For Quick Alerts
ALLOW NOTIFICATIONS  
For Daily Alerts

ಹಲ್ಲು ಹುಟ್ಟುವ ವೇಳೆ ಮಗು ವಿಪರೀತ ಅಳುತ್ತಿದೆಯೇ?

|

ಶಿಶುಗಳಿಗೆ ತಮ್ಮ ಮೊದಲನೇ ಹಲ್ಲು ಹುಟ್ಟುವುದು ಒಂದು ಸ್ವಾಭಾವಿಕ ಪ್ರಕ್ರಿಯೆ. ಆ ಹಲ್ಲುಗಳಿಗೆ ಪ್ರಾಥಮಿಕ ಹಲ್ಲುಗಳು ಎಂದೂ ಕರೆಯುತ್ತಾರೆ. ಶಿಶುಗಳಿಗೆ ಸಾಮಾನ್ಯವಾಗಿ ಸರಾಸರಿ 3 - 7 ತಿಂಗಳಾದಾಗ ಮೊದಲನೇ ಜೊತೆ ಹಲ್ಲುಗಳು ಮೇಲಿನ ದವಡೆಯಲ್ಲಿ ಹುಟ್ಟುತ್ತವೆ ನಂತರ ಕೆಳಗಿನ ದವಡೆಯ ಮಧ್ಯದಲ್ಲಿ ಎರಡು ಹಲ್ಲುಗಳು ಕ್ರಮೇಣ ಕಾಣಿಸಿಕೊಳ್ಳುತ್ತವೆ.

ಈ ಸಂಪೂರ್ಣ ಹಲ್ಲು ಬರುವ ಪ್ರಕ್ರಿಯೆಯಲ್ಲಿ ದವಡೆಯ ಚರ್ಮವನ್ನು ಬಿಡಿಸಿಕೊಂಡು ಮೊದಲ ಹಲ್ಲುಗಳು ಹುಟ್ಟುವಾಗ ಶಿಶುಗಳಿಗೆ ವಿಪರೀತ ಯಾತನಾಪೂರಿತವಾಗಿರುತ್ತದೆ. ಬಹಳಷ್ಟು ಶಿಶುಗಳು ಈ ಹಂತದಲ್ಲಿ ತೀವ್ರ ಯಾತನೆ ಮತ್ತು ಮುಜುಗರದಿಂದ ಕಿರಿಕಿರಿಮಾಡಿ ಅತ್ಯಂತ ತಿಕ್ಕಲು ಸ್ವಭಾವದಿಂದ ಇರುತ್ತಾರೆ. ಮಗುವಿನ ಪದ ಉಚ್ಛಾರವನ್ನು ಉತ್ತಮಗೊಳಿಸಲು ಸಲಹೆಗಳು

ಈ ಹಂತದಲ್ಲಿ ನೋವಿನೊಡನೆ ಇತರ ಭೌತಿಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ, ಉದಾಹರಣೆಗೆ ಭೇದಿ, ಜ್ವರ, ಇತ್ಯಾದಿ. ಹಾಗಾದಾಗ ಮಿತಿಮೀರಿದ ಔಷಧಿಗಳನ್ನು ಕೊಡುವುದರ ಬದಲು ಮನೆ ಮದ್ದುಗಳನ್ನು ಬಳಸುವುದು ಅತಿ ಮುಖ್ಯ. ಹೀಗೆ ಶಿಶುಗಳಿಗ ಹಲ್ಲು ಹುಟ್ಟುವ ಸಮಯದಲ್ಲಿ ಮನೆಯಲ್ಲೇ ಮಾಡಬಹುದಾದ ಅತ್ಯಂತ ಪ್ರಮುಖ ಮತ್ತು ಪರಿಣಾಮಕಾರಿ ಮಾರ್ಗಗಳ ಬಗ್ಗೆ ಮುಂದೆ ಓದಿ:

ಜೇನುತುಪ್ಪ

ಜೇನುತುಪ್ಪ

ವಸಡುಗಳನ್ನು ಜೇನುತುಪ್ಪದಿಂದ ಮೆಲ್ಲಗೆ ಸೂಕ್ಷ್ಮವಾಗಿ ಮಸಾಜ್ ಮಾಡಿ ನೋವು ನಿವಾರಿಸಬಹುದಾಗಿದೆ. ಅಲ್ಲದೆ ಜೇನುತುಪ್ಪ ದಲ್ಲಿ ವಿರೋಧಿ ಜೈವಿಕ (ಆಂಟಿ ಬೈಯೋಟಿಕ್) ಗುಣಗಳು ಇರುವುದರಿಂದ ಹಲ್ಲುಗಳು ಬರುವ ಸಮಯದಲ್ಲಿ ಸೋಂಕು ಬರುವುದನ್ನು ತಡೆಯುತ್ತದೆ.

