For Quick Alerts
ALLOW NOTIFICATIONS  
For Daily Alerts

ದಾಳಿಂಬೆ ಮಕ್ಕಳ ಆರೋಗ್ಯಕ್ಕೆ ನಿಜಕ್ಕೂ ಉಪಕಾರಿ

By CM prasad
|

ಮಕ್ಕಳಿಗೆ ನಾವು ನೀಡುವ ಆಹಾರದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಹೆಚ್ಚಿನ ಸಮಯಗಳನ್ನು ಅವರು ಆಟ ಪಾಠಗಳಲ್ಲಿ ಕಳೆಯುವುದರಿಂದಾಗಿ ಅವರ ಮೇಲೆ ವಿಶೇಷ ಅಸ್ಥೆಯನ್ನು ನಾವು ಇರಿಸಿಕೊಳ್ಳಬೇಕು. ಬಾಯಿ ರುಚಿಗೆಂದು ಅವರಿಗೆ ನಾವು ನೀಡುವ ಜಂಕ್ ಫುಡ್‎ಗಳು ಅವರಿಗೆ ಉಂಟುಮಾಡಲಿರುವ ಅಪಾಯಗಳ ಬಗ್ಗೆ ನೀವು ತಿಳಿದಿದ್ದೀರಾ?

ಹಾಗಿದ್ದರೂ ಕರಿದ ಬೇಕರಿ ತಿಂಡಿಗಳಿಗೆ ಮಕ್ಕಳು ಹೊಂದಿಕೊಳ್ಳುತ್ತಿದ್ದಾರೆ. ಇದರಿಂದಲೇ ಅವರು ಆಗಾಗ್ಗೆ ರೋಗಕ್ಕೆ ಗುರಿಯಾಗುತ್ತಿರುವುದು.ಆದರೆ ಈ ಅನಾರೋಗ್ಯಕರ ಬೆಳವಣಿಗೆಗೆ ಈಗಲೆ ಕಡಿವಾಣವನ್ನು ಹಾಕಬಹುದು. ಹೇಗೆಂದರೆ ಅವರಲ್ಲಿ ಕೊಬ್ಬನ್ನು ಉತ್ಪಾದಿಸುತ್ತಿರುವ ಆಹಾರವನ್ನು ನಿರ್ಬಂಧಿಸಿ ಆರೋಗ್ಯಕರ ಜೀವನದೆಡೆಗೆ ಅವರನ್ನು ಕೊಂಡೊಯ್ಯುವುದಾಗಿದೆ. ಈ ಕೆಲಸಗಳನ್ನು ಹಣ್ಣುಗಳು ಮತ್ತು ತರಕಾರಿಗಳು ಮಾತ್ರವೇ ಮಾಡಲು ಸಾಧ್ಯ.

Benefits Of Pomegranates For Babies

ಇನ್ನು ಎಲ್ಲಾ ತರಕಾರಿ ಹಣ್ಣುಗಳನ್ನು ಅವರಿಗೆ ನೀಡುವುದಕ್ಕಿಂತ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಅಂತೆಯೇ ಪ್ರೋಟೀನ್ ವಿಟಮಿನ್‎ಗಳನ್ನು ತನ್ನಲ್ಲಿ ಹೇರಳವಾಗಿ ಹೊಂದಿರುವ ಹಣ್ಣುಗಳನ್ನು ಅವರಿಗೆ ಸೂಕ್ತ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಮಕ್ಕಳು ಹೆಚ್ಚು ಇಷ್ಟಪಡುವ ಮತ್ತು ಪ್ರೋಟೀನ್ ವಿಟಮಿನ್‎ಗಳಿಂದ ಸಂಪನ್ನವಾಗಿರುವ ದಾಳಿಂಬೆಯ ರಹಸ್ಯ ಮತ್ತು ಅದನ್ನು ಮಕ್ಕಳಿಗೆ ನೀಡುವುದರಿಂದ ಉಂಟಾಗುವ ಪ್ರಯೋಜನಗಳನ್ನು ಅರಿತುಕೊಳ್ಳೋಣ.

ಔಷಧೀಯ ಗುಣಗಳನ್ನು ತನ್ನಲ್ಲಿ ಹೊಂದಿಕೊಂಡಿರುವ ದಾಳಿಂಬೆ ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.ನ್ಯೂಟ್ರೀನ್ ಅಂಶಗಳು ಹೇರಳವಾಗಿರುವ ದಾಳಿಂಬೆಯಲ್ಲಿ ರಕ್ತದ ಹಿಮೋಗ್ಲೋಬೀನ್ ಅಂಶವನ್ನು ಅಧಿಕಗೊಳಿಸುವ ಸಾಮರ್ಥ್ಯವಿದೆ. ಸ್ನಾಯುಗಳಿಗೆ ಅತ್ಯಗತ್ಯವಾಗಿರುವ ಈ ಹಣ್ಣನ್ನು ಮಕ್ಕಳಿಗೆ ನಿತ್ಯವೂ ನೀಡುವುದರಿಂದ ವಿಟಮಿನ್ ಸಿ ಮತ್ತು ಪೊಟಾಶಿಯಮ್ ಅವರಲ್ಲಿ ಅಧಿಕಗೊಳ್ಳುತ್ತದೆ. ಇಷ್ಟೇ ಅಲ್ಲದೆ ದಾಳಿಂಬೆಯ ಕುರಿತಾದ ಇನ್ನಷ್ಟು ಪ್ರಯೋಜನಕಾರಿ ಅಂಶಗಳನ್ನು ಕುರಿತು ತಿಳಿದುಕೊಳ್ಳೋಣ.

