For Quick Alerts
ALLOW NOTIFICATIONS  
For Daily Alerts

  ಮಕ್ಕಳ ಮನಸ್ಸು ಹೂವಿನಂತೆ, ನೋವು ಮಾಡಬೇಡಿ...

  By Manu
  |

  ಸಣ್ಣ ಮಕ್ಕಳು ಎಷ್ಟು ಬೇಗ ಬೆಳೆದು ದೊಡ್ಡವರಾಗುತ್ತಾರೆ ಎಂಬುದು ಗೊತ್ತೇ ಆಗುವುದಿಲ್ಲ. ನಿಮ್ಮ ಮನೆಯ ಎಳೆಯರೂ ಕೂಡ ಥಟ್ಟನೆ ಬೆಳೆದು ದೊಡ್ಡವರಾಗುತ್ತಾರೆ ನೋಡಿದವರಂತೂ ನಿಮ್ಮ ಮಕ್ಕಳು ಎಷ್ಟು ಬೇಗ ಬೆಳೆದು ಬಿಟ್ಟಿದ್ದಾರೆ? ನಾವು ನೋಡುವಾಗ ಸಣ್ಣಗೆ ಇದ್ದವರು ಈಗ ಇಷ್ಟು ಬೆಳೆದಿದ್ದಾರೆ ಎಂಬುದಾಗಿ ಹೇಳುವುದನ್ನು ನೀವು ಕೇಳಿರಬಹುದು.

  ಮಕ್ಕಳು ದೊಡ್ಡವರಾದಂತೆ ಅವರೊಳಗಿನ ಭಾವನೆ ಕೂಡ ಬೆಳೆಯುತ್ತಾ ಹೋಗುತ್ತದೆ. ಬೇರೆ ಬೇರೆ ರೀತಿಯ ಭಾವನೆಗಳನ್ನು ಅವರು ಪ್ರಕಟಪಡಿಸುತ್ತಾರೆ. ಒಮ್ಮೊಮ್ಮೆ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನೂ ಅರಿತುಕೊಳ್ಳುವುದೂ ಕಷ್ಟವೇ. ಹೆತ್ತವರೇ ಮಕ್ಕಳ ಪಾಲಿಗೆ ಮೊದಲ ರೋಲ್ ಮಾಡೆಲ್...  

  ಆದ್ದರಿಂದ ಹದಿಹರೆಯದ ಮಕ್ಕಳಲ್ಲಿ ಹೆತ್ತವರು ಯಾವ ರೀತಿ ವರ್ತಿಸಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಲಿರುವೆವು. ಏಳರಿಂದ ಹದಿನೆಂಟರ ಹರೆಯವು ಮಕ್ಕಳನ್ನು ಪ್ರಬುದ್ಧರನ್ನಾಗಿಸುವ ಕಾಲಘಟ್ಟವಾಗಿರುತ್ತದೆ. ಅವರಿಗೆ ಸಣ್ಣ ಘಟನೆ ಕೂಡ ಹೃದಯಕ್ಕೆ ಭಾರೀ ನೋವನ್ನುಂಟು ಮಾಡುವಂತಿರುತ್ತದೆ ಆದ್ದರಿಂದ ಆದಷ್ಟು ಜಾಗರೂಕರಾಗಿ ನಾವು ಮಕ್ಕಳನ್ನು ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಬೆಳೆಯುತ್ತಿರುವ ಮಕ್ಕಳಲ್ಲಿ ಋಣಾತ್ಮಕವಾಗಿ ಯಾವೆಲ್ಲಾ ಅಂಶಗಳನ್ನು ತಿಳಿಸಬಾರದು ಎಂಬುದನ್ನು ನೋಡೋಣ. ನಿಮ್ಮ ದುರ್ಗುಣಗಳನ್ನು ಮಕ್ಕಳೆದುರು ತೋರ್ಪಡಿಸಬೇಡಿ!