ತಂಪಾದ ಆಹಾರ

ತಂಪಾದ ಆಹಾರ

ತಂಪಾದ ಆಹಾರಗಳನ್ನು ನೀಡುವುದು ಕೂಡ ನಿಮ್ಮ ಪುಟ್ಟ ಮಗಿವಿನ ಹಲ್ಲು ಹುಟ್ಟುವಿಕೆಯ ನೋವನ್ನು ದೂರಮಾಡಬಹುದು. ಈಗಾಗಲೇ ಘನ/ಗಟ್ಟಿ ಆಹಾರವನ್ನು ಸೇವಿಸಲು ಆರಂಭಿಸದ ಮಗುವಿಗಂತೂ ತಂಪಾದ ಆಹಾರವನ್ನು ನೀಡಿದರೆ ಅವರಿಗೆ ಸಾಕಷ್ಟು ಆರಾಮದಾಯಕವೆನಿಸುತ್ತದೆ. ಆದರೆ ನಿಮ್ಮ ಮಗುವಿನ ವಸಡುಗಳಿಗೆ ನೋವನ್ನು ಹೆಚ್ಚುಮಾಡುವಂತಹ ಅತ್ಯಂತ ಶೀತವಾದ, ಫ್ರೀಜರ್ ನಲ್ಲಿಟ್ಟ ಆಹಾರವನ್ನು ಮಾತ್ರ ನೀಡದಿರಿ!

ತಂಪು ಪಟ್ಟಿಗಳು

ತಂಪು ಪಟ್ಟಿಗಳು

ಶಿಶುಗಳಿಗೆ ಹಲ್ಲು ಹುಟ್ಟುವ ಸಮಯದಲ್ಲಿ ತಣ್ಣಗಿರುವ ಪಟ್ಟಿಗಳು ಅತ್ಯಂತ ಶ್ರೇಷ್ಠ ಮಾರ್ಗ ಮತ್ತು ಅದರಿಂದ ವಸಡುಗಳು ಮರಗಟ್ಟಿ ಯಾತನೆಯನ್ನು ನಿವಾರಿಸಲು ಸಹಾಯವಾಗುತ್ತದೆ. ಶಿಶುಗಳು ತಣ್ಣಗಿರುವ ಪಟ್ಟಿಗಳನ್ನು ಸಹಿಸದಿದ್ದರೆ, ಐಸ್ ಕ್ಯಾಂಡಿ ಅಥವಾ ಐಸ್ ಕ್ರೀಮ್ ತಿನ್ನಿಸಿದರೆ ವಸಡು ಮರಗಟ್ಟಿ ನೋವು ಕಮ್ಮಿಯಾಗುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಆಲಿವ್ ಎಣ್ಣೆಯಿಂದ ಹಲ್ಲು ಹುಟ್ಟುತ್ತಿರುವ ಶಿಶುಗಳ ವಸಡುಗಳನ್ನು ಮಸಾಜ್ ಮಾಡಿದರೆ ನೋವಿನಿಂದ ಪರಿಹಾರ ಕಾಣುತ್ತದೆ

ಕ್ಯಾರೆಟ್

ಕ್ಯಾರೆಟ್

ಮೇಲೆ ಬರುತ್ತಿರುವ ಹಲ್ಲುಗಳಿಂದ ಕ್ಯಾರೆಟ್ ಅನ್ನು ಕಚ್ಚಿಸುವುದು ಉತ್ತಮ ಪರಿಹಾರಗಳಲ್ಲೊಂದಾಗಿದೆ.

ಬಾಳೆಹಣ್ಣು

ಬಾಳೆಹಣ್ಣು

ಘನೀಕೃತ (ಫ್ರೋಜನ್) ಬಾಳೆಹಣ್ಣನ್ನು ತಿನ್ನಿಸಿದಾಗ ಹಲ್ಲು ಹುಟ್ಟುವಾಗ ಬರುವ ನೋವು ಮತ್ತು ನವೆಗಳನ್ನು ನಿವಾರಿಸಬಹುದು.

English summary

Home Remedies For Teething In Babies

Teething is a natural process of a child getting his/her first set of teeth, which are also called as primary teeth. The average age of teething in infants is 3-7 months, when the first set of teeth appear in the upper jaw followed by the centre two teeth of the lower jaw.
X
Desktop Bottom Promotion