For Quick Alerts
ALLOW NOTIFICATIONS  
For Daily Alerts

ಮಕ್ಕಳ ಬುದ್ಧಿ ಶಕ್ತಿ ಹೆಚ್ಚಿಸಲು, ಚೆನ್ನಾಗಿ ವ್ಯಾಯಮ ಮಾಡಿಸಿ!

By Hemanth
|

ಮಕ್ಕಳು ಏನೇ ಮಾಡಿದರೂ ಅದು ಚಂದ. ಮಕ್ಕಳ ಆಟೋಟವನ್ನು ನೋಡುವುದೆಂದರೆ ಅದು ಮನಸ್ಸಿಗೆ ಖುಷಿ ನೀಡುತ್ತದೆ. ತಮ್ಮದೇ ಆದ ಲೋಕದಲ್ಲಿ ಮಕ್ಕಳು ಆಡುತ್ತಿದ್ದರೆ ನಮಗೆ ಬಾಲ್ಯ ನೆನಪಾಗುವುದು ಸುಳ್ಳಲ್ಲ. ನಾವು ಇದೇ ರೀತಿ ಬಾಲ್ಯವನ್ನು ಕಳೆದಿರುತ್ತೇವೆ. ಮಕ್ಕಳ ಬಗ್ಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ದೈಹಿಕವಾಗಿ ಹೆಚ್ಚು ಚಟುವಟಿಕೆಯಲ್ಲಿರುವ ಮಕ್ಕಳ ಮೆದುಳು ಹೆಚ್ಚು ಚುರುಕಾಗಿರುತ್ತದೆಯಂತೆ. ಇದರಿಂದ ಅವರು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಮುಂದಿರುತ್ತಾರೆ.

Do Exercises Boost Kids' Intellect?

ಈ ಅಧ್ಯಯನದ ಪ್ರಕಾರ ನಿಯಮಿತವಾಗಿ ವ್ಯಾಯಾಮ ಮಾಡುವ ಮಕ್ಕಳು ಜೀವನದ ಕೌಶಲ್ಯಗಳನ್ನು ಬೇಗನೆ ಕಲಿತುಕೊಳ್ಳುತ್ತಾರೆ ಮತ್ತು ಅವರಲ್ಲಿ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಶಾಲೆಯಲ್ಲಿ ದೈಹಿಕ ಚಟುವಟಿಕೆ ಮತ್ತು ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಮಕ್ಕಳು ಸಾಮಾಜಿಕವಾಗಿ ಬೆರೆಯುತ್ತಾರೆ ಮತ್ತು ಇತರರೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರಂತೆ. ಫಿಟ್ನೆಸ್‌ ದೊಡ್ಡವರಿಗೆ ಮಾತ್ರವಲ್ಲ, ಮಕ್ಕಳಿಗೂ ಅತ್ಯಗತ್ಯ...

ದೈಹಿಕ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಕೊಂಡರೆ ವಯಸ್ಸಾಗುತ್ತಿದಂತೆ ಅವರಿಗೆ ಬರುವಂತಹ ಆರೋಗ್ಯ ಸಮಸ್ಯೆಗಳು ತುಂಬಾ ಕಡಿಮೆಯಾಗುತ್ತದೆ. ಬಾಲ್ಯದಲ್ಲಿ ವ್ಯಾಯಾಮ ಮಾಡುವುದರಿಂದ ಮಧುಮೇಹ ಮತ್ತು ಹೃದಯ ಸಮಸ್ಯೆಯಿಂದ ಮಕ್ಕಳು ಪಾರಾಗಬಹುದು.

ಮಕ್ಕಳು ಮೈದಾನದಲ್ಲಿ ಆಟವಾಡುವುದರಿಂದ ಮನಸ್ಸು ಉಲ್ಲಾಸಿತಗೊಂಡು ಕಲಿಕೆಯಲ್ಲಿ ಹೆಚ್ಚು ಗಮನಹರಿಸಲು ಸಾಧ್ಯವಾಗುತ್ತದೆ. ಶಾಲಾ ಚಟುವಟಿಕೆ ಮತ್ತು ಆಟಗಳಲ್ಲಿ ತೊಡಗಿಕೊಂಡಿರುವ ಮಕ್ಕಳು ಶಾಲೆಯನ್ನು ಹೆಚ್ಚು ಆನಂದಿಸುತ್ತಾರಂತೆ. ಮುದ್ದಿನ ಮಗುವಿಗೆ 'ಪೀನಟ್ ಬಟರ್' ತಿನ್ನಿಸುವ ಮುನ್ನ....

ವಿವಿಧ ವಯೋವರ್ಗದ ಸುಮಾರು 1000 ಮಕ್ಕಳನ್ನು ಅಧ್ಯಯನಕ್ಕೊಳಪಡಿಸಿದ ಬಳಿಕ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಮಕ್ಕಳು ಕಲಿಕೆಯಲ್ಲಿ ಮುಂದಿರುತ್ತಾರೆ ಮತ್ತು ಮಕ್ಕಳ ಆರೋಗ್ಯವೂ ಉತ್ತಮವಾಗುತ್ತದೆ. ಶಾಲೆಯಲ್ಲಿ ನಿಮ್ಮ ಮಕ್ಕಳ ದೈಹಿಕ ಶಿಕ್ಷಣ ಹೇಗಿರಬೇಕು?

English summary

Do Exercises Boost Kids' Intellect?

A new study claims that kids who take part in more physical activity tend to enjoy better brain function. Physical activities seem to enhance their academic performance and intelligence too.
X
Desktop Bottom Promotion