  ನನ್ನನ್ನು ನನ್ನಷ್ಟಕ್ಕೆ ಬಿಟ್ಟು ಬಿಡಿ

  ನನ್ನನ್ನು ನನ್ನಷ್ಟಕ್ಕೆ ಬಿಟ್ಟು ಬಿಡಿ

  ಹೆತ್ತವರು ಮಕ್ಕಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿಲ್ಲ ಎಂದಾದಲ್ಲಿ ಮಕ್ಕಳಲ್ಲಿ ಖಿನ್ನತೆ ಮತ್ತು ಒಬ್ಬಂಟಿ ಭಾವನೆ ತಲೆದೋರುತ್ತದೆ. ಗುಂಪಿನಲ್ಲಿ ಬೆರೆಯದೇ ಇರುವುದು, ಒಬ್ಬಂಟಿಗರಾಗಿ ಕಾಲ ಕಳೆಯುವುದು ಮೊದಲಾದ ಚಟುವಟಿಕೆಗಳನ್ನು ಅವರು ಪ್ರಾರಂಭಿಸುತ್ತಾರೆ.

  ನಿನ್ನ ಮೇಲೆಯೇ ನಿನಗೆ ಭರವಸೆ ಇಲ್ಲವೇ....

  ನಿನ್ನ ಮೇಲೆಯೇ ನಿನಗೆ ಭರವಸೆ ಇಲ್ಲವೇ....

  ನಿಮ್ಮ ಮಕ್ಕಳು ಸಮಸ್ಯೆಗಳಲ್ಲಿ ತೊಳಲಾಡುತ್ತಿದ್ದಾರೆ ಎಂದಾದಲ್ಲಿ ಅದನ್ನು ಪರಿಹರಿಸುವುದರತ್ತ ಗಮನ ಹರಿಸಿ. ಅದರ ಬದಲಿಗೆ ನಿಮ್ಮಲ್ಲಿ ನಮಗೆ ಭರವಸೆ ಮುಂತಾದ ಮಾತುಗಳನ್ನು ಹೇಳುವುದರಿಂದ ಅವರು ಇನ್ನಷ್ಟು ದುರ್ಬಲರಾಗಿ ಬಿಡುತ್ತಾರೆ.

  ಅಳುಬುರುಕಿ

  ಅಳುಬುರುಕಿ

  ನಿಮ್ಮ ಮಗು ಹೆಚ್ಚು ಅಳುತ್ತಿದೆ ಎಂದಾದಲ್ಲಿ ಅದನ್ನು ಸಮಾಧಾನ ಪಡಿಸಿ. ಇನ್ನಷ್ಟು ಅಳುವಂತೆ ಅದನ್ನು ಮಾಡದಿರಿ. ನಿಮ್ಮ ಸಾಂಗತ್ಯವನ್ನು ಅದು ಬಯಸುತ್ತಿರುತ್ತದೆ ಎಂಬುದನ್ನು ಅರ್ಥಮಾಡಿಕೊಂಡು ಮಗುವಿನೊಂದಿಗೆ ಸಮಯ ಕಳೆಯಿರಿ.

  ಇತರ ಮಕ್ಕಳೊಂದಿಗೆ ಹೋಲಿಸುವುದು

  ಇತರ ಮಕ್ಕಳೊಂದಿಗೆ ಹೋಲಿಸುವುದು

  ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸುವುದನ್ನು ಮೊದಲು ಬಿಡಿ. ನಿಮ್ಮದೇ ಮಗುವನ್ನು ಇತರರೊಂದಿಗೆ ಹೋಲಿಸುವುದು ಅದರಲ್ಲಿ ದ್ವೇಷವನ್ನು ಹುಟ್ಟು ಹಾಕಬಹುದು ಅಂತೆಯೇ ನಿಮ್ಮ ಮೇಲೆ ಮತ್ತು ನೀವು ಹೋಲಿಸುವ ಇತರ ಮಕ್ಕಳ ಮೇಲೆ ಹಗೆಯನ್ನು ಸಾಧಿಸಬಹುದು. ಪ್ರೀತಿಯಿಂದ ಅನುನಯಿಸಿ ಮಕ್ಕಳನ್ನು ನಿಮ್ಮ ದಾರಿಗೆ ತನ್ನಿ.

