸಲಾಗಿದೆ. ಈ ಮಾಹಿತಿಗಳ ಪ್ರಕಾರ ನೀರಿನಲ್ಲಿ ಕ್ಲೋರೀನ್ ಮತ್ತು ಕ್ಯಾಲ್ಸಿಯಂ ಕಾರ್ಬೋನೇಟ್ ಹೆಚ್ಚಿರುವ ನೀರಿನ ಬಳಕೆ ಮಕ್ಕಳ ಆರೋಗ್ಯವನ್ನು ಅತಿಹೆಚ್ಚಾಗಿ ಬಾಧಿಸುತ್ತದೆ ಎಂದು ಕಂಡುಕೊಳ್ಳಲಾಗಿದೆ.

ಈ ಅಂಶಗಳು ಹೆಚ್ಚಿರುವ ನೀರನ್ನು ಬಳಸುತ್ತಿರುವ ಮಕ್ಕಳ ಆರೋಗ್ಯವನ್ನು ಕೂಲಂಕುಶವಾಗಿ ಪರಿಶೀಲಿಸಿದ ಬಳಿಕ ಈ ಮಕ್ಕಳಲ್ಲಿ ಚರ್ಮರೋಗ ತಗಲುವ ಸಾಧ್ಯತೆ ಅತಿ ಹೆಚ್ಚಿದ್ದು ಈ ನೀರನ್ನೇ ಕುಡಿಯುವ 85% ರಷ್ಟು ಮಕ್ಕಳಲ್ಲಿ ಈ ತೊಂದರೆಯ ಲಕ್ಷಣಗಳು ಈಗಾಗಲೇ ಕಾಣಿಸಿಕೊಂಡಿವೆ. ನೀವು ಗಡಸು ನೀರು ಬಳಸುತ್ತಿದ್ದರೆ ತ್ವಚೆ ಹಾನಿ ಖಂಡಿತ

ಆದ್ದರಿಂದ ಮಕ್ಕಳಿಗೆ ಕುಡಿಯಲು ಸಾದಾ ನೀರನ್ನು ಮಾತ್ರ ನೀಡುವಂತೆ, ಇದಕ್ಕಾಗಿ ಸೂಕ್ತ ಸಲಕರಣೆಗಳನ್ನು ಅಳವಡಿಸುವಂತೆ ತಜ್ಞರು ಸಲಹೆ ಮಾಡುತ್ತಾರೆ. ವಿಶೇಷವಾಗಿ ಮನೆಯಲ್ಲಿ ಶಿಶು ಮತ್ತು ಚಿಕ್ಕ ಮಕ್ಕಳಿದ್ದರೆ ಅವರ ಆರೋಗ್ಯದ ಬಗ್ಗೆ ಯಾವುದೇ ಕಾರಣಗಳನ್ನು ಒಡ್ಡದೇ ಆರೋಗ್ಯಕರ ನೀರನ್ನು ಪಡೆಯುವ ವಿಧಾನವನ್ನು ಅಳವಡಿಸಿಕೊಳ್ಳಲು ಅವರು ಸಲಹೆ ಮಾಡುತ್ತಾರೆ.

ಶಿಶುಗಳ ಆರೋಗ್ಯ ಅತಿ ಸೂಕ್ಷ್ಮವಾಗಿದ್ದು ನೀರಿನ ಮೂಲಕ ಎದುರಾಗುವ ಯಾವುದೇ ತೊಂದರೆಗಳು ಅವರಿಗೆ ಮಾರಕವಾಗಬಲ್ಲುದು. ಒಂದು ವೇಳೆ ನೀವು ಇರುವ ಪ್ರದೇಶದಲ್ಲಿ ನೀರು ಗಡಸಾಗಿದ್ದರೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನೀವು ಕುಡಿಯುತ್ತಿರುವ ನೀರು ಗಡಸು ಹೌದೇ ಅಲ್ಲವೇ ಎಂದು ಗೊತ್ತಿಲ್ಲದಿದ್ದರೆ ಪ್ರತಿ ಜಿಲ್ಲೆ ಮತ್ತು ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿರುವ ತಪಾಸಣಾ ಕೇಂದ್ರಕ್ಕೆ ಕೊಂಚ ನೀರು ತೆಗೆದುಕೊಂಡು ಹೋಗಿ ಪರಿಶೀಲಿಸಿಕೊಳ್ಳಬಹುದು.

ಗಡಸು ನೀರನ್ನು ಸಿಹಿಯಾಗಿಸುವ ಸಲಕರಣೆಗಳನ್ನು ಮಾರಾಟ ಮಾಡುವ ಸಂಸ್ಥೆಗಳೂ ಉಚಿತವಾಗಿ ನೀರಿನ ತಪಾಸಣೆಯನ್ನು ಮಾಡುತ್ತವೆ. ಇವುಗಳ ಲಾಭ ಪಡೆಯಬಹುದು. ಶಿಶುಗಳ ಚರ್ಮದಲ್ಲಿ ಕೊಂಚವಾದರೂ ಕೆಂಪಗಾಗಿರುವುದು ಅಥವಾ ಚಿಕ್ಕ ಗುಳ್ಳೆಗಳು ಬಂದಿರುವುದು ಕಂಡುಬಂದರೆ ತಡಮಾಡದೇ ವೈದ್ಯರಲ್ಲಿ ತೋರಿಸಿ ಇದಕ್ಕೆ ಗಡಸು ನೀರೇ ಕಾರಣವೇ ಎಂದು ಅರಿತುಕೊಳ್ಳಬೇಕು.

English summary

Does Hard Water Cause Skin Issues In Kids

A new study claims that hard water isn't good for babies. It could cause red rashes which might cause itching sensation and irritation of the skin of your baby. Dry skin could cause eczema. Sometimes, even environmental factors may also play a part. This study claims that hard water could affect the skin's natural protection mechanism and could cause eczema in childhood.
X
Desktop Bottom Promotion