ನಿಮ್ಮ ಶಿಶುವಿಗೆ ಪೌಷ್ಠಿಕಾಂಶಗಳನ್ನು ನೀಡುತ್ತದೆ
ದಾಳಿಂಬೆಯಲ್ಲಿ ವಿಟಮಿನ್ ಸಿ ಮತ್ತು ಇ ಸತ್ವಗಳು ಹೇರಳವಾಗಿದೆ. ಅಲ್ಲದೇ ಖನಿಜಸತ್ವಗಳೂ ಇದರಲ್ಲಿ ಅಡಗಿದೆ. ಸಹಜ ರಾಡಿಕಲ್ಸ್ ಅನ್ನು ಹೊರಸೂಸಿ, ಆಕ್ಸಿಜನ್ ಅಂಶಗಳನ್ನು ಅನ್ ಸ್ಟೇಬಲ್ ಮಾಡುತ್ತದೆ. ಇದರಿಂದ ನಿಮ್ಮ ಶಿಶುವಿಗೆ ಉತ್ತಮ ಆರೈಕೆ ಸಿಗಲಿದೆ.

ಉರಿಯೂತ ನಿವಾರಿಸುತ್ತದೆ
ಇತ್ತೀಚಿನ ಅಧ್ಯಯನದ ವರದಿಯ ಪ್ರಕಾರ ದಾಳಿಂಬೆಯನ್ನು ಶಿಶುವಿಗೆ ನೀಡಿದಲ್ಲಿ ಉರಿಯೂತವನ್ನು ನಿವಾರಿ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತದೆ. ಇದರಲ್ಲಿರುವ ಎನ್ಸೈಮ್ ಗಳಲ್ಲಿ ಉರಿಯೂತ ನಿವಾರಿಸುವ ಗುಣಗಳಿವೆ.

ಅಜೀರ್ಣ ಸಮಸ್ಯೆಯನ್ನು ನಿವಾರಿಸುತ್ತದೆ
ಅಪಕ್ವಗೊಂಡಿರುವ ಜೀರ್ಣ ಕ್ರಿಯಾ ವ್ಯವಸ್ಥೆಯಿಂದ ಶಿಶುಗಳು ಕೆಲವೊಂದು ಬಾರಿ ಅಜೀರ್ಣ ಸಮಸ್ಯೆಯಿಂದ ಬಳಲುತ್ತವೆ. ಈ ಹಣ್ಣಿನ ಸೇವನೆಯಿಂದ ಮಲಬಾಧೆಗೆ ಕಾರಣವಾಗುವ ಬ್ಯಾಕ್ಟೀರಿಯಗಳನ್ನು ನಾಶಗೊಳಿಸಿ ಮಲಬದ್ಧತೆಯನ್ನು ನಿವಾರಿಸುತ್ತದೆ.

ಜಂತುಹುಳುಗಳನ್ನು ನಾಶಮಾಡುತ್ತದೆ
ಶಿಶುವಿನಲ್ಲಿ ಜಂತುಹುಳುಗಳು ಬರುವುದು ಸರ್ವೇಸಾಮಾನ್ಯ ಸಂಗತಿ. ಈ ಹುಳುಗಳು ದೊಡ್ಡ ಕರುಳಿನಲ್ಲಿ ಅಡಗಿ ನಿಮ್ಮ ಪೌಷ್ಠಿಕಾಂಶಗಳನ್ನು ಕಸಿಯುತ್ತವೆ. ದಾಳಿಂಬೆ ಹಣ್ಣಿನ ಸೇವನೆಯಿಂದ ಈ ಹುಳುಗಳು ನಾಶವಾಗುತ್ತವೆ.

ಯಕೃತ್ತನ್ನು ಸಂರಕ್ಷಿಸುತ್ತದೆ
ದಾಳಿಂಬೆ ಪಾನೀಯವು ನಿಮ್ಮ ಯಕೃತ್ತನ್ನು ಸಂರಕ್ಷಿಸಲು ಮತ್ತು ಆರೈಕೆ ನೀಡಲು ನೆರವಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಸತ್ವವು ನಿಮ್ಮ ಒತ್ತಡವನ್ನು ನಿವಾರಿಸಿ ಯಕೃತ್ತನ್ನು ಸಂರಕ್ಷಿಸುತ್ತದೆ.

English summary

Benefits Of Pomegranates For Babies

Pomegranates are one of the foods that should be included in a baby's diet. It can be introduced to your baby 's diet after 6 months. Pomegranate can be considered as a super food, due to its high antioxidant content. It is totally safe to give the baby, pomegranate juice. In this article, we at Boldsky will list out some of the benefits of pomegranates for babies. Read on to know more about it.
X
Desktop Bottom Promotion