  ಮಕ್ಕಳಿಗೆ ಹೊಡೆಯುವ ಮುನ್ನ ಆಲೋಚಿಸಿ....

  ಮಕ್ಕಳಿಗೆ ಹೊಡೆಯುವ ಮುನ್ನ ಆಲೋಚಿಸಿ....

  ಮಕ್ಕಳನ್ನು ದಂಡಿಸುವುದು ಒಳ್ಳೆಯದಾದರೂ ಎಲ್ಲದಕ್ಕೂ ಇದೇ ಮಾರ್ಗವನ್ನು ಅನುಸರಿಸದಿರಿ. ಇದರಿಂದ ಮಕ್ಕಳು ನಿಮ್ಮೊಂದಿಗೆ ಸ್ನೇಹಪರವಾಗಿ ಇರುವುದರ ಬದಲಿಗೆ ಹೆದರಿ ಹೋಗುತ್ತಾರೆ. ನೀವೆಂದರೆ ಅಡಗಿ ಕುಳಿತುಕೊಳ್ಳುವ ಪ್ರವೃತ್ತಿ ಬೆಳೆದು ಬಿಡಬಹುದು. ಆದ್ದರಿಂದ ಮಕ್ಕಳಿಗೆ ಹೊಡೆಯುವುದನ್ನು ಕಡಿಮೆ ಮಾಡಿ.

  ಹುಡುಗ/ಹುಡುಗಿ ಬೇದಭಾವ

  ಹುಡುಗ/ಹುಡುಗಿ ಬೇದಭಾವ

  ಇಂದಿನ ಸಮಾಜದಲ್ಲಿ ಹೆಣ್ಣು ಗಂಡು ಸಮಾನ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಿರುವಾಗ ಅವರುಗಳನ್ನು ಎಂದಿಗೂ ಅಸಮಾನರಾಗಿ ಕಾಣಬೇಡಿ. ಮಗು ಹೆಣ್ಣಾಗಲೀ ಗಂಡಾಗಲಿ ಅದರೊಳಗೆ ಒಂದು ಕ್ರಿಯಾತ್ಮಕ ಗುಣವಿದೆ ಎಂಬುದನ್ನು ಮನಗಾಣಿ.

  ದಢೂತಿ ಎಂಬುದಾಗಿ ಹೀಯಾಳಿಸುವುದು

  ದಢೂತಿ ಎಂಬುದಾಗಿ ಹೀಯಾಳಿಸುವುದು

  ನಿಮ್ಮ ಮಗು ದಪ್ಪನಾಗಿದ್ದರೆ ಅದನ್ನು ಹಿಯಾಳಿಸದಿರಿ. ಇದರಿಂದ ಮಗು ಮಾನಸಿಕವಾಗಿ ಬಳಲುವ ಸಾಧ್ಯತೆ ಇರುತ್ತದೆ. ಮಗು ಅತಿಯಾಗಿ ತಿನ್ನುತ್ತಿದೆ ಎಂದಾದಲ್ಲಿ, ಅವರಲ್ಲಿ ದೈಹಿಕ ಸಮಸ್ಯೆ ಏನಾದರೂ ಇದೆಯೇ ಎಂಬುದನ್ನು ಹುಡುಕಿ. ವೈದರಲ್ಲಿಗೆ ಕರೆದುಕೊಂಡು ಹೋಗಿ ಪರಿಶೀಲನೆಯನ್ನು ನಡೆಸಿ.

   

  English summary

  7 Things You Should Never Say To A Growing Child!

  Parenting is a huge responsibility because, as parents, even a small mistake that you may unknowingly make, when it comes to the child's emotions, can go wrong and may lead to your child developing psychological disorders! So, here are a few negative things that you should never say to a growing child, have a look